ದಿನಕ್ಕೆ 10 ನಿಮಿಷ ನಡೆಯುದರಿಂದ ಆಗುವ ವಿಸ್ಮಯಕಾರಿ ಲಾಭಗಳು

ನಡೆಯುವುದು ದೇಹದ ಆರೋಗ್ಯಕ್ಕೆ ಮತ್ತು ಮನಸ್ಸಿಗೆ ಒಳ್ಳೆಯದು ಎಂದು ನಿಮಗೆ ತಿಳಿದಿದೆ, ಆದರೂ ಕೆಲವರು ಸ್ವಲ್ಪ ದೂರವು ನಡೆಯುವುದಿಲ್ಲ. ಕೆಲವರು ನಡೆಯಬೇಕೆಂದೇ ಬೆಳಿಗ್ಗೆ ಬೇಗನೆ ಎದ್ದು ವಾಕಿಂಗ್ ಗೆ ಹೋಗುತ್ತಾರೆ, ಅದು ನಿಜಕ್ಕೂ ಒಳ್ಳೆಯದು ಆ ಸಮಯದಲ್ಲಿ ನಿಮ್ಮ ಬೆಲೆ ಬಾಳುವ ವಸ್ತುಗಳ ಗಮನವಿರಲಿ ಅಷ್ಟೇ. ನೀವು ನಡೆಯುವುದರಿಂದ ಆಗುವ ಪ್ರಯೋಜನಗಳನ್ನು ನಾವು ವಿವರಿಸಿದ್ದೇವೆ.

ನಡೆಯುವುದರಿಂದ ನೀವು ಊಹೆ ಮಾಡಿರುವುದಕ್ಕಿಂತಲೂ ಹೆಚ್ಚು ಕ್ಯಾಲೋರಿಯನ್ನು ಕಳೆದುಕೊಳ್ಳಬಹುದು.

ಗಂಟೆಗೆ ೨ ನಿಮಿಷ ನಡೆದರೆ

ಹೆಚ್ಚು ಕಾಲ ಬದುಕು! ಸುಮ್ಮನೆ ಒಂದು ಕಡೆ ಕುಳಿತಿರುವ ಬದಲು ೨ ನಿಮಿಷ ನಡೆದಾಡಿದರೆ ನಿಮ್ಮ ಸಾವನ್ನು ೩೩% ನಷ್ಟು ಮುಂದೆ ಹಾಕಬಹುದು. ಇದನ್ನು ವಿಜ್ಞಾನವು ಹೇಳುತ್ತದೆ.

೫ ನಿಮಿಷ ನಡೆದರೆ

ನಿಮ್ಮ ದೇಹದ ಅನವಶ್ಯಕ ಮತ್ತು ೧೦೦೦ಕ್ಯಾಲೋರಿಯನ್ನು ತೆಗೆದುಹಾಕಬಹುದು. ಇದನ್ನು ಇತ್ತೀಚಿಗೆ ನಡೆಸಿದ ಅಧ್ಯಯನ ಒಂದು ಬಹಿರಂಗ ಪಡಿಸಿದೆ. ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಇಚ್ಛಿಸುವವರು ಇದನ್ನು ಮಾಡಿದರೆ ಆಯಿತು, ಇದಕ್ಕೆ ಯಾವುದೇ ಖರ್ಚು ಇಲ್ಲ. ಇದರ ಜೊತೆಗೆ ನಿಮ್ಮ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ದಿನಕ್ಕೆ ೧೦ ನಿಮಿಷ ನಡೆದರೆ

ನಿಮ್ಮ ಹೃದಯದ ಅಪಧಮನಿಗಳಿಗೆ ಅಧಿಕ ರಕ್ಷಣೆಯನ್ನು ನೀವು ಒದಗಿಸಿದಂತೆ. ನಿಂರಂತರವಾಗಿ ಒಂದು ಕಡೆ ಕುಳಿತಿರುವುದು ನಿಮ್ಮ ದೇಹದಲ್ಲಿ ರಕ್ತವು ಸರಾಗವಾಗಿ ಚಲಿಸಲು ಸಹಾಯವಾಗುತ್ತದೆ. ಇದರಿಂದ ಸಂಭವಿಸಬಹುದಾದ ಹೃದಯಾಘಾತ ಮತ್ತು ಲಕ್ವವನ್ನು(ಸ್ಟ್ರೋಕ್) ತಡೆಯಬಹುದು.

ಇತ್ತೀಚಿಗೆ ನಡೆದ ಸಂಶೋಧನೆಯ ಪ್ರಕಾರ ದಿನದಲ್ಲಿ ೧೦ ನಿಮಿಷ ನಡೆದರೆ ನಿಮ್ಮ ದೇಹದ ಹಲವು ಸಮಸ್ಯೆಗಳನ್ನು ಶಮನಮಾಡಬಹುದು.

ಗರ್ಭಿಣಿ ಮಹಿಳೆಯರು ಕೂಡ ಮನೆಯಲ್ಲೇ ಸ್ವಲ್ಪ ದೂರ ನಡೆದಾಡುವುದರಿಂದ ಅವರ ಹೆರಿಗೆ ಸಾಮಾನ್ಯವಾಗಿ ಸುಲಭವಾಗಿ ಆಗಲು ಸಹಾಯವಾಗುತ್ತದೆ. ಜೊತೆಗೆ ನಿಮ್ಮ ದೇಹದ ಹೆಚ್ಚುವರಿ ತೂಕ ಕೂಡ ಕಡಿಮೆ ಆಗಿ ಪ್ರಸವದ ನಂತರ ಬೇಗನೆ ತೆಳ್ಳಗೆ ಸುಂದರವಾಗಿ ಕಾಣಿಸಲು ಸಹಾಯವಾಗುತ್ತದೆ.

ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಅರೋಗ್ಯ ನಿಮ್ಮ ಆರೋಗ್ಯವನ್ನು ಕಾಪಾಡಲು ಯಾವುದೇ ಖರ್ಚಿಲ್ಲದ ಸುಲಭ ಕಡಿಮೆ ಸಮಯದಲ್ಲಿ ಪಡೆಯಬಹುದು. ಬೆಳಗಿನ ಜಾವ ವಾಕಿಂಗ್ ಮಾಡುವುದರಿಂದ ಶುದ್ಧ ಗಾಳಿಯು ಸಹ ಸಿಗುತ್ತದೆ ಇದು ದೇಹಕ್ಕೆ ಇನ್ನು ಒಳ್ಳೆಯದು. ರಕ್ತದಲ್ಲಿ ಆಮ್ಲಜನಕವನ್ನು ಸರಾಗವಾಗಿ ಪೂರೈಸಲು ಇದು ಸಹಾಯ ಮಾಡುತ್ತದೆ.

Leave a Reply

%d bloggers like this: