ಸಿಹಿ ಎಂದರೆ ಮಕ್ಕಳಿಗೆ ಇಷ್ಟವಾಗುವುದು ಸಹಜ. ಆಗೇಯೇ ಜ್ಯೂಸು ಎಂದರೆ ಕೂಡ ಮಕ್ಕಳಿಗೆ ಇಷ್ಟ. ಆದರೆ ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನೀಯಗಳು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಣ್ಣಿನ ರಸವನ್ನು ಕುಡಿದು ಅವರಿಗೆ ಬೇಸರವಾಗಿರಬಹುದು. ಅದಕ್ಕಾಗಿಯೇ ಅವರಿಗಾಗಿ ಆರೋಗ್ಯಕರ ರುಚಿಕರ ಈ ಜ್ಯೂಸುಗಳು. ಇವು ದೇಹಕ್ಕೆ ಅವಶ್ಯವಿರುವ ಪೌಷ್ಟಿಕಾಂಶಗಳನ್ನು, ವಿಟಮಿನ್ ಗಳನ್ನು, ಪ್ರೊಟೀನ್ ಗಳನ್ನು ಒಳಗೊಂಡಿರುವ ಪದಾರ್ಥಗಳನ್ನು ಉಪಯೋಗಿಸಿ ಮಾಡಿರುವುದು. ಇವುಗಳನ್ನು ಮಾಡುವುದು ಸುಲಭ. ಒಮ್ಮೆ ಮನೆಯಲ್ಲಿ ಇದನ್ನು ಪ್ರಯತ್ನಿಸಿ ನೋಡಿ.
ಬಟರ್ ಮಿಲ್ಕ್ ಶೇಕ್
ಬೇಕಾಗಿರುವ ಪದಾರ್ಥಗಳು
೧.ಒಂದು ಬಟ್ಟಲು ಮೊಸರು
೨.ಒಂದು ಲೋಟ ನೀರು
೩.ಬ್ಲಾಕ್ ಸಾಲ್ಟ್ ಮತ್ತು ಮೆಣಸು
ವಿಧಾನ
೧.ಒಂದು ಪಾತ್ರೆಗೆ ನೀರು ಮತ್ತು ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಿಸಿ.
೨.ಮಿಶ್ರಣ ನೋಡಿಕೊಂಡು ನೀರನ್ನು ಸೇರಿಸಿ ಕೊಳ್ಳಬಹುದು, ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸಿನ ಪುಡಿಯನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ ಮಗುವಿಗೆ ಕುಡಿಯಲು ನೀಡಿ.
ಮೆಣಸು ಮಗುವಿನ ಶೀತ ಮತ್ತು ಕೆಮ್ಮಿಗೆ ಒಳ್ಳೆಯದು ಅದನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮಾವಿನ ಲಸ್ಸಿ
ಪದಾರ್ಥಗಳು
೧.ಒಂದು ಬಟ್ಟಲು ಮೊಸರು
೨.ಒಂದು ಲೋಟ ನೀರು
೩.ಒಂದು ಮಾವಿನ ಹಣ್ಣು
೪.ಒಂದು ಚಮಚ ಸಕ್ಕರೆ
ವಿಧಾನ
೧.ಮಾವಿನ ಹಣ್ಣನ್ನು ಕತ್ತರಿಸಿ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ.
೨.ನಂತರ ಒಂದು ದೊಡ್ಡ ಪಾತ್ರೆಯಲ್ಲಿ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
೩.ಚೆನ್ನಾಗಿ ಕಲಸಿ ಅಥವಾ ಒಂದು ಬಾರಿ ಮಿಕ್ಸಿಯಲ್ಲಿ ರುಬ್ಬಿರಿ.
೪.ನಂತರ ಅದರ ರುಚಿಯನ್ನು ನೋಡಲು ಮಗುವಿಗೆ ನೀಡಿ.
ಬನಾನ ಶೇಕ್
ಪದಾರ್ಥಗಳು
೧.ಒಂದು ಲೋಟ ಹಾಲು
೨.ಒಂದು ಬಾಳೆಹಣ್ಣು
೩.ಅರ್ಧ ಚಮಚ ಸಕ್ಕರೆ
ವಿಧಾನ
೧.ಬಾಳೆಹಣ್ಣನ್ನು ಸಣ್ಣಗೆ ಕತ್ತರಿಸಿ.
೨.ಒಂದು ಬಟ್ಟಲಿನಲ್ಲಿ ಹಾಲು, ಸಕ್ಕರೆ ಮತ್ತು ಕತ್ತರಿಸಿದ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ಮಿಶ್ರಿಸಿ.
ಒಂದು ಲೋಟಕ್ಕೆ ಹಾಕಿ ಮಗುವಿಗೆ ನೀಡಿ.
ಪುದಿನ ಮತ್ತು ನಿಂಬೆ ಜ್ಯೂಸು
ಪದಾರ್ಥಗಳು
೧.ಒಂದು ಲೋಟ ನೀರು
೨.ಒಂದು ನಿಂಬೆಹಣ್ಣು
೩.ಒಂದು ಚಮಚ ಪುದಿನ
೪.ರುಚಿಗೆ ಸಕ್ಕರೆ ಮತ್ತು ಉಪ್ಪು
ವಿಧಾನ
೧.ನಿಂಬೆಹಣ್ಣಿನಿಂದ ರಸವನ್ನು ತೆಗೆದುಕೊಳ್ಳಿ.
೨.ಪುದಿನ ಎಲೆಗಳನ್ನು ಸ್ವಲ್ಪ ನೀರಿನಿಂದ ರುಬ್ಬಿಕೊಳ್ಳಿ. ಪೇಸ್ಟ್ ತರ ಆದರೆ ಸಾಕು ಅಥವಾ ನುಣ್ಣಗೆ ರುಬ್ಬಿಕೊಳ್ಳಿ ಬಾಯಿಗೆ ಅದರ ಎಲೆಗಳು ಸಿಗಬಾರದು ಎಂದರೆ.
೩.ಇದಕ್ಕೆ ನಿಂಬೆರಸ, ಸಕ್ಕರೆ ಮತ್ತು ರುಚಿಗೆ ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
೪.ಗಟ್ಟಿಯಾದರೆ ಉಳಿದ ನೀರನ್ನು ಹಾಕಿ ರುಬ್ಬಿರಿ.
ನಿಮ್ಮ ಆರೋಗ್ಯಕರ ಪುದಿನ ನಿಂಬೆ ಜ್ಯೂಸು ಕುಡಿಯಲು ಸಿದ್ದವಾಯಿತು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.