ನೀವು ಮಗುವಿಗೆ ಇದೇ ರೀತಿಯಲ್ಲಿ ಮಸಾಜ್ ಮಾಡಬೇಕು !

ಮಗುವಿಗೆ ಜನ್ಮ ನೀಡುವುದು ಒಂದು ದೊಡ್ಡ ಸಾಹಸ. “ಸಾಹಸಿಗಳು ಮಾತ್ರ ಜವಾಬ್ದಾರರಾಗಿರುತ್ತಾನೆ” ಎಂದು ಯಾರೋ ಬುದ್ಧಿಜೀವಿ ಹೇಳಿದಂತೆ, ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ಬೆಳೆಸುವುದು ಪ್ರತಿಯೊಬ್ಬ ಹೆತ್ತವರ ಆದ್ಯ ಕರ್ತವ್ಯ. ಜವಾಬ್ದಾರಿಯುತ ಪ್ರಜೆಯನ್ನಾಗಿ ಮಗುವನ್ನು ಬೆಳೆಸಲು ಕೇವಲ ಮಾನಸಿಕ ಆರೋಗ್ಯ ಮಾತ್ರ ಸಾಕಾಗುವುದಿಲ್ಲ. ಶಾರೀರಿಕ ಆರೋಗ್ಯವೂ ಅತೀ ಅಗತ್ಯ.

ಮಗುವಿನ ಆರೋಗ್ಯವು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಳ್ಳಲು, ಮಗುವು ಜನಿಸಿದ ಮೊದಲ ಕೆಲವು ವರ್ಷಗಳು ಮಹತ್ತರ ಪಾತ್ರ ವಹಿಸುತ್ತದೆ. ಸರಿಯಾದ ರೀತಿಯಲ್ಲಿ ಮಾಲೀಶು ಮಾಡುವುದರಿಂದ ಶರೀರದ ಮಾಂಸಪೇಶಿಗಳು ವಿಕಸಿಸಲ್ಪಡುತ್ತದೆ.ರಕ್ತ ಪರಿಚಲನೆ ಉಂಟಾಗುವುದು ಮಾತ್ರವಲ್ಲದೆ, ಶಾರೀರಿಕ ಒತ್ತಡಗಳು ಶಮಿಸಲ್ಪಡುತ್ತದೆ. ಮಗುವಿಗೆ ಮಸಾಜ್ ಮಾಡುವುದು ಕೂಡ ಒಂದು ಸುಂದರವಾದ ಕಲೆ. ಆದರೆ, ಸರಿಯಾದ ರೀತಿಯಲ್ಲಿ ಮಸಾಜು ಮಾಡಲ್ಪಡದಿದ್ದರೆ,ಮಗುವು ಶಾರೀರಿಕ ಅಸ್ವಸ್ಥತೆಗಳಿಂದ ಕಿರಿಕಿರಿಯನ್ನು ಅನುಭವಿಸಬಹುದು.ಸಾಂಪ್ರದಾಯಿಕವಾಗಿ, ಮಗುವಿನ ಶರೀರವನ್ನು ಮಸಾಜು ಮಾಡುವುದು ಹೇಗೆಂದು ತಿಳಿದುಕೊಳ್ಳೋಣ ಬನ್ನಿ.

೧.ಕಾಲಿನ ಮಸಾಜು

ಅಂಗೈಯಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು, ಎರಡು ಕೈಗಳಿಂದ ಸರಿಯಾಗಿ ತಿಕ್ಕಿದ ಬಳಿಕ, ಮಗುವಿನ ತೊಡೆಯಿಂದ ಹಿಡಿದು ಪಾದದವರೆಗೆ ಮಸಾಜು ಮಾಡಿರಿ. ಇದೇ ರೀತಿಯಲ್ಲಿ,ಆ್ಯಂಕಲ್ ನಿಂದ ಪ್ರಾರಂಭಿಸಿ ತೊಡೆಯ ವರೆಗೆ, ಕೆಳಗಿನಿಂದ ಮೇಲೆ, ಮೇಲಿನಿಂದ ಕೆಳಗೆ ಎಂಬಂತೆ ಎರಡು ಮೂರು ಬಾರಿ ಆವರ್ತಿಸಿರಿ. ಇದರಿಂದ ಕಾಲಿನ ಮಾಂಸಪೇಶಿಗಳು ಸುಧೃಢವಾಗಿ ಬೆಳೆಯಲು ಕಾರಣವಾಗುತ್ತದೆ.

೨.ಪಾದದ ಮಸಾಜು

ಪಾದ ಹಾಗೂ ಪಾದದ ಅಡಿಭಾಗವನ್ನು ನಿಮ್ಮ ಹೆಬ್ಬೆರಳಿನಿಂದ ವರ್ತುಲಾಕಾರವಾಗಿ ತಿರುಗಿಸಿ. ಇದು ಪಾದಗಳಲ್ಲಿ ರಕ್ತದೋಟ ಹೆಚ್ಚಾಗುವುದಲ್ಲದೆ, ಸಮಾನ ರೀತಿಯ ರಕ್ತಸಂಚಾರವಾಗಲೂ ನೆರವಾಗುತ್ತದೆ.

೩.ಪಾದದ ಬೆರಳಿನ ಮಸಾಜು

ಕೆಲವೊಮ್ಮೆ ಮಗುವಿನ ಪಾದದ ಬೆರಳುಗಳು ಸೆಡೆತವನ್ನು ಅನುಭವಿಸುತ್ತದೆ. ಮಗುವಿನ ಬೆರಳುಗಳನ್ನು ಹೊರಕ್ಕೆ ಎಳೆಯುವುದರಿಂದ, ಸೆಡೆತವನ್ನು ನಿವಾರಿಸಬಹುದಲ್ಲದೇ, ಬೆರಳುಗಳಲ್ಲಿ ರಕ್ತ ಸಂಚಾರಕ್ಕೂ ಕಾರಣವಾಗುವುದು. ಇದು ಮಗುವು ರಿಲ್ಯಾಕ್ಸ್ ಆಗಿಡುವುದು.

೪.ಕೈಗಳ ಮಸಾಜ್

ಕಾಲುಗಳಿಗೆ ಮಾಡುವ ಅದೇ ಕ್ರಮಗಳಲ್ಲಿ, ಕೈಗಳಿಗೆ ಮಸಾಜ್ ಮಾಡಿರಿ. ಭುಜದಿಂದ ಪ್ರಾರಂಭಿಸಿ ಮಣಿಕಟ್ಟಿನವರೆಗೂ,ಪುನಃ ಭುಜದವರೆಗೂ, ಮುಂದಕ್ಕೂ ಹಿಂದಕ್ಕೂ ಮಸಾಜ್ ಮಾಡಿರಿ. ಹೀಗೆ ಮಾಡುವುದರಿಂದ ಕೈಗಳ ರಕ್ತ ಸಂಚಾರವು ಸುಗಮವಾಗುವುದು. ಎದೆ ಹಾಗೂ ಹೊಟ್ಟೆಯ ಭಾಗಗಳ ಮಸಾಜು ಎಣ್ಣೆಯಿಂದ ಎದೆಯ ಭಾಗದಿಂದ, ಹೊರ ಭಾಗಕ್ಕೆ ವೃತ್ತಾಕಾರವಾಗಿ, ಎದೆ ಹಾಗೂ ಉದರದ ಮೇಲೆ ಮೃದುವಾಗಿ ಮಾಲೀಶು ಮಾಡಿ. ಇದರಿಂದ, ಜೀರ್ಣಕಿೃಯೆ ಉತ್ತಮಗೊಳ್ಳುವುದು.

೬.ಬೆನ್ನಿನ ಭಾಗದ ಮಸಾಜು

ಮಗುವನ್ನು ಅಡ್ಡವಾಗಿ ಮಲಗಿಸಿ ಮಗುವಿನ ಬೆನ್ನೆಲುಬಿನಿಂದ ಪ್ರಾರಂಭಿಸಿ ಮೃದುವಾಗಿ ಹೊರಭಾಗಕ್ಕೆ ಮಸಾಜ್ ಮಾಡುವುದರಿಂದ, ಮಗುವಿನ ಬೆನ್ನು ಹಾಗೂ ಎದೆಯ ಭಾಗಗಳು ಅಗಲವಾಗಿ ಹರವಾಗುತ್ತದೆ. ಈ ರೀತಿಯ ಮಾಲೀಸಿನಿಂದ, ಎದೆ ಹಾಗೂ ಬೆನ್ನಿನ ಭಾಗಗಳ ರಕ್ತ ಸಂಚಾರವು ಉತ್ತೇಜಿಸಲ್ಪಡುತ್ತದೆ.

೭.ಮುಖ ಹಾಗೂ ಹಣೆಯ ಮಸಾಜು

ಅಂಗೈಯಲ್ಲಿ ಎಣ್ಣೆಯನ್ನು ತೆಗೆದುಕೊಂಡು ಮೃದುವಾಗಿ ಮುಖವನ್ನು ಮಸಾಜ್ ಮಾಡಿರಿ. ಮುಖ ಹಾಗೂ ಗಲ್ಲಗಳಿಗೆ ಮಸಾಜ್ ಮಾಡುವಾಗ, ಕಣ್ಣೊಳಗೆ ಎಣ್ಣೆ ಬೀಳದಂತೆ ಎಚ್ಚರ ವಹಿಸಿರಿ. ಮುಖವನ್ನು ಮಸಾಜ್ ಮಾಡುವಾಗ ಗದ್ದದ ಕೆಳಭಾಗದಿಂದ ಮೇಲ್ಭಾಗಕ್ಕೆ ಮಾಲೀಶು ಮಾಡುವಂತೆ ಶ್ರದ್ಧೆ ವಹಿಸಬೇಕು. ಹಣೆಯ ಭಾಗಗಳನ್ನು ಕೇವಲ ಬೆರಳುಗಳನ್ನು ಮಾತ್ರವೇ ಉಪಯೋಗಿಸಿ ಮೃದುವಾಗಿ ತಡವಿರಿ.

ಮಸಾಜಿನ ಪ್ರಯೋಜನ ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಹಿರಿಯರೂ ಪ್ರಯೋಜನ ಪಡೆಯುತ್ತಾರೆ. ಆದರೆ, ಮಕ್ಕಳ ಬೆಳವಣಿಗೆಯಲ್ಲಿ ಮಸಾಜು ಪ್ರಧಾನ ಪಾತ್ರವಹಿಸುತ್ತದೆ. ಮಸಾಜು ಮಾಡಲು ಆಯ್ದುಕೊಳ್ಳುವ ಎಣ್ಣೆಯು ಮಗುವಿಗೆ ಅಲರ್ಜಿ ಆಗದಂತೆ ನೋಡಿಕೊಳ್ಳಿ. ಮಸಾಜು ಮಾಡುವಾಗ, ಉತ್ತಮ ಸುಗಂಧ ಭರಿತವಾದ ಎಣ್ಣೆಯನ್ನು ಆರಿಸಿದರೆ,ಮಗುವೂ ಮಸಾಜನ್ನು ಆಸ್ವಾದಿಸುವುದು.

Leave a Reply

%d bloggers like this: