ಸಿಸೇರಿಯನ್ ಆದ ನಂತರ ನಿಮ್ಮ ಹೊಟ್ಟೆಗೆ ಏನೆಲ್ಲಾ ಆಗುತ್ತದೆ? ಇಲ್ಲಿದೆ ಸಂಪೂರ್ಣ ಉತ್ತರ

ಪ್ರಸವ ನಂತರ ಹೊಟ್ಟೆಯ ಬಗ್ಗೆ ವಿಷಯಗಳು ಅಗೆದಷ್ಟು ಸಿಗುತ್ತಾ ಹೋಗುತ್ತವೆ. ಗರ್ಭಧಾರಣೆಯ ಆ 40 ವಾರಗಳಲ್ಲಿ (ಹೆಚ್ಚು ಕಮ್ಮಿ), ದೇಹದ ಬೆಳವಣಿಗೆಯಲ್ಲಿ ಬಹುತೇಕ ಪಾಲು ಪಾಲ್ಗೊಳ್ಳುವುದು ಹೊಟ್ಟೆಯೇ. ಹೆರಿಗೆಯ ನಂತರ ಅದು ಹೇಗೋ ಅದರ ಮೊದಲ ಸ್ಥಿತಿಗೆ ವಾಪಾಸಾಗುವ ಶಕ್ತಿ ಕೂಡ ಅದಕ್ಕಿದೆ. ಪ್ರಸವ ನಂತರದಲ್ಲಿ ನಿಮ್ಮ ದೇಹ ಹೇಗೆ ವರ್ತಿಸುತ್ತದೆ ಎಂಬುದು ಕೇವಲ ಒಂದು ವಿಷಯದ ಮೇಲೆ ಆಧಾರಿತವಾಗಿದ್ದರೆ, ಅದು ನೀವು ನಿಮ್ಮ ಮಗುವಿಗೆ ಜನ್ಮ ನೀಡಿದ್ದು ಹೇಗೆ ಎಂಬುದು. ಒಂದು ವೇಳೆ ಸಿಸೇರಿಯನ್ ಆದಮೇಲೆ ನಿಮ್ಮ ಹೊಟ್ಟೆಗೆ ಏನೆಲ್ಲಾ ಆಗಬಹುದು ಎಂಬ ಪ್ರಶ್ನೆಗಳು ನಿಮ್ಮಲ್ಲಿ ಇದ್ದರೆ, ವಿಜ್ಞಾನ ಮತ್ತು ಹೆರಿಗೆತಜ್ಞರ ಬಳಿ ಇದಕ್ಕೆ ಉತ್ತರಗಳು ಇವೆ.

ಅಮೆರಿಕನ್ ಪ್ರೆಗ್ನನ್ಸಿ ಅಸೋಸಿಯೇಷನ್ (APA) ಪ್ರಕಾರ ಸಿಸೇರಿಯನ್ ಎಂದರೆ ನಿಮ್ಮ ಉದರದ ಮೇಲ್ಭಾಗ ಕತ್ತರಿಸಿ ಮಗುವನ್ನು ಹೊರಗೆತ್ತುವುದು ಎಂದು. ಹೀಗಾಗಿ ನಿಮ್ಮ ಹೊಟ್ಟೆಯು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಚೇತರಿಕೆ ಕಾಣಬೇಕು. ಇದು ಎಲ್ಲರಲ್ಲೂ ಆಗುವಂತದ್ದು, ಆದರೆ ಚೇತರಿಕೆಯ ದಾರಿ ಒಬ್ಬರಿಂದ ಒಬ್ಬರಿಗೆ ಬೇರೆ ಆಗಿರಬಹುದು.

ಅಲ್ಪಾವಧಿಯ ಚೇತರಿಕೆ

ಅಲ್ಪಾವಧಿಯ ಚೇತರಿಕೆಗೆ ಬಂದರೆ, ನಿಮಗೆ ಸಿಸೇರಿಯನ್ ಆಗಿದ್ದರೆ, ಸ್ವಾಭಾವಿಕ ಹೆರಿಗೆಗೆ ಒಳಗಾದವರಿಗಿಂತ ಸ್ವಲ್ಪ ಹೆಚ್ಚಿನ ನೋವು ಅನುಭವಿಸುವಿರಿ. ನೀವು ನಿಮ್ಮ ಉದರ ಕತ್ತರಿಸಿದ ಗಾಯದಿಂದ ಮೊದಲ ಸ್ವಲ್ಪ ದಿನಗಳು ನೋವು ಅನುಭವಿಸಬಹುದು ಮತ್ತು ನಿಮ್ಮ ಹೊಟ್ಟೆಯಲ್ಲಿ ಮೊದಲ ಒಂದು ವಾರದವರೆಗೆ ಸಂಕಟ ಉಂಟಾಗುತ್ತದೆ. 10 ರಲ್ಲಿ ಒಂದು ತಾಯಿಗೆ ಸರ್ಜರಿ ಆಗಿ ಕೆಲವು ತಿಂಗಳುಗಳವರೆಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಸಿಸೇರಿಯನ್ ಕೂಡ ಇತರೆ ಮುಖ್ಯ ಸರ್ಜರಿಗಳಲ್ಲಿ ಇರುವ ಅಪಾಯಗಳನ್ನೇ ಹೊಂದಿರುತ್ತದೆ. ಆದರೆ ಗಮನ ನೀಡಬೇಕಾದ ಒಂದು ಅಪಾಯ ಎಂದರೆ ಅದು ಅಂಟಿಕೊಳ್ಳುವುದು. ಹೌದು, ಕಟ್ ಮಾಡಿದ ಜಾಗದ ಅಂಗಾಂಶಗಳ ಬ್ಯಾಂಡ್ ಗಳು ಒಂದಕ್ಕೊಂದು ಕೂಡಿಕೊಂಡು ನಿಮ್ಮ ಅಂಗಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡಿ ಸರಿಯಾಗಿ ಕಾರ್ಯ ನಿರ್ವಹಿಸದಂತೆ ಮಾಡುತ್ತವೆ. ಇದನ್ನು ಸರಿಪಡಿಸಲು ಪುನಃ ಸರ್ಜರಿ ಮಾಡಿಸಬೇಕಾಗಿ ಬರಬಹುದು.

ದೀರ್ಘಾವಧಿಯ ಚೇತರಿಕೆ

ಕತ್ತರಿಗೆ ಒಳಗಾದ ನರತುದಿಗಳು ಮತ್ತು ಇತರೆ ಅಂಗಾಂಶಗಳು ಚೇತರಿಸಿಕೊಳ್ಳುವುದಕ್ಕೆ ಹಲವು ತಿಂಗಳುಗಳು ಬೇಕಾಗಬಹುದು. ನಿಮ್ಮ ಹೊಟ್ಟೆಯನ್ನು ಕತ್ತರಿಸಿದ ಜಾಗದ ಸುತ್ತಲಿನ ಜಾಗ ೬ ತಿಂಗಳುಗಳವರೆಗೆ ಜೊವು ಹಿಡಿಯಬಹುದು. ಅಂದರೆ ಅದರ ಸೂಕ್ಷ್ಮತೆ ಕಳೆದುಕೊಳ್ಳಬಹುದು.

ಅಲ್ಲದೆ ಡೈಲಿ ಮೇಲ್ ಪತ್ರಿಕೆ ನಡೆಸಿದ ಅಧ್ಯಯನದಲ್ಲಿ ಸ್ವಾಭಾವಿಕ ಹೆರಿಗೆಗೆ ಒಳಗಾದ ಹೆಂಗಸರಿಗಿಂತ ಎರಡಷ್ಟು ಜಾಸ್ತಿ ಹೆಂಗಸರು ಲೈಂಗಿಕ ಕ್ರಿಯೆಯ ವೇಳೆ ನೋವನ್ನು ಅನುಭವಿಸುವುದಾಗಿ ವರದಿ ಮಾಡಿದ್ದಾರೆ. ಅದೂ ಕೂಡ 18 ತಿಂಗಳುಗಳ ನಂತರವೂ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಲಭಿಸಿಲ್ಲ. ನೀವು ಸಿಸೇರಿಯನ್ ಇಂದ ಚೇತರಿಸಿಕೊಳ್ಳುತ್ತಿದ್ದರೆ ಅಥವಾ ಸಿಸೇರಿಯನ್ನಿಗೆ ಒಳಗಾಗುವವರು ಆಗಿದ್ದರೆ, ಒಂದನ್ನು ಮಾತ್ರ ನೆನಪಿಡಬೇಕು – ತಾಳ್ಮೆಯೇ ಅಸ್ತಿ.

ಕೊನೆಯದಾಗಿ ಕತ್ತರಿಸಿದ ಅಂಗಾಂಶಗಳು ಕೂಡ ನಿಮ್ಮ ಹೊಟ್ಟೆಯು ಮುಂಚಿನ ಸ್ಥಿತಿಗೆ ಬರುವುದರ ಮೇಲೆ ಪರಿಣಾಮ ಬೀರುತ್ತದೆ. ಇದು ಮುಖ್ಯವಾಗಿ ಮೊದಲೇ ಹೇಳಿದ ಅಂಟಿಕೊಳ್ಳುವ ಸಮಸ್ಯೆ ಒಳಗೊಂಡಿರುತ್ತದೆ. ಹೀಗಾಗಿ ನಿಮ್ಮ ಕತ್ತರಿಸಿದ ಜಾಗವು ಸರಿಯಾಗಿ ವಾಸಿ ಆಗುತ್ತಿಲ್ಲ ಎಂದರೆ ಅಥವಾ ಆಹಾರ ಜೀರ್ಣಿಸಿಕೊಳ್ಳುವುದರಲ್ಲಿ ತೊಂದರೆ ಆಗುತ್ತಿದ್ದರೆ, ನೀವು ನಿಮ್ಮ ವೈದ್ಯರ ಬಳಿ ಮಾತಾಡಬೇಕು.

ನಿಮ್ಮ ಹೊಟ್ಟೆಯು ಸಿಸೇರಿಯನ್ ಮುಂಚೆ ಹೇಗಿತ್ತೋ ಅದೇ ರೀತಿಗೆ ವಾಪಸ್ಸು ಬರದೇ ಇದ್ದರು, ಕಾಲಕ್ರಮೇಣ ಕತ್ತರಿಸಿದ ಗಾಯ ಮತ್ತು ಊತ ಕಡಿಮೆ ಆಗುತ್ತಾ ಹೋಗುತ್ತವೆ. ಆದರೆ ಇದರೊಂದಿಗೆ ನಿಮಗೆ ಒಂದು ಪುಟ್ಟ ಮುದ್ದು ಜೀವ ಸಿಗುತ್ತದೆ, ಸಾರ್ಥಕತೆ ಇರುವುದೇ ಅಲ್ಲಿ ಅಲ್ಲವೇ? !

Leave a Reply

%d bloggers like this: