ನಿಂಬೆ ಹಣ್ಣು ತನ್ನಲ್ಲಿ ವಿಶಿಷ್ಟ ಗುಣಗಳನ್ನು ಹೊಂದಿದೆ, ಇದರಿಂದ ನಮಗೆ ಹಲವು ಉಪಯೋಗವಾಗುತ್ತದೆ, ಬೆಳಗ್ಗೆ ಖಾಲಿ ಹೊಟ್ಟೆಗೆ ನಿಂಬೆ ಹಣ್ಣನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಿರಿ ನೀವು ನಂಬಲಾರದ ಅಚ್ಚರಿಯ ಫಲಿತಾಂಶವನ್ನು ಕೆಲವೇ ದಿನಗಳಲ್ಲಿ ಕಾಣುತ್ತೀರಿ.
ಇದನ್ನು ಮಾಡಲು ನಿಮಗೆ ಬೇಕಾಗಿರುವುದು
ನೀರು
ನಿಂಬೆ ಹಣ್ಣು
ಜೇನುತುಪ್ಪ
ತಯಾರಿಸುವುದು
೧.೩ರಿಂದ ನಾಲ್ಕು ನಿಂಬೆಹಣ್ಣನ್ನು ಕತ್ತರಿಸಿ ನೀರಿನಲ್ಲಿ ಕೆಲವು ನಿಮಿಷ ಕುದಿಸಿ.
೨.ಈ ನೀರು ಆರಲು(ಸ್ವಲ್ಪ ತಣ್ಣಗಾಗಲು) ಬಿಡಿ.
೩.ನಂತರ ಅಲ್ಲಿರುವ ನಿಂಬೆಹಣ್ಣಿನ ರಸವನ್ನು ಆ ನೀರಿನೊಳಗೆ ಹಿಂಡಿ.
೪.ಈ ನೀರನ್ನು ಒಂದು ಲೋಟಕ್ಕೆ ಹಾಕಿ, ಅದಕ್ಕೆ ಒಂದೆರಡು ಹನಿ ಜೇನುತುಪ್ಪ ಸೇರಿಸಿ ಕುಡಿಯಿರಿ.
ಬೆಳಿಗ್ಗೆ ಈ ನಿಂಬೆರಸವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು
೧.ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ನಿಂಬೆಹಣ್ಣಿನಲ್ಲಿರುವ ಪದಾರ್ಥಗಳು ಪಿತ್ತಜನಕಾಂಗದಲ್ಲಿ ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಇದು ಆರೋಗ್ಯಕರ ಜೀರ್ಣಕ್ರಿಯೆಯನ್ನು ಪ್ರೋತ್ಸಾಹಿಸುತ್ತದೆ. ಜೊತೆಗೆ ಇದು ದೇಹದಲ್ಲಿರುವ ವಿಷಕಾರಿ ಕಿಣ್ವ ಮತ್ತು ಅಂಶಗಳನ್ನು ದೇಹದಿಂದ ಹೊರ ಹಾಕುವಲ್ಲಿ ಸಹಾಯ ಮಾಡುತ್ತವೆ. ದಿನ ಬೆಳಿಗ್ಗೆ ಒಂದು ಲೋಟ ಈ ನಿಂಬೆರಸವನ್ನು ಜೇನುತುಪ್ಪದೊಂದಿಗೆ ಕುಡಿಯುದರಿಂದ ಹೊಟ್ಟೆ ಉಬ್ಬುವುದು, ಅತಿಸಾರ ಮತ್ತು ಮಲಬದ್ಧತೆಯ ಜೊತೆಗೆ ಎಲ್ಲಾ ತರಹದ ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
೨.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ನಿಂಬೆಹಣ್ಣು ಮತ್ತು ಜೇನುತುಪ್ಪ ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಆಂಟಿಮೈಕ್ರೋಬಿಯಲ್ ಗುಣಲಕ್ಷಣಗಳು ನಮ್ಮ ದೇಹವು ಸೋಂಕಿಗೆ ಗುರಿಯಾಗದಂತೆ ಮತ್ತು ಶೀತ ಮತ್ತು ಜ್ವರ ಬರದಂತೆ ತಡೆಯುತ್ತದೆ.
೩.ನಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ
ನಿಂಬೆ ರಸವು ವಿಟಮಿನ್ ಬಿ, ವಿಟಮಿನ್ ಸಿ, ರಂಜಕ, ಕಾರ್ಬೋಹೈಡ್ರೇಟ್ಗಳು, ಮತ್ತು ಪ್ರೊಟೀನ್ ಗಳಿಂದ ಸಮೃದ್ಧವಾಗಿರುವುದರಿಂದ, ಅದು ನೈಸರ್ಗಿಕ ಶಕ್ತಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ನೀರನ್ನು ಕುಡಿದ ಕೆಲವೇ ಕ್ಷಣಗಳಲ್ಲಿ, ನಮ್ಮ ದೇಹದಲ್ಲಿ ಆಮ್ಲಜನಕವು ಸರಾಗವಾಗಿ ಸಾಗಾಲು ಸಹಾಯ ಮಾಡುತ್ತದೆ.
೪.ಇದು ph ಮಟ್ಟವನ್ನು ನಿಯಂತ್ರಣದಲ್ಲಿ ಇರಿಸುತ್ತದೆ
ನಿಂಬೆಹಣ್ಣಿನಲ್ಲಿರುವ ಆಮ್ಲಿಯ ಗುಣ ನಮ್ಮ ದೇಹದಲ್ಲಿ ph ಮಟ್ಟವನ್ನು ಸಮತೋಲನದಿಂದ ಇರುವಂತೆ ನಿಯಂತ್ರಣ ಮಾಡುತ್ತದೆ.
೫.ಇದು ಕೆಟ್ಟ ಉಸಿರಾಟವನ್ನು ನೋಡಿಕೊಳ್ಳುತ್ತದೆ
ನಿಂಬೆಹಣ್ಣಿನ ಮತ್ತು ಜೇನಿನ ಆಮ್ಲಿಯ ಮಿಶ್ರಣ ದುರ್ವಾಸನೆ ಬರುವ ಉಸಿರಾಟವನ್ನು ಎದುರಿಸುತ್ತದೆ. ಅದೇ ಸಮಯದಲ್ಲಿ ಇದು ಬಾಯಿಯನ್ನು ಸ್ವಚ್ಛ ಮಾಡುತ್ತದೆ ಮತ್ತು ಸಲೈವಾದ ಉತ್ಪತ್ತಿಯನ್ನು ಹೆಚ್ಚಿಸುತ್ತದೆ, ಇದು ವಾಸನೆ ಬರುವಂತೆ ಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುವಲ್ಲಿ ಸಹಾಯ ಮಾಡುತ್ತದೆ.
೬.ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ
ತೂಕವನ್ನು ಕಡಿಮೆ ಮಾಡಿಕೊಳ್ಳಲು ಪರಿತಪಿಸುತ್ತಿರುವವರಿಗೆ ಇದು ಒಂದು ಉತ್ತಮ ಪರಿಹಾರ. ಇದು ಪೆಕ್ಟಿನ್ ಫೈಬರ್ ಅನ್ನು ಹೆಚ್ಚಾಗಿ ಹೊಂದಿದ್ದು, ಅದು ನಿಮ್ಮ ಹಸಿವನ್ನು ನಿಗ್ರಹಿಸುತ್ತದೆ ಮತ್ತು ದೀರ್ಘ ಅವಧಿಯವರೆಗೆ ನಿಮ್ಮನ್ನು ಪೂರ್ಣವಾಗಿರಿಸುತ್ತದೆ. ನಿಮ್ಮ ಹೊಟ್ಟೆಯಲ್ಲಿರುವ ಹೆಚ್ಚುವರಿ ತೂಕವನ್ನು ಕಡಿಮೆ ಮಾಡುವಲ್ಲಿ ಇದು ಸಹಾಯ ಮಾಡುತ್ತದೆ.
೭.ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ
ನಿಂಬೆ ರಸದ ಈ ನೀರು ದುಗ್ಧನಾಳವನ್ನು ಶುದ್ಧೀಕರಿಸುತ್ತದೆ ಮತ್ತು ನಮ್ಮ ದೇಹವನ್ನು ಹೈಡ್ರೀಕರಿಸುತ್ತದೆ. ಹೀಗಾಗಿ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಿದುಳಿನ ಕಾರ್ಯವನ್ನು ವೃದ್ಧಿಸುತ್ತದೆ ಜೊತೆಗೆ ನಿದ್ರಾಚಕ್ರವನ್ನು ವೃದ್ಧಿಸುತ್ತದೆ.
೮.ಇದು ಗಂಟಲು ಸೋಂಕುಗಳನ್ನು ಗುಣ ಪಡಿಸುತ್ತದೆ
ಗಂಟಲು ನೋವು ನಿವಾರಣೆಗೆ ಇದು ಒಂದು ಉತ್ತಮ ಪರಿಹಾರ. ಖಾಲಿ ಹೊಟ್ಟೆಗೆ ಪ್ರತಿದಿನ ಈ ನೀರನ್ನು ಕುಡಿಯುದರಿಂದ ಗಂಟಲು ನೋವು ಮತ್ತು ಗಂಟಲಿನ ಸೋಂಕಿನಿಂದ ಮುಕ್ತಿ ಪಡೆಯಬಹುದು. ಇದು ಅಸ್ತಮಾ ಮತ್ತು ಮುಂತಾದ ಕೆಲವು ಉಸಿರಾಟದ ತೊಂದರೆಯನ್ನು ಗುಣ ಪಡಿಸಲು ಸಹಾಯ ಮಾಡುತ್ತದೆ.
೯.ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ
ಇದನ್ನು ನಿರಂತರವಾಗಿ ಕುಡಿದರೆ ಒಂದು ವಾರದಲ್ಲೇ ನಿಮ್ಮ ತ್ವಚೆಯಲ್ಲಿ ಸ್ವಲ್ಪ ಬದಲಾವಣೆಯನ್ನು ಕಾಣುವಿರಿ. ಇದು ಹೊಸ ರಕ್ತ ಕಣಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುವುದರ ಜೊತೆಗೆ ರಕ್ತನಾಳಗಳನ್ನು ಶುದ್ದಿ ಮಾಡುತ್ತದೆ. ಇದು ಮೊಡವೆ ನಿವಾರಣೆಗೂ ಸಹಾಯ ಮಾಡುತ್ತದೆ.
೧೦.ಇದು ಮೂತ್ರನಾಳವನ್ನು ಸ್ವಚ್ಛಗೊಳಿಸುತ್ತದೆ
ಜೇನುತುಪ್ಪ ಮತ್ತು ನಿಂಬೆ ನೀರು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮೂತ್ರ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ, ಇದು ಮೂತ್ರನಾಳವನ್ನು ಶುದ್ದಿ ಮಾಡುತ್ತದೆ. ಇದು ಮೂತ್ರನಾಳದ ph ಮಟ್ಟವನ್ನು ಬದಲಾವಣೆ ಮಾಡಿ ಸೋಂಕಿನಿಂದ ತಡೆಯುವಲ್ಲಿ ಸಹಾಯ ಮಾಡುತ್ತದೆ.
ಸೂಚನೆ: ಇದನ್ನು ಆದಷ್ಟು ಖಾಲಿ ಹೊಟ್ಟೆಯಲ್ಲಿ ಬಿಸಿಯಾಗಿ ಸೇವಿಸಿರಿ. ಇದನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಹಲವು ಪ್ರಯೋಜನಗಳು ಆಗುತ್ತವೆ.