ಟಾಪ್ ೧೦ ಗಂಡು ಮಗುವಿನ ಹೆಸರುಗಳು – ಸೆಪ್ಟೆಂಬರ್

ಹೆಸರು – ನಮ್ಮನ್ನು ಗುರುತಿಸಲು ಇರುವ ಒಂದು ಮಾರ್ಗ, ಮಗುವನ್ನು ಶಾಲೆಗೆ ಸೇರಿಸುವಾಗ ಕೂಡ ಮೊದಲು ಕೇಳುವುದು ಮಗುವಿನ ಹೆಸರು. ನಾವು ವಿಭಿನ್ನ, ಏಕಮಾತ್ರ ಮತ್ತು ಅನನ್ಯವಾಗಿರುವ ಹೆಸರನ್ನು ನಮ್ಮ ಮಗುವಿಗೆ ನಾಮಕರಣ ಮಾಡಲು ಇಚ್ಛಿಸುತ್ತೇವೆ. ಇದು ಸಾಮಾನ್ಯ ಆದರೆ ಹೆಸರುಗಳನ್ನು ಹೇಗೆ ಹುಡುಕುವುದರ ಬಗ್ಗೆ ನೀವು ಚಿಂತಿಸಬೇಡಿ. ನಿಮಗಾಗಿ ನಾವು ಹಲವು ಆಯ್ಕೆಗಳನ್ನು ನಿಡುವೆವು.

೧.ಮಾನ್ವಿಕ್

ಇದರ ಅರ್ಥ ಅವನು ಅರಿವು ಉಳ್ಳವನು, ಯಾವಾಗಲು ಜಾಗೃತನಾಗಿರುವನು ಎಂದು.

೨.ಧಾರ್ಷ್

ಮುದ್ದು ಕೃಷ್ಣನ ಇನ್ನೊಂದು ಹೆಸರು, ನಮ್ಮ ಪೂರ್ವಜರ ಈ ಹೆಸರನ್ನು ಈಗ ಮತ್ತೆ ಬಳಸಲು ಶುರು ಮಾಡಿರುವೆವು. ನಿಮ್ಮ ಮಗು ದೇವರ ಅಂಶ ಎಂದೇ ತಿಳಿದಿದ್ದರೆ ಈ ಹೆಸರನ್ನು ಇಡಬಹುದು. ನಿಮ್ಮ ಮಗು ಕೃಷ್ಣನಂತೆ ತುಂಟನಾಗಿದ್ದರೆ ಇದು ಅವನಿಗೆ ಸೂಕ್ತ ಹೆಸರು.

೩.ರೇಯಾನ್

ದೇವರ ಉಡುಗೊರೆ ಎಂಬ ಅರ್ಥವನ್ನು ಇದು ಸಂಸ್ಕೃತದಲ್ಲಿ ನೀಡುತ್ತದೆ.

೪.ಆರುಶ್

ಸೂರ್ಯನ ಮೊದಲ ಕಿರಣ, ನಕ್ಷತ್ರ ಎಂಬ ಅರ್ಥವನ್ನು ನೀಡುವ ಈ ಹೆಸರು ನಿಮ್ಮ ಮಗನು ಜೀವನದಲ್ಲಿ ಸೂರ್ಯನಂತೆ ಪ್ರಕಾಶಿಸಲು ಬಯಸಿದರೆ ಇದು ಅವನಿಗೆ ಸೂಕ್ತ ಹೆಸರು.

೫.ಅಮಿತ್

ಅಮಿತ್ ಎಂದರೆ ಮಿತಿ ಇಲ್ಲ ಎಂದರ್ಥ. ಅವನ ಆಸೆಗೆ ಮಿತಿ ಇಲ್ಲ, ಯಾವುದೇ ಕೊನೆಯಿಲ್ಲ ಎಂಬ ಅರ್ಥವನ್ನು ನೀಡುತ್ತದೆ.

೬.ಅನಿರ್ವನ್

ಮರಣ ಇಲ್ಲದ, ಕೊನೆ ಇಲ್ಲದ, ಅಮರವಾದ ಎಂಬ ಅರ್ಥವನ್ನು ಇದು ನೀಡುತ್ತದೆ.

೭.ಸಾದಿಕ್

ಸಾದಿಕ್ ಎಂದರೆ ಸತ್ಯವಂತ, ಪ್ರಾಮಾಣಿಕ ವ್ಯಕ್ತಿ ಎಂದರ್ಥ.

೮.ರಾಹುಲ್

ಬುದ್ಧ ದೇವನ ಮಗನ ಹೆಸರು, ಯಾವುದೇ ಬಂಧವನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವವ ಎಂಬ ಅರ್ಥವನ್ನು ಇದು ನೀಡುತ್ತದೆ.

೯.ರಮಣ್

ಮನ್ಮಥ, ಕಾಮದೇವ, ಪ್ರೀತಿ ಮಾಡುವವ ಎಂಬ ಅರ್ಥವನ್ನು ಇದು ನೀಡುತ್ತದೆ.

೧೦.ತರುಣ್

ಚಿರ ಯೌವ್ವನ ಇರುವವ, ಯುವಕ, ತರುಣ ಎಂಬ ಅರ್ಥ ಇರುವ ಈ ಹೆಸರು ನಿಮ್ಮ ಮಗು ಸದಾ ಯುವಕನಾಗಿರಲು ಪ್ರೇರೇಪಿಸುವಂತಹದು.

Leave a Reply

%d bloggers like this: