ಯಾವುದೇ ಖರ್ಚಿಲ್ಲದೆ ಮಗುವಿನ ಒಣ ಕೆಮ್ಮಿಗೆ ನೀವೇ ಸಿರಪ್ ತಯಾರಿಸಿ !

ಮಕ್ಕಳು ಬೇಗನೆ ಶೀತ ಮತ್ತು ಕೆಮ್ಮಿಗೆ ಗುರಿಯಾಗುತ್ತಾರೆ ಎಂಬುದು ನಮಗೆ ತಿಳಿದಿರುವ ವಿಷಯ. ಕಲುಷಿತ ವಾತಾವರಣ ಮತ್ತು ಅಲರ್ಜಿಯು ಅದನ್ನು ಮಗುವಿನಲ್ಲಿ ಮತ್ತಷ್ಟು ಹೆಚ್ಚಿಸಬಹುದು. ಅದಕ್ಕಾಗಿ ಅದನ್ನು ತಡೆಯುವ ಕೆಲವು ಸರಳ ವಿಧಾನಗಳನ್ನು ಇಲ್ಲಿ ನೀಡಲಾಗಿದೆ, ಇವು ನೈಸರ್ಗಿಕ ವಿಧಾನವಾಗಿದ್ದು ಆಯುರ್ವೇದದಲ್ಲೂ ಇದನ್ನು ಬಳಸುತ್ತಾರೆ.

ಒಣ ಕೆಮ್ಮು ಎಂದರೇನು?

ಒಣ ಕೆಮ್ಮು ಯಾವುದೇ ರೀತಿಯ ಉತ್ಪಾದನೆಯನ್ನು ಮಾಡದ ಒಂದು ಬಗೆಯ ಕೆಮ್ಮು, ಇದು ಯಾವುದೇ ತರಹದ ಕಫ ಅಥವಾ ತೊಂಟೆಯನ್ನು ಉತ್ಪತ್ತಿ ಮಾಡುವುದಿಲ್ಲ.

ಗಂಟಲಿನಲ್ಲಿ ಕಿರಿಕಿರಿ ಅಥವಾ ಕೆರೆತದಿಂದ ಒಣ ಕೆಮ್ಮು ಉಂಟಾಗುತ್ತದೆ.

ಒಣ ಕೆಮ್ಮಿಗೆ ಮನೆಯಲ್ಲೇ ಔಷಧಿ

ಪದಾರ್ಥಗಳು

೨ ಚಮಚ ಬೆಲ್ಲ

೧ ಚಮಚ ಅರಿಶಿಣದ ಪುಡಿ

೧/೪ ಚಮಚ ಕಾಳು ಮೆಣಸು ಪುಡಿ

೧/೨ ಚಮಚ ಹಸುವಿನ ತುಪ್ಪ

ವಿಧಾನ

೧.ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ, ಸಣ್ಣ ಉಂಡೆಗಳನ್ನಾಗಿ ಮಾಡಿ.

೨.ಮಿಶ್ರಣ ಒಣಗಿದಂತೆ ಕಂಡರೆ ಸ್ವಲ್ಪ ತುಪ್ಪವನ್ನು ಸೇರಿಸಿ.

೩.ಕೆಮ್ಮು ಇರುವವರಿಗೆ ೧ ಅಥವಾ ಎರಡು ಉಂಡೆಗಳನ್ನು ಮಲಗುವ ಮುನ್ನ ಸೇವಿಸಲು ನೀಡಿ, ಇದರಿಂದ ಅವರಿಗೆ ಕೆಮ್ಮಿನಿಂದ ಬಿಡುಗಡೆ ಸಿಗುತ್ತದೆ.

ಮನೆಯಲ್ಲಿ ತಯಾರಿಸಿ ಕೆಮ್ಮಿಗೆ ಸಿರಪ್
ಪದಾರ್ಥಗಳು

ಕಾಲು ಚಮಚ ತಾಜಾ ನಿಂಬೆ ಹಣ್ಣಿನ ರಸ

ಒಂದು ಚಮಚ ಜೇನುತುಪ್ಪ

ವಿಧಾನ

ನಿಂಬೆ ರಸ ಮತ್ತು ಜೇನುತುಪ್ಪ ಎರಡನ್ನು ಮಿಶ್ರಿಸಿ, ಇದನ್ನು ದಿನಕ್ಕೆ ೩ ರಿಂದ ನಾಲ್ಕು(೪) ಬಾರಿ ಮಗುವಿಗೆ ನೀಡಿ

ಶುಂಠಿ ಮತ್ತು ಜೇನಿನ ಸಿರಪ್
ಪದಾರ್ಥಗಳು

ಒಂದು ಚಮಚ ಜೇನುತುಪ್ಪ

೩-೪ ಹನಿ ತಾಜಾ ಶುಂಠಿ ರಸ

ವಿಧಾನ

ಶುಂಠಿಯನ್ನು ತುರಿದು ಅಥವಾ ಹಿಂಡಿ ಅದರ ರಸವನ್ನು ತೆಗೆದುಕೊಳ್ಳಿ.

ಇದರ ರಸದ ಜೊತೆಗೆ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ೩-೪ ಬಾರಿ ನೀಡಿ.

Leave a Reply

%d bloggers like this: