ನಿಮಗೆ ಬೀಳುವ ಕನಸು ನಿಮ್ಮ ಬಗ್ಗೆ ಇದನ್ನು ಹೇಳುತ್ತದೆ !

ಪ್ರತಿ ಮನುಷ್ಯನು ನಿದ್ರೆ ಮಾಡುತ್ತಾನೆ, ಕನಸು ಕಾಣುತ್ತಾನೆ. ಆದರೆ ಮನುಷ್ಯ ತನ್ನ ಕನಸಿನಲ್ಲಿ ಕಾಣುವ ವಿಷಯಕ್ಕೂ ತನ್ನ ನಿಜ ಜೀವನಕ್ಕೂ ನಿಜವಾಗಿಯೂ ಏನಾದರು ಸಂಬಂಧ ಇದೆಯೇ? ನಮ್ಮ ಪೂರ್ವಜರು ಹೇಳುವ ಪ್ರಕಾರ ನಮ್ಮ ಬೆಳಗಿನಜಾವದ ಕನಸು ನಿಜವಾಗುತ್ತದೆ. ಆದರೆ ನಿಮ್ಮ ಕನಸಿನ ಈ ಕೆಲವು ವಿಷಯಗಳು ನಿಮ್ಮ ಬಗ್ಗೆ ಏನು ಹೇಳುತ್ತವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕನಸು ನಿಮ್ಮ ಮನಸ್ಸು ಮತ್ತು ಸ್ನಾಯುಗಳಿಗೆ ವಿಶ್ರಾಂತಿ ಮತ್ತು ಒತ್ತಡ ಕಡಿಮೆ ಮಾಡಿ ನಿವಾರಣೆ ಮಾಡುವುದು ಮಾತ್ರವಲ್ಲ, ಕೆಲವು ಕನಸುಗಳು ನಿಮ್ಮ ಉಪಪ್ರಜ್ಞೆ ಏನನ್ನು ಯೋಚಿಸುತ್ತಿದೆ, ಮತ್ತು ಅದು ಏನನ್ನು ಮಾಡುತ್ತಿದೆ ಎಂಬುದನ್ನು ತಿಳಿಸುತ್ತದೆ.

ನಿಮ್ಮ ಮನಸ್ಸು ಅಥವಾ ಮೆದುಳು ನಿಮ್ಮ ಜೀವನದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತದೆ ಎಂಬುದನ್ನು ತಿಳಿಯಲು ಒಂದು ಒಳ್ಳೆಯ ಉದಾಹರಣೆ ಆಗಿದೆ.

ತುಂಬಾ ಸಾಮಾನ್ಯ ಕನಸುಗಳು ನಿಮ್ಮ ಬಗ್ಗೆ ಏನು ಹೇಳುತ್ತವೆ?

೧.ಪೆಟ್ಟಿಗೆ ಅಥಾವ ಡಬ್ಬಿ

ನಮ್ಮ ಕನಸಿನಲ್ಲಿ ನಾವು ಪೆಟ್ಟಿಗೆ ಅಥವಾ ಬಾಕ್ಸ್ ಅನ್ನು ಕಂಡರೆ ನಮ್ಮಲ್ಲಿ ಯಾವುದೊ ರಹಸ್ಯ ಇದೆ, ಅದನ್ನು ತೆಗೆದಾಗ ಏನಾದರು ನೋಡಿದಂತೆ ಕಾಣಿಸದರೆ ನಾವು ಇನ್ನೂ ಯಾರಲ್ಲಿಯೂ ಹೇಳದ ರಹಸ್ಯವನ್ನು ಗುಟ್ಟು ಮಾಡಿರುವೆವು ಅಥಾವ ಖಾಲಿ ಡಬ್ಬ ಕಾಣಿಸಿದರೆ ನಮ್ಮಲ್ಲಿ ನಿರಾಶೆ ಇದೆ ಎಂದು ತಿಳಿಯಬಹುದು.

೨.ಬೀಳುವುದು

ನೀವು ಕನಸಿನಲ್ಲಿ ಬಿದ್ದಂತೆ ಕಂಡರೆ,  ಯಾವುದೊ ವಿಷಯಕ್ಕೆ ತುಂಬಾ ಹೆದರಿಕೊಳ್ಳುತ್ತಿದ್ದೀರಾ ಅಥವಾ ನಿಮ್ಮ ವಿಷಯದ ಮೇಲೆ ನಿಯಂತ್ರಣ ಕಳೆದುಕೊಂಡಿರುವಿರಿ.

೩.ಬೆಕ್ಕು

ಬೆಕ್ಕನ್ನು ನಿಮ್ಮ ಕನಸಿನಲ್ಲಿ ಕಂಡರೆ ಬಲಶಾಲಿ, ನಿಮ್ಮ ಆತ್ಮಕ್ಕೆ ಸಂಬಂದಿಸಿದ ಶಕ್ತಿ ಹೊಂದಿರುವಿರಿ.

೪.ಇರುವೆಗಳು

ನೀವು ನಿಮ್ಮ ಸ್ನೇಹಿತರ ಜೊತೆ ಅಥವಾ ಸಂಬಂಧಿಗಳ ಜೊತೆ ಹೆಚ್ಚು ಬಾಂಧವ್ಯವನ್ನು ಹೊಂದಿದ್ದೀರಾ. ನಿಮ್ಮ ಸಂಬಂಧಗಳನ್ನು ನೀವು ಉಳಿಸಿಕೊಳ್ಳಲು ಇಚ್ಛಿಸುತ್ತೀರ.

೫.ಕೂದಲು

ಇದರ ಅರ್ಥ ಏನೆಂದರೆ ನೀವು ನಿಮ್ಮ ವ್ಯಕ್ತಿತ್ವವನ್ನು ಅಥವಾ ನಿಮ್ಮ ಬಗೆಗಿನ ವಿಷಯವನ್ನು ನೀವಾಗಿಯೇ ವ್ಯಕ್ತಪಡಿಸಲು ದಾರಿಯನ್ನು ಹುಡುಕುತ್ತಿದ್ದೀರಿ ಎಂದು.

೬.ನೀರು

ಇದರ ಅರ್ಥ ನೀವು ಮುಂದೆ ಬರುವ ಅಪಾಯಗಳನ್ನು ಹೆದುರಿಸಲು ಸಿದ್ಧರಾಗಿರಬೇಕು.

೭.ಹಾರುವುದು

ನಿಮ್ಮ ಜೀವನದ ಒಂದು ಮುಖ್ಯವಾದ ನಿರ್ಧಾರವನ್ನು ತೆಗೆದುಕೊಳ್ಳುವುವಿರಿ.

೮.ಮಣ್ಣು

ನೀವು ಕನಸಿನಲ್ಲಿ ಮಣ್ಣನ್ನು ಕಂಡಿರಿ ಎಂದರೆ ನಿಮ್ಮ ಯಾವುದೇ ಒಂದು ತೊಂದರೆ ಇನ್ನು ಬಗೆಹರಿಯದೆ ನಿಮ್ಮನ್ನು ಕಾಡುತ್ತಿದೆ ಎಂದು ತಿಳಿಯಬಹುದು.

೯.ಹಸಿರು/ಪರಿಸರ

ನಿಮ್ಮ ಜೀವನದ ಯಾವುದೇ ಪರಿಸ್ಥಿತಿಗೆ ನೀವು ಹೊಂದಿಕೊಂಡು ಸಂತೋಷದಿಂದ ಇರುವಿರಿ.

೧೦.ನಗ್ನ

ನೀವು ಬೆತ್ತಲೆಯಾಗಿ ನಿಮ್ಮನ್ನು ಕಂಡರೆ ಬೇರೆಯವರು ನಿಮ್ಮ ಬಗ್ಗೆ ಏನೇ ಹೇಳಿದರು ಅದಕ್ಕೆ ಕಿವಿ ಕೊಡುವಿರಿ ಎಂದು.

ನಿಮ್ಮ ಮೆದುಳು ಅಥವಾ ನಿಮ್ಮ ಉಪಪ್ರಜ್ಞೆ ನೀವು ಮಲಗಿರುವಾಗ ಏನನ್ನು ಯೋಚಿಸುತ್ತಿರುತ್ತದೆ ಎಂಬುದನ್ನು ತಿಳಿಯಲು ಕನಸುಗಳು ಸಹಾಯ ಮಾಡುತ್ತವೆ, ಆದರೆ ಆ ಕನಸು ಬಿದ್ದರೆ ಹಾಗೆ ಆಗುತ್ತದೆ ಅನ್ನುವುದು ಸರಿಯಲ್ಲ. ನಿಮ್ಮ ಸ್ನೇಹಿತರ ಅಥವಾ ಸಂಗಾತಿಯ ಕನಸನ್ನು ಕೇಳಿ ಇದನ್ನು ತೋರಿಸಿ ತಮಾಷೆಯ ಕ್ಷಣವನ್ನು ಅನುಭವಿಸಬಹದು.

Leave a Reply

%d bloggers like this: