ಮಗು ಆದಮೇಲೆ ಎದೆಹಾಲು ಉತ್ಪತ್ತಿ ಆಗುವುದು ಯಾವಾಗ?

ನೀವು ಹೆರಿಗೆ ನೋವು ಮತ್ತು ಹೆರಿಗೆಯಂತಹ ಮಾನಸಿಕವಾಗಿ ಹಾಗು ದೈಹಿಕವಾಗಿ ಆಯಾಸವಾದ ಪ್ರಕ್ರಿಯೆಗೆ ಸಿದ್ಧಗೊಳ್ಳುತ್ತಿರುವಾಗ ಕೆಲವೊಂದು ವಿಷಯಗಳನ್ನ ಪರಿಗಣನೆಗೆ ತೆಗೆದುಕೊಳ್ಳುವುದು ಮರೆತುಬಿಡಬಹುದು. ಇದು ತಪ್ಪಲ್ಲ, ಮಗು ಬರುವ ಖುಷಿಯಲ್ಲಿ ಮತ್ತು ಅದಕ್ಕೆ ತಯಾರು ಮಾಡಿಕೊಳ್ಳುವ ತರಾತುರಿಯಲ್ಲಿ ಕೆಲವು ವಿಷಯಗಳನ್ನ ಮರೆಯುವುದು ಸಹಜ. ಹೀಗಾಗಿ ನೀವು ಇಲ್ಲಿಯವರೆಗೆ ಈ ಪ್ರಶ್ನೆಯನ್ನು ನಿಮ್ಮಲ್ಲಿ ಕೇಳಿಕೊಳ್ಳದಿದ್ದರೆ ಅಥವಾ ಬೇರೆಯವರಿಗೆ ಕೇಳಿರದಿದ್ದರೆ, ಈಗ ಕೇಳಿಕೊಳ್ಳಿ “ಮಗು ಹುಟ್ಟಿದ ಮೇಲೆ ಎದೆಹಾಲು ಉತ್ಪತ್ತಿ ಆಗುವುದು ಯಾವಾಗ?”.

ಬಹಳಷ್ಟು ಜನ ಮಗು ಹುಟ್ಟಿದೊಡನೆ ಎದೆಹಾಲು ಉಕ್ಕುತ್ತದೆ ಎಂದು ಭಾವಿಸಿರುತ್ತಾರೆ. ಆದರೆ, ದುರದೃಷ್ಟವಶಾತ್, ಇದು ಆ ಥರ ಆಗೋದಿಲ್ಲ.

ಒಂದು ಹೆಣ್ಣಿನ ಎದೆಹಾಲು ಸಹಜವಾಗಿ ಮಗುವಾದ ಎರಡು-ಮೂರು ದಿನಗಳಲ್ಲಿ ಉತ್ಪತ್ತಿ ಹೊಂದಲು ಶುರು ಆಗುತ್ತದೆ. ಆದರೆ, 25% ಅಷ್ಟು ತಾಯಂದಿರಿಗೆ ಮೂರು ದಿನಗಳಿಗಿಂತ ಜಾಸ್ತಿಯೇ ಬೇಕಾಗುತ್ತದೆ. ಆದರೆ ಸರ್ವ ಪೋಷಕಾಂಶಗಳನ್ನು ಮತ್ತು ರೋಗ ನಿರೋಧಕ ಪ್ರತಿಕಾಯಗಳನ್ನು ಹೊಂದಿರುವ ಇನ್ನೊಂದು ರೀತಿಯ ಗಟ್ಟಿ ಹಾಲು ಆದ ಕೊಲೊಸ್ಟ್ರಮ್ ಗರ್ಭಧಾರಣೆಯ 16-22 ವಾರಗಳಲ್ಲಿಯೇ ಉತ್ಪತ್ತಿ ಹೊಂದಲು ಶುರು ಆಗುತ್ತದೆ. ಹೀಗಾಗಿ, ತಾಂತ್ರಿಕವಾಗಿ ನೀವು ಮಗುವಿಗೆ ಜನ್ಮ ನೀಡುವ ಮೊದಲೇ ನಿಮ್ಮಲ್ಲಿ ಎದೆಹಾಲು ಇರುತ್ತದೆ, ಆದರೆ ಅದು ಸೋರುವುದಾಗಲಿ, ಹೊರಬರುವುದಾಗಲಿ ಆಗುವುದಿಲ್ಲ, ಹೀಗಾಗಿ ನಿಮಗದು ತಿಳಿದಿರುವುದಿಲ್ಲ.

ಹೀಗಾಗಿ, ನಿಮ್ಮ ಮಗುವಿಗೆ ನಿಮ್ಮಿಂದ ಎದೆಹಾಲು ಸಿಗುವವರೆಗೂ, ಜನಿಸಿದ ಮೊದಲ ಕೆಲವು ದಿನಗಳು ಅದು ಕೊಲೊಸ್ಟ್ರಮ್ ಅನ್ನು ಸೇವಿಸಬೇಕಾಗುತ್ತದೆ. ಈ ಕೊಲೊಸ್ಟ್ರಮ್ ತುಂಬಾ ಉಪಯುಕ್ತ.

ಕೊಲೊಸ್ಟ್ರಮ್ ಬಗ್ಗೆ ಮಾಹಿತಿ

೧. ಇದು ಬಣ್ಣದಲ್ಲಿ ಹಳದಿಯಿಂದ ಕಿತ್ತಳೆ ಬಣ್ಣದಷ್ಟು ಗಾಢವಾಗಿದ್ದು, ಇದು ಗಟ್ಟಿಯಿರುತ್ತದೆ ಮತ್ತು ಅಂಟಂಟು ಇರುತ್ತದೆ.

೨. ಇದು ಅಪಾರ ಕೊಬ್ಬಿನಾಂಶ, ಅಪಾರ ಕಾರ್ಬೋಹೈಡ್ರೇಟ್, ಪ್ರೋಟೀನ್, ಪ್ರತಿಕಾಯಗಳನ್ನು ಹೊಂದಿರುತ್ತದೆ.

೩. ಇದು ಜೀರ್ಣಿಸಿಕೊಳ್ಳುವುದಕ್ಕೆ ತುಂಬಾನೇ ಸುಲಭ, ಹೀಗಾಗಿ ಇದು ನಿಮ್ಮ ಮಗುವಿಗೆ ಮೊದಲ ಬಾರಿ ನೀಡಲು ಅತ್ಯುತ್ತಮವಾದ ಆಹಾರ.

೪. ಇದು ನಿಮ್ಮ ಮಗುವಿಗೆ ಮಲವಿಸರ್ಜನೆ ಮಾಡಲು ಸಹಕಾರಿ ಆಗಿ, ಹೆಚ್ಚುವರಿ ಬೈಲಿರುಬಿನ್ ಅನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡಿ, ನಿಮ್ಮ ಮಗುವನ್ನು ಜಾಂಡೀಸ್ ಇಂದ ಕಾಪಾಡುತ್ತದೆ.

ಎದೆಹಾಲು ಉತ್ಪತ್ತಿ

ನೀವು ನಿಮ್ಮ ಎದೆಹಾಲಿನ ಉತ್ಪತ್ತಿ ಬಗ್ಗೆ ಆತಂಕ ಹೊಂದಿದ್ದರೆ, ನೀವು ನಿಮ್ಮ ಎದೆಹಾಲಿನ ಉತ್ಪತ್ತಿ ಬೇಗ ಶುರು ಆಗುವಂತೆ ಮಾಡಲು ಇರುವ ಒಂದು ದಾರಿ ಎಂದರೆ, ಅದು ನಿಮ್ಮ ಮಗುವಿಗೆ ಮೊದಲ ಕೆಲವು ದಿನಗಳವರೆಗೆ ಆಗಾಗ ಪದೇ ಪದೇ ಹಾಲು ಕುಡಿಸುವುದು. ನೀವು ನಿಮ್ಮ ಮಗುವಿಗೆ ಪ್ರತಿ ಎರಡು ಘಂಟೆಗಳಿಗೆ ಒಮ್ಮೆ ಹಾಲುಣಿಸುವುದರಿಂದ ನೀವು ನಿಮ್ಮ ಎದೆಹಾಲಿನ ಉತ್ಪತ್ತಿಗೆ ಉತ್ತೇಜನ ನೀಡಬಹುದು. ಏಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ಸ್ತನಗಳಲ್ಲಿ ಪ್ರೊಲಾಕ್ಟಿನ್ ಚಟುವಟಿಕೆ ಜಾಸ್ತಿ ಆಗುತ್ತದೆ ಹಾಗು ಇದು ಆರೋಗ್ಯಕರ ಹಾಲಿನ ಉತ್ಪತ್ತಿಗೆ ಉತ್ತೇಜನ ನೀಡುತ್ತದೆ.

ದಿನಗಳು ಕಳೆದಂತೆ ನಿಮ್ಮ ಹಾಲಿನ ಪ್ರಮಾಣ ಹೆಚ್ಚುತ್ತದೆ ಹಾಗು ಇದು ನೀವು ತಾಯಿ ಆಗುತ್ತಿರುವುದು ಎಷ್ಟನೇ ಬಾರಿ ಎಂಬುದರ ಮೇಲೆ ಅವಲಂಬಿತ ಆಗಿರುತ್ತದೆ. ನೀವು ಮೊದಲ ಬಾರಿಗೆ ತಾಯಿ ಆಗಿದ್ದರೆ, ಹೆರಿಗೆ ನಂತರದ ಮೂರು ನಾಲ್ಕು ದಿನಗಳ ನಂತರ ನಿಮ್ಮ ಎದೆಹಾಲು ಹೆಚ್ಚುತ್ತಿರುವುದು ಕಾಣಬಹುದು ಮತ್ತು ನಿಮ್ಮ ಸ್ತನಗಳು ಸ್ಥಿರವಾಗಿ, ತುಂಬಿಕೊಂಡು, ಭಾರ ಆಗುತ್ತವೆ. ಅದೇನೇ ಇದ್ದರು ನಿಮ್ಮ ಮಗುವಿಗೆ 10 ದಿನಗಳಲ್ಲಿ ಬೇಕಾದಷ್ಟು ಹಾಲು ದೊರೆಯುವುದು. 

Leave a Reply

%d bloggers like this: