ಗರ್ಭಾವಸ್ಥೆಯಲ್ಲಿ ನೀವು ಯಾವ ರೀತಿಯ ಟಾಯ್ಲೆಟ್ ಉಪಯೋಗಿಸುವುದು ಒಳ್ಳೆಯದು!

ಇದು ನಿಮಗೆ ಆಶ್ಚರ್ಯ ಮತ್ತು ಆಘಾತವನ್ನು ಉಂಟುಮಾಡಬಹುದು ಆದರೆ ಸತ್ಯ, ಕೆಲವು ಅಧ್ಯಯನಗಳ ಪ್ರಕಾರ ಕಳಪೆ ವಿನ್ಯಾಸದ ಟಾಯ್ಲೆಟ್ ಗಳು ದೇಹದಲ್ಲಿ ಪೆಲ್ವಿಕ್ ಮತ್ತು ಕೋಲನ್ ರೋಗಗಳನ್ನು ಉಂಟುಮಾಡುತ್ತವೆ. ಅದಕ್ಕಾಗಿಯೇ ವೆಸ್ಟೆರ್ನ್ ದೇಶಗಳು (ಪಾಶ್ಚಿಮಾತ್ಯ ದೇಶಗಳು) ದೀರ್ಘ ಕಾಲದಿಂದ ಇಂತಹ ರೋಗಗಳನ್ನು ಅನುಭವಿಸುತ್ತಿರುವುದು. ಇದನ್ನು ಗಮನದಲ್ಲಿಟ್ಟುಕೊಂಡು ಮತ್ತು ಕೆಳಗಿನ ಕಾರಣಗಳಿಂದ ವೆಸ್ಟೆರ್ನ್ ಟಾಯ್ಲೆಟ್ ಗಿಂತ ಭಾರತೀಯ ಟಾಯ್ಲೆಟ್ ವಿಧಾನವೇ ಸರಿ ಎಂದು ವಿಜ್ಞಾನವೇ ಒಪ್ಪುತ್ತದೆ.

೧.ಗರ್ಭಾವಸ್ಥೆಯಲ್ಲಿ ಇದು ಉತ್ತಮ

ಭಾರತೀಯ ಶೈಲಿಯಲ್ಲಿ ಕುಳಿತು ಮಲ ಮಾಡುವುದು ಪಾಶ್ಚಿಮಾತ್ಯ ಶೈಲಿಗಿಂತ ಒಳ್ಳೆಯದು, ಭಾರತೀಯ ಶೈಲಿಯಿಂದ ದೇಹದ ಒತ್ತಡವನ್ನು ನೀವಾಗಿಯೇ ನಿವಾರಿಸಿಕೊಳ್ಳಲು ಸಹಾಯವಾಗುತ್ತದೆ. ಕುಕ್ಕುರುಗಾಲಲ್ಲಿ ಕುಳಿತು ಮಾಡುವುದರಿಂದ ನಿಮ್ಮ ಗರ್ಭಾಶಯಕ್ಕೆ ಕಡಿಮೆ ಒತ್ತಡ ಆಗುತ್ತದೆ ಅಷ್ಟೆ, ಮತ್ತು ಇದರಿಂದ ತೊಡೆಯ ಸ್ನಾಯುಗಳಿಗೆ ಮತ್ತು ಉದರಕ್ಕೆ ಶಕ್ತಿ ದೊರೆಯುತ್ತದೆ ಅಥಾವ ಅವು ಬಲವಾಗುತ್ತವೆ. ಸಾಮಾನ್ಯ ಹೆರಿಗೆಯಾಗಲು ಇದು ಉತ್ತಮವಾಗಿ ಸಹಾಯ ಮಾಡುತ್ತದೆ.

೨.ಜೀರ್ಣಕ್ರಿಯೆ ಉತ್ತಮವಾಗಿ ನಿರ್ವಹಿಸುತ್ತದೆ

ನೀವು ಭಾರತೀಯ ಶೈಲಿಯಲ್ಲಿ ಕುಳಿತುಕೊಳ್ಳುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ. ಇದು ನಿಧಾನವಾಗಿ ಹೊಟ್ಟೆಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ, ಅದು ಆಹಾರವನ್ನು ಚೆನ್ನಾಗಿ ಜೀರ್ಣಿಸುವುದಕ್ಕೆ ಮತ್ತು ಕರುಳಿನ ಮೂಲಕ ಸರಾಗವಾಗಿ ಹಾದುಹೋಗಲು ಸಹಾಯ ಮಾಡುತ್ತದೆ. ನೀವು ಕುಕ್ಕುರುಗಾಲಿನಲ್ಲಿ ಕುಳಿತುಕೊಂಡಾಗ ನಿಮ್ಮ ಹಿಮ್ಮಡಿ ನಿಮ್ಮ ಅಂಡಿಗೆ ಹತ್ತಿರವಾಗುತ್ತದೆ, ಇದು ಮಲವು ಸರಾಗವಾಗಿ ಹೊರಹೋಗಲು ಸಹಾಯ ಮಾಡುತ್ತದೆ.

೩.ಸೂಕ್ತ ಆಯ್ಕೆ

ಈ ಸಾಂಪ್ರದಾಯಿಕ ಶೈಲಿಯು ಎಲ್ಲರಿಗೂ ಉತ್ತಮವಾಗಿ ಆಯ್ಕೆಯಾಗುತ್ತದೆ, ಏಕೆಂದರೆ ಇದು ನೈಸರ್ಗಿಕ ವ್ಯಾಯಾಮದ ಒಂದು ಭಂಗಿಯು ಆಗಿದೆ. ಕೈ, ಕಾಲು ಮತ್ತು ಜಠರವನ್ನು ಒಳಗೊಂಡು ನಮ್ಮ ದೇಹದಲ್ಲಿ ರಕ್ತವು ಸರಾಗವಾಗಿ ಸಂಚಾರ ಮಾಡಲು ಸಹಾಯವಾಗುತ್ತದೆ. ಇದರಿಂದ ಬೆನ್ನು ಮೂಳೆ ಬಲವಾಗಲು ಸಹಾಯವಾಗುತ್ತದೆ. ಈ ತರಹ ಕುಳಿತುಕೊಳ್ಳುವುದು ದೇಹಕ್ಕೆ ಒಂದು ಬಗೆಯ ವ್ಯಾಯಾಮವನ್ನು ಮಾಡಿದಂತೆ ಆಗುತ್ತದೆ.

೪.ಇದು ಪರಿಸರ-ಸ್ನೇಹಿ ಕೂಡ

ಭಾರತೀಯ ಟಾಯ್ಲೆಟ್ ಶೈಲಿ ಪಾಶ್ಚಿಮಾತ್ಯ ಟಾಯ್ಲೆಟ್ ಶೈಲಿಗಿಂತ ಹೆಚ್ಚು ಪರಿಸರ ಸ್ನೇಹಿ. ಪಾಶ್ಚಿಮಾತ್ಯ ಶೈಲಿಯಲ್ಲಿ ಫ್ಲಶ್ ಮಾಡಲು ಹೆಚ್ಚಿನ ನೀರು ಅಥವಾ ಟಿಶ್ಯೂ ಪೇಪರ್ ಅನ್ನು ಬಳಸಬೇಕಾಗುತ್ತದೆ, ಆದರೆ ನಮ್ಮ ಶೈಲಿಯಲ್ಲಾದರೆ ಸ್ವಲ್ಪ ನೀರು ಸೋಪು ಮತ್ತು ಕೈ ವರಿಸಿಕೊಳ್ಳಲು ಒಂದು ಬಟ್ಟೆ ಸಾಕು.

೫.ಹೆಚ್ಚು ಸ್ವಚ್ಛ

ಕುಕ್ಕುರುಗಾಲಲ್ಲಿ ಕುಳಿತು ನಮ್ಮ ಕೆಲಸ ಮುಗಿಸಿದ ನಂತರ ತೊಳೆದುಕೊಳ್ಳಲು ಮುಂತಾದವುಗಳನ್ನು ಮಾಡಲು ನಮಗೆ ಅನುಕೂಲಕರವಾಗಿರುತ್ತದೆ. ಟಿಶ್ಯೂ ಪೇಪರ್ ಬಳಸುವುದಕ್ಕಿಂತ ಇದು ಹೆಚ್ಚು ಸ್ವಚ್ಛ ಮತ್ತು ಸುರಕ್ಷಿತವಾಗಿದೆ. ಟಿಶ್ಯೂ ಪೇಪರ್ ಬಳಸಿದರೆ ಬ್ಯಾಕ್ಟೀರಿಯಾ ಸೋಂಕಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಾವು ನೀರಿನಲ್ಲಿ ತೊಳೆದುಕೊಳ್ಳುವುದರಿಂದ ಸ್ವಚ್ಛತೆ ಜೊತೆಗೆ ಸುರಕ್ಷತೆಯನ್ನು ಪಡೆಯಬಹುದು.

೬.ಇದು ಕೋಲನ್ ರೋಗವನ್ನು ತಡೆಯುತ್ತದೆ

ಕುಳಿತುಕೊಂಡು ಮಾಡುವುದಕ್ಕಿಂತ ಕುಕ್ಕುರುಗಾಲಲ್ಲಿ ಕುಳಿತು ಮಾಡುವುದು ಮಲ ಸುಲಭವಾಗಿ ಮತ್ತು ಸರಾಗವಾಗಿ ಹೊರಬರಲು ಸಹಾಯವಾಗುತ್ತದೆ. ನಮ್ಮ ದೇಹದೊಳಗೆ ಅದು ಬರಲು ದಾರಿಯನ್ನು ಮಾಡಿಕೊಡುತ್ತದೆ ಮತ್ತು ನಮ್ಮ ದೇಹದ ಎಲ್ಲಾ ಸ್ನಾಯುಗಳಿಗೂ ವ್ಯಾಯಾಮ ಮಾಡಿದಂತೆ ಆಗುತ್ತದೆ ಇದರಿಂದ ದೇಹದ ಭಾಗಗಳು ಆರೋಗ್ಯವಾಗಿರಲು ಸಹಾಯವಾಗುತ್ತದೆ.

ನೀವು ಆಶ್ಚರ್ಯ ಪಡಬಹುದು ಆಸ್ಟ್ರೇಲಿಯಾದಲ್ಲಿರುವ ಮೆಲ್ಬೋರ್ನೆ ಸರ್ಕಾರವು ಭಾರತೀಯ ಶೈಲಿಯ ಟಾಯ್ಲೆಟ್ ಅನ್ನು ಬಳಸಲು ಸೂಚನೆ ನೀಡಿದೆ. ಇದು ಸಾಬೀತು ಪಡಿಸುತ್ತದೆ ಪಾಶ್ಚಿಮಾತ್ಯ ದೇಶಗಳು ಕೂಡ ಭಾರತೀಯ ಶೈಲಿಯನ್ನು ಬಳಸುವುದಕ್ಕೆ ಶುರುಮಾಡಿವೆ ಎಂದು.

Leave a Reply

%d bloggers like this: