ನೀವು “ಮ್ಯೂಸಿಯಂ” ಅಥವಾ “ವಸ್ತು ಸಂಗ್ರಾಲಯ” ಎಂಬ ಪದಗಳನ್ನು ಕೇಳಿದರೆ ಊಹಿಸಿಕೊಳ್ಳುವುದು ಹಿಂದಿನ ಕಾಲದ ರಾಜರ ಫೋಟೋಗಳು ಮತ್ತು ಉಪಯೋಗಿಸುತ್ತಿದ್ದ ವಸ್ತುಗಳು, ಗಾಡಿಗಳು, ಯುದ್ಧ ಶಸ್ತಾಸ್ತ್ರಗಳು ಮತ್ತು ಹಲವು ಪ್ರಾಚೀನ ಕಾಲದ ವಸ್ತುಗಳು ಅಲ್ಲವೇ? ಆದರೆ, ಜಗತ್ತಿನ ಕೆಲವು ದೇಶಗಳಲ್ಲಿ ಈ ಸಂಗ್ರಾಲಯಗಳು ಕೇವಲ ಇಂತಹ ವಸ್ತುಗಳಿಗೆ ಎಂದೇ ಸೀಮಿತವಾಗಿಲ್ಲ.
ಜೆಕ್ ರಿಪಬ್ಲಿಕ್ ದೇಶದ ರಾಜಧಾನಿ ಆದ ಪ್ರೇಗ್ ಅಲ್ಲಿರುವ ಈ ಒಂದು ಸಂಗ್ರಾಲಯದ ರೀತಿಯ ಸಂಗ್ರಾಲಯವನ್ನ ನೀವು ಬಹುಷಃ ನೋಡಿರಲಿಕ್ಕಲ್ಲ. ನೋಡುವುದು ಇರಲಿ, ಕೇಳಿರುವುದು ಕೂಡ ಇರುವುದಿಲ್ಲ ಬಹುಷಃ.
ಈ ಸಂಗ್ರಾಲಯದಲ್ಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಅಪರೂಪದ ಲೈಂಗಿಕ ಆಟಿಕೆಗಳಿಂದ ಹಿಡಿದು, ಲೈಂಗಿಕ ಯಂತ್ರಗಳವರೆಗೆ ಒಟ್ಟಾರೆ ೨೦೦ ವಸ್ತುಗಳು ಪ್ರದರ್ಶನಕ್ಕಿವೆ. ಈ ಸಂಗ್ರಾಲಯದ ಉಸ್ತುವಾರಿ ವಹಿಸಿಕೊಂಡಿರುವ ಬ್ಲರ್ಪ್ ಅವರು “ಈ ಸಂಗ್ರಾಲಯವು ಜಗತ್ತಿನ ಪ್ರತಿಯೊಬ್ಬರಿಗೂ ತಮ್ಮ ಪೂರ್ವಜರು ಮತ್ತು ಇಡೀ ಮಾನವ ಕುಲದ ಕುತೂಹಲ, ಇತಿಹಾಸ ಮತ್ತು ಮಾನವ ಲೈಂಗಿಕತೆಯ ಹಾನಿ ಮಾಡದ ಮುಗ್ಧ ವಿಕೃತಿಯನ್ನು ತಿಳಿಹೇಳಬೇಕೆಂದು ಈ ಸಂಗ್ರಾಲಯ ನಿರ್ಮಿಸಲಾಗಿದೆ” ಎನ್ನುತ್ತಾರೆ.
ಈ ಸಂಗ್ರಾಲಯವನ್ನು ಇಟಲಿ ಮೂಲದ ಒರಿಯನೋ ಬಿಝೋಚಿಯೋ ಎಂಬಾತ ೨೦೦೨ರಲ್ಲಿ ನಿರ್ಮಿಸಿದನು. ಇಲ್ಲಿನ ಕೆಲವು ಆಟಿಕೆಗಳು, ಯಂತ್ರಗಳು 16ನೇ ಶತಮಾನದ್ದಾಗಿವೆ.
ಇಷ್ಟೇ ಅಲ್ಲದೆ ಇಲ್ಲಿ ಸ್ಟೀಮ್ ಇಂದ ಚಲಿಸುವ ಶಿಶ್ನ ಥರದ ಅನೇಕ ಅನ್ವೇಷಣೆಗಳು ಇವೆ.