ನಿಮಗೆ ಗೊತ್ತೇ? ನಿಮಗಿಂತ ನಿಮ್ಮ ಮಗುವಿನಲ್ಲೇ ಹೆಚ್ಚು ಮೂಳೆಗಳಿವೆ!

ಬಹುಶಃ ಈ ವಿಷಯ ಹಲವರಿಗೆ ತಿಳಿದಿರುವುದಿಲ್ಲ, ಸತ್ಯ ಏನೆಂದರೆ ಒಬ್ಬ ವಯಸ್ಕ ಮಾನವನಿಗಿಂತ ಮಗುವಿನಲ್ಲಿ ಹೆಚ್ಚು ಮೂಳೆಗಳಿವೆ, ಇದು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಆದರೆ ಸತ್ಯ. ನಿಮಗೆ ಆಶ್ಚರ್ಯವಾಗುವುದು ಸಹಜ, ಮತ್ತು ಇದು ಅನೇಕ ಜನರಿಗೆ ತಿಳಿದೇ ಇಲ್ಲ. ನೀವು ಮಗುವನ್ನು ನಿಮ್ಮ ಕೈಯಲ್ಲಿ ಎತ್ತಿಕೊಂಡಾಗ ಮಗುವು ಅಷ್ಟು ಮೃದುವಾಗಿರುವುದು ನೋಡಿ ನೀವು ಬೆರಗಾಗಬಹುದು.

ಆದರೆ, ಪ್ರಶ್ನೆ ಏನೆಂದರೆ, ವಯಸ್ಕ ಮಾನವನಿಗಿಂತ ಮಗುವಿನಲ್ಲಿ ಹೆಚ್ಚು ಮೂಳೆ ಇದೆ ಎಂದರೆ ವಯಸ್ಕ ಮಾನವನಲ್ಲಿ ಉಳಿದ ಮೂಳೆಗಳು ಏನಾದವು? ಏಕೆಂದರೆ ವಯಸ್ಕ ಮಾನವನು ಕೂಡ ಶಿಶುವಿನಿಂದ ತಾನೇ ದೊಡ್ಡವನಾಗಿ ಬೆಳೆದಿದ್ದು!

ಮೊದಲನೆಯದಾಗಿ, ಸುಮಾರು 305 ಮೂಳೆಗಳೊಂದಿಗೆ ಮಗುವು ಜನಿಸುತ್ತದೆ, ಆದರೆ ಒಬ್ಬ ವಯಸ್ಕ ಮಾನವನಲ್ಲಿ ಇರುವುದು 206 ಮೂಳೆಗಳು ಮಾತ್ರ. ಇದು ಸತ್ಯವಾದರು ಇದರ ಬಗ್ಗೆ ಯಾವುದೇ ವಾದಗಳಿಲ್ಲ, ಏಕೆಂದರೆ ಅದನ್ನು ಮೃದ್ವಸ್ಥಿ(ಕಾರ್ಟಿಲೇಜ್) ಅಥವಾ ಮೃದುವಾದ ಎಲುಬು ಎಂದು ಕರೆಯುವುದು.

ಮೃದ್ವಸ್ಥಿ ಒಂದು ರಬ್ಬರ್ ತರಹದ ಮೆತ್ತವಾಗಿದ್ದು, ಮೂಳೆಗಳ ಕೀಲುಗಳ ಮದ್ಯೆ ಆವರಿಸಿದ್ದು ಉದ್ದನೆಯ ಮೂಳೆಗಳ ಕೊನೆಯಲ್ಲಿರುತ್ತದೆ. ಇದು ಮೂಲತಃ ನಯವಾದ, ಮೃದುವಾದ ಸ್ಥಿತಿತಾಪಕ ಅಂಗಾಂಶವಾಗಿದೆ, ಇದನ್ನು ನಾವು ಸುಲಭವಾಗಿ ಕಿವಿ, ಪೆಕ್ಕೆಲುಬು, ಮೂಗು ಮತ್ತು ದೇಹದ ಹಲವು ಭಾಗಗಳಲ್ಲಿ ಕಾಣಬಹುದು. ಮೃದ್ವಸ್ಥಿಯು ಮೂಳೆಯಂತೆ ಗಟ್ಟಿಯಾಗಿರುವುದಿಲ್ಲ ಹಾಗೆಯೆ ಸ್ನಾಯುವಿನಂತೆ ಮೃದುವಾಗಿಯೂ ಇರುವುದಿಲ್ಲ.

ಶಿಶುಗಳು ಮೂಳೆಗಳಿಗಿಂತ ಹೆಚ್ಚು ಮೃದ್ವಸ್ಥಿಯನ್ನು ಒಳಗೊಂದು ಜನಿಸುವರು, ಒಂದು ವೇಳೆ ಶಿಶುಗಳು ಮೂಳೆಗಳನ್ನು ಹೊಂದಿದ್ದರೆ ಹೆರಿಗೆ ಮಾಡಿಸುವುದು ತುಂಬಾನೇ ಕಷ್ಟ ಆಗುತ್ತಿತ್ತು.

ಮೃದ್ವಸ್ಥಿಯಿಂದ ಮೂಳೆಗಳಾಗಿ ಬದಲಾವಣೆ

ಶಿಶುಗಳು ತಮ್ಮಲ್ಲಿರುವ ಮೃದ್ವಸ್ಥಿಗಳನ್ನು ನಿಧಾನವಾಗಿ ಮೂಳೆಗಳನ್ನಾಗಿ ಪರಿವರ್ತಿಸಿಕೊಳ್ಳುತ್ತವೆ, ಈ ಕ್ರಿಯೆಯನ್ನು ಎಂಡೊಕೊಂಡ್ರಲ್ ಓಸ್ಫಿಕೇಶನ್ ಎಂದು ಕರೆಯುತ್ತೇವೆ. ಇದು ಮಗು ಬೆಳವಣಿಗೆಯ ಪ್ರಮುಖ ಭಾಗ ಮತ್ತು ಮಗುವಿನ ದೇಹದಲ್ಲಿ ಮೂಳೆಗಳ ಗ್ರಂಥಿಗಳನ್ನು ಉತ್ಪಾದಿಸುತ್ತದೆ. ಮಗು ಬೆಳೆಯುತ್ತಿದ್ದಂತೆ, ಮೃದ್ವಸ್ಥಿಯನ್ನು ಮೂಳೆಗಳ ಮ್ಯಾಟ್ರಿಸಿಸ್ ಬದಲಿಸುತ್ತದೆ. ಅವರ ಆಹಾರದ ಮೂಲಕ ಪಡೆಯುವ ಕ್ಯಾಲ್ಸಿಯಂ ಸಾಲ್ಟ್ ಅವರ ಮೂಳೆಗಳನ್ನು ಬಲವಾಗಿಸುತ್ತದೆ. ವಯಸ್ಕ ಮಾನವನಿಗಿಂತ ಶಿಶುಗಳು ಹೆಚ್ಚು ಮೂಳೆ ಹೊಂದಿರಲು ಇದೆ ಕಾರಣ. ಮತ್ತು ಶಿಶುವಿನ ಹಲವು ಮೃದ್ವಸ್ಥಿಗಳು ಸೇರಿ ಒಂದು ಬಲಿಷ್ಠ ಮೂಳೆ ಆಗುತ್ತದೆ.

ಮಗುವಿನ ಮೂಳೆಗಳು ಎಷ್ಟು ಮೃದುವಾಗಿರುತ್ತವೆ ಎಂದರೆ, ನೀವು ಮಗುವಿನ ನೆತ್ತಿಯನ್ನು ಮುಟ್ಟಿ ಅಲ್ಲಿ ಹೃದಯ ಬಡಿಯುವ ಹಾಗೆ ನೆತ್ತಿ ಹತ್ತಿರ ತಲೆಯ ಮೂಳೆ ಮೇಲೆಕೆಳಗೆ ಬಡಿದುಕೊಳ್ಳುತ್ತದೆ, ಅದನ್ನು ದಯವಿಟ್ಟು ಜೋರಾಗಿ ಅಥಾವ ಮೆತ್ತಗೆ ಆಗಲಿ ಅದುಮ ಬೇಡಿ ಅದನ್ನು ನೀವು ಮುಟ್ಟದೆ ಇರುವುದೇ ಒಳ್ಳೆಯದು. ಶಿಶುವಿನಲ್ಲಿರುವ ೮ ಸಣ್ಣ ಮೂಳೆಗಳು ಅವರು ಬೆಳೆಯುತ್ತಿದ್ದಂತೆ ೪ ಮೂಳೆಗಳಾಗಿ ಬದಲಾಗುತ್ತದೆ.

ಮಗುವಿನಲ್ಲಿರುವ ಮೃದ್ವಸ್ಥಿಗಳು ಮಗು ಬೆಳೆಯುತ್ತಿದ್ದಂತೆ ಬಲಶಾಲಿ, ಗಟ್ಟಿ ಮೂಳೆಗಳಾಗಿ ಬದಲಾಗುತ್ತವೆ, ಆಗ ಮಗು ವಯಸ್ಕನಾದಾಗ ಅವನಲ್ಲೂ/ಅವಳಲ್ಲೂ ಸಹ ೨೦೬ ಮೂಳೆಗಳು ಇರುತ್ತವೆ.

Leave a Reply

%d bloggers like this: