ನಿಮ್ಮ ಮಕ್ಕಳಿಗೆ ನಿಮ್ಮಿಂದ ಬೇಕಿರುವ ವಸ್ತು ಕೇವಲ 1 ಮಾತ್ರ !

ಬಿಸಿ ಸುದ್ದಿ : ನಿಮ್ಮ ಮಗುವಿನ ಬೇಡಿಕೆಯ ಪಟ್ಟಿಯಲ್ಲಿನ ಮೊದಲನೇ ಸ್ಥಾನದಲ್ಲಿರುವುದು ಇರುವುದು ದೊಡ್ಡ ಬೆಲೆ ಬಾಳುವ, ಹತ್ತಾರು ಬಣ್ಣ ಬಣ್ಣದ ಲೈಟ್ಸ್ ಇರುವ, ಹತ್ತಾರು ಬಟನ್ ಗಳಿರುವ ರಿಮೋಟ್ ಕಾರ್ ಅಲ್ಲ. ನಿಮ್ಮ ಮಗುವಿಗೆ ಬೇಕಾಗಿರುವ ವಸ್ತು ಒಂದು ನಯಾಪೈಸೆಯು ಬೆಲೆ ಬಾಳದಿದ್ದರೂ, ನಿಮ್ಮ ಎಲ್ಲಾ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿದರೂ ಬಕೊಂಡುಕೊಳ್ಳಲಾಗದಂತದು – ನಿಮ್ಮ ಸಮಯ.

ಎಲ್ಲಾ ಖುಷಿಯಾದ ಮಕ್ಕಳ ಬಳಿ ಇರುವ ಒಂದು ಸಾಮಾನ್ಯ ಆಸ್ತಿ ಎಂದರೆ ಅದು ಒಳ್ಳೆ ಗುಣಮಟ್ಟದ ಸಮಯ. ಮಕ್ಕಳು ತಮ್ಮ ತಂದೆ ತಾಯಿಯೊಡನೆ ಒಡನಾಟ ಇಟ್ಟುಕೊಳ್ಳಲು ಸಾಧ್ಯವಾದಾಗ ಮಾತ್ರ ಖುಷಿ ಹಾಗು ತೃಪ್ತಿ ಹೊಂದಿರುತ್ತಾರೆ ಎಂದು ಸಾಬೀತಾಗಿದೆ. ಅದು ನೀವು ಅವರೊಂದಿಗೆ ಮಾತನಾಡುವುದು ಇರಲಿ, ಅವರು ಹೇಳುವುದನ್ನು ಕೇಳಿಸಿಕೊಳ್ಳುವುದು ಇರಲಿ ಅಥವಾ ಅವರು 12 ಬಾರಿ “ಇಲ್ಲಿ ನೋಡು, ಇಲ್ಲಿ ನೋಡು” ಎಂದಾಗ ಸುಮ್ಮನೆ ಅವರ ಕಡೆ ನೋಡುವುದೇ ಆಗಲಿ.

ಈ ಸಮಯ ಎನ್ನುವುದು ದುಬಾರಿ ಅಲ್ಲ ಎಂದೆನಿಸಿದರು, ನಾವು ಸದಾಕಾಲ ಅದಕ್ಕೆ ಅಂಟಿಕೊಂಡೇ ಇರುತ್ತವೆ. ಆಫೀಸಿನ ದುಡಿಮೆಯ ದೀರ್ಘ ಸಮಯ, ಮನೆಗೆಲಸದ ಸಮಯ, ಅಷ್ಟೇ ಅಲ್ಲದೆ ಈ ಮೊಬೈಲ್ ಮತ್ತು ಟಿವಿ ಮೋಹ, ಇವೆಲ್ಲವೂ ಸೇರಿ ನಾವು ಖರ್ಚೆ ಇಲ್ಲದೇ ಕೊಡಬಹುದಾದ ಒಂದು ವಸ್ತುವನ್ನು ಕೊಡುವುದೇ ಕಷ್ಟ ಆಗಿ ಹೋಗಿದೆ. 

ನೀವು ನಿಮ್ಮ ಮಕ್ಕಳಿಗೆ ಈ ಅಮೂಲ್ಯ ಸಮಯ ಕೊಡಲು, ಇಲ್ಲಿ ಕೆಲವು ವಾಸ್ತವಕ್ಕೆ ಹೊಂದುವಂತ ಸಲಹೆಗಳು ನೀಡಿದ್ದೇವೆ ಓದಿ :

೧. ನಿಮ್ಮ ಅನುಕೂಲಕರ ಪ್ರದೇಶದಿಂದ ಹೊರಬನ್ನಿ

ಮನೆಯಲ್ಲಿ ಆರಾಮಾಗಿ ಕಾಲ ಕಳೆಯುವಾಗ ನಿಮಗೆ ಬೇರೆ ಕಡೆ ಗಮನ ಹರಿದು ಹೋಗಲು ಸುಲಭವಾಗುತ್ತದೆ. ಹೀಗಾಗಿ ಮನೆಯ ಬಳಿಯ ಪಾರ್ಕಿಗೆ ಹೋಗುವುದು ಒಂದು ಒಳ್ಳೆಯ ಬದಲಾವಣೆ ತರುತ್ತದೆ. ಹಾ! ಅದರ ಜೊತೆಗೆ ನಿಮ್ಮ ಫೋನ್ ಅನ್ನು ಮನೆಯಲ್ಲೇ ಮರೆತು ಬನ್ನಿ ಅಥವಾ ಸ್ವಲ್ಪ ಸಮಯದವರೆಗೆ ದೂರ ಇಡಿ.

೨. ಕೆಲಸಗಳಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಿ

ಅಂಗಡಿಗೆ ಹೋಗಿ ತರಬೇಕಾದ ಮನೆಗೆ ಬೇಕಾದ ದಿನಬಳಕೆಯ ವಸ್ತುಗಳು ಮತ್ತು ತರಕಾರಿಗಳ ಪಟ್ಟಿ ಮಾಡುವುದು ಒಬ್ಬರ ಕೆಲಸ ನಿಜ, ಆದರೆ ಇದರಲ್ಲಿ ನಿಮ್ಮ ಮಕ್ಕಳಿಗೂ ಸ್ವಲ್ಪ ಪಾಲು ವಹಿಸಿದರೆ, ಇದೊಂದು ಹಂಚಿಕೊಂಡ ಅನುಭವ ಆಗುತ್ತದೆ. ಫ್ರಿಡ್ಜ್ ತೆಗೆದು ಯಾವ್ಯಾವ ವಸ್ತುಗಳು ಖಾಲಿ ಆಗಿವೆ ನೋಡು ಎಂದು ಆಗಲಿ ಅಥವಾ ಅವರಿಗೆ ಲೆಕ್ಕ ಗೊತ್ತಿದ್ದರೆ ಈ ವಾರಕ್ಕೆ ಎಷ್ಟು ಸೇಬು ಹಣ್ಣು ಬೇಕೆಂದು ಆಗಲಿ ಕೇಳಿ, ಅವರು ಕೂಡ ಇದರಲ್ಲಿ ಭಾಗವಹಿಸುವಂತೆ ಮಾಡಬಹುದು. ಎಲ್ಲಾ ಕೆಲಸಗಳನ್ನ ಮಾಡುತ್ತಾ ಯಶಸ್ವೀ ತಾಯಿ ಆಗಲು ಮಾಡಬೇಕಿರುವುದು ಏನೆಂದು ಇಲ್ಲಿ ತಿಳಿಯಿರಿ. 

೩. “ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ”

ಹೌದು ನೀವು  ಪ್ರತಿದಿನವೂ ನಿಮ್ಮ ಮತ್ತು ನಿಮ್ಮ ಮಗುವಿನ ಸ್ವಚ್ಛವಾಗಿ, ಒಂದೂ ಕಲೆ ಇಲ್ಲದಂತೆ ಇಡಲು ಹಪಹಪಿಸುತ್ತೀರ. ಆದರೆ, ಕೆಲವೊಮ್ಮೆ ಇದು ನಿಮ್ಮ ಮಕ್ಕಳ ಬೇಡಿಕೆಗಳೊಂದಿಗೆ ಆಗಲಿ ಅಥವಾ ಅವರ ವಸ್ತುಗಳೊಂದಿಗೆ ಅಡ್ಡಿಯಾದರೆ, ಆ ದಿನ ನೀವು ಸ್ವಲ್ಪ ಬಿಡುವು ಕೊಟ್ಟುಕೊಳ್ಳಬೇಕು. ಒಂದು ಸ್ವಲ್ಪ ಕಲೆ ಆಗಿದ್ದರೆ, ವಸ್ತುಗಳು ಆ ಕಡೆ ಈ ಕಡೆ ಆಗಿದ್ದರೆ, ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು.

೪. ಒಂದೇ ಕೋಣೆಯಲ್ಲಿ ಕೆಲಸ ಮಾಡಿ

ನಿಮ್ಮ ಮಗು ರೂಮಿನಲ್ಲಿ ರಿಮೋಟ್ ಕಾರೊಂದಿಗೆ ಆಟ ಆಡುತ್ತಿದ್ದರೆ, ನೀವು ಹಾಲ್ ಅಲ್ಲಿ ಕೂತುಕೊಂಡು ಮೊಬೈಲ್ ನೋಡಿಕೊಂಡು ಕೂರುವುದು ಬೇಡ. ನಿಮ್ಮ ಮಗನನ್ನೂ ಹಾಲಿಗೆ ಕರೆಯಿರಿ ಅಥವಾ ನೀವೇ ರೂಮಿಗೆ ಹೋಗಿ. ನೀವು ನಿಮ್ಮ ಕೆಲಸ ಮಾಡಿ, ಅವನು ಅವನ ಕೆಲಸ ಮಾಡುವನು. ಆದರೆ, ಮಹತ್ವ ಇರುವುದು ನಿಮ್ಮ ಇರುವಿಕೆಯಲ್ಲಿ. ನಿಮ್ಮ ಇರುವಿಕೆಯು ಇಂತಹ ಬದಲಾವಣೆ ಉಂಟು ಮಾಡುತ್ತದೆ ಎಂದು ತಿಳಿದರೆ ಆಶ್ಚರ್ಯ ಪಡುತ್ತೀರಾ.

೫. ನೀವು ಕೂಡ ಪಾಲ್ಗೊಳ್ಳಿ

ಮಕ್ಕಳು ಎನ್ನುವುದು ಒಂದು ಜವಾಬ್ದಾರಿ ಹೌದು, ಆದರೆ ನೀವು ಕೇವಲ ಅವರನ್ನ ಸಂಗೀತ ಶಾಲೆಗೆ ಅಥವಾ ಆಟದ ಮೈದಾನಕ್ಕೆ ಡ್ರಾಪ್ ಮತ್ತು ಪಿಕಪ್ ಮಾಡಿದರೆ ನಿಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳಬೇಡಿ. ಅವರು ಅಲ್ಲಿ ಏನು ಮಾಡಿದರು ಎಂದು ಕೇಳಿ, ಅವರ ಕಲಿತ ಹೊಸ ಹಾಡು ಯಾವುದು ಎಂದು ಕೇಳಿ, ಅವರ ಸಂಗೀತ ಸ್ಪರ್ಧೆ ಇದ್ದಾಗ ಅಥವಾ ಆಟದ ಮ್ಯಾಚ್ ಇದ್ದರೆ, ಅಲ್ಲಿಗೆ ತೆರಳಿ ಅವರನ್ನು ಪ್ರೋತ್ಸಾಹಿಸಿ.

Leave a Reply

%d bloggers like this: