ಮನೋ ಇಂಗಿತವನ್ನು ಹೊರಹಾಕುವ ಪ್ರಿಯಕರನ ನಡವಳಿಕೆಗಳು

ಮತ್ತೊಬ್ಬರನ್ನು ಇಕ್ಕಟ್ಟಿಗೆ ಸಿಲುಕಿಸುವುದರಲ್ಲಿ ನಮ್ಮಷ್ಟು ಚಾಣಾಕ್ಷತನ ಬೇರೆ ಯಾರಿಗಿದೆ ಹೇಳಿ ? ಉದ್ದೇಶ ಏನೇ ಆಗಿರಲಿ..’ಮುಂದೊಂದು ಹಿಂದೊಂದು’ ಎಂಬ ರೀತಿಯ ತೋರ್ಪಡಿಕೆಯಾಗಿರಲಿ, ನಮ್ಮ ಶರೀರ ಭಾಷೆಯು ನಮ್ಮ ಮನದಾಳವನ್ನು ಹೊರಹಾಕುತ್ತದೆ. ನಿಮ್ಮ ಪ್ರಿಯತಮನ ನಿರೀಕ್ಷೆಯೇನೆಂದು ಹಲವು ಸಲ ನೀವು ಗೊಂದಲಕ್ಕೊಳಗಾಗಿರಬಹುದು. ಸೋಗಿನ ಮುಖವಾಡ ಧರಿಸಿ ಭಾವನೆಗಳನ್ನು ಮರೆ ಮಾಚಬಹುದೇನೋ. ಆದರೆ, ನಮ್ಮ ಶರೀರ ಭಾಷೆಯೇ ನಮ್ಮ ಮನೋ ಇಂಗಿತವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ನಿಮ್ಮ ಪ್ರಿಯತಮನ ನಡವಳಿಕೆಯಿಂದ ಅವರ ಮನದಾಳವನ್ನು ತಿಳಿಯಿರಿ.

೧.ನಿಮ್ಮ ಮುಖದ ಸ್ಪರ್ಶ

ನಿಮ್ಮನ್ನು ಪ್ರಣಯಿಸುವ ವ್ಯಕ್ತಿಯು ಯಾವುದಾದರೊಂದು ರೀತಿಯಲ್ಲಿ ನಿಮ್ಮೊಂದಿಗೆ ಸಮಯ ಕಳೆಯಲು ಇಚ್ಛಿಸುತ್ತಾರೆ. ನಿಮ್ಮೊಂದಿಗೆ ಮಾತನಾಡುವಾಗ ನಿಮ್ಮ ಗಲ್ಲವನ್ನು ನೇವರಿಸುತ್ತಿದ್ದರೆ ಅಥವಾ ನಿಮ್ಮನ್ನು ಕಣ್ಣೆವೆಯಿಕ್ಕದೇ ದೃಷ್ಟಿಸುತ್ತಿದ್ದರೆ ನಿಮ್ಮನ್ನು ಗಾಢವಾಗಿ ಪ್ರೇಮಿಸುತ್ತಿದ್ದಾರೆಂದೂ, ಪ್ರಿಯತಮೆಯ ಸಾನ್ನಿಧ್ಯ ಹಾಗೂ ಸಹವಾಸವನ್ನೂ ಸದಾ ಬಯಸುತ್ತಾನೆಂದೂ ತಿಳಿಸುತ್ತದೆ. ನಿಮ್ಮ ಪ್ರಿಯತಮನ ನಾಚಿಕೆಯ ಸ್ವಭಾವದವರಾಗಿದ್ದರೆ, ನಿಮ್ಮನ್ನು ಸ್ಪರ್ಧಿಸಲಿರುವ ಧೈರ್ಯ ಬಾರದೇ, ನಿಮ್ಮ ಗಲ್ಲದ ಮೇಲಿರುವ ಧೂಳನ್ನು ತಟ್ಟುವಂತೆ ನೆವ ಮಾಡಿ ನಿಮ್ಮನ್ನು ಸ್ಪರ್ಶಿಸುವರು.

೨.ನಿಮ್ಮ ತಲೆಗೂದಲ ನೇವರಿಕೆ

ನಿಮ್ಮ ಪ್ರಿಯತಮನು ನಿಮ್ಮ ತಲೆಗೂದಲಲ್ಲಿ ಆಟವಾಡ ಬಯಸುವವರು. ನಿಮ್ಮ ತಲೆ ಕೂದಲ ಸುವಾಸನೆಯಿಂದ ಅವರು ನಿಮ್ಮತ್ತ ಆಕರ್ಷಿತರಾಗುವರು. ಅವರು ನಿಮ್ಮ ತಲೆಗೂದಲಿನೊಂದಿಗೆ ಆಟವಾಡುವಾಗ ನಿಮ್ಮ ಪ್ರತಿಕಿೃಯೆಯು ನೀವು ಅವರೊಂದಿಗೆ ಎಷ್ಟೊಂದು ಗಾಢವಾದ ಹೊಂದಿದ್ದಾರೆಂದು ಮಾನಸಿಕವಾಗಿ ಅವರನ್ನು ಎಷ್ಟೊಂದು ಹಚ್ಚಿಕೊಂಡಿದ್ದರಿಂದ ಅವರು ಅರಿತುಕೊಳ್ಳುವರು.

೩.ನಿಮ್ಮ ಕರ ಸ್ಪರ್ಶ

ನಿಮ್ಮ ಕರಗಳನ್ನು ಹಿಡಿದುಕೊಳ್ಳುವ ಗಂಡನು ಅಥವಾ ಪ್ರಿಯತಮನು, ನಿಮ್ಮೊಂದಿಗೆ ಭಾವನಾತ್ಮಕವಾಗಿ ಬಂಧಿತನಾಗಿದ್ದಾರೆಂದು ನೀವು ತಿಳಿದುಕೊಳ್ಳಬಹುದು.ನಿಮ್ಮ ಕೈಗಳನ್ನು ಹಿಡಿದುಕೊಳ್ಳುವ ರೀತಿಯಿಂದಲೇ ಅವರ ನಿರೀಕ್ಷೆಗಳು ಏನೆಂದು ಅರ್ಥ ಮಾಡಿಕೊಳ್ಳಬಹುದು. ಗಾಢವಾದ ಕರಗಳ ಬಂಧನವು ನಿಮ್ಮಿಬ್ಬರ ಆಳವಾದ ಪ್ರಣಯವನ್ನು ಸೂಚಿಸುತ್ತದೆ.

೪.ನಿಮ್ಮ ಕಾಲ್ಗಳು

ನಿಮ್ಮ ನಾಯಕನು ನಿಮ್ಮನ್ನು ಪೂರ್ಣ ಪ್ರಮಾಣದಲ್ಲಿ ಪ್ರಣಯಿಸುತ್ತಿದ್ದರೆ, ಎಷ್ಟು ಸಾಧ್ಯವಾಗುವುದು ಅಷ್ಟರ ಮಟ್ಟಿಗೆ ನಿಮ್ಮೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಳ್ಳುವರು. ನಿಮ್ಮ ಕೈಗಳನ್ನೂ, ಕರಗಳನ್ನು ಸ್ಪರ್ಶಿಸುವ ಅದೇ ಭಾವನೆಯೊಂದಿಗೆ ನಿಮ್ಮ ಕಾಲುಗಳನ್ನು ಸ್ಪರ್ಶಿಸುವರು. ಸಾಧಾರಣವಾಗಿ ಗಂಡಸರು ಅಚಾನಕ್ ಎಂಬಂತೆ ನಿಮ್ಮ ಕಾಲುಗಳನ್ನು ಸ್ಪರ್ಶಿಸಿ, ನಿಮ್ಮ ಪ್ರತಿಕ್ರಿಯೆಯನ್ನು ಅಳೆಯುತ್ತಾರೆ. ನಿಮ್ಮ ಪ್ರತಿಕ್ರಿಯೆಯೇ ಅವರ ಮುಂದಿನ ಹೆಜ್ಜೆಯ ಹಸಿರು ನಿಶಾನೆ.

೫.ನಿಮ್ಮತ್ತ ಬೀರುವ ನೋಟ

ನಾವು ಪ್ರೀತಿಸುವ ಯಾವುದೇ ವಸ್ತುಗಳನ್ನು ನೋಡಿದರೂ ನಮ್ಮ ಕಣ್ಣುಗಳು ಸಂತೋಷದಿಂದ ಅರಳುತ್ತವೆ. ಅರಳಿದ ಕಣ್ಣುಗಳ ಕುಡಿ ನೋಟದೊಂದಿಗೆ, ಮನದಾಳದ ಸಂತೃಪ್ತಿಯನ್ನು ಸಂತೋಷವನ್ನು ಹೊರಚೆಲ್ಲುವ ಮಂದಹಾಸವೂ ಅವರ ತುಟಿಯಂಚಿನಲ್ಲಿದ್ದರೆ, ಅವರು ನಿಮ್ಮಲ್ಲಿ ಫಿದಾ ಆಗಿದ್ದಾರೆಂದಲ್ಲದೇ…. ಬೇರಿನ್ನೇನು?

೬.ಹುಬ್ಬುಗಳಿಂದ ಮಾತು

ಇದು “ನಿನ್ನ ಮಾತುಗಳನ್ನು ನಾನು ಆಲಿಸುತ್ತಿದ್ದೇನೆ”-ಎನ್ನುವುದರ ಸೂಚಕ. ಸಾಮಾನ್ಯವಾಗಿ ಗಂಡಸರು ಉತ್ತಮ ಶ್ರೋತೃಗಳು ಹಾಗೂ ಸ್ತ್ರೀಯರು ವಾಗ್ಮಿಗಳೂ ಆಗಿರುತ್ತಾರೆ. ನನ್ನ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲವೆಂದು ಕೋಪಗೊಳ್ಳುವ ಮೊದಲು ಅವರನ್ನು ಒಂದು ಕ್ಷಣ ನಿರೀಕ್ಷಿಸಿ. ಅವರು ಆಗಾಗ ತಮ್ಮ ಹುಬ್ಬುಗಳನ್ನೆತ್ತುತ್ತಿದ್ದರೆ, ನಿಮ್ಮ ಮಾತುಗಳನ್ನು ಅರ್ಥ.

೭.ಸಾಮಾಜಿಕ ಜಾಲಗಳ ಮೂಲಕ ಸಂಪರ್ಕ

ವಿಜ್ಞಾನವು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದಂತೆ, ತನ್ನ ಪ್ರಾಣ ಸಖಿಯೊಂದಿಗೆ ಸಾಮಾಜಿಕ ಜಾಲಗಳಾದ ಫೇಸ್ ಬುಕ್ ಹಾಗೂ ವಾಟ್ಸಪಗಳೊಂದಿಗೆ ಸಂಪರ್ಕದಲ್ಲಿಟ್ಟು ಕೊಳ್ಳಲು ಪ್ರಯತ್ನಿಸುವರು. ಶಾರೀರಿಕವಾಗಿ ನಿಮ್ಮ ಸನಿಹದಲ್ಲಿಲ್ಲದೇ ಹೋದರೂ, ಸಾಮಾಜಿಕ ಜಾಲಗಳೊಂದಿಗೆ ನಿಮ್ಮ ಸಾನ್ನಿಧ್ಯವನ್ನು ಅನುಭವಿಸುವರು.

ನಿಮ್ಮೊಂದಿಗೆ ಇಂತಹ ವ್ಯವಹಾರಗಳನ್ನು ಮಾಡುವ ಪ್ರಿಯತಮನು ನಾನು ನಿನ್ನನ್ನು ಬಹಳವಾಗಿ ಹಚ್ಚಿಕೊಂಡಿದ್ದೇನೆಂದು ಇನ್ನು ಹೇಗೆ ತಿಳಿಯಪಡಿಸುವನು?

Leave a Reply

%d bloggers like this: