ಮಗುವಿನ ಬೆಳವಣಿಗೆಗೆ ಪೂರಕವಾದ ಏಳು ಆಹಾರಗಳು

ಸರಿಯಾದ ಬೆಳವಣಿಗೆಯೇ ಉತ್ತಮ ಆರೋಗ್ಯದ ಲಕ್ಷಣ.ತಂದೆ ತಾಯಂದಿರು ತಮ್ಮ ಮಕ್ಕಳನ್ನು ಅವರ ಸಮ ಪ್ರಾಯದವರೊಂದಿಗೆ ಹೋಲಿಸುತ್ತಾರೆ. ಮಕ್ಕಳ ಬೆಳವಣಿಗೆಯ ಹಂತ ಕೊನೆಯಾದ ಬಳಿಕ, ತಂದೆ ತಾಯಿಯರಿಂದ ಯಾವ ಸಹಾಯವನ್ನು ಮಾಡಲಾಗದು. ಆದರೆ ಚಿಕ್ಕ ಮಕ್ಕಳಾಗಿರುವಾಗಲೇ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಪೂರಕವಾಗುವಂತಹ ಆಹಾರಗಳನ್ನು ಮಕ್ಕಳಿಗೆ ನೀಡಬಹುದು.

೧.ಹಾಲು ಅಥವಾ ಹಾಲಿನ ಉತ್ಪನ್ನಗಳು

ಹಾಲು, ಮೊಸರು, ಬೆಣ್ಣೆ ಇವುಗಳೆಲ್ಲ ಕ್ಯಾಲ್ಷಿಯಂನಿಂದ ಭರಿತವಾಗಿದೆ. ಕ್ಯಾಲ್ಷಿಯಂ ಮಕ್ಕಳ ಎಲುಬು ಗಟ್ಟಿಯಾಗಲು ಹಾಗೂ ಬೆಳವಣಿಗೆಗೆ ಅತೀ ಅಗತ್ಯ. ಆದ ಕಾರಣ ಮಗುವಿನ ಆಹಾರ ಕ್ರಮದಲ್ಲಿ ಹಾಲು ಕೂಡ ಒಳಗೊಂಡಿರಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಬರೀ ಹಾಲನ್ನು ಕುಡಿಯಲು ಮಗುವು ಇಚ್ಛಿಸುವುದಿಲ್ಲವೆಂದಾದರೆ, ಹಾಲಿನಿಂದ ತಯಾರಿಸಿದ ಖಾದ್ಯಗಳನ್ನು ತಿನ್ನಿಸಬಹುದು.

೨.ಮೊಟ್ಟೆ

ಹೇರಳವಾಗಿ ಪ್ರೊಟೀನನ್ನು ಒಳಗೊಂಡಿರುವ ಮೊಟ್ಟೆಯನ್ನು ಮಕ್ಕಳು ಬಹಳ ಇಷ್ಟಪಟ್ಟು ಸೇವಿಸುತ್ತಾರೆ. ಪ್ರೋಟಿನ್ಗಳು ಬೆಳವಣಿಗೆಯ ಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಶರೀರದ ಬೆಳವಣಿಗೆಗೆ ಕಾರಣವಾಗುವ ಹೊಸ ಕೋಶಗಳ ಉತ್ಪಾದನೆಗೆ ಪ್ರೋಟಿನ್ಗಳು ಕಾರಣವಾಗುತ್ತದೆ. ಇದರಿಂದಾಗಿ ಮಗುವು ನೀಳಕಾಯ ಮಾತ್ರವಲ್ಲದೆ, ಬಲಿಷ್ಠನೂ ಆಗುತ್ತಾನೆ.

೩.ಹಣ್ಣುಗಳು

ತಾಜಾ ಹಣ್ಣುಗಳು ಹಾಗೂ ತರಕಾರಿಗಳು ಶರೀರದ ಬೆಳವಣಿಗೆಗೆ ಅಗತ್ಯವಾದ ಮಿನರಲ್ಸ್ ಹಾಗೂ ಪೋಷಕಾಂಶಗಳನ್ನು ನೀಡುತ್ತದೆ. ಮಕ್ಕಳ ಎಲುಬನ್ನು ಬಲಪಡಿಸುವುದಲ್ಲದೇ, ಬೆಳವಣಿಗೆಗೂ ಪೂರಕವಾಗುತ್ತದೆ. ಋತುಗಳಿಗೆ ಅನುಸಾರವಾಗಿ ಲಭ್ಯವಾಗುವ ಹಣ್ಣುಗಳಲ್ಲದೆ ಮಾವು,ಪೀಚ್ ಮತ್ತು ಕ್ಯಾಂಟರ್ ಆಪ್ಸ್ ಗಳು ಮಕ್ಕಳ ಬೆಳವಣಿಗೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಹಣ್ಣುಗಳ ಶರಬತ್ತು ಅಥವಾ ಸಲಾಡುಗಳನ್ನು ಕೂಡ ಮಕ್ಕಳಿಗೆ ನೀಡಬಹುದು.

೪.ಚಿಕನ್

ಮಾಂಸಪೇಶಿಗಳ ಬಲಪಡಿಸುವಿಕೆ ಬೆಳವಣಿಗೆ ಹಾಗೂ ಆರೋಗ್ಯಯುತ ಶರೀರವನ್ನು ಹೊಂದಲು ಅಗತ್ಯವಿರುವ ಪ್ರೋಟೀನ್ಗಳು ಧಾರಾಳವಾಗಿರುವ ಚಿಕನ್ನನ್ನು ಮಕ್ಕಳಿಗೆ ಸೇವಿಸಲು ನೀಡುವುದರಿಂದ ಮಕ್ಕಳು ಬೇಗನೆ ನೀಳಕಾಯ ಹಾಗೂ ಸದೃಢವಾಗಿ ಬೆಳೆಯುತ್ತಾರೆ. ಚಿಕನ್ ತಿಂದರೆ ಬೇಗನೆ ಹೊಟ್ಟೆ ತುಂಬುವುದರಿಂದ, ಕುರುಕಲು ತಿಂಡಿಗಳಿಗಾಗಿ ಮಕ್ಕಳು ದುಂಬಾಲು ಬೀಳುವುದಿಲ್ಲ. ಚಿಕನ್ ಸ್ಟ್ಯೂ, ಚಿಕನ್ ಫ್ರೈ ಮೊದಲಾದ ಬಾಯಲ್ಲಿ ನೀರೂರಿಸುವಂತಹ ಖಾದ್ಯಗಳನ್ನು ಮಕ್ಕಳು ಎಂದಿಗೂ ಬೇಡವೆನ್ನಲಾರರು.

೫.ಹಸುರೆಲೆಗಳು

ಬೆಳವಣಿಗೆಯಲ್ಲಿ ಅತ್ಯಂತ ಪ್ರಧಾನ ಪಾತ್ರವಹಿಸುವಂತಹ ವಿಟಾಮಿನ್, ಐರನ್ ಫೈಬರ್ ಮತ್ತು ಕಾಲ್ಷಿಯಂನ್ನು ಹೇರಳವಾಗಿ ತನ್ನಲ್ಲಿ ಅಡಕವಾಗಿಸಿಕೊಂಡ ಹಸುರೆಲೆ ತರಕಾರಿಗಳು, ಮಕ್ಕಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.ಸಾಮಾನ್ಯವಾಗಿ ಮಕ್ಕಳು ಹಸಿರೆಲೆಗಳನ್ನು ತಿನ್ನುವುದಿಲ್ಲ.ಆದರೆ,ಮಕ್ಕಳ ಪ್ರಿಯ ತಿನಿಸುಗಳನ್ನು ತಯಾರಿಸುವಾಗ ಅದರೊಂದಿಗೆ ಹಸಿರೆಲೆಗಳನ್ನು ಸೇರಿಸಬಹುದು. ಹಸುರೆಲೆತರಕಾರಿಗಳ ಸೇವನೆಯು ನಿಮ್ಮ ಮಗುವನ್ನು ಬಲಶಾಲಿ ಹಾಗೂ ಆರೋಗ್ಯವಂತನನ್ನಾಗಿಸುತ್ತದೆ.(ಇದರ ಬಗ್ಗೆ ಪೊಪಾಯ್ ಆವತ್ತೇ ಹೇಳಿರಲಿಲ್ಲವೇ…)

೬.ಓಟ್ಸ್

ಓಟ್ಸ್ ಅನ್ನು ಪ್ರಾತಃಕಾಲದ ಆಹಾರವಾಗಿ ಮಕ್ಕಳು ಖುಷಿಯಿಂದ ಸೇವಿಸುತ್ತಾರೆ. ಹೇರಳವಾಗಿ ಫೈಬರ್ ಹಾಗೂ ಕಾರ್ಬೋಹೈಡ್ರೇಟ್ ಅನ್ನು ಒಳಗೊಂಡಿರುವ ಓಟ್ಸ್ ಗಳು, ಮಕ್ಕಳಿಗೆ ಚಟುವಟಿಕೆಯಿಂದಿರಲು ಅಗತ್ಯವಾದ ಚೈತನ್ಯವನ್ನು ನೀಡುತ್ತದೆ. ಮಗುವಿನ ನಿತ್ಯಾಹಾರದಲ್ಲಿ ಓಟ್ಸ್ ಅಡಕವಾಗಿದ್ದರೆ, ಮಗುವು ಬೇಗನೆ ನೀಳಕಾಯನಾಗುವನೆಂಬುದರಲ್ಲಿ ಎರಡು ಮಾತಿಲ್ಲ.

೭.ಸೋಯಾ ಬೀನ್ ಗಳು

ದನದ ಹಾಲಿನಷ್ಟೇ ಪ್ರಮಾಣದಲ್ಲಿ ಪ್ರೋಟಿನ್ ಹಾಗೂ ಕ್ಯಾಲ್ಷಿಯಂನ್ನು ಒಳಗೊಂಡಿರುವ ಸೋಯಾಬೀನ್ಸಗಳನ್ನು ಸೇವಿಸುವುದು ಮಕ್ಕಳ ಆರೋಗ್ಯಕ್ಕೆ ಬಹಳ ಉತ್ತಮ.

ಮೇಲೆ ತಿಳಿಸಿದ ಆಹಾರ ಅಭ್ಯಾಸಗಳು ಮಾತ್ರವಲ್ಲದೇ ಸರಿಯಾದ ಪ್ರಮಾಣದಲ್ಲಿ ನಿದ್ರೆ ಹಾಗೂ ನಿಯಮಿತವಾದ ವ್ಯಾಯಾಮ ಕೂಡ ಅಭ್ಯಾಸ ಮಾಡಿಕೊಳ್ಳುವುದು ಆರೋಗ್ಯಕರವಾದ ಶರೀರದ ಬೆಳವಣಿಗೆಗೆ ಅತೀ ಅಗತ್ಯ.

Leave a Reply

%d bloggers like this: