ಗರ್ಭಿಣಿ ಪತ್ನಿಯ ದೇಹದ ಬಗ್ಗೆ ಗಂಡಂದಿರು ಏನು ಹೇಳುತ್ತಾರೆ?

ಗರ್ಭಧಾರಣೆ ವೇಳೆ ಹೆಣ್ಣಿನ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ, ಅದೂ ಕೂಡ ಶರವೇಗದಲ್ಲಿ. ಇಂತಹ ಬದಲಾವಣೆಗಳೊಂದಿಗೆ ಒಂದು ಹೆಣ್ಣು ದೈಹಿಕವಾಗಿ ಹೊಂದಿಕೊಳ್ಳುವುದಷ್ಟೇ ಅಲ್ಲದೆ, ಮಾನಸಿಕವಾಗಿಯೂ ಒಗ್ಗಿಕೊಳ್ಳಬೇಕು. ಈ ಒಪ್ಪಿಕೊಂಡು, ಒಗ್ಗಿಕೊಳ್ಳುವ ಪ್ರಕ್ರಿಯೆಯಲ್ಲಿ ಆಕೆ ಬಲವಾಗಿ ಪರಿಗಣನೆಗೆ ತೆಗೆದುಕೊಳ್ಳುವ ಒಬ್ಬ ವ್ಯಕ್ತಿ ಎಂದರೆ ಅದು ಆಕೆಯ ಪತಿ. ಬದಲಾಗುವ ಗರ್ಭಿಣಿ ಪತ್ನಿಯ ದೇಹದ ಬಗ್ಗೆ ಪತಿಯರು ಏನು ಅಂದುಕೊಳ್ಳುವರು ಎಂಬ ಕುತೂಹಲ ಪ್ರತಿ ಪತ್ನಿಗೂ ಇರುತ್ತದೆ. ಇಲ್ಲಿ ನಾವು ೬ ಪತಿಯರು ತಮ್ಮ ಗರ್ಭಿಣಿ ಪತ್ನಿಯರ ದೇಹದ ಬಗ್ಗೆ ಏನು ಹೇಳಿದ್ದಾರೆ ಎಂದು ಓದಿದರೆ, ನಿಮಗೆ ಒಂದು ಚಿತ್ರಣ ಸಿಗಬಹುದು, ಓದಿ ನೋಡಿ.

೧. “ಈ ಪ್ರೆಗ್ನನ್ಸಿ  ಪ್ರಕ್ರಿಯೆನೇ ಏಳು ಬೀಳುಗಳಿಂದ ಕೊಡಿದ್ದು, ಒಂಥರಾ ವಿಚಿತ್ರವಾಗಿರುತ್ತದೆ. ಅದರಲ್ಲೂ ಹೆಂಡತಿಯ ದೇಹ ಚಿಟಿಗೆ ಹೊಡೆಯುವಷ್ಟರಲ್ಲಿ ಒಂದು ಬದಲಾವಣೆ ಇಂದ ಇನ್ನೊಂದು ಬದಲಾವಣೆಗೆ ಜಿಗಿಯುತ್ತೆ. ಇದು ಒಂದು ತಲೆ ಕೆಡಿಸಿಕೊಳ್ಳುವ ವಿಷಯಾನೇ ಆಗಬಾರದು, ಆದರೂ ಇರೋದನ್ನ ಹೇಳ್ತಿನಿ. ಅಕಸ್ಮಾತ್ ಗಂಡ ಏನಾದ್ರೂ ಈ ವಿಷಯದ ಬಗ್ಗೆ ಗಾಬರಿ ಆದರೆ, ಅಥವಾ ಗಂಡ ಬೇಜಾರ್ ಆಗಿದ್ದಾನೆ ಅಂತ ಹೆಂಡತಿ ತಲೆ ಕೆಡಿಸಿಕೊಳ್ಳುವುದು ಮಾಡಿದರೆ, ಅದರಲ್ಲಿ ಯಾವುದೇ ಅರ್ಥ ಇಲ್ಲ. ಏಕೆಂದರೆ ಅದು ನಿಮ್ಮ ಹೆಂಡತಿಯೇ ಮತ್ತು ಅವಳ ಒಳಗಿರುವುದು ನಿಮ್ಮ ಮಗುವೇ. ಇದು ಒಂದು ರೀತಿ ಮಕ್ಕಳನ್ನ ಸಾಕುವ ಥರಾನೇ. ನಿಮ್ಮ ಮಕ್ಕಳು ಎಷ್ಟೇ ಕಾಟ ಕೊಟ್ಟರು, ಅವರನ್ನು ನೀವು ಇಷ್ಟ ಪಟ್ಟೇ ಪಡುತ್ತೀರಿ, ಹಾಗೇನೇ ಇದು ಕೂಡ. ನೀವು ಈ ಪ್ರೆಗ್ನನ್ಸಿ ಅನ್ನುವುದು ವಿಚಿತ್ರ ಅನಿಸಬಹುದು, ಆದರೆ ನಿಮ್ಮ ಹೆಂಡತಿ ಅಥವಾ ಆಕೆಯ ದೇಹ ನಿಮಗೆ ಮುಂಚೆ ರೀತಿಯೇ ಅನಿಸುವುದು”.

೨. “ಒಂಥರಾ ಚೆನ್ನಾಗಿಯೇ ಇತ್ತು… ಸ್ವಲ್ಪ ಟೈಮ್ ಅಲ್ಲೇ ಎಷ್ಟೊಂದು ಬದಲಾವಣೆಗಳು, ನಿಜವಾಗಲೂ ಒಂಥರಾ ಇಂಟೆರೆಸ್ಟಿಂಗ್… ನನ್ನ ಹೆಂಡತಿಯ ಗರ್ಭಿಣಿ ದೇಹದ ಬದಲಾವಣೆಗಳನ್ನ ನಾನು “ಇಂಟೆರೆಸ್ಟಿಂಗ್” ಅಂತೀನಿ ಅಂತ ಅನ್ಕೊಂಡಿರಲಿಲ್ಲ, ಆದರೆ ನನಗೆ ಅನಿಸಿದ್ದೇ ಹಾಗೆ. ಇದನ್ನು ಕೇಳಿಸಿಕೊಂಡರೆ ಅವಳು ಸಿಟ್ಟಾಗಬಹುದು, ಏಕೆಂದರೆ ಅದರ ಕಷ್ಟ ಅವಳಿಗೆ ಮಾತ್ರ ಗೊತ್ತು. ಆದರೆ, ನಮ್ಮ ಹೊಸ ಮಗುವು ಹೊಟ್ಟೆಯೊಳಗಿನಿಂದ ಹೊಡೆಯುವುದನ್ನ ನೋಡಲು ಏನೋ ಒಂಥರಾ ಮಜವಾಗಿತ್ತು”.

೩. “ಅವಳು ಹೊಳೆಯುತ್ತಿದ್ದಳು. ಅವಳಲ್ಲಿ ಗರ್ಭಿಣಿ ಹೆಂಗಸಿನ ಕಾಂತಿ ಕಾಣಿಸುತ್ತಿತ್ತು… ಅದು ಎದ್ದು ಕಾಣುತ್ತಿತ್ತು. ಆದರೆ ದುರದೃಷ್ಟವಶಾತ್ ಅವಳ ಮಂಡಿಯಲ್ಲಿ ಬಹಳ ನೋವಿತ್ತು ಮತ್ತು ಅವಳಿಗೆ ತುಂಬಾ ವಾಕರಿಕೆ ಆಗುತಿತ್ತು. ಅವಳು ಮೊದಲೇ ತುಂಬಾ ತೆಳ್ಳಗೆ ಇದ್ದದ್ದರಿಂದ, ಈ ಪ್ರೆಗ್ನನ್ಸಿ ಆಕೆಗೆ ಬಹಳಷ್ಟು ರೀತಿಯಲ್ಲಿ ತೊಂದರೆ ಉಂಟು ಮಾಡುತ್ತಿತ್ತು. ಆದರೆ ಅವಳ ಮುಖದಲ್ಲಿನ ಕಳೆ ಹಾಗೆ ಇತ್ತು”.

೪. “ಸಿಕ್ಕಾಪಟ್ಟೆ ವಿಚಿತ್ರ, ಆದರೆ ಸಿಕ್ಕಾಪಟ್ಟೆ ಚೆನ್ನಾಗಿತ್ತು. ನಿಮಗೆ ಗೊತ್ತಲ್ಲ, ಎಲ್ಲರ ಮನೆಯು ಒಂದೊಂದು ವಾಸನೆ ಇರುತ್ತದೆ, ನೀವು ಬೇರೆ ಮನೆಗೆ ಹೋದಾಗ ಅವರ ಮನೆಯ ವಾಸನೆ ನಿಮಗೆ ಗೊತ್ತಾಗುತ್ತದೆ, ಆದರೆ ನಿಮ್ಮ ಮನೆಯ ವಾಸನೆ ನಿಮಗೆ ಗೊತ್ತಾಗುವುದಿಲ್ಲ. ಇದು ಕೂಡ ಹಾಗೆಯೆ. ನಿಮ್ಮ ಮಗುವಿನ ವಿಷಯದಲ್ಲೂ ಹೀಗೆಯೇ”.

೫. “ನಿಜ ಹೇಳಬೇಕೆಂದರೆ, ಪ್ರೇಗ್ನೆಂಟ್ ಅದಾಗಲೇ ಅವಳು ನನ್ನ ಕಣ್ಣಿಗೆ ಇನ್ನೂ ಸೆಕ್ಸಿ ಆಗಿ ಕಾಣಿಸುತ್ತಿದ್ದಳು. ಅವಳು ಪ್ರೇಗ್ನೆಂಟ್ ಆಗಿದ್ದೆ ನನಿಗೆ ಖುಷಿ. ನಾನು “ಫೆಟಿಷ್” ಎಂಬ ಪದ ಉಪಯೋಗಿಸುವುದಿಲ್ಲ, ಆದರೆ ಏನೋ ಗೊತ್ತಿಲ್ಲ ನಂಗೆ ಗರ್ಭಿಣಿಯ ದೇಹವೇ ಹಾಟ್ ಅನಿಸುತ್ತದೆ. ಅವಳ ತ್ವಚೆ, ಅವಳ ಸ್ತನಗಳು, ಎಲ್ಲಾ. ನಿಜ ಹೇಳಬೇಕೆಂದರೆ, ಮಕ್ಕಳನ್ನು ಮಾಡಿಕೊಂಡು ಸಾಕುವುದಕ್ಕೆ ಇಷ್ಟೊಂದು ದುಡ್ಡು ಖರ್ಚು ಮಾಡುವುದು ಇಲ್ಲದಿದ್ದರೆ, ನನ್ನ ಹೆಂಡತಿ ಅವಳಿಗೆ ಬೇಕಾದಾಗಲೆಲ್ಲಾ ಗರ್ಭಿಣಿ ಆಗಿದ್ದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ”.

Leave a Reply

%d bloggers like this: