ಹಿಮ್ಮಡಿ ಬಿರುಕು : ನೈಸರ್ಗಿಕ ಪರಿಹಾರ

ಹಿಮ್ಮಡಿಯಲ್ಲಿ ಬಿರುಕು ಮೂಡುವುದು ಅಥವಾ ಹಿಮ್ಮಡಿ ಒಡೆದುಕೊಳ್ಳುವುದು ಸಾಮಾನ್ಯ ತೊಂದರೆಯಾಗಿದೆ, ಮತ್ತು ಇದು ನೋವನ್ನು ಸಹ ಉಂಟುಮಾಡಬಹುದು. ಒಣಗಿದ, ದಪ್ಪನಾದ ಚರ್ಮದ ಜೊತೆಗೆ, ಕೆಂಪು, ತುರಿಕೆ, ಉರಿಯೂತ ಮತ್ತು ಸಿಪ್ಪೆಸುಲಿಯುವ ಚರ್ಮದಂತಹ ರೋಗಲಕ್ಷಣಗಳೊಂದಿಗೆ ಈ ಸಮಸ್ಯೆಯನ್ನು ಕಾಣಬಹುದಾಗಿದೆ. ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಇದನ್ನು ತಪ್ಪಿಸಬಹುದು. ಇದರ ನಿವಾರಣೆಗೆ ಕೆಲವು ಪರಿಹಾರಗಳು ಇಲ್ಲಿವೆ.

೧.ಸಸ್ಯಗಳ ಎಣ್ಣೆ

ವಿವಿಧ ಸಸ್ಯ ಎಣ್ಣೆಗಳನ್ನು ಬಳಸುವುದರಿಂದ ಹಿಮ್ಮಡಿ ಒಡೆಯುವುದನ್ನು ತಡೆಯಬಹುದು ಅಥವಾ ಒಡೆದಿರುವ ಹಿಮ್ಮಡಿಯನ್ನು ಸರಿಪಡಿಸಬಹುದು. ಆಲಿವ್ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆಗಳು ಕೆಲಸ ಮಾಡುತ್ತವೆ. ಉತ್ತಮ ಫಲಿತಾಂಶ ಪಡೆಯಲು ಹೀಗೆ ಮಾಡಿ.

೧.ನಿಮ್ಮ ಪಾದಗಳನ್ನು ಸೋಪಿನ ನೀರಲ್ಲಿ ಸ್ವಲ್ಪ ಸಮಯ ನೆನಸಿ ಚೆನ್ನಾಗಿ ಉಜ್ಜಿ ತೊಳೆಯಿರಿ.

೨.ಪಾದಗಳನ್ನು ಬಟ್ಟೆಯಿಂದ ಒರೆಸಿ ಒಣಗಿಸಿ

೩.ನಂತರ ಎಣ್ಣೆಯನ್ನು ಹಿಮ್ಮಡಿಗೆ ಹಚ್ಚಿರಿ.

೪.ಇಡೀ ರಾತ್ರಿ ಅದನ್ನು ಹಾಗೆ ಬಿಟ್ಟು ಮಲಗಿ, ಮತ್ತು ಬೆಳಗ್ಗೆ ನಿಮ್ಮ ಪಾದ ಮೃದುವಾಗಿರುವ ಅನುಭವ ಕಾಣಿಸುತ್ತದೆ.

೫.ಹಿಮ್ಮಡಿಯ ಒಡೆತ ಸಂಪೂರ್ಣ ಗುಣವಾಗುವವರೆಗೆ ಕೆಲ ದಿನ ಇದನ್ನು ಮಾಡುತ್ತ ಬನ್ನಿ.

೨.ಅಕ್ಕಿಹಿಟ್ಟು

ಇದು ನಿಮ್ಮ ತ್ವಚೆಯ ವ್ಯರ್ಥ ಮತ್ತು ಸತ್ತ ಚರ್ಮವನ್ನು ತಗೆಯುವಲ್ಲಿ ಸಹಾಯ ಮಾಡುತ್ತದೆ, ಆದ್ದರಿಂದ ಇದು ಚರ್ಮವನ್ನು ಒಡೆಯುವುದರಿಂದ ಮತ್ತು ಒಣಗುವುದರಿಂದ ತಡೆಯುತ್ತದೆ.

೧.ಅಕ್ಕಿಹಿಟ್ಟಿನ ಜೊತೆ ಒಂದೆರಡು ಚಮಚ ಜೇನುತುಪ್ಪ ಮತ್ತು ಸೇಬಿನ ರಸವನ್ನು ಸೇರಿಸಿ ಮಿಶ್ರಣ ಮಾಡಿ. ಅದು ಪೇಸ್ಟ್ ತರ ಆಗುವವರೆಗೂ ಚೆನ್ನಾಗಿ ಕದಡುತ್ತಿರಿ. ನಿಮ್ಮ ಹಿಮ್ಮಡಿ ಹೆಚ್ಚು ಬಿರುಕು ಬಿಟ್ಟಿದ್ದರೆ ಸ್ವಲ್ಪ ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಸೇರಿಸಿ.

೨.ಬೆಚ್ಚಗಿನ ನೀರಲ್ಲಿ ೧೦ ನಿಮಿಷಗಳ ಕಾಲ ನಿಮ್ಮ ಪಾದವನ್ನು ಇರಿಸಿ(ನೆನಸಿ), ನಂತರ ಮೇಲಿನ ಮಿಶ್ರಣದಿಂದ ಹಿಮ್ಮಡಿ ಮತ್ತು ಬಿರುಕು ಇರುವ ಜಾಗವನ್ನು ತಿಕ್ಕಿ.

೩.ಇದನ್ನು ಒಂದು ವಾರದಲ್ಲಿ ಹಲವು ಬಾರಿ ಮಾಡುವುದರಿಂದ ಬೇಗನೆ ಫಲಿತಾಂಶವನ್ನು ಕಾಣಬಹುದು.

Leave a Reply

%d bloggers like this: