ಹೆರಿಗೆ ನೋವು ಎಂದರೇನು ಮತ್ತು ಇದು ಹೇಗೆ ಆಗುತ್ತದೆ? ಎಳೆ ಎಳೆಯಾಗಿ ವಿವರಣೆ!

ನಿಮ್ಮ ಗರ್ಭಾವಸ್ಥೆಯಲ್ಲಿ, ನಿಮ್ಮ ಮಗುವು ಆಮ್ನಿಯೋಟಿಕ್ ಚೀಲ ಎಂದು ಕರೆಯಲ್ಪಡುವ ದ್ರವ ತುಂಬಿದ ಚೀಲದಿಂದ ಅವರಿಸಲ್ಪಟ್ಟಿರುತ್ತದೆ. ನಿಮ್ಮ ಪ್ರಸವದ ಪ್ರಾರಂಭದಲ್ಲಿ, ಕುಗ್ಗುವಿಕೆಗಳ ಜೊತೆಗೆ, ನಿಮ್ಮ ಆಮ್ನಿಯೋಟಿಕ್ ಚೀಲದ ಪೊರೆಯು ಮುರಿಯಲ್ಪಡುತ್ತದೆ. ಇದರಿಂದ ನಿಮ್ಮ ದೇಹದಿಂದ ಬಣ್ಣವಿಲ್ಲದ ದ್ರವವು ಹೊರಬರುತ್ತದೆ, ಇದನ್ನು ನೀರಿನ ಒಡೆತ ಎಂದು ಸಹ ಕರೆಯಲಾಗುತ್ತದೆ.

ಗರ್ಭಾವಸ್ಥೆಯಲ್ಲಿ ಪೊರೆಯ ಪ್ರಾಮುಖ್ಯತೆ

ಗರ್ಭಾವಸ್ಥೆಯಲ್ಲಿ ಮಗುವನ್ನು ರಕ್ಷಿಸಲು ಪೊರೆಯು ಅಸ್ತಿತ್ವವನ್ನು ಪಡೆಯುತ್ತದೆ .ಹೊರಗಿನ ತಳ್ಳುವಿಕೆಗಳು ,ಸೂಕ್ಷ್ಮಜೀವಿಗಳು ಮತ್ತು ಹೊರಗಿನ ಸೋಂಕುಗಳಿಂದ ಶಿಶುಗಳಿಗೆ ಪೊರೆ ರಕ್ಷಣೆ ನೀಡುತ್ತದೆ. ಪೊರೆಯಲ್ಲಿ, ಶಿಶುವಿಗೆ ತನ್ನ ಕೈಗಳನ್ನು ಮತ್ತು ಪಾದಗಳನ್ನು ಸರಿಸಲು ಸ್ಥಳಾವಕಾಶವಿದೆ.

ನೀರು ಒಡೆದಾಗ ಹೇಗನ್ನಿಸುತ್ತದೆ ?

ಹೆಚ್ಚಿನ ಮಹಿಳೆಯರು ತಮ್ಮ ನೀರು ಒಡೆಯುವ ಮುನ್ನ ಮೊದಲು ಸಾಮಾನ್ಯ ಅಥವಾ ಸಾಧಾರಣ ತೀವ್ರತೆಯ ಸಂಕೋಚನಗಳನ್ನು ಅನುಭವಿಸುತ್ತಾರೆ, ಇದು ಅವರಿಗೆ ಅದರ ಬಗ್ಗೆ ಸೂಚನೆ ನೀಡುತ್ತದೆ. ಕೆಲವು ಮಹಿಳೆಯರಲ್ಲಿ,ಪ್ರಸವದ ಕೊನೆಯ ಹಂತದಲ್ಲಿ ನೀರಿನ ಮುರಿದರೆ,ಅವರು ನೀರಿನ ಒಡೆತವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ.

ನಿಮ್ಮ ನೀರು ಒಡೆದಾಗ ನಿಮ್ಮ ದೇಹದಿಂದ ಏನಾದರೂ ಬೀಳುವಂತಹುದು -ನಿಮ್ಮಿಂದ ಏನಾದರೂ ಹರಿಯುವಂತಹ ಅನುಭವ ಉಂಟಾಗಬಹುದು .

ನೀರು ಮತ್ತು ಮೂತ್ರದ ನಡುವಿನ ವ್ಯತ್ಯಾಸಗಳೇನು ?

ನೀರು ಮತ್ತು ಮೂತ್ರದ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು, ನೀವು ಶುಷ್ಕ ಒಣಗಿದ ಒಳಬಟ್ಟೆಯನ್ನು ಧರಿಸಬೇಕು. ಅದರ ಮೇಲೆ ಮೆತ್ತೆ (ಪ್ಯಾಡ್ ) ಅಥವಾ ಪ್ಯಾಂಟಿ ಲೈನರ್ ಅನ್ನು ಧರಿಸಬೇಕು. ಅವು ಯಾವುದೂ ನಿಮ್ಮಲ್ಲಿ ಇಲ್ಲದಿದ್ದರೆ ಶುಚಿಯಾದ ಹತ್ತಿಯ ಬಟ್ಟೆಯನ್ನು ಮಡಿಕೆಗಳನ್ನಾಗಿಸಿ ನಿಮ್ಮ ಒಳಬಟ್ಟೆಯ ಒಳಗಿರಿಸಬೇಕು. ಇದರ ನಂತರ, ನೀವು ಅರ್ಧ ಘಂಟೆಯವರೆಗೆ ಅಂಗಾತ ಮಲಗಿರಿ. ನಿಮ್ಮ ಯೋನಿಯಿಂದ ಬಿಡುಗಡೆಯಾದ ನೀರು ಇದ್ದರೆ, ಅದು ಯೋನಿಯ ಹತ್ತಿರ ಕೂಡಿರುತ್ತದೆ.

ನೀರಿನ ಒಡೆತದ ನಂತರ ನೀವು ಎಷ್ಟು ಹೊತ್ತು ನಿಭಾಯಿಸಬಲ್ಲಿರಿ ?

ನೀರು ಒಡೆದ ನಂತರ ೨೪ ಗಂಟೆಗಳೊಳಗೆ ಗರ್ಭಿಣಿ ಮಹಿಳೆಯರಿಗೆ ಜನ್ಮ ನೀಡಲು ಸಲಹೆ ನೀಡಲಾಗುತ್ತದೆ.ಆದರೆ ಈ ದಿನಗಳಲ್ಲಿ, ಮಹಿಳೆಯರು ತಮ್ಮ ಅನುಕೂಲಕ್ಕೆ ಹೊಂದಿಕೊಂಡು ಜನ್ಮ  ನೀಡಬಹುದು.

ನೀರಿನ ಬಣ್ಣ ಏನು? ಅದು ಯಾವುದೇ ವಾಸನೆಯನ್ನು ಹೊಂದಿದೆಯೇ?

ಆಮ್ನಿಯೋಟಿಕ್ ಚೀಲದಲ್ಲಿ ಕಂಡುಬರುವ ದ್ರವವು 99% ನೀರನ್ನು ಹೊಂದಿದೆ. ಆದ್ದರಿಂದ, ಯೋನಿಯಿಂದ ಬಿಡುಗಡೆಯಾದ ನೀರು ವರ್ಣರಹಿತವಾಗಿರುತ್ತದೆ, ಆದರೂ ಇದು ಒಂದು ಹಳದಿ ಅಥವಾ ಗುಲಾಬಿ ಬಣ್ಣದ ಛಾಯೆಯನ್ನು ಹೊಂದಿರಬಹುದು. ಈ ನೀರು ಯಾವುದೇ ವಾಸನೆಯನ್ನು ಹೊಂದಿರುವುದಿಲ್ಲ .

ನೀವು ಪ್ರಸವದ ದಿನಾಂಕವನ್ನು ದಾಟಿದಲ್ಲಿ, ಮಗುವಿನ ಮೊದಲ ಮಲದ ಕೆಲ ಅಂಶಗಳು ನಿಮ್ಮ ನೀರಿನಿಂದ ಹೊರಬರಬಹುದು.

ಗರ್ಭಾವಸ್ಥೆಯಲ್ಲಿ ನೀರು ಏಕೆ ಒಡೆಯುತ್ತದೆ?

ಗರ್ಭಾಶಯದಲ್ಲಿ ನಿಮ್ಮ ಮಗುವು ಸಂಪೂರ್ಣವಾಗಿ ಅಭಿವೃದ್ಧಿಹೊಂದಿರುವುದನ್ನು ನಿಮ್ಮ ದೇಹವು ಸ್ವಾಭಾವಿಕವಾಗಿ ತಿಳಿದಿರುತ್ತದೆ. ನಿಮ್ಮ ದೇಹದಲ್ಲಿ ವಿಶೇಷ ಹಾರ್ಮೋನುಗಳು ಸಹ ಇರುತ್ತವೆ, ಇವು ಚೀಲವನ್ನು ಮುರಿಯಲು ಮಗುವನ್ನು ಪ್ರಚೋದಿಸುತ್ತವೆ. ಹೀಗಾಗಿ ನೀರು ಒಡೆದು ಹೋಗುತ್ತದೆ ಮತ್ತು ಮಗುವು ಹೊರಗೆ ಬರಲು ತನ್ನ ದಾರಿಯನ್ನು ಮಾಡಿಕೊಳ್ಳುತ್ತದೆ. ಸಾಂದರ್ಭಿಕವಾಗಿ, ಸಮಯಕ್ಕೆ ಮುಂಚಿತವಾಗಿ ನೀರಿನ ವಿಸರ್ಜನೆ ಇರಬಹುದು. ಇದು ನಿಮ್ಮ ದೇಹದಲ್ಲಿ ನಡೆಯುತ್ತಿರುವ ಆಂತರಿಕ ಬದಲಾವಣೆಯಿಂದಾಗಿ ಆಗುತ್ತದೆ.

ಪ್ರಸವದ  ದಿನಾಂಕಕ್ಕಿಂತ ಮುಂಚಿತವಾಗಿ ನೀರು ಒಡೆದರೆ ಏನು ಮಾಡಬೇಕು?

ಗರ್ಭಿಣಿ ಮಹಿಳೆಯರಲ್ಲಿ ನೀರಿನ ವಿಸರ್ಜನೆ ಸಾಮಾನ್ಯವಾಗಿದೆ.ಪ್ರಸವದ ದಿನಾಂಕಕ್ಕೆ ಮೊದಲು ನಿಮ್ಮ ಮಗುವು  ನಿಮ್ಮ ಯೋನಿಯಿಂದ ಹೊರಬರಲು ಪ್ರಯತ್ನಿಸಿದರೆ, ಆಗ ನೀವು ಹೆಚ್ಚು ಚಿಂತೆ ಮಾಡಬೇಕಾಗಿಲ್ಲ. ಇದು ಸುಮಾರು ೧೦% ಮಹಿಳೆಯರಿಗೆ ಸಂಭವಿಸುತ್ತದೆ. ಈ ಸಮಯದಲ್ಲಿ, ನಿಮ್ಮ ಯೋನಿಯು ಸ್ವಲ್ಪ ಪ್ರಮಾಣದ ನೀರಿನ ಹರಿವನ್ನು ಹೊಂದಿರುತ್ತದೆ.ಇದು ಗರ್ಭಿಣಿ ಮಹಿಳೆಯ ಜೀವನದ ಅತ್ಯಂತ ಅಮೂಲ್ಯ ಹಂತವಾಗಿದೆ. ಇದು ನಿಮಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿದರೆ, ಅದನ್ನು ಹಂಚುವ ಮೂಲಕ ಇತರ ಅಮ್ಮಂದಿರು ಪ್ರಯೋಜನ ಪಡೆಯಲಿ. ಧನ್ಯವಾದಗಳು!

Leave a Reply

%d bloggers like this: