ತ್ವಚೆಯ ಹೊಳಪು ಹೆಚ್ಚಿಸಲು ಮತ್ತು ಕಲೆಗಳನ್ನು ನಿವಾರಣೆ ಮಾಡಲು ಸರಳ ಮತ್ತು ತ್ವರಿತ ಮನೆ ಔಷಧಿಗಳು

ಪ್ರತಿಯೊಬ್ಬರಿಗೂ ಅದರಲ್ಲೂ ಹುಡುಗಿಯರು ತಮ್ಮ ತ್ವಚೆ ಬೆಳ್ಳಗೆ ಯಾವುದೇ ಕಲೆಗಳಿಲ್ಲದೆ ಸುಂದರವಾಗಿ ಕಾಣಬೇಕು ಎಂಬ ಆಸೆಯನ್ನು ಹೊಂದಿರುವರು. ಅದು ಸಾಮಾನ್ಯ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಹಲವು ಕ್ರೀಮ್ ಗಳು ಸಹ ಇವೆ, ಆದರೆ ಅವು ತಾತ್ಕಾಲಿಕ, ಮತ್ತು ಅವುಗಳನ್ನು ರಾಸಾಯನಿಕಗಳನ್ನು ಬಳಸಿ ತಯಾರಿಸುವುದರಿಂದ ಅವು ನಿಮ್ಮ ತ್ವಚೆಗೆ ಹಾನಿ ಮಾಡಬಹುದು. ನೀವು ಬೆಳ್ಳಗೆ ಹೊಳೆಯುವ ಚರ್ಮವನ್ನು ಬಯಸಿದರೆ, ಯಾವುದೇ ಅಡ್ಡಪರಿಣಾಮ ಇಲ್ಲದ, ಹಾನಿಕಾರಕವಲ್ಲದ ಅದೇ ಫಲಿತಾಂಶವನ್ನು ನೀಡುವ ನೈಸರ್ಗಿಕ ವಿಧಾನಗಳನ್ನು ಉಪಯೋಗಿಸುವುದು ಒಳ್ಳೆಯದು.

ನಿಮ್ಮ ತ್ವಚೆಗೆ ಒಳಪನ್ನು ನೀಡುವುದು ನಿಮ್ಮ ಚರ್ಮದಲ್ಲಿರುವ ಮೆಲನಿನ್ ಎಂಬ ವರ್ಣದ್ರವ್ಯ. ಹೊರಗಿನ ಸೂರ್ಯನ ಕಿರಣ ಇದನ್ನು ಕಡಿಮೆ ಮಾಡಿ ನಿಮ್ಮ ತ್ವಚೆ ಕಪ್ಪುಸುತ್ತಿಕೊಳ್ಳುವಂತೆ ಮಾಡುವುದು. ನಿಮ್ಮ ಚರ್ಮದಲ್ಲಿರುವ ಮೆಲನಿನ್ ವರ್ಣದ್ರವ್ಯವನ್ನು ಯಾವುದೇ ಹೊರಗಿನ ಉತ್ಪನ್ನಗಳಿಂದ ಕಾಪಾಡಲಾಗುವುದಿಲ್ಲ, ಆದರೆ ನೈಸರ್ಗಿಕ ವಿಧಾನದಿಂದ ಅದರ ರಕ್ಷಣೆ ಮಾಡಿ ನಿಮ್ಮ ತ್ವಚೆ ಕಪ್ಪುಸುತ್ತುವುದನ್ನು ತಡೆಯಬಹುದು ಮತ್ತು ನಿಮ್ಮ ತ್ವಚೆಯಲ್ಲಿ ಯಾವುದೇ ತರಹದ ಕಲೆಗಳಾಗದಂತೆ ನೋಡಿಕೊಳ್ಳಬಹುದು.

ನೀವು ಕೋಮಲ ಒಳಪಿನ ತ್ವಚೆಯನ್ನು ಪಡೆಯಲು ನಿಮ್ಮ ದಿನನಿತ್ಯದ ಕ್ರಮದಲ್ಲಿ ಈ ಕೆಳಗಿನವುಗಳನ್ನು ಅಳವಡಿಸಿಕೊಳ್ಳಿ.

೧.ನಿಂಬೆಹಣ್ಣು

೧.ನಿಮ್ಮ ತ್ವಚೆಯಲ್ಲಿ ಕಲೆಗಳಿರುವ ಜಾಗಕ್ಕೆ ತಾಜಾ ನಿಂಬೆಹಣ್ಣಿನ ರಸವನ್ನು ಹಚ್ಚಿರಿ.

೨.ಹಚ್ಚಿದ ನಂತರ ೧೦ ನಿಮಿಷ ಹಾಗೆ ಬಿಡಿ.

೩.ಬೆಚ್ಚನೆಯ ನೀರಿನಲ್ಲಿ ತ್ವಚೆ ತೊಳೆಯಿರಿ.

ನಿಂಬೆಹಣ್ಣು ಚರ್ಮ ಬಿಳಿಯಾಗುವ ಘಟಕಗಳನ್ನು ಹೊಂದಿದೆ, ಇದು ಚರ್ಮದ ಹೊಳಪನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಮತ್ತು ಇದು ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಎಚ್ಚರಿಕೆ

ಈ ವಿಧಾನವನ್ನು ಬಳಸುವಾಗ ಬಿಸಿಲಿನಿಂದ ದೂರವಿರಿ. ನಿಂಬೆ ರಸ ನಿಮ್ಮ ತ್ವಚೆಯಲ್ಲಿರಾಗಿರುವ ಗಾಯ ಅಥವಾ ಕಲೆಗಳಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ.

೨.ಹಾಲು ಮತ್ತು ಜೇನು

೧.ಒಂದು ಚಮಚ ಹಾಲಿಗೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಪೇಸ್ಟ್ ನಂತೆ ತಯಾರಿಸಿಕೊಳ್ಳಿ.

೨.ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ವೃತ್ತಾಕಾರದಲ್ಲಿ ಹಚ್ಚಿರಿ, ೧೦ ರಿಂದ ೧೫ ನಿಮಿಷಗಳ ಕಾಲ ಹಾಗೆ ಬಿಡಿ.

೩.ನಂತರ ಬೆಚ್ಚನೆಯ ನೀರಿನಿಂದ ತೊಳೆಯಿರಿ.

ನಿಮ್ಮ ತ್ವಚೆ ಎಣ್ಣೆಯುಕ್ತವಾಗಿದ್ದರೆ ಕಡಿಮೆ ಕೊಬ್ಬಿನಾಂಶ ಇರುವ ಹಾಲನ್ನು ಬಳಸಿ.

ಹಾಲಿನಲ್ಲಿರುವ ಕಿಣ್ವಗಳು ತ್ವಚೆಯ ಹೊಳಪನ್ನು ಹೆಚ್ಚಿಸುತ್ತವೆ, ಹಾಗೆಯೆ ಜೇನುತುಪ್ಪವು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

೩.ಅರಿಶಿಣ

ಒಂದು ಚಮಚ ಅರಿಶಿಣ ಪುಡಿ

೩ ಚಮಚ ನಿಂಬೆ ರಸ

೧.ಇವೆರಡನ್ನೂ ಮಿಶ್ರಣ ಮಾಡಿ ತ್ವಚೆಗೆ ಹಚ್ಚಿರಿ.

೨.ಇದನ್ನು ೧೫ ನಿಮಿಷಗಳ ಕಾಲ ಒಣಗಲು ಬಿಡಿ.

೩.ನಂತರ ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ.

ಇದು ನಮ್ಮ ಪೂರ್ವಜರ ಕಾಲದಿಂದಲೂ ತ್ವಚೆಯ ಒಳಪಿಗೆ ಮತ್ತು ಆರೋಗ್ಯಕ್ಕೆ ಉಪಯೋಗಿಸುತ್ತ ಬಂದಿರುವ ನೈಸರ್ಗಿಕ ವಿಧಾನ. ಅರಿಶಿಣವು ತ್ವಚೆಯ ಬಣ್ಣವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಮತ್ತು ಹೊಳಪನ್ನು ಹೆಚ್ಚಿಸುತ್ತದೆ.

ಎಚ್ಚರಿಕೆ

ಸೂಕ್ಷ್ಮ ತ್ವಚೆ ಹೊಂದಿರುವವರು ಇದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳುವುದು ಒಳ್ಳೆಯದು.

೪.ಟಮೋಟ

೧ ಅಥವಾ ೨ ಟಮೋಟ ಹಣ್ಣು

೨ ಚಮಚ ನಿಂಬೆ ರಸ

೧.ಟಮೋಟವನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ತರಹ ಮಾಡಿ ಇದಕ್ಕೆ ನಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಿಸಿ.

೨.ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ ೨೦ ನಿಮಿಷಗಳ ಕಾಲ ಬಿಡಿ.

೩.ತಣ್ಣೀರಿನಲ್ಲಿ ತೊಳೆಯಿರಿ.

ಇದನ್ನು ಪ್ರತಿದಿನ ಸ್ನಾನ ಮಾಡುವ ಮೊದಲು ನೀವು ಮಾಡಬಹುದು.

ಟಮೋಟದಲ್ಲಿರುವ ಲಿಕೋಪೀನ್ ಮೆಲನಿನ್ ವರ್ಣದ್ರವ್ಯವನ್ನು ಸಮತೋಲನದಲ್ಲಿ ಇರುವಂತೆ ಮಾಡಿ ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಸತ್ತ ಚರ್ಮವನ್ನು ತೊಲಗಿಸಲು ಮತ್ತು ತ್ವಚೆಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

Leave a Reply

%d bloggers like this: