ನಿಮ್ಮ ಮೂತ್ರದ ಬಣ್ಣ ನಿಮ್ಮ ಬಗ್ಗೆ ಏನು ಹೇಳುತ್ತದೆ?

ಬಣ್ಣ, ಸಾಂದ್ರತೆ ಮತ್ತು ಮೂತ್ರದ ವಾಸನೆ ನಮ್ಮ ಆರೋಗ್ಯದ ಬಗ್ಗೆ ನಮಗೆ ತಿಳಿಸುತ್ತದೆ. ನಿಮ್ಮ ದೇಹದಿಂದ ಹೊರಹೋಗುವ ದ್ರವದ ಬಣ್ಣವು ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ನೋಡೋಣ. ಮೂತ್ರವು ವಿವಿಧ ಬಣ್ಣಗಳನ್ನು ಹೊಂದಿದೆ. ಅದು ಗಾಢ ಜೇನುತುಪ್ಪ ಬಣ್ಣದಿಂದ ತಿಳಿ ಹಳದಿ(ಸ್ಟ್ರಾ ಹಳದಿ) ಬಣ್ಣವನ್ನು ಹೊಂದಿದೆ. ಅದರ ಬಣ್ಣ ನಿಮ್ಮ ದೇಹದ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

೧.ಪಿಂಕ್ ಅಥವಾ ಕೆಂಪುಯುಕ್ತ ಬಣ್ಣ

ನೀವು ಇತ್ತೀಚಿಗೆ ಬೀಟ್ಸ್, ಬ್ಲೂಬೆರ್ರಿ ಅನ್ನು ಸೇವಿಸಿದ್ದೀರಾ? ಇಲ್ಲ ಎಂದರೆ ನಿಮ್ಮ ಮೂತ್ರದಲ್ಲಿ ರಕ್ತ ಸೇರುತ್ತಿದೆ ಎಂದರ್ಥ. ಬಹುಶಃ ಇದು ನಿಮ್ಮ ಕಿಡ್ನಿಯಲ್ಲಿ ತೊಂದರೆಯನ್ನು ಸೂಚಿಸುತ್ತಿರಬಹುದು, ಮೂತ್ರನಾಳದ ಸೋಂಕಿರಬಹುದು, ಗೆಡ್ಡೆಗಳಿರಬಹುದು, ಅಥವಾ ಇದು ನಿಮ್ಮ ಜನನಾಂಗದ ಗ್ರಂಥಿಯ ತೊಂದರೆಯನ್ನು ಸೂಚಿಸುತ್ತಿರಬಹುದು. ನೀವು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

೨.ಸಿರಪ್ ಅಥವಾ ಕಂದು ಬಣ್ಣ

ನೀವು ಯಕೃತ್ತಿನ(ಲಿವರ್) ರೋಗವನ್ನು ಹೊಂದಿರಬಹುದು. ಅಥವಾ ನಿಮ್ಮ ದೇಹವು ಹೆಚ್ಚು ನಿರ್ಜಲೀಕರಣಗೊಂಡಿರಬಹುದು. ಹೆಚ್ಚು ನೀರನ್ನು ಸೇವಿಸಿ, ಬಣ್ಣ ಹಾಗೆ ಬಂದರೆ ಕೂಡಲೇ ವೈದ್ಯರ ಬಳಿ ಪರೀಕ್ಷಿಸಿ.

೩.ಪಾರದರ್ಶಕ ಹಳದಿ

ನೀವು ಆರೋಗ್ಯವಾಗಿದ್ದಿರಿ.

೪.ಗಾಢ ಹಳದಿ

ನೀವು ಸಾಮಾನ್ಯವಾಗಿದ್ದಿರಿ, ಆದರೆ ಹೆಚ್ಚು ನೀರನ್ನು ಸೇವಿಸಬೇಕು.

೫.ಜೇನುತುಪ್ಪದ ಬಣ್ಣ

ನಿಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ನೀವು ನೀರನ್ನು ಕುಡಿಯುತ್ತಿಲ್ಲ. ಹೆಚ್ಚು ನೀರು ಸೇವಿಸುವುದು ಒಳ್ಳೆಯದು.

೬.ತೆಳು ಹುಲ್ಲು(pale straw) ಹಳದಿ ಬಣ್ಣ

ನೀವು ಸಾಮಾನ್ಯವಾಗಿ ಇದ್ದೀರಿ. ನಿಮ್ಮ ದೇಹಕ್ಕೆ ಅಗತ್ಯವಿರುವ ನೀರನ್ನು ಒದಗಿಸುತ್ತಿರುವಿರಿ. ನಿಮ್ಮ ದೇಹವು ಹೈಡ್ರೇಟ್ ನಿಂದ ಕೂಡಿದೆ. ನೀವು ಆರೋಗ್ಯವಾಗಿದ್ದಿರಿ ಎಂದು.

೭.ಬಣ್ಣ ರಹಿತ/ಪಾರದರ್ಶಕ

ನೀವು ಹೆಚ್ಚು ನೀರನ್ನು ಕುಡಿಯುತ್ತಿದ್ದಿರಿ ಎಂದು ಇದು ಹೇಳುತ್ತದೆ.

೮.ಕಿತ್ತಳೆ ಬಣ್ಣ

ನೀವು ಸರಿಯಾಗಿ ನೀರು ಕುಡಿಯುತ್ತಿಲ್ಲ, ನಿಮ್ಮ ಲಿವರ್ ಅಥವಾ ಪಿತ್ತರಸ ನಾಳದಲ್ಲಿ ತೊಂದರೆ ಇರಬಹುದು, ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

೯.ನೀಲಿ ಅಥವಾ ಹಸಿರು

ಇದು ಅಪರೂಪದ ಅನುವಂಶೀಯ ಕಾಯಿಲೆಯಾಗಿದ್ದು ನಿಮ್ಮ ಮೂತ್ರದ ಬಣ್ಣವನ್ನು ನೀಲಿ ಅಥವಾ ಹಸಿರು ಬಣ್ಣಕ್ಕೆ ತಿರುಗಿಸುತ್ತದೆ. ಬ್ಯಾಕ್ಟೀರಿಯಾದ ಸೋಂಕಿನಿಂದ ಕೂಡ ಇದು ಆಗಿರಬಹುದು. ನೀವು ಸೇವಿಸಿರುವ ಕೆಲವು ಬಣ್ಣ ಕಟ್ಟಿದ್ದ ಜಂಕ್ ಆಹಾರದ ಪರಿಣಾಮ ಇರಬಹುದು, ವೈದ್ಯರಲ್ಲಿ ಖಚಿತ ಪಡಿಸಿಕೊಳ್ಳುವುದು ಒಳ್ಳೆಯದು.

೧೦.ನೊರೆ ಅಥವಾ ವಿಚಿತ್ರವಾದ ರೀತಿಯಲ್ಲಿರುವುದು

ಇದು ಹಾನಿಕಾರಕವಲ್ಲದ ದ್ರವ ಮತ್ತು ಸಾಂದರ್ಭಿಕ. ಆದರೆ ಇದು ನಿಮ್ಮ ದೇಹದಲ್ಲಿ ಅಧಿಕ ಪ್ರೊಟೀನ್ ಇರುವುದನ್ನು ಸೂಚಿಸುತ್ತದೆ ಅಥವಾ ಕಿಡ್ನಿಯಲ್ಲಿ ಸಮಸ್ಯೆ ಇರಬಹುದು. ನೀವು ಮೂತ್ರ ಮಾಡುವಾಗಲೆಲ್ಲಾ ನೊರೆ ತರಹ ಕಂಡರೆ ವೈದ್ಯರನ್ನು ಭೇಟಿ ಮಾಡಿ.

Leave a Reply

%d bloggers like this: