ಯಾವುದೇ ರಾಸಾಯನಿಕ ಇಲ್ಲದೆ ಕೇವಲ ನೈಸರ್ಗಿಕವಾಗಿ ಹೀಗೆ ಬಿಳಿಕೂದಲನ್ನ ಶಾಶ್ವತವಾಗಿ ಹೋಗಲಾಡಿಸಿ!

ಇತ್ತೀಚಿಗೆ ಯುವ ವಯಸ್ಸಿನಲ್ಲಿ ತಲೆಕೂದಲು ಬಿಳಿಯಾಗುತ್ತಿದೆ, ಇದಕ್ಕೆ ಕಾರಣ ಏನೇ ಇರಲಿ ಆದರೆ, ಬಿಳಿ ಕೂದಲನ್ನು ಚಿಕ್ಕ ವಯಸ್ಸಿನಲ್ಲೇ ನೋಡುವುದು ನಿಮಗೆ ಬೇಸರದ ವಿಷಯ. ಚಿಂತಿಸಬೇಡಿ ಇದಕ್ಕಾಗಿ ನಾವು ಸರಳ ಆಯುರ್ವೇದದ ವಿಧಾನಗಳನ್ನು ನಿಮ್ಮ ಮುಂದೆ ತಂದಿದ್ದೇವೆ. ಇವು ಸಂಪೂರ್ಣ ನೈಸರ್ಗಿಕ ಮತ್ತು ಇದನ್ನು ನೀವು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.

೧.ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲಾ

೧.ಇದರಲ್ಲಿರುವ ಬೀಜವನ್ನು ತೆಗೆದು ಪೇಸ್ಟ್ ತರಹ ಮಾಡಿಕೊಳ್ಳಿ.

೨.ಈ ಪೇಸ್ಟ್ ಅನ್ನು ತಲೆಬುರುಡೆಗೆ ಹಾಕಿ ೧೦ ರಿಂದ ೧೫ ನಿಮಿಷಗಳ ನೆನೆಯಲು ಬಿಡಿ.

೩.ನಂತರ ನೀರಿನಿಂದ ಚೆನ್ನಾಗಿ ತೊಳೆಯಿರಿ.

೨.ಕೊಬ್ಬರಿ ಎಣ್ಣೆ ಮತ್ತು ಕರಿಬೇವು ಎಲೆ

೧.ಒಂದು ಸಣ್ಣ ಪಾತ್ರೆಯಲ್ಲಿ ೧/೮ರಷ್ಟು ಕೊಬ್ಬರಿ ಎಣ್ಣೆ ಮತ್ತು ೧/೪ರಷ್ಟು ಕರಿಬೇವು ಎಲೆಗಳನ್ನು ಹಾಕಿ.

೨.ಮಾಧ್ಯಮ ಉರಿಯಲ್ಲಿ ಅದು ಕುದಿಯುವವರೆಗೂ ಬೇಯಿಸಿ.

೩.ಪಾತ್ರೆಯನ್ನು ಮುಚ್ಚಿ ಅದು ತಣ್ಣಗಾಗಲು ಅಥವಾ ಆರಲು ಬಿಡಿ.

೪.ನಂತರ ಆ ಎಣ್ಣೆಯನ್ನು ತಲೆಬುರುಡೆ ಮತ್ತು ಕೂದಲಿಗೆ ಸಂಪೂರ್ಣವಾಗಿ ಹಚ್ಚಿ, ೨೦ ನಿಮಿಷಗಳ ಕಾಲ ನೆನಯಲು ಬಿಡಿ.

೫.ನಂತರ ಬೆಚ್ಚನೆಯ ನೀರಿನಿಂದ ಇದನ್ನು ಶಾಂಪೂ ಅಥವಾ ಕಂಡೀಷನರ್ ನಿಂದ ತೊಳೆಯಿರಿ.

೩.ನಿಂಬೆ ರಸ ಮತ್ತು ಆಮ್ಲಾ(ಬೆಟ್ಟದ ನೆಲ್ಲಿಕಾಯಿ) ಪುಡಿ

೧.೪ ಚಮಚ ನೆಲ್ಲಿಕಾಯಿ/ಆಮ್ಲಾ ಪುಡಿಯ ಜೊತೆಗೆ ಒಂದು ನಿಂಬೆ ಹಣ್ಣಿನ ರಸ ಮತ್ತು ೨ ಚಮಚ ನೀರನ್ನು ಸೇರಿಸಿ, ಪೇಸ್ಟ್ ನಂತೆ ಮಾಡಿ ಒಂದು ಗಂಟೆಗಳ ಕಾಲ ಅದನ್ನು ಹಾಗೆ ಬಿಡಿ.

೨.ನಂತರ ಇದನ್ನು ನಿಮ್ಮ ಕೂದಲಿನ ಬುಡಕ್ಕೆ ಮತ್ತು ಕೂದಲಿನ ಎಳೆಗಳಿಗೆ ಸರಿಯಾಗಿ ಹಚ್ಚಿರಿ.

೩.ಇದನ್ನು ೨೦ರಿಂದ ೩೦ನಿಮಿಷಗಳ ನಂತರ ಚೆನ್ನಾಗಿ ನೀರಿನಲ್ಲಿ ತೊಳೆಯಿರಿ.

೪.ಶಾಂಪೂ ಅಥವಾ ಕ್ಯಾಂಡೀಷನರ್ ಅನ್ನು ತಕ್ಷಣವೇ ಉಪಯೋಗಿಸಬೇಡಿ(ನೀರಿನಿಂದ ತೊಳೆದು ೨೦ ನಿಮಿಷದ ನಂತರ ಬೇಕಿದ್ದರೆ ಉಪಯೋಗಿಸಬಹುದು).

೪.ಮೆಹಂದಿ(/ಮೆಂದಿ ಎಲೆ) ಮತ್ತು ಮೆಂತ್ಯೆ ಪುಡಿ

೧.ಒಂದು ಚಮಚ ಮೆಹಂದಿ, ಒಂದು ಚಮಚ ಮೆಂತ್ಯೆ ಪುಡಿ, ಒಂದು ಚಮಚ ಮೊಸರು, ಎರಡು ಚಮಚ ಪುದಿನ ರಸ, ಎರಡು ಚಮಚ ತುಳಸಿ ಎಲೆ ರಸ ಎಲ್ಲವನ್ನು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ.

೨.ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿ ಕನಿಷ್ಠ ೨ ಗಂಟೆ ಅಥವಾ ಹೆಚ್ಚು ಹೊಳಪು ಪಡೆಯಲು ೪ ಗಂಟೆಗಳ ಕಾಲ ಹಾಗೆ ಬಿಡಿ.

೩.ನಂತರ ಲೋಗಸರ ದಿಂದ ಕೂದಲನ್ನು ತೊಳೆದು ನಂತರ ನೀರಿನಿಂದ ಚೆನ್ನಾಗಿ ತೊಳೆಯಿರಿ.

೫.ಕೊಬ್ಬರಿ ಎಣ್ಣೆ ಮತ್ತು ನಿಂಬೆ ರಸ

೧.ಕೊಬ್ಬರಿ ಎಣ್ಣೆ ಮತ್ತು ನಿಂಬೆರಸದ ಮಿಶ್ರಣದಿಂದ ನಿಮ್ಮ ತಲೆಯನ್ನು ಮಸಾಜ್ ಮಾಡಿ.

೨.ಇದನ್ನು ನಿರಂತರವಾಗಿ ಮಾಡಿ.

೩.ಬಿಳಿ ಕೂದಲಿಗೆ ಇದು ಒಂದು ಉತ್ತಮ ಚಿಕಿತ್ಸೆ.

ಸಲಹೆ:

೧.ಇದರ ಜೊತೆಗೆ ತಲೆ ಕೂದಲಿಗೆ ಪೌಷ್ಟಿಕಾಂಶದ ಅವಶ್ಯಕತೆ ಇರುತ್ತದೆ, ನೀವು ಸರಿಯಾದ ಆರೋಗ್ಯಕರ ಪೌಷ್ಟಿಕ ಆಹಾರ ಸೇವಿಸದೇ ಬರಿ ಇದನ್ನು ಮಾಡುವುದರಿಂದ ಸಂಪೂರ್ಣ ಫಲಿತಾಂಶವನ್ನು ನೋಡಲು(/ನಿರೀಕ್ಷಿಸುವುದು) ಕಷ್ಟ.

೨.ಕರಿಬೇವನ್ನು ಸೇವಿಸುವುದು ಕೂಡ ಕೂದಲನ್ನು ಕಪ್ಪಾಗಿ ಇರಿಸುವಲ್ಲಿ ಸಹಾಯ ಮಾಡುತ್ತದೆ.

೩.ನಿಮ್ಮ ಕೂದಲಿಗೆ ಆದಷ್ಟು ರಾಸಾಯನಿಕ ಇರುವ ಶಾಂಪೂ ಅಥವಾ ಕಂಡಿಷನರ್ ಗಳ ಬಳಕೆಯನ್ನು ಕಡಿಮೆ ಮಾಡಿ.

೪.ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.

Leave a Reply

%d bloggers like this: