ಗರ್ಭಿಣಿಯರು ಎಂದಿಗೂ ಮಾಡಬಾರದ ೭ ಅಚಾತುರ್ಯಗಳು

ನಿಮ್ಮ ಜೀವನದ ಈ ಸಮಯದಲ್ಲಿ ನಿಮ್ಮ ಎಲ್ಲಾ ಕ್ರಿಯೆಗಳು ಒಂದೇ ಅಲ್ಲ,ಎರಡು ಜೀವ-ನಿಮ್ಮ ಮತ್ತು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಗರ್ಭಾಶಯದಲ್ಲಿ ಮಗುವು ಕಳೆಯುವ ಒಂಬತ್ತು ತಿಂಗಳುಗಳು ನಿಮ್ಮ ಜೀವನದಲ್ಲಿ ಅಮೂಲ್ಯ ಅವಧಿಯಾಗಿದೆ ಮತ್ತು ನೀವು ಇದನ್ನು ಶಾಶ್ವತವಾಗಿ ನೆನಪಿಸಿಕೊಳ್ಳುವಿರಿ. ನೀವು ಮಾಡುವ ಎಲ್ಲವೂ, ತಿನ್ನುವ ಎಲ್ಲ ಆಹಾರಗಳು, ಕುಡಿಯುವ ಪಾನೀಯಗಳು ಎಲ್ಲವೂ ನಿಮ್ಮ ಮಗುವಿಗೆ ಅದನ್ನೇ ನೀಡುತ್ತಿದ್ದೀರಿ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು! ಆದ್ದರಿಂದ, ತಾಯಿಯಾಗಲಿರುವ ಪ್ರತಿಯೊಬ್ಬ ಮಹಿಳೆಯರೂ ಮಾಡುವ ಸುಲಭವಾದ ತಪ್ಪುಗಳು ಯಾವುವು? ಇಲ್ಲಿ ನೀಡಿರುವ ೭ ದೊಡ್ಡ ದೊಡ್ಡ ತಪ್ಪ್ಪುಗಳು ನಿಸ್ಸಂಶಯವಾಗಿ ಮಾಡಲೇ ಬಾರದವುಗಳಾಗಿವೆ.

೧.ಊಟಗಳ ನಡುವೆ ತುಂಬಾ ಅಂತರವಿರುವುದು

ಗರ್ಭಿಣಿ ಮಹಿಳೆಯರ ಆಹಾರದ ನಡುವೆ ಹೆಚ್ಚು ಅಂತರ ಹಾದುಹೋಗಬಾರದು, ಮತ್ತು ಇನ್ನೂ ಕೆಟ್ಟದಾಗಿ, ಊಟವನ್ನು ಬಿಟ್ಟುಬಿಡುಲೇಬಾರದು! ನೀವು ದಿನದಲ್ಲಿ ೩ ರಿಂದ ೫ ಸಲ ಸಣ್ಣ ಊಟವನ್ನು ತೆಗೆದುಕೊಳ್ಳಬೇಕು, ಮತ್ತು ಮೊಟ್ಟೆ ಹಾಗೂ ಕಚ್ಚಾ ತರಕಾರಿಗಳಂತಹ ಪ್ರೋಟೀನು  ಸಮೃದ್ಧವಾಗಿರುವ ಆಹಾರಗಳನ್ನು ತೆಗೆದುಕೊಳ್ಳಬೇಕು.

೨.ಹೊಟ್ಟೆ ಬಿರಿಯುವಷ್ಟು ತಿಂಡಿಗಳನ್ನು ತಿನ್ನುವುದು

ಹೌದು, ನಾವು ಸಂಪೂರ್ಣವಾಗಿ ನಿಮ್ಮ ಹುಚ್ಚು ಕಡುಬಯಕೆಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ ಆದರೆ ಅದನ್ನು ನೀವು ಪರಿಶೀಲಿಸಿಕೊಂಡು ಇರಬೇಕಾಗುತ್ತದೆ. ಸಾಂದರ್ಭಿಕ ಲಘು ಕುರುಕಲು ಅಥವಾ ಮಧ್ಯರಾತ್ರಿಯ ಐಸ್ಕ್ರೀಮ್ ಸಂಪೂರ್ಣವಾಗಿ ಒಪ್ಪಿಕೊಳ್ಳಬಹುದು. ಆದರೆ ಬರ್ಗರ್ ಮತ್ತು ಪಿಜ್ಜಾಗಳಂತಹ ಜಂಕ್ ಆಹಾರವನ್ನು ನೀವು ಹೆಚ್ಚಾಗಿ ಸೇವಿಸಿದರೆ ನಿಮಗೆ ಮತ್ತು ನಿಮ್ಮ ಮಗುವಿಗೆ ಹಾನಿಕಾರಕವಾಗಿದೆ.

೩.ಹೆಚ್ಚು ಕಾಫಿ ?

ಕೆಫೀನ್ ಗೆ ವ್ಯಸನಿಯಾಗುವುದು ತುಂಬಾ ಸುಲಭ,ಆದರೆ ಮಗು ಹೊರಗೆ ಬರುವಷ್ಟು ದಿನ ನೀವು  ಕೆಫೀನ್ ಸೇವನೆಯನ್ನು ಕಡಿಮೆ ಮಾಡಲೇಬೇಕಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಆರೋಗ್ಯಕರವಾಗಿರುವ ಹಸಿರು ಚಹಾ ಅಥವಾ ನಿಂಬೆ ಚಹಾವನ್ನು ಪ್ರಯತ್ನಿಸಿ.

೪.ಸಾಕಷ್ಟು ನೀರು ಕುಡಿಯುತ್ತಿಲ್ಲ

ಸಾಕಷ್ಟು ನೀರು ಕುಡಿಯದೆ ಇರುವುದರಿಂದ  ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ನಿಮ್ಮ ಗರ್ಭಾವಸ್ಥೆಯಲ್ಲಿ ಗಂಭೀರ ತೊಂದರೆಗಳನ್ನು ಉಂಟುಮಾಡಬಹುದು. ವಾಸ್ತವವಾಗಿ, ನೀವು ಗರ್ಭಿಣಿಯಾಗಿದ್ದಾಗ ನೀರಿನ ಸೇವನೆಯನ್ನು ವೈದ್ಯರು ಸಲಹೆ ಮಾಡುತ್ತಾರೆ!

೫.ಸಾಕಷ್ಟು ನಿದ್ರೆ ಇಲ್ಲದಿರುವುದು

ನಿಮ್ಮ ಮಗುವಿಗಾಗಿ ದಿನವಿಡೀ ಏನು ಮಾಡುವಿರೋ(ನಿಜವಾಗಿ ಏನಾದರೂ ಮಾಡದಿದ್ದರೂ), ನಿಮಗೆ ವಿಶ್ರಾಂತಿ ಮತ್ತು ನಿದ್ರೆ ಬೇಕು. ನಿಮ್ಮ ದೇಹಕ್ಕೆ  ಪ್ರತಿದಿನ ಚೇತರಿಸಿಕೊಳ್ಳಲು ಮತ್ತು ಪುನರ್ಯೌವನಗೊಳಿಸುವುದಕ್ಕೆ ಸಮಯ ಬೇಕಾಗುತ್ತದೆ! ಹೋಗಿ ಮಹಿಳೆಯರೇ, ಆ ಸೌಂದರ್ಯ ನಿದ್ರೆಯನ್ನು ಪಡೆಯಿರಿ.

೬.ದೈಹಿಕವಾಗಿ ಸಕ್ರಿಯವಾಗದೆ ಇರುವುದು

ನೀವು ಮ್ಯಾರಥಾನ್ ಗಾಗಿ ತರಬೇತಾಗದಿದ್ದರೂ ಪರವಾಗಿಲ್ಲ ,ನಿಮ್ಮಿಂದ ಅದನ್ನು ನಿರೀಕ್ಷಿಸಿಲ್ಲ ಅಥವಾ ಅಂತಹ ಸಲಹೆಯನ್ನು ನೀಡುವುದೂ ಇಲ್ಲ. ಆದರೆ ಮಗುವನ್ನು ಪ್ರಸವಿಸಲು ಮ್ಮ ದೇಹವು ಆಕಾರದಲ್ಲಿ ಉಳಿಯಲು ಬೇಕಾದ ಕನಿಷ್ಟ ಚಟುವಟಿಕೆಯ ಅಗತ್ಯವಿರುತ್ತದೆ. ನಿಮ್ಮ ದೇಹದಲ್ಲಿ ರಕ್ತ ಗೊಂಚಲಾಗಬಹುದು, ರಕ್ತನಾಳಗಳು ಉಬ್ಬಿಕೊಳ್ಳಬಹುದು, ಕಾಲಿನ ಉರಿಯೂತ ಸಹ ಉಂಟಾಗಬಹುದು. ಯೋಗದಂತಹ ಮೂಲಭೂತ ಚಟುವಟಿಕೆಗಳು ಮತ್ತು ಕೆಲವೇ ನಿಮಿಷಗಳ ಕಾಲದ ನಡೆದಾಟ ಕೂಡಾ ಫಲಕಾರಿಯಾಗಿದೆ.

೭.ಧೂಮಪಾನ ಮತ್ತು ಮದ್ಯ ಸೇವನೆ

ಸರಿ, ಇದೇನೂ ದೊಡ್ಡ ಬುದ್ಧಿವಂತಿಕೆಯ ವಿಷಯವಲ್ಲ. ನಿಮ್ಮೊಳಗೆ ಮಗುವನ್ನು ಹೊತ್ತುಕೊಂಡು ಹೋಗುವಾಗ ನೀವು ಈ ಎರಡು ಅಭ್ಯಾಸಗಳಿಂದ ದೂರವಿರಬೇಕು.ನಿಮ್ಮ ಮಗು ನೀವು ಮಾಡುವ ಎಲ್ಲವನ್ನೂ ಬಳಸಿಕೊಳ್ಳುತ್ತದೆ – ಮತ್ತು ನಿಮ್ಮ ಮಗುವು ಹುಟ್ಟುವ ಮುಂಚೆ ಹೊಂದಲು ಬಯಸುವ ಕೊನೆಯ ವಸ್ತುವು ಮದ್ಯವಾಗಿರುತ್ತದೆ.

ನಿಮಗೆ ಈ ಮಾಹಿತಿಯು ಪ್ರಸ್ತುತವಾಗಿ ಕಂಡು ಬಂದಲ್ಲಿ ಇತರ ತಾಯಂದಿರೊಂದಿಗೆ ಹಂಚಿಕೊಂಡು ಸಹಾಯ ಮಾಡಿ.

Leave a Reply

%d bloggers like this: