ಸೊಸೆಗೆ ಮಗುವಾದಾಗ ಕೇವಲ ಅತ್ಯುತ್ತಮ ಅತ್ತೆಯರು ಮಾಡುವ 5 ಕೆಲಸಗಳು

ಅತ್ಯುತ್ತಮ ಅತ್ತೆಯರಿಗೆ ತಮ್ಮ ಸೊಸೆಯರ ಜೀವನ ಸುಗಮವಾಗಿಸಲು ಯಾವಾಗ ಹಾಗು ಹೇಗೆ ಸಹಾಯ ಮತ್ತು ಸಲಹೆಗಳನ್ನ ನೀಡಬೇಕೆಂದು ತಿಳಿದಿರುತ್ತದೆ. ಮುಖ್ಯವಾಗಿ ಅವರಿಗೆ ತಾವು ಯಾವಾಗ ಬೋಧನೆ ಮಾಡಬೇಕು ಅಥವಾ ಮಾಡಬಾರದು ಎಂಬುದು ತಿಳಿದಿರುತ್ತದೆ.

ಇಂತಹ ಅತ್ಯುತ್ತಮ ಅತ್ತೆಯಂದಿರು ಮಾಡುವ ಇತರ ಒಳ್ಳೆಯ ಕೆಲಸಗಳನ್ನು ಇಲ್ಲಿ ನಾವು ಪಟ್ಟಿ ಮಾಡಿದ್ದೇವೆ, ಓದಿ.

೧. ನಿಮ್ಮ ಮತ್ತು ನಿಮ್ಮ ಮಗುವಿನ ಏಕಾಂತಕ್ಕೆ ಅಡ್ಡಿ ಮಾಡುವುದಿಲ್ಲ

ಹೊಸದಾಗಿ ಅಜ್ಜಿ ಆದಾಗ, ಅತ್ತೆಯಂದಿರಿಗೆ ತಮ್ಮ ಮೊಮ್ಮಕ್ಕಳನ್ನು ಬಿಟ್ಟಿರುವುದು ಕಷ್ಟ ಎಂಬುದು ಅರ್ಥ ಆಗುತ್ತದೆ. ಆದರೆ ಹೊಸ ತಾಯಿಯಾಗಿ ನಿಮಗೆ ಬೇಕಾಗಿರುವುದೇ ಅದು. ಮಗುವನ್ನು ನೋಡಲು ಬರುವ ಅತಿಥಿಗಳಾಗಲಿ ಅಥವಾ ನಿಮಗೆ ಸಹಾಯ ಮಾಡಲು ಜನರಾಗಲಿ ಬರುವ ಮುಂಚೆ ನೀವು ಪರಿಸ್ಥಿತಿಗೆ ಹೊಂದಿಕೊಳ್ಳಲು ನಿಮಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಹೀಗಾಗಿ ತಿಳಿದಿರುವ ಅತ್ತೆಯಂದಿರು ತಮ್ಮ ಸೊಸೆಗೆ ಸಹಾಯವನ್ನು ಪಡೆಯಲು ಕೂಡ ಸ್ವಲ್ಪ ಸಮಯ ಬೇಕಾಗುತ್ತದೆ ಎಂಬುದನ್ನು ಅರಿತಿರುತ್ತಾರೆ.

೨. ಶುಚಿಯಾಗಿಡುತ್ತಾರೆ

ಇದರಲ್ಲಿ ಅತ್ತೆಯ ಸಹಾಯ ಬೇಕೇ ಬೇಕಾಗುತ್ತದೆ. ಮಗು ಎಂದರೆ ರಾಶಿ ರಾಶಿ ಕೊಳೆ ಬಟ್ಟೆಗಳು, ಕಲೆಗಳು, ಪಾತ್ರೆಗಳು ಇರುತ್ತವೆ. ಮಗುವಿನ ಪೋಷಣೆ ಮಾಡಿಕೊಂಡು ಇವೆಲ್ಲವನ್ನೂ ಮಾಡುವುದು ತುಂಬಾನೇ ಕಷ್ಟ ಆಗುತ್ತದೆ. ಹೀಗಾಗಿ ಅತ್ತೆಯ ಸಹಾಯ ಹಸ್ತ ದೊರೆತರೆ, ಆನೆ ಬಲ ದೊರೆತಂತೆ ಆಗುತ್ತದೆ.

೩. ಅಡುಗೆ ಮಾಡುವರು

ಹಸುಗೂಸನ್ನು ಇಟ್ಟುಕೊಂಡು ನೀವು ಯಾವದಾದರು ಜಾಗಕ್ಕೆ ಹೋಗಬಾರದು ಅಂತ ಇದ್ದರೆ, ಅದು ಅಡುಗೆ ಮನೆ. ಜ್ಞಾನವಂತ ಅತ್ತೆಯರಿಗೆ ಇದು ತಿಳಿದಿರುತ್ತದೆ, ಹೀಗಾಗಿ ಅವರು ನಿಮಗೆ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡೋ ಅಥವಾ ಅದನ್ನು ಅಲ್ಲೇ ರೂಮಿನಲ್ಲೇ ಬಿಟ್ಟು ಅಡುಗೆ ಮನೆಗೆ ಬಂದು ಪೇಚಿಗೀಡಾಗಿ ಎಂದು ಹೇಳುವುದಿಲ್ಲ. ಆಕೆಯು ನಿಮಗೆ ಮತ್ತು ನಿಮ್ಮ ಮಗುವಿಗೆ ಬೇಕಿರುವ ಆಹಾರವನ್ನು ತಯಾರಿಸುವಳು.

೪. ನಿಮ್ಮ ಬಗ್ಗೆ ಅವರ ಮಗನ ಬಳಿ ಹೇಳುತ್ತಾರೆ

ಕೆಲವೊಂದು ಬಾರಿ ನಿಮ್ಮ ಪತಿಗೆ ನೀವು ಏನೆಲ್ಲಾ ಅನುಭವಿಸಿದ್ದೀರಿ ಹಾಗು ಏನೆಲ್ಲಾ ಅನುಭವಿಸುತ್ತಿದ್ದೀರಿ ಎಂಬುದನ್ನು ನೆನಪು ಮಾಡಬೇಕಾಗುತ್ತದೆ. ಇವುಗಳನ್ನು ನೀವು ಗೊಣಗುವ ಬದಲು, ಇದನ್ನು ನಿಮ್ಮ ಅತ್ತೆಯು ನಿಮ್ಮ ಪತಿಗೆ ಮನವರಿಕೆ ಮಾಡಿಕೊಡುವುದು ಹೆಚ್ಚು ಸೂಕ್ತ. ಉತ್ತಮ ಅತ್ತೆಯರು ತಮ್ಮ ಸೊಸೆಯ ಬಗ್ಗೆಯೂ ಅಷ್ಟೇ ಕಾಳಜಿ ಇಟ್ಟುಕೊಂಡಿರುವುದರಿಂದ, ನಿಮ್ಮ ಸಂಗಾತಿಯು ಯಾವುದಾದರೂ ಕ್ಷಣ ನಿಮ್ಮ ಪರಿಸ್ಥಿತಿ ಏನು ಎಂಬುದು ಮರೆತರೆ, ಅವರ ತಪ್ಪು ಮನವರಿಕೆ ಮಾಡುವುದರಲ್ಲಿ ಹಿಂದೆ ಬೀಳುವುದಿಲ್ಲ.

೫. ಆಕೆ ಸಲಹೆಗಳನ್ನ ನೀಡುವಳು…. ಆದರೆ ಕೇಳಿದಾಗ ಮಾತ್ರ

ಅತ್ಯುತ್ತಮ ಅತ್ತೆಗೆ ತಾನು ಯಾವಾಗ ಸಲಹೆಗಳನ್ನ ನೀಡಬೇಕು, ಯಾವಾಗ ಸುಮ್ಮನಿರಬೇಕು ಎಂಬುದು ಸರಿಯಾಗಿ ತಿಳಿದಿರುತ್ತದೆ. ಒಂದು ಚಿಕ್ಕ ಮಗುವನ್ನು ಮುಂದಿಟ್ಟುಕೊಂಡು, ಅವರಿಗೂ ಏನು ಹೇಳದೆ ಸುಮ್ಮನಿರುವುದು ಕಷ್ಟ ಆಗುತ್ತದೆ, ಆದರೂ ಇದು ಒಂದು ಅತ್ಯುತ್ತಮ ಅತ್ತೆ ಆಗುವುದಿಕ್ಕೆ ಪಳಗಿಸಿಕೊಳ್ಳಬೇಕಾದ ಕಲೆ. ತಮ್ಮ ಅಮೂಲ್ಯ ಅನುಭವಗಳ ಮೂಲಕ ತಾವು ಯಾವಾಗ ಸಲಹೆ ನೀಡಬೇಕು, ಯಾವಾಗ ನೀಡಬಾರದು ಎಂದು ತಿಳಿದು ನಡೆಯುವುದೇ ಅವರು ನಿಮಗೆ ನೀಡುವ ಅಮೂಲ್ಯ ಉಡುಗೊರೆ.

Leave a Reply

%d bloggers like this: