ವರ್ಷ ತುಂಬುವುದರೊಳಗೆ ಮಗುವು ಅನುಭವಿಸುವ ೭ ರೋಗಗಳು ಹಾಗೂ ಮುನ್ನೆಚ್ಚರಿಕೆಗಳು

ಒಂದು ವರ್ಷ ಪ್ರಾಯವಾದ ಮಗುವಿನ ರೋಗ ಪ್ರತಿರೋಧಕ ಶಕ್ತಿಯು ಪ್ರಬಲಗೊಂಡಿರುವುದಿಲ್ಲ ಹಾಗೂ ಯಾವುದೇ ರೋಗಾಣುಗಳಿಗೆ ಎದುರಾಗಿ ಹೋರಾಡುವ ಸನ್ನಿವೇಶವೂ ಒದಗಿ ಬಂದಿರಲಿಲ್ಲ. ಹಾಗಾಗಿ, ಆ್ಯಂಟಿಬಾಡಿಸನ್ನು ಉತ್ಪಾದಿಸುವ ಅಗತ್ಯವೂ ಬೀಳಲಿಲ್ಲ. ಫಲಿತಾಂಶ, ಮಕ್ಕಳು ಬಹಳ ಬೇಗನೇ ಅನಾರೋಗ್ಯ ಪೀಡಿತರಾಗುವರು.

ಆದುದರಿಂದ ಒಂದು ವರ್ಷದೊಳಗಿನ ಮಗುವಿಗೆ ಲಸಿಕೆ ಹಾಗೂ ಚುಚ್ಚು ಮದ್ದುಗಳನ್ನು ಕಡ್ಡಾಯವಾಗಿ ನೀಡಬೇಕು. ಲಸಿಕೆಗಳನ್ನು ನೀಡುವ ಅಗತ್ಯವಿಲ್ಲದಿರುವಂತಹ,ಆದರೆ ಬಹಳ ಬೇಗನೆ ಮಕ್ಕಳಿಗೆ ತಗಲುವಂತಹ ಕೆಲವು ಸೋಂಕು ರೋಗಗಳ ಬಗ್ಗೆ ಇಂದು ಚರ್ಚಿಸೋಣ.

೧.ಶೀತ (ನೆಗಡಿ)

ಲಕ್ಷಣಗಳು:

ಕೆಮ್ಮು, ಉಬ್ಬಸ ,ಗಂಟಲು ಕೆರೆತ, ಸಿಂಬಳ ತುಂಬಿದ ಮೂಗು ಹಾಗೂ ಸಣ್ಣ ಜ್ವರ

ಚಿಕಿತ್ಸೆ:

ಸಾಧಾರಣ ನೆಗಡಿಯಾದಾಗ ಮಗುವಿಗೆ ಯಾವುದೇ ಮಾತ್ರೆಗಳನ್ನು ನೀಡದೆ, ಆವಿ ತೆಗೆದುಕೊಳ್ಳುವುದು,ಉಪ್ಪು ನೀರಿನ ಉಪಯೋಗ ಇವೇ ಮೊದಲಾದ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು. ಇದರಿಂದ ಯಾವುದೇ ಫಲಿತಾಂಶ ಕಂಡು ಬರದಿದ್ದರೆ ಮಗುವನ್ನು ಮಕ್ಕಳ ತಜ್ಞರನ್ನು ಭೇಟಿ ಮಾಡಿಸಿ. ಅವರ ಸಲಹೆಯಂತೆ ನಡೆದುಕೊಳ್ಳಬಹುದು.

ತಡೆಗಟ್ಟುವಿಕೆ :

ಶೀತ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯನ್ನು ಮಕ್ಕಳ ಬಳಿಗೆ ಹೋಗಗೊಡದಿರಿ. ಮಗುವು ಶುಚಿಯಾಗಿದ್ದು ಯಾವುದೇ ರೋಗಾಣುವಿನ ಸೋಂಕಿಗೊಳಗಾಗಿಲ್ಲವೆಂದು ಖಾತ್ರಿಪಡಿಸಿಕೊಳ್ಳಿ.

೨.ಅತಿಸಾರ

ರೋಗಲಕ್ಷಣಗಳು :

ಆಗಾಗ ನೀರು ನೀರಾದ ಮಲವಿಸರ್ಜನೆ

ಚಿಕಿತ್ಸೆ:

ಅತಿ ಸಾರವು ಒಂದೆರಡು ದಿನಗಳ ಬಳಿಕ ತನ್ನಿಂದ ತಾನೇ ಗುಣವಾಗುತ್ತದೆ. ಇಲ್ಲದಿದ್ದರೆ ವೈದ್ಯರ ಸಲಹೆಯನ್ನು ಪಡೆಯಿರಿ. ಶರೀರವು ನಿರ್ಜಲೀಕರಣದಿಂದ ಬಳಲದಂತೆ ಆಗಾಗ ದ್ರವಾಹಾರಗಳನ್ನು ನೀಡಬಹುದು .

ತಡೆಗಟ್ಟುವಿಕೆ:

ಮಗುವಿನ ಸುತ್ತಲು ಶುಚಿತ್ವದ ವಾತಾವರಣವಿದೆ ಎಂದು ಖಾತ್ರಿ ಪಡಿಸಿಕೊಳ್ಳಿ. ಮೊದಲ ಕೆಲವು ತಿಂಗಳುಗಳಲ್ಲಿ ಬಾಟಲಿ ಆಹಾರವನ್ನು ನೀಡದಿರಿ. ಆರೋಗ್ಯಕರ ಹಾಗೂ ಶುಚಿತ್ವದ ವಾತಾವರಣದಲ್ಲಿ ತಯಾರಿಸಲ್ಪಟ್ಟ, ಮನೆಯಲ್ಲಿ ಮಾಡಿದ ಆಹಾರವನ್ನೇ ಮಗುವಿಗೆ ನೀಡಿರಿ.

೩.ರೆಸ್ಪಿರೇಟರಿ ಸಿಂಕ್ರಿಕಲ್

ಲಕ್ಷಣಗಳು

ಸಾಮಾನ್ಯ ನೆಗಡಿಯ ಲಕ್ಷಣಗಳಾದ ಕೆಮ್ಮು ಸುರಿಯುವ ದೊನ್ನೆ ಮೂಗು ಇಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಸರಿಯಾಗಿ ಗಮನಿಸದಿದ್ದರೆ, ಕೆಲವೊಮ್ಮೆ ಬ್ರಾಂಕೈಟಿಸ್( ಗೂರಲು ಕೆಮ್ಮು) ಅಥವಾ ಉಬ್ಬಸಗಳೂ ಕಾಣಿಸಿಕೊಳ್ಳಬಹುದು. ಈ ವೈರಸ್ಗಳು ಲಂಗ್ಸ್ ಗೆ ಹರಡಿ, ನ್ಯುಮೋನಿಯಗೆ ಕಾರಣವಾಗುತ್ತದೆ.

ಚಿಕಿತ್ಸೆ:

ಸಾಧಾರಣ ನೆಗಡಿಯಾದಾಗ ಅನುಸರಿಸುವ ಅದೇ ವಿಧಾನಗಳನ್ನು ಇಲ್ಲೂ ಅನುಸರಿಸಬಹುದು. ಆದರೆ, ಎರಡು ವಾರಗಳ ನಂತರವೂ ಶೀತವು ಇಳಿಮುಖವಾಗದಿದ್ದರೆ,ತಜ್ಞರನ್ನು ಭೇಟಿಯಾಗಿ.

ತಡೆಗಟ್ಟುವಿಕೆ:

ಮಗುವು ಬೆಳೆಯುವ ಪರಿಸರವು ಯಾವುದೇ ಸೋಂಕು ರೋಗ ಹರಡದಂತೆ ನಿರ್ಮಲವಾಗಿ ಇಟ್ಟುಕೊಳ್ಳಿ. ಮಗುವಿನ ಸಾನ್ನಿಧ್ಯದಲ್ಲಿ ಧೂಮಪಾನ ಮಾಡಬೇಡಿ.ಮಗುವನ್ನು ಎತ್ತಿಕೊಳ್ಳುವಾಗ ನಿಮ್ಮ ಕೈ ಕಾಲುಗಳನ್ನು ತೊಳೆದು ಶುಭ್ರವಾಗಿಟ್ಟುಕೊಳ್ಳಿ.

೪.ಜ್ವರ

ಲಕ್ಷಣಗಳು:

ಮುಖ ,ಕಿವಿ ಹಾಗೂ ಶರೀರದ ಕೆಲವು ಭಾಗಗಳಲ್ಲಿ ಕೆಂಪಾಗುವಿಕೆ ಹಾಗೂ ಬಿಸಿಯಾದ ಶರೀರ

ಚಿಕಿತ್ಸೆ:

ಸಾಧಾರಣ ಜ್ವರವಾಗಿದ್ದರೆ, ಸ್ಪಾಂಜ್ ಬಾತ್ ಹಾಗೂ ವೈದ್ಯರಿಂದ ನಿರ್ದೇಶಿಸಲ್ಪಟ್ಟ ಮಾತ್ರೆಗಳ ಸೇವನೆಯಿಂದ ಮಾತ್ರಕ್ಕೆ ಜ್ವರ ಗುಣ ಪಡುತ್ತದೆ. ಆದರೆ ಮಗುವು ಇನ್ನು ಅಸ್ವಸ್ಥರಾಗಿದ್ದರೆ, ಮಕ್ಕಳ ತಜ್ಞರನ್ನು ಭೇಟಿ ಮಾಡಿ.

ತಡೆಗಟ್ಟುವಿಕೆ :

ಸೋಂಕಿಗೊಳಪಡದಂತೆ ಮಕ್ಕಳನ್ನು ನೋಡಿಕೊಳ್ಳುವುದೇ ಜ್ವರವು ಹರಡದಂತೆ ತಡೆಯುವ ಜಾಣತನದ ಮಾರ್.

ಶುಚಿಯಾದ ಆರೋಗ್ಯಕರವಾದ ಸ್ವಚ್ಛತೆಯ ಅಡಿಯಲ್ಲಿ ತಯಾರಿಸಲ್ಪಟ್ಟ ಸರಿಯಾಗಿ ಬೇಯಿಸಿದ ಆಹಾರವನ್ನು ಮಾತ್ರವೇ ಮಕ್ಕಳಿಗೆ ನೀಡಿರಿ. ಪರಿಸರ ಶುಚಿತ್ವಕ್ಕೆ ಪ್ರಾಧಾನ್ಯವನ್ನು ನೀಡಿರಿ.

೫.ಕಿವಿನೋವು

ಲಕ್ಷಣಗಳು:

ಮಗುವು ರಾತ್ರಿಯಲ್ಲಿ ಆಗಾಗ ಎದ್ದು ಅಳುತ್ತಿರುವುದು ಆಗಾಗ ಕಿವಿಯನ್ನು ಮುಟ್ಟುತ್ತಿರುವುದು.

ತಡೆಗಟ್ಟುವಿಕೆ:

ಸರಿಯಾದ ಪ್ರಮಾಣದಲ್ಲಿ ಎದೆಹಾಲುಣಿಸಿ, ಜ್ವರ ಪೀಡಿತವಾಗಿದ್ದರೆ ಸಂಪೂರ್ಣವಾಗಿ ಗುಣಪಡಿಸಿ. ಅಲರ್ಜಿಯಾಗುವಂತಹ ವಸ್ತುಗಳಿಂದ ಮಗುವನ್ನು ದೂರವಿರಿಸಿ. ಕೈ ಕಾಲು ಹಾಗೂ ಬಾಯಿಯ ತೊಂದರೆಗಳು

ಲಕ್ಷಣಗಳು:

ಆಯಾಸ, ಜ್ವರ ,ಗಂಟಲು ಕೆರೆತ ಹಾಗೂ ರಸಿಗೆಯಿಂದ ಕೂಡಿದ ಹುಣ್ಣುಗಳು, ಬೊಬ್ಬೆ ಹಾಗೂ ಕೈ ಕಾಲು ನೋವು ಚರ್ಮದ ಮೇಲೆ ಕಾಣಿಸಿಕೊಳ್ಳುವ ನವೆಗಳು.

ಚಿಕಿತ್ಸೆ:

ಗಂಟಲು ಕೆರೆತವನ್ನು ಶಮನಗೊಳಿಸುವಂತಹ ತಂಪಾದ ದ್ರವಾಹಾರಗಳನ್ನು ಸೇವಿಸಬಹುದು. ಅಸಿಡಿಟಿಯನ್ನುಂಟುಮಾಡುವಂತಹ ಖಾರವಾದ ಖಾದ್ಯಗಳನ್ನು ಹಾಗೂ ಪಾನೀಯಗಳನ್ನು ಸೇವಿಸದಿರುವುದೊಳ್ಳೆಯದು.ಇಬುಫ್ರೋಪಿನ್‍ ಹಾಗೂ ಎಸಿಟಾಮಿನೊಫಿನ್ ಎಂಬ ಮಾತ್ರೆಗಳನ್ನು ಮಗುವಿನ ನೋವು ನಿವಾರಕಗಳಾಗಿ ಬಳಸಬಹುದು.

ತಡೆಗಟ್ಟುವಿಕೆ:

ನಿಮ್ಮ ಕೈಗಳನ್ನು ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ರೋಗಾಣುಗಳು ಹರಡದಂತೆ ತಡೆಯಬಹುದು.

೭.ಗಾಸ್ಟ್ರೋಆಂಟೆರಿಟಿಸ್

ಲಕ್ಷಣಗಳು:

ವಾಂತಿ , ಬೇಧಿ ಮತ್ತು ಹೊಟ್ಟೆನೋವು

ಚಿಕಿತ್ಸೆ:

ಮಗುವು ನಿರ್ಜಲೀಕರಣದಿಂದ ಬಳಲದಂತೆ ಆಗಾಗ ದ್ರವಾಹಾರಗಳನ್ನು ನೀಡುತ್ತಿರಿ. ಒ ಆರ್ ಎಸ್ (ಸಕ್ಕರೆ ಹಾಗೂ ಉಪ್ಪಿನ ಮಿಶ್ರಣಗಳ ದ್ರಾವಕ) ನೀಡಬಹುದು.

ತಡೆಗಟ್ಟುವಿಕೆ:

ಪರಿಸರ, ನಿಮ್ಮ ಮಗು ಹಾಗೂ ನಿಮ್ಮನ್ನು ರೋಗಾಣುಮುಕ್ತವಾಗಿರುವಂತೆ ಜಾಗ್ರತೆ ವಹಿಸಿರಿ. ಮಗುವು ಜ್ವರ ಪೀಡಿತರಾಗುವುದು ಸಾಮಾನ್ಯ.ತಾಯಿಯ ಮಮತೆ ಹಾಗೂ ಮುಂಜಾಗರೂಕತೆಗಳಿಂದ ಎಲ್ಲವನ್ನೂ ಗುಣಪಡಿಸಬಹುದು. ಇಂತಹ ಸನ್ನಿವೇಶಗಳಿಗೆ ಮೊದಲೇ ಮಾನಸಿಕವಾಗಿ ಸಿದ್ದವಾಗಿದ್ದರೆ,ನಿಮಗೆ ಆತಂಕ ಹಾಗೂ ಗಾಬರಿಗಳಿಲ್ಲದೇ ಸನ್ನಿವೇಶಗಳನ್ನು ನಿರಾತಂಕವಾಗಿ ನಿಭಾಯಿಸಬಹುದು.

Leave a Reply

%d bloggers like this: