ಪ್ರತಿಯೊಬ್ಬರ ಆರೋಗ್ಯಕ್ಕೂ ಅವಶ್ಯವಾಗಿರುವ ರುಚಿಕರ ಸಿಹಿ “ರಾಗಿ ಪೊಂಗಲ್”

ನೀವು ಆರೋಗ್ಯವಾಗಿರಲು ನೀವು ಸೇವಿಸುವ ಆಹಾರವು ತುಂಬಾ ಮುಖ್ಯವಾಗಿರುತ್ತದೆ, ನಿಮ್ಮ ಆಹಾರದ ಕ್ರಮ ಸರಿಯಾಗಿರುವುದರ ಜೊತೆ ನಿಮ್ಮ ದೇಹಕ್ಕೆ ಬೇಕಾದ ಎಲ್ಲಾ ಪೌಷ್ಟಿಕಾಂಶ, ವಿಟಮಿನ್ ಇತ್ಯಾದಿಗಳನ್ನು ಒದಗಿಸುವುದು ನಿಮ್ಮ ಕರ್ತವ್ಯ, ಹಾಗೆಯೆ ಬೆಳೆಯುತ್ತಿರುವ ನಿಮ್ಮ ಮುದ್ದು ಮಕ್ಕಳಿಗೆ ಸರಿಯಾದ ಆಹಾರವನ್ನು ನೀಡುವುದು ತುಂಬಾ ಮುಖ್ಯ. ಮಕ್ಕಳು ಸಾಮಾನ್ಯವಾಗಿ ಸಿಹಿಯನ್ನು ಇಷ್ಟ ಪಡುತ್ತಾರೆ. ಅದಕ್ಕಾಗಿ ಅವರಿಗಾಗಿ ಈ ಆರೋಗ್ಯಕರ ರುಚಿಯಾದ ಸಿಹಿ ರಾಗಿ ಪೊಂಗಲ್. ಇದನ್ನು ಯಾರು ಬೇಕಾದರೂ ಸೇವಿಸಬಹುದು.

ಬೇಕಾಗುವ ಪದಾರ್ಥಗಳು:

೧.ರಾಗಿಹಿಟ್ಟು ಅರ್ಧ ಬಟ್ಟಲು

೨.ಹಸಿರು ಕಾಳು ಒಂದೂವರೆ ಚಮಚ

೩.ಬೆಲ್ಲ ಮುಕ್ಕಾಲು ಬಟ್ಟಲು

೪.ತುಪ್ಪ ಒಂದೂವರೆ ಚಮಚ

೫.ಒಣದ್ರಾಕ್ಷಿ ಒಂದು ಚಮಚ

೬.ಸ್ವಲ್ಪ ಗೋಡಂಬಿ

೭.ಏಲಕ್ಕಿ ಪುಡಿ ಕಾಲು ಚಮಚ

ನೀವು ಹಸಿರು ಕಾಳು ಬದಲು ಹಸಿರು ಬೆಳೆಯನ್ನು ಸಹ ಉಪಯೋಗಿಸಬಹುದು.

ಮಾಡುವ ವಿಧಾನ:

೧.ಕುಕ್ಕರ್ ಅನ್ನು ಒಲೆ ಮೇಲೆ ಬಿಸಿಯಾಗಲು ಇಟ್ಟು, ಅದಕ್ಕೆ, ರಾಗಿಹಿಟ್ಟು ಮತ್ತು ಹಸಿರು ಕಾಳನ್ನು ಹಾಕಿ ೩ ನಿಮಿಷ ಉರಿಯಿರಿ, ನಿರಂತರವಾಗಿ ತಿರುಗಿಸುತ್ತಿರಿ.

೨.ಅದಕ್ಕೆ ೩ ಬಟ್ಟಲಿನಷ್ಟು ನೀರು ಹಾಕಿ, ಚೆನ್ನಾಗಿ ಮಿಶ್ರಿಸಿ, ಮುಚ್ಚಳ ಮುಚ್ಚಿ ೩ ರಿಂದ ೫ ವಿಶಃಲ್ ಬರುವವರೆಗೂ ಬೇಯಿಸಿ.

೩.ನಂತರ ಒಂದು ಸಣ್ಣ ಪಾತ್ರೆಯಲ್ಲಿ, ತುಪ್ಪದಿಂದ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದುಕೊಳ್ಳಿ.

೪.ಮತ್ತೊಂದು ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ, ಅದಕ್ಕೆ ಕಾಲು ಬಟ್ಟಲು ನೀರು ಸೇರಿಸಿ ಬೆಲ್ಲವನ್ನು ಕರಗಿಸಿ, ಬೆಲ್ಲದ ಪಾಕದ ಹಾಗೆ ಬರುವವರೆಗೆ ಬಿಸಿ ಮಾಡುತ್ತೀರಿ.

೫.ಇದಕ್ಕೆ ಕುಕ್ಕರ್ ನಲ್ಲಿ ಬೇಯಿಸಿದ ರಾಗಿಹಿಟ್ಟು ಮತ್ತು ಹಸಿರುಕಾಳು ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ೨ ನಿಮಿಷ ಸಣ್ಣ ಉರಿಯಲ್ಲಿ ಹಾಗೆ ಬಿಡಿ.

೬.ಇದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ, ೧೦ ರಿಂದ ೧೫ ನಿಮಿಷಗಳ ಕಾಲ ಬೇಯಿಸಿ.

೭.ತುಪ್ಪದ ಜೊತೆ ಉರಿದುಕೊಂಡಿರುವ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ ಮಿಶ್ರಣ ಮಾಡಿ ೨ ನಿಮಿಷ ಬೇಯಲು ಬಿಡಿ.

೮.ಈಗ ಎಲ್ಲರಿಗು ಇಷ್ಟವಾಗುವಂತಹ ಸಿಹಿ ರಾಗಿ ಪೊಂಗಲ್ ಅನ್ನು ಸೇವಿಸಿ, ರುಚಿ ನೋಡಿ.

ಇದರಲ್ಲಿ ಬಳಸಿರುವುದು ರಾಗಿ ಮತ್ತು ಹಸಿರುಕಾಳು, ಇವೆರಡರಲ್ಲೂ ಪೌಷ್ಟಿಕಾಂಶಗಳು, ವಿಟಮಿನ್ ಗಳು, ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೊಟೀನ್ ಗಳು ಹೆಚ್ಚಿರುವುದರಿಂದ ಬೆಳೆಯುತ್ತಿರುವ ಮಕ್ಕಳಿಗೆ, ಮತ್ತು ಪ್ರತಿಯೊಬ್ಬರಿಗೂ ಇದು ಒಂದು ತುಂಬಾ ಉತ್ತಮ ಆಹಾರ. ಇದು ಸಿಹಿ ಇರುವುದರಿಂದ ಇದನ್ನು ಎಲ್ಲರು ಇಷ್ಟ ಪಡುತ್ತಾರೆ.

ನಿಮ್ಮ ಮಕ್ಕಳಿಗೆ ಸುಲಭವಾಗಿ ನೀವೇ ಮನೆಯಲ್ಲಿ ಬಿಸ್ಕತ್ ಅನ್ನು ತಯಾರಿಸಿ – ರಾಗಿ ಬಿಸ್ಕತ್

Leave a Reply

%d bloggers like this: