ಈ 10 ಸಣ್ಣ ಮನೆಪರೀಕ್ಷೆಗಳು ತಿಳಿಸುತ್ತವೆ ನಿಮ್ಮ ಮಗು ಗಂಡೋ ಅಥವಾ ಹೆಣ್ಣೋ ಎಂದು

ಹೌದು ನೀವು ಒಂಬತ್ತು ತಿಂಗಳುಗಳವರೆಗೆ ಕಾದು ನಿಮ್ಮ ಮಗುವಿನ ಲಿಂಗ ಯಾವುದೆಂದು ತಿಳಿದುಕೊಳ್ಳಬಹುದು. ನಿಮ್ಮಲ್ಲಿ ಯಾವುದೇ ಕೆಟ್ಟ ಯೋಚನೆ ಇಲ್ಲದೆ, ಕೇವಲ ಕುತೂಹಲಕ್ಕಾಗಿ ನಿಮ್ಮ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿದುಕೊಳ್ಳುವ ಕಾತುರ ನಿಮಗಿದ್ದರೆ, ನಿಮಗೊಂದು ಒಳ್ಳೆ ವಿಷಯ ಇಲ್ಲಿದೆ.

ಮಗುವಿನ ಲಿಂಗ ಪತ್ತೆ ಮಾಡಲಿಕ್ಕೆ ಹಲವಾರು ವೈಜ್ಞಾನಿಕ ಪರೀಕ್ಷೆಗಳಿವೆ, ಆದರೆ ನಿಮಗೆ ಮನೆಯಲ್ಲೇ ಏನು ಹೆಚ್ಚು ತಲೆನೋವಿಲ್ಲದೆ ನಿಮ್ಮ ಮಗುವಿನ ಲಿಂಗ ಯಾವುದೆಂದು ತಿಳಿಯಲು ಇಲ್ಲಿ ಕೆಲವು ವಿಧಾನಗಳನ್ನ ನಾವು ತಿಳಿಸಿದ್ದೇವೆ ಓದಿ.

೧. ಮಗುವಿನ ಹೃದಯದ ಬಡಿತ

ಮುಂದಿನ ಬಾರಿ ವೈದ್ಯರ ಬಳಿ ಚೆಕ್ ಅಪ್ ಮಾಡಿಸಲು ಹೋದಾಗ, ಅವರು ನಿಮ್ಮ ಮಗುವಿನ ಹೃದಯ ಬಡಿತ ಪರಿಶೀಲಿಸಿದಾಗ, ಇನ್ನಷ್ಟು ನಿಶ್ಚಿತಗಳನ್ನ ಕೇಳಿ ತಿಳಿದಿಕೊಳ್ಳಿ.. ತಿಳಿದಿರುವ ಪ್ರಕಾರ, ಮಗುವಿನ ಹೃದಯ ಬಡಿತ 140ಕ್ಕೂ ಹೆಚ್ಚಿದ್ದರೆ, ಮಗು ಹೆಣ್ಣು ಹಾಗು ಹೃದಯದ ಬಡಿತ ಅದಕ್ಕಿಂತ ಕಮ್ಮಿ ಇದ್ದರೆ, ಮಗು ಗಂಡು.

೨. ಬೆಳಗಿನ ಬೇನೆ (ಮಾರ್ನಿಂಗ್ ಸಿಕ್ಕ್ನೆಸ್ಸ್)

ಯಾವುದೋ ಒಂದು ಕಾಲದಿಂದ ಜನರು ಗರ್ಭಿಣಿಗೆ ಮೊದಲ ತ್ರೈಮಾಸಿಕದಲ್ಲಿ ಬೆಳಗಿನ ಬೇನೆ ಅಥವಾ ಮಾರ್ನಿಂಗ್ ಸಿಕ್ಕ್ನೆಸ್ಸ್  ಬಹಳಷ್ಟು ಕಾಡುತ್ತಿದ್ದರೆ, ಅವಳಿಗೆ ಹೆಣ್ಣು ಮಗು ಆಗುವುದು ಎಂದು ನಂಬಿದ್ದಾರೆ. ಅಂದರೆ ನಿಮ್ಮಲ್ಲಿ ಹೆಚ್ಚು ವಾಕರಿಕೆ ಅಥವಾ ವಾಂತಿ ಆಗುವುದು  ಕಾಣಿಸಿಕೊಳ್ಳುತ್ತಿಲ್ಲ ಎಂದರೆ ನಿಮಗೆ ಗಂಡು ಮಗು ಆಗುವುದು ಎಂಬ ನಂಬಿಕೆ.

೩. ಬಯಕೆಗಳು

ನೀವು ಚಾಕಲೇಟ್ ಅಥವಾ ಐಸ್ ಕ್ರೀಮ್ ಬಯಸುತ್ತಿದ್ದರೆ, ನಿಮ್ಮ ಮಗು ಹೆಣ್ಣು. ಉಪ್ಪಿನಕಾಯಿ ರುಚಿ ಬಯಸುತ್ತಿದ್ದರೆ? ಗಂಡು! ಏಕೆಂದರೆ ರೂಢಿಗತವಾಗಿ ಹುಡುಗಿಯರನ್ನು ನಾವು “ಸಕ್ಕರೆ ಮತ್ತು ಅಕ್ಕರೆ, ಒಟ್ಟಾರೆ ಸಿಹಿ” ಎಂದೇ ಪರಿಗಣಿಸುತ್ತೇವೆ. ಹೀಗಾಗಿ ಪುರಾಣಗಳ ಪ್ರಕಾರ ನೀವು ಹೆಚ್ಚಾಗಿ ಸಿಹಿ ಸೇವಿಸಲು ಇಚ್ಛಿಸುತ್ತಿದ್ದಾರೆ, ನೀವು ಅಂತಹದ್ದೇ ಸಿಹಿಯನ್ನ ಭೂಮಿಗೆ ತರಲಿದ್ದೀರಾ ಎಂದರ್ಥ.

೪. ನಿಮ್ಮ ಹೊಟ್ಟೆ

ನೀವು ನಿಮ್ಮ ಮಗುವನ್ನು ಹೊಟ್ಟೆಯಲ್ಲಿ ಹೇಗೆ ಇರಿಸಿಕೊಂಡಿದ್ದೀರಾ ಎಂಬುದು ಬಹಳಷ್ಟನ್ನು ತಿಳಿಸುತ್ತದೆ. ನೀವು ನಿಮ್ಮ ಮಗುವನ್ನು ಹೊಟ್ಟೆಯ ಮೇಲ್ಭಾಗದಲ್ಲಿ ಹೊತ್ತಿದ್ದು, ಅದರ ಭಾರ ನಿಮ್ಮ ಹೊಟ್ಟೆಯ ಬದಿಯಲ್ಲಿ (ಸೈಡ್ ಅಲ್ಲಿ) ಇದ್ದರೆ ಮಗು ಹೆಣ್ಣು. ನೀವು ಮಗುವನ್ನು ಹೊಟ್ಟೆಯ ಕೆಳಭಾಗದಲ್ಲಿ ಹೊತ್ತಿದ್ದು, ನಿಮ್ಮ ಹೊಟ್ಟೆಯು ಬಹುತೇಕ ವೃತ್ತಾಕಾರದಲ್ಲಿ ಇದ್ದರೆ, ಮಗು ಗಂಡು.

೫. ಕೀಲಿ ಪರೀಕ್ಷೆ

ಇದು ನಿಮ್ಮ ಮೇಲೆ ನೀವೇ ಮಾಡಿಕೊಳ್ಳುವ ಪರೀಕ್ಷೆ ಅಲ್ಲ, ಆದರೂ ಇದರ ಹಿಂದೆ ಇರುವ ನಂಬಿಕೆ ಏನು ಎಂದು ಹೇಳುತ್ತೇನೆ ಕೇಳಿ. ನಿಮ್ಮ ಮುಂದೆ ಯಾರಾದರೂ ಒಂದು ಕೀಲಿ ಕೈ ಅನ್ನು ಇರಿಸಬೇಕು. ನೀವು ಅದನ್ನು ಸ್ವಾಭಾವಿಕಾವಾಗಿ ಮುಂದಿನ ಕಡೆ ಇಂದ (ಕೀಲಿಯ ರೌಂಡ್ ಹ್ಯಾಂಡಲ್) ಎತ್ತಿದರೆ, ನಿಮಗೆ ಹೆಣ್ಣು ಮಗು ಆಗುವುದು ಎಂದು. ನೀವು ಸ್ವಾಭಾವಿಕವಾಗಿ ಅದನ್ನು ಹಿಂದೆ ಕಡೆ ಇಂದ ಎತ್ತಿದರೆ, ನಿಮಗೆ ಗಂಡು ಮಗು ಎಂದು. ನೀವು ಇದನ್ನು ಓದಿರುವುದರಿಂದ ನಿಮಗೆ ಇದು ತಿಳಿದಿದೆ, ಹೀಗಾಗಿ ನೀವು ಇದನ್ನ ಬೇರೆಯವರ ಮೇಲೆ ಪ್ರಯೋಗಿಸಬೇಕು.

೬. ಮೂತ್ರ ಪರೀಕ್ಷೆ

ನೀವು ನಿಮ್ಮ ಮೂತ್ರವನ್ನ ಪರೀಕ್ಷಿಸುವ ಸಮಯ ಇನ್ನೂ ಮುಗಿದಿಲ್ಲ! ಹೌದು, ನಿಮ್ಮ ಮೂತ್ರವು ಗಾಢ ಹಳದಿ ಬಣ್ಣದ್ದು ಆಗಿದ್ದರೆ, ಮಗು ಹೆಣ್ಣು, ತಿಳಿ ಹಳದಿ ಬಣ್ಣದ್ದು ಆಗಿದ್ದರೆ, ಮಗು ಗಂಡು.

೭. ಉಂಗುರ-ದಾರ ಪರೀಕ್ಷೆ

ನೀವು ನಿಮ್ಮ ಮದುವೆಯ ಉಂಗುರುವನ್ನು ತೆಗೆದು ಒಂದು ದಾರಕ್ಕೆ ಕಟ್ಟಿ ನಿಮ್ಮ ಹೊಟ್ಟೆಯ ಮೇಲೆ ಇಳೆಬಿಡಿ, ಅದು ವೃತ್ತಾಕಾರದಲ್ಲಿ ಸುತ್ತುತ್ತಿದ್ದರೆ, ಮಗು ಗಂಡು ಎಂದು. ಅಕಸ್ಮಾತ್ ಅದು ಹಿಂದೆ ಮುಂದೆ ತೂಗಾಡಿದರೆ, ಮಗು ಹೆಣ್ಣು ಎಂದು.

೮. ನೀವು ಹೇಗೆ ಎದ್ದೇಳುವಿರಿ

ಮಲಗುವುದು ಎಂದರೆ ಅದು ಗರ್ಭಿಣಿಯರಿಗೆ ಒಂದು ಕಷ್ಟದ ಕೆಲಸ ಆಗಿರುತ್ತದೆ. ಆದರೆ ಒಂದು ನಂಬಿಕೆಯ ಪ್ರಕಾರ ನೀವು ನಿದ್ದೆ ಇಂದ ಪದೇ ಪದೇ ಎಡಗಡೆ ಬದಿಯಿಂದ ಎದ್ದರೆ, ನಿಮ್ಮದು ಹೆಣ್ಣು ಮಗು ಎಂದು. ನೀವು ಪದೇ ಪದೇ ಬಲಗಡೆ ಬದಿಯಿಂದ ಎದ್ದರೆ, ಮಗು ಗಂಡು ಎಂದು.

೯. ಹಸ್ತ

ನೀವೇನು ಹಸ್ತ ನೋಡಿ ಭವಿಷ್ಯ ಹೇಳುವವರು ಆಗಿರಬೇಕಿಲ್ಲ, ನಿಮ್ಮ ಹಸ್ತವು ಹೇಗಿದೆ ಎಂದು ನೋಡಿಕೊಳ್ಳಿ. ನಿಮ್ಮ ಹಸ್ತ ಒಣಗಿ, ಗೆರೆಗೆರೆಯಾಗಿದೆಯೇ? ಹಾಗಿದ್ದರೆ, ನಂಬಿಕೆ ಪ್ರಕಾರ ನಿಮಗೆ ಗಂಡು ಮಗು ಆಗುತ್ತದೆ. ನಿಮ್ಮ ಹಸ್ತ ಮೃದುವಾಗಿ, ಮೆತ್ತಗೆ ಇದ್ದರೆ, ನಿಮ್ಮ ಮಗು ಹೆಣ್ಣು ಎಂದರ್ಥ.

೧೦. ನಿಮ್ಮ ಸ್ತನಗಳ ಗಾತ್ರ

ನಿಮ್ಮ ಎರಡು ಸ್ತನಗಳು ಸ್ತನಗಳು ಒಂದೇ ಗಾತ್ರದಲ್ಲಿ ಇರಬೇಕೆಂದಿಲ್ಲ. ಅದರಲ್ಲೂ ಮುಖ್ಯವಾಗಿ ಗರ್ಭಧಾರಣೆ ವೇಳೆ ಹಾರ್ಮೋನಲ್ ಬದಲಾವಣೆಗಳೆಲ್ಲಾ ಆದಮೇಲೆ. ಇದರ ಮೇಲೆಯೂ ನಮ್ಮ ಪೂರ್ವಜರು ಒಂದು ನಂಬಿಕೆಯನ್ನ ಹುಟ್ಟು ಹಾಕಿದ್ದಾರೆ. ಅದು ಏನೆಂದರೆ ನಿಮ್ಮ ಎಡಭಾಗದ ಸ್ತನವು ದೊಡ್ಡದಿದ್ದರೆ, ಮಗು ಗಂಡು ಎಂದರ್ಥ. ಬಲಭಾಗದ ಸ್ತನವು ದೊಡ್ಡದಿದ್ದರೆ, ಮಗು ಹೆಣ್ಣು ಎಂದರ್ಥ.

Leave a Reply

%d bloggers like this: