“ಕಾಪರ್-T ನನ್ನ ಪತಿಗೆ ತಾಗುತ್ತದೆಯೇ?” ಮತ್ತು ಗರ್ಭನಿರೋಧಕ ಸಾಧನಗಳ ಬಗ್ಗೆ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರ

ಈ ಗರ್ಭನಿರೋಧಕ ಸಾಧನಗಳ ಬಗ್ಗೆ ಇಷ್ಟಪಡದೆ ಇರುವಂತದ್ದು ಏನಿದೆ? ಒಮ್ಮೆ ಈ T-ಅಕ್ಷರದ ಆಕಾರದ ಸಾಧನವನ್ನು ಅಳವಡಿಸಿಕೊಂಡರೆ, ನೀವು ಮತ್ತೆ ಬೇಡದ ಗರ್ಭ ಧರಿಸುವ ಚಿಂತೆ ಆಗಲಿ ಅಥವಾ ನಿಮ್ಮ ಪತಿಯು ಕಾಂಡೊಮ್ ಹರಿದು ಹೋಯಿತೇ ಎಂದು ಗಾಬರಿ ಪಟ್ಟುಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ನೀವು ಬೇರೆ ಗರ್ಭ ನಿರೋಧಕ ಪಿಲ್ಸ್  ಗಳನ್ನೂ ತೆಗೆದುಕೊಳ್ಳಬೇಕಿಲ್ಲ.

ಇದರಿಂದ ನಿಮ್ಮ ಲೈಂಗಿಕ ಜೀವನದ ಮೇಲೆ ಹೇಳಿಕೊಳ್ಳುವಂತಹ ಯಾವುದೇ ಅಡ್ಡಪರಿಣಾಮಗಳು ಆಗದೆ ಇದ್ದರು, ಕೆಲವೊಂದು ಸಂದರ್ಭಗಳು ಇದಕ್ಕೆ ಹೊರತಾಗಿವೆ. ಅಂತಹ ಸಂದರ್ಭಗಳು ಯಾವು ಎಂದು ಇಲ್ಲಿ ತಿಳಿಸಿದ್ದೇವೆ ಓದಿರಿ :

೧. ಇದು ನಿಮ್ಮ ಲೈಂಗಿಕ ಇಂಗಿತವನ್ನು ಕಡಿಮೆ ಮಾಡುವ ಸಾಧ್ಯತೆಗಳು ಕಡಿಮೆ

2012ರಲ್ಲಿ ನಡೆದ ಒಂದು ೪೦೦ ಮಹಿಳೆಯರನ್ನ ಒಳಗೊಂಡ ಅಧ್ಯಯನದಲ್ಲಿ, ಕಾಪರ್-T ಅಥವಾ ಹಾರ್ಮೋನಲ್ ಗರ್ಭ ನಿರೋಧಕ ಸಾಧನ (ಹಾರ್ಮೋನಲ್ IUD) ಅಳವಡಿಕೆಯಿಂದ ತಮ್ಮ ಲೈಂಗಿಕ ಜೀವನದ್ಲಲಿ ಅಂತದ್ದೇನು ವ್ಯತ್ಯಾಸ ಆಗಿಲ್ಲ ಎನ್ನುತ್ತಾರೆ. ಹೊರೊಮೊನಲ್ IUD ಗಳು ಋತುಸ್ರಾವದ ವೇಳೆ ರಕ್ತಸ್ರಾವವನ್ನು ಮತ್ತು ಉಳುಕನ್ನು ಕಮ್ಮಿ ಮಾಡುತ್ತದೆ.

೨. ಇದು ನಿಮ್ಮ ಲೈಂಗಿಕ ಜೀವನವನ್ನು ಮತ್ತಷ್ಟು ಹಿತಕರ ಮಾಡುತ್ತದೆ

ಏಕೆಂದರೆ ಬೇಡದ ಗರ್ಭಧಾರಣೆ ಬಗೆಗಿನ ತಲೆನೋವು ಈ ಸಾಧನಗಳನ್ನು ಬಳಸುವ ಮೂಲಕ ದೂರ ಮಾಡಬಹುದು. ಈ ಮಾನಸಿಕ ಮುಕ್ತಿಯಿಂದ ಲೈಂಗಿಕ ಕ್ರಿಯೆ ಹೆಂಗಸರಿಗೆ ಮತ್ತಷ್ಟು ಹಿತಕರ ಆಗಿರುತ್ತದೆ.

೩. ನಿಮ್ಮ ಪತಿಯು ಅದರ ದಾರಗಳನ್ನ ಸ್ಪರ್ಶಿಸಬಹುದು

ನೀವು ನಿಮ್ಮ ಕಾಪರ್-T ನ ದಾರಗಳು ನಿಮ್ಮ ಪತಿಗೆ ಸ್ಪರ್ಶವಾಗುತ್ತದೆಯೇ ಎಂದು ಯೋಚಿಸುತ್ತಿದ್ದರೆ, ಇದರಲ್ಲಿ ನೀವು ಏಕಾಂಗಿ ಅಲ್ಲ. ಇದು ಬಹಳಷ್ಟು ಹೆಂಗಸರ ಗೊಂದಲ. ಇದರ ದಾರಗಳು ಸರಿಯಾಗಿ ಕತ್ತರಿಸಲ್ಪಡದೆ ಇದ್ದರೆ, ಇವುಗಳು ನಿಮ್ಮ ಪತಿಯ ಶಿಶ್ನಕ್ಕೆ ಚೂಪಾದ ಸ್ಪರ್ಶ ನೀಡುತ್ತವೆ. ಇದರ ದಾರಗಳನ್ನ ನೇರವಾದ ಕೋನದಲ್ಲಿ ಕತ್ತರಿಸಬೇಕು. ಅನಾನುಭವಿ ವೈದ್ಯನೇನಾದರೂ ಇದನ್ನು ಅಡ್ಡಡ್ಡವಾಗಿ ಕತ್ತರಿಸಿದರೆ, ಈ ದಾರಗಳು ಸೂಜಿಯಂತೆ ಭಾಸವಾಗುತ್ತವೆ. ಆದರೆ ಭಯಪಡಬೇಡಿ, ಹೀಗೆ ಆಗುವುದು ತುಂಬಾನೇ ವಿರಳ. ಈಗಿನ ಕಾಲದಲ್ಲಿ ಕಾಪರ್-T ದಾರಗಳು ನೋಡಲು ಕಾಣದಷ್ಟು ತುಂಬಾನೇ ತೆಳುವಾಗಿ ಇರುತ್ತವೆ ಮತ್ತು ಇವು ಕಾಲಕ್ರಮೇಣ ಮೆತ್ತಗೆ ಆಗುತ್ತಾ ಹೋಗುತ್ತವೆ. ಹೀಗಿದ್ದೂ ಇವುಗಳೇನಾದರೂ ನಿಮ್ಮ ಪತಿಯ ಜೊತೆಗೆ ಸ್ಪರ್ಶ ಹೊಂದುತ್ತಿದ್ದರೆ, ನೀವು ಯಾವ ಸಮಯದಲ್ಲಾದರೂ ಕ್ಲಿನಿಕ್ಕಿಗೆ ತೆರೆಳಿ ಅವುಗಳನ್ನು ಇನ್ನಷ್ಟು ಚಿಕ್ಕದು ಮಾಡಿಸಿಕೊಳ್ಳಬಹುದು.

೪. ಸೆಕ್ಸ್ ನಂತರ ರಕ್ತಸ್ರಾವ ಆಗಬಹುದು

ಈ IUD ಧರಿಸಿರುವ ಕೆಲವು ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡ ಸಂದರ್ಭಧಲ್ಲಿ ರಕ್ತಸ್ರಾವ ಅನುಭವಿಸುವರು – ವಿಶೇಷವಾಗಿ ಹಾರ್ಮೋನಲ್ IUD ಧರಿಸಿದ್ದವರಲ್ಲಿ – ಆದರೆ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಅಲ್ಲ. ಹಾರ್ಮೋನಲ್ IUD ಗಳು ಪ್ರತಿ ಋತುಸ್ರಾವದ ವೇಳೆ ಕಳಚಿಕೊಳ್ಳುವ ಗರ್ಭಕೋಶದ ಒಳಭಾಗವಾದ ಎಂಡೊಮೆಟ್ರಿಯಲ್ ಲೈನಿಂಗ್ ಅನ್ನು ತೆಳುವಾಗುವಂತೆ ಮಾಡುತ್ತವೆ. ಈ ಲೈನಿಂಗ್ ತುಂಬಾನೇ ತೆಳುವಾದರೆ, ಇದು ಲೈಂಗಿಕ ಕ್ರಿಯೆಯಲ್ಲೂ ರಕ್ತಸ್ರಾವ ಉಂಟುಮಾಡಬಹುದು. ಅದೇನೇ ಇದ್ದರೂ ನೀವು ಅಲ್ಲಿ ಪದೇ ಪದೇ ರಕ್ತಸ್ರಾವ ಅನುಭವಿಸುತ್ತಿದ್ದರೆ ಅಥವಾ ನೋವು ಅನುಭವಿಸುತ್ತಿದ್ದರೆ, ಕೂಡಲೇ ವೈದ್ಯರನ್ನು ಭೇಟಿ ಮಾಡಿ. ಇದಕ್ಕೆ ಕಾರಣ ಆ ಸಾಧನವು ಇರಬೇಕಾದ ಜಾಗದಲ್ಲಿ ಇರದೇ ಇರುವುದು ಕೂಡ ಆಗಿರಬಹುದು.

೫. ಒರಟು ಲೈಂಗಿಕ ಕ್ರಿಯೆ ಕೂಡ ಅದನ್ನು ಅಲ್ಲಾಡಿಸಲು ಆಗುವುದಿಲ್ಲ

ನಿಮ್ಮ ಗರ್ಭ ನಿಯೋಧಕ ಸಾಧನವು ನಿಮ್ಮ ಯೋನಿಯಿಂದ ಹೊರಬೀಳಬಹುದು. ಆದರೆ, ಅದು ಬಹಳಾನೇ ವಿರಳ. ನೀವು  IUD ಅಳವಡಿಸಿಕೊಂಡ ಮೊದಲ ವರ್ಷದಲ್ಲಿ ಅದು ನಿಮ್ಮ ದೇಹದಿಂದ ಹೊರಬೀಳುವ ಸಾಧ್ಯತೆಗಳು 5% ಅಷ್ಟು ಮಾತ್ರವಿರುತ್ತದೆ. ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವುದು ಈ ಸಾಧ್ಯತೆಗಳನ್ನು ಹೆಚ್ಚಿಸುವುದೂ ಇಲ್ಲ, ಕಡಿಮೆಯೂ ಮಾಡುವುದಿಲ್ಲ. ಕೆಲವೊಂದು ಗರ್ಭಕೋಶಗಳು ಈ IUD ಅನ್ನು ಹೊರತಳ್ಳುತ್ತವೆ. ಸಹಜವಾಗಿ ನೀವು ಇನ್ನೊಂದು ಸಾಧನವನ್ನು ಅಳವಡಿಸಿಕೊಳ್ಳಬಹುದು, ಆದರೆ ಕೆಲವೊಮ್ಮೆ ಗರ್ಭಕೋಶದ ನಾಳವು ಈ ಸಾಧನವನ್ನು ಇಡಲು ಕೂಡ ಸಾಧ್ಯವಾಗದಷ್ಟು ಚಿಕ್ಕದಿರುತ್ತದೆ.

Leave a Reply

%d bloggers like this: