ತಂದೆಯಾಗಲು ನಿರೀಕ್ಷಿಸುವ ವ್ಯಕ್ತಿಯು ಮಾಡಬೇಕಾದ ೫ ಕಾರ್ಯಗಳು

ಮಗುವಿನ ಆಗಮನಕ್ಕಾಗಿ ಕಾದು ಕುಳಿತುಕೊಂಡಿರುವ ತಂದೆ ತಾಯಿಗಳಿಗೆ ಗರ್ಭ ಕಾಲವೆನ್ನುವುದು ಸಂಭ್ರಮಾಶ್ಚರ್ಯಗಳಿಂದ ತುಂಬಿದ ಕಾಲವಾಗಿರುವುದು. ಇದು ದಂಪತಿಗಳ ಪರಸ್ಪರ ಬಾಂಧವ್ಯವನ್ನು ಇನ್ನೂ ಬೆಸೆಯುವಂತೆ ಮಾಡುವ ದಿನಗಳಾಗಿರಬಹುದು. ಮಗುವಿನ ತಂದೆಯೂ, ಮಗುವಿನ ತಾಯಿಯಾಗುವವರಲ್ಲಿ ತೋರಿಸುವ ಪರಿಗಣನೆಯು, ಹೆಂಡತಿಗೆ ಗಂಡನ ಮೇಲಿರುವ ಪ್ರೇಮವನ್ನೂ, ಅಭಿಮಾನವನ್ನು ದುಪ್ಪಟ್ಟುಗೊಳಿಸುವುದು ಮಾತ್ರವಲ್ಲದೆ, ಅವರನ್ನು ನಿರಾತಂಕರಾಗಿಸುವುದು. “ನಿರಾತಂಕ ತಾಯಿ ಆರೋಗ್ಯ ಭರಿತ ಮಗು” ಎನ್ನುವುದನ್ನು ನೀವು ಕೇಳಿಲ್ಲವೇ?

೧.ಅವಳ ಸಹಾಯಕರಾಗಿ

ಗರ್ಭಧಾರಣೆಯು ನಿಮ್ಮಿಬ್ಬರಿಗೂ ಭಾವೋದ್ವೇಗಗಳ ಏರಿಳಿತಗಳಿಂದ ಕೂಡಿದ ಸಮಯವಾಗಿರಬಹುದು. ಈ ಸಮಯಗಳಲ್ಲಿ ಮಗುವಿನ ತಾಯಿಯಾಗುವವರ ಮಾನಸಿಕ ತುಮುಲಗಳ ಬಗ್ಗೆ, ಎಂದರೆ ಅವರ ಪ್ರಸವದ ನೋವು, ಅದರ ಭಯ ಅಥವಾ ಮಾನಸಿಕ ಅಸುರಕ್ಷತೆಯ ಬಗ್ಗೆ ಚರ್ಚಿಸುವುದರಿಂದ, ಅವರ ಸುಖ ದುಃಖಗಳಲ್ಲಿ ನೀವೂ ಭಾಗಿಯಾಗಿರುವಿರೆಂಬ ವಿಶ್ವಾಸವನ್ನು ನೀಡುವುದು. ಅವರೊಂದೀಗೆ ಅತ್ತು, ಅವರ ನೋವಿಗೆ ಸ್ಪಂದಿಸಿ. ಅವರ ಪ್ರತಿ ಗಳಿಗೆಯಲ್ಲೂ, ನೀವು ಭಾಗಿಯಾಗಿದ್ದೀರೆಂದು ತಿಳಿಯಪಡಿಸಿ.

೨.ಪ್ರಸವ ಪೂರ್ವ ತರಗತಿಗಳಿಗೆ ದಾಖಲಾಗಿ

ನಿಮ್ಮ ಪತ್ನಿಯ ಪ್ರಸವ ಪೂರ್ವ ತರಬೇತಿಯ ತರಗತಿಗಳಿಗೆ ಪಾಲ್ಗೊಳ್ಳಲು ಬಯಸಿದರೆ, ಅವರೊಂದಿಗೆ ನೀವೂ ಆ ತರಗತಿಗಳಲ್ಲಿ ಭಾಗಿಯಾಗಿ. ಎಲ್ಲ ತರಗತಿಗಳಲ್ಲೂ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೂ, ಸಮಯ ಸಿಕ್ಕಾಗಲೆಲ್ಲ ಅವರೊಂದಿಗೆ ಸಾಥ್ ನೀಡಿ. ಅದು ಕ್ಲಾಸನ್ನಾದರೂ ಹಾಜರಾಗಲು ಪ್ರಯತ್ನಿಸಿ.ಈ ತರಗತಿಗಳು ನಿಮಗೂ ಮುಂದೆ ಅನುಕೂಲವಾಗುವುದು.

ಮೊದಲ ಅಲ್ಟ್ರಾಸೌಂಡ್ ಪರೀಕ್ಷೆಗೆ ಹೊರಡುವಾಗಲೂ ನೀವು ಜತೆ ನೀಡಿ. ಮಗುವಿನ ಎದೆ ಬಡಿತವನ್ನು ಮೊತ್ತ ಮೊದಲ ಬಾರಿಗೆ ಆಲಿಸುವ ಅತ್ಯಪೂರ್ವ ನಿಮಿಷಗಳನ್ನು ಒಟ್ಟಿಗೆ ಅನುಭವಿಸಿ. ಅವರ ಪ್ರಸವದ ದಿನಗಳು ಹತ್ತಿರ ಬರುತ್ತಿದ್ದಂತೆ ಅವರೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ.

೩.ಪ್ರಸವದ ಬಗೆಗಿನ ಚರ್ಚೆ

ಪ್ರಸವದ ಬಗ್ಗೆ ಅವರ ಮನಸ್ಸಿನ ಲೆಕ್ಕಾಚಾರಗಳನ್ನು ವಿವರವಾಗಿ ಕೇಳಿ ತಿಳಿಯಿರಿ ಎಂದರೆ ಪ್ರಸವದ ಸಮಯದಲ್ಲಿ ಅವರು ಯಾರ ಸಾನ್ನಿಧ್ಯವನ್ನು ಬಯಸುತ್ತಿದ್ದಾರೆ ? ಛಾಯಾ ಚಿತ್ರ ತೆಗೆಯಬೇಕೆ… ಬೇಡವೇ..? ರಕ್ತವನ್ನು ಕಂಡರೆ ತಲೆಸುತ್ತು ಬರುವ ನೀವು, ಪ್ರಸವಕ್ಕೆ ಸಾಕ್ಷಿಯಾಗಿದ್ದರೆ ಅವರಿಗೇನಾದರೂ ಸಂಕಟ ಉಂಟಾಗಬಹುದೇ. ಇವೇ ಮೊದಲಾದ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿ. ಇದರಿಂದ ಸನ್ನಿವೇಶಗಳಿಗೆ ಅನುಸಾರವಾಗಿ ಕಾರ್ಯಗಳ ತಯಾರಿ ನಡೆಸಬಹುದು. ಉದಾಹರಣೆಗೆ, ಪ್ರಸವದ ವೇಳೆ ತಾಯಿಯು ಜೊತೆಯಲ್ಲಿರಬೇಕೆಂದು ಹೆಂಡತಿ ಹೇಳಿದರೆ, ತಾಯಿಯಲ್ಲಿ ಹೆರಿಗೆ ವಾರ್ಡಿನಲ್ಲಿರುವಂತೆ ಹೇಳಿಡಬಹುದು.

೪.ಎಲ್ಲೆಂದರಲ್ಲಿ ಯಾವಾಗೆಂದರಲ್ಲಿ ಸಹಾಯಮಾಡಿ

ಯಾವಾಗೆಲ್ಲ ಸಾಧ್ಯವಾಗುವುದೋ.. ಆವಾಗೆಲ್ಲ ತಾಯಿಯಾಗಲಿರುವ ನಿಮ್ಮ ಪತ್ನಿಗೆ ಸಹಾಯ ಹಸ್ತ ನೀಡಿರಿ. ಅವರಿಗಾಗಿ ಬೆಳಗಿನ ಉಪಾಹಾರವನ್ನು ತಯಾರಿಸಿ ಅವರೊಂದಿಗೆ ಸೇವಿಸಿರಿ. ಅವರು ಬಯಸಿದಾಗಲೆಲ್ಲ ತಿನ್ನಲು, ಸಾಧ್ಯವಾಗುವಂತೆ ಮನೆಯಲ್ಲಿ ವಿಟಮಿನ್ ಭರಿತವಾದ ಆಹಾರವನ್ನು ತಂದೆ ಅವರ ಹೊಸ ರೀತಿಯ ಆಹಾರ ಅಭ್ಯಾಸಗಳನ್ನು ನೀವೂ ಅಭ್ಯಾಸ ಮಾಡಿರಿ. ಜಂಕ್ ಫುಡ್, ಹಾಲು ಜಂಕ್ ಫುಡ್ ಹಾಗೂ ಎಣ್ಣೆ ಭರಿತವಾದ ಚಿಪ್ಸ್ ಗಳನ್ನು ಖರೀದಿಸಿ ಮನೆಗೆ ತರದಿರಿ.

ನಿಮ್ಮ ಪತ್ನಿಯಲ್ಲಿ, ಪ್ರತಿನಿತ್ಯ ನಡೆದಾಡುವಂತೆ ವೈದ್ಯರು ಆದೇಶಿಸಿದ್ದಲ್ಲಿ, ಅವರೊಂದಿಗೆ ನೀವೂ ನಡೆಯಿರಿ. ಮಗುವಿನ ಪ್ರಸವದ ನಂತರವೂ ಈ ಅಭ್ಯಾಸವನ್ನು ಮುಂದುವರೆಸಿ.

ಮಗುವಿನ ಡಯಾಪರ್ ಅನ್ನು ಬದಲಾಯಿಸುವಲ್ಲಿ ಕೂಡ ನಿಮ್ಮ ಜವಾಬ್ದಾರಿಯನ್ನು ಮರೆಯದಿರಿ.

ಪ್ರಸವದ ದಿನಗಳಲ್ಲಿ ಹೆಚ್ಚು ಶ್ರಮದಾಯಕ ಕೆಲಸಗಳನ್ನು ಮಾಡಲು ಅಶಕ್ತರಾದ, ನಿಮ್ಮ ಪತ್ನಿಯ ಜವಾಬ್ದಾರಿಗಳನ್ನು, ಕೆಲಸಗಳನ್ನು ನೀವು ಅವರಿಗೆ ಹೊರೆ ಆಗದಿರಲೆಂದು ಹಂಚಿಕೊಳ್ಳುವುದು ನಿಮ್ಮ ಪ್ರೇಮದ ದ್ಯೋತಕ. 

೫.ಅವರ ಸೌಂದರ್ಯವನ್ನು ಮೆಚ್ಚಿ ಹೊಗಳಿರಿ

ಗರ್ಭಿಣಿಯ ಶರೀರವು ದಪ್ಪಗಾಗುವುದರಿಂದ, ಅವರು ಸ್ವಲ್ಪ ಆಕರ್ಷಣೆ ಕಳೆದುಕೊಂಡಿರಬಹುದು. ಇದು, ಮಾನಸಿಕವಾಗಿ ಬಹಳವಾಗಿ ಕುಗ್ಗುವ ದಿನಗಳಾಗಿರಬಹುದು. ಆದರೆ ಅವರು ನಿಜವಾಗಿಯೂ ಎಷ್ಟೊಂದು ಸೌಂದರ್ಯವತಿ ಎಂದು ನೀವು ಬಲ್ಲಿರಿ. ನಿಮ್ಮ ಜೀವದ ಎಳೆಯೊಂದನ್ನು ಉದರದಲ್ಲಿ ಭರಿಸಿದ ಅವರು ಸೌಂದರ್ಯ ರಾಣಿ ಅಲ್ಲದೆ ಮತ್ತಿನ್ನೇನು?

Leave a Reply

%d bloggers like this: