ಮಕ್ಕಳ ತೊಂದರೆ ಯಾವುದೇ ಇರಲಿ ಅವುಗಳನ್ನ ಬಗೆಹರಿಸಿ ಈ 9 ವಿಶಿಷ್ಟ ಟ್ರಿಕ್ಸ್ ಇಂದ!

ನಾವು ನಮ್ಮ ಮಕ್ಕಳನ್ನ ತುಂಬಾ ಇಷ್ಟ ಪಡುತ್ತೇವೆ, ಅವರಿಗೆ ಹುಷಾರು ಇಲ್ಲದಂತೆ ಆದರೆ ನಮಗೆ ಒಂಚೂರು ಇಷ್ಟವಾಗುವುದಿಲ್ಲ. ಅದೇನೇ ಇದ್ದರೂ, ಒಂದು ತಾಯಿಗೆ ತನ್ನ ಮಗು ನೋವು ಅನುಭವಿಸುವುದನ್ನು ನೋಡಲು ಸಾಧ್ಯವೇ ಇಲ್ಲ. ಆ ನೋವನ್ನು ಹೋಗಿಸಲು ಒಂದು ತಾಯಿ ಏನು ಬೇಕಾದರೂ ಮಾಡುವಳು. ಮಗು ಕಾಲು ತೆರೆಚಿಕೊಂಡಾಗ, ಬಿದ್ದು ಗಾಯ ಮಾಡಿಕೊಂಡಾಗ, ಉಳುಕಿಸಿಕೊಂಡಾಗ, ಹುಷಾರು ತಪ್ಪಿದಾಗ, ಅದನ್ನು ನಿಭಾಯಿಸಲು ಪ್ರತಿ ತಾಯಿಯು ತಾನೇ ಬಳಸಿ ,ಪ್ರಯೋಗಿಸಿದ ಯಾವುದಾದರೂ ವಿಧಾನವನ್ನ ಹುಡುಕಿಕೊಂಡಿರುತ್ತಾಳೆ. ಕಿವಿ ನೋವಿನಿಂದ ಹಿಡಿದು ಸಿಬಿರು ಬಿಡಿಸುವವರೆಗೂ ತಾಯಿಯರು ಬಳಸಬಹುದಾದ ಸುಲಭ ಉಪಾಯಗಳು ಇಲ್ಲಿವೆ ಓದಿ :

೧. ಅವರ ಔಷಧಿಗಳ ಲೆಕ್ಕ ಇಡಿ

ಇನ್ಮುಂದೆ ಯಾವತ್ತಿಗೂ “ನಾನು ಇದನ್ನು ಆಗಲೇ ನೀಡಿರಬಹುದಾ” ಎಂದುಕೊಂಡು ಔಷಧಿಯನ್ನ ಆ ದಿನ ನೀಡುವುದನ್ನು ನೀವು ಮರೆಯುವಂತೆಯೇ ಇಲ್ಲ. ಔಷಧಿ ಡಬ್ಬಿಗೆ ಒಂದು ಪೇಪರ್ ಪಟ್ಟಿಯನ್ನು ಅಂಟಿಸಿರಿ ಮತ್ತು ಅದರ ಮೇಲೆ ನೀವು ಆ ಔಷಧಿ ಕೊಡಲು ಶುರು ಮಾಡಿದ ದಿನಾಂಕ ಬರೆಯಿರಿ. ನಂತರ, ನೀವು ಪ್ರತಿದಿನ ಔಷದಿ ಕೊಟ್ಟ ನಂತರ, ಕೂಡಲೇ ಆ ಪಟ್ಟಿಯ ಮೇಲೆ ಒಂದು ಚುಕ್ಕಿಯನ್ನು ಇಡಿ. ಇದು ನಿಮಗೆ ಎಷ್ಟು ದಿನಗಳಿಂದ ಔಷಧಿ ನೀಡುತ್ತಿದ್ದೀರಾ ಎಂದು ಮತ್ತು ಅವುಗಳ ಮೇಲಿನ ಚುಕ್ಕಿಗಳನ್ನ ಎನಿಸಿದರೆ ನೀವು ಆ ದಿನ ಕೊಟ್ಟಿದ್ದರೋ ಅಥವಾ ಇಲ್ಲವೋ ಎಂಬುದನ್ನು ಕೂಡ ಗೊತ್ತು ಮಾಡಿಕೊಳ್ಳಬಹುದು.

೨. ಹಲ್ಲು ನೋವು ದೂರ ಮಾಡಿ

ಇದು ಒಂದು ಹಳೆಯ ತಂತ್ರ, ಆದರೆ ಇದು ಕೆಲಸ ಮಾಡುತ್ತದೆ! ಮೊದಲು ಒಂದು ಚಮಚವನ್ನು ಫ್ರಿಡ್ಜ್ ಅಲ್ಲಿ ಇಡಿ. ನಂತರ ಅದನ್ನು ಹೊರತೆಗೆದು ನಿಮ್ಮ ಮಗುವಿಗೆ ಚೀಪಲು ಕೊಡಿ. ಶೀತಲತೆ ಮತ್ತು ಒತ್ತಡ ಎರಡು ಕೂಡಿ ಊತವನ್ನು ಕಮ್ಮಿ ಮಾಡಿ, ಬೆಳೆಯುತ್ತಿರುವ ಹಲ್ಲುಗಳಿಂದ ಆಗುವ ನೋವಿನಿಂದ ನಿಮ್ಮ ಮಗುವಿಗೆ ಮುಕ್ತಿ ಸಿಗುತ್ತದೆ.

೩. ಕಿವಿ ನೋವು ಕಮ್ಮಿ ಮಾಡಿ

ನಿಮ್ಮ ಮಗು ಕಿವಿ ನೋವುತಿದೆ ಎಂದರೆ, ಕಲ್ಲು ಉಪ್ಪು (ಕಲ್ಲುಪ್ಪು) ಅನ್ನು ಯಾವುದಾದರು ಮೇಲಿಟ್ಟಿ ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ಬಿಸಿ ಮಾಡಿದ ಕಲ್ಲುಪ್ಪನ್ನು, ಒಂದು ಕರವಸ್ತ್ರ ಅಥವಾ ಕಾಲುಚೀಲದಲ್ಲಿ ಅದನ್ನು ತುಂಬಿರಿ ಮತ್ತು ಅದಕ್ಕೆ ಒಂದೆರೆಡು ಹನಿಗಳಷ್ಟು ಸಾರಭೂತ ತೈಲ (ಎಸ್ಸೆನ್ಷಿಯಲ್ ಆಯಿಲ್) ಹಾಕಿರಿ. ನಂತರ ಅದನ್ನು ನಿಮ್ಮ ಮಗುವಿನ ಕಿವಿಯ ಮೇಲೆ ಇಡಿ. ಮಿನರಲ್ ಗಳು ಮತ್ತು ಶಾಖ ಸೇರಿ ನೋವನ್ನು ಕಮ್ಮಿ ಮಾಡುತ್ತವೆ.

೪. ಹುಣ್ಣು ಆದರೆ

ಉರಿಯುವಂತಹ ಆಯಿಂಟ್ಮೆಂಟ್ ಹಚ್ಚುವ ಬದಲು, ತುಪ್ಪವನ್ನು ಸ್ವಲ್ಪ ಕಾಯಿಸಿ, ಅದನ್ನು ಹುಣ್ಣಾದ ಜಾಗಕ್ಕೆ ಹಚ್ಚಿರಿ. ಇದರೊಂದಿಗೆ ನೀವು ಮಾಡಬಹುದಾದ ಇನ್ನೊಂದು ಕೆಲಸ ಎಂದರೆ ಅದು ಮಗುವಿಗೆ ಹೆಚ್ಚೆಚ್ಚು ಹಾಲಿನ ಪದಾರ್ಥಗಳು, ಉತ್ತುತ್ತಿ ಮತ್ತು ಕಲ್ಲು ಸಕ್ಕರೆ ನೀಡುವುದು.

೫. ಸುಟ್ಟ ಗಾಯ ತಣ್ಣಗೆ ಮಾಡಿ

ಮುಂದಿನ ಬಾರಿ ನಿಮ್ಮ ಮಗು ಅಪ್ಪಿತಪ್ಪಿ ಸುಟ್ಟಿಕೊಂಡರೆ, ನೀವು ಈ ಮಿಶ್ರಣದ ಮೊರೆ ಹೋಗಿ. ಅಡುಗೆ ಸೋಡಾ ಮತ್ತು ಅದರಷ್ಟೇ ಪ್ರಮಾಣದಲ್ಲಿ ಸ್ವಲ್ಪ ವಿನೇಗರ್ ಅನ್ನು ಬೆರೆಸಿ, ಅದನ್ನು ಸುಟ್ಟುಕೊಂಡಿರುವ ಜಾಗದ ಮೇಲೆ ಹಚ್ಚಿ. ಇದು ನೋವನ್ನು ಕಮ್ಮಿ ಮಾಡುತ್ತದೆ ಮತ್ತು ಬೊಬ್ಬೆ ಎದ್ದೇಳುವುದನ್ನ ತಡೆಯುತ್ತದೆ.

೬. ನೋವಾಗದಂತೆ ಸಿಬಿರು ಹೊರತೆಗೆಯಿರಿ

ಸಿಬಿರು ಚರ್ಮದೊಳಗೆ ಸಿಲುಕಿಕೊಂಡಿರುವ ಜಾಗದ ಮೇಲೆ ಅಡುಗೆ ಸೋಡಾವನ್ನು ಒಂದೆರೆಡು ಹನಿಗಳಷ್ಟು ನೀರನ್ನು ಬೆರೆಸಿ ಹಚ್ಚಿರಿ. ಹಚ್ಚಿದ ಮೇಲೆ ಅದರ ಮೇಲೆ ಬ್ಯಾಂಡೇಜ್ ಇಂದ ಮುಚ್ಚಿರಿ. ಒಂದು ಘಂಟೆಯ ನಂತರ ಬ್ಯಾಂಡೇಜ್ ಅನ್ನು ತೆಗೆಯಿರಿ. ಆಗ ನೀವು ಸಿಬಿರು ಆರಾಮಾಗೆ ನೋವಾಗದಂತೆ ಹೊರತೆಗೆಯಬಹುದು.

೭. ಕೆಮ್ಮು ಮಾಯವಾಗುವಂತೆ ಮಾಡಿ

ಮಗುವಿನ ಕೆಮ್ಮು ಮನೆಮಂದಿಯನ್ನ ರಾತ್ರಿಯೆಲ್ಲಾ ಎಚ್ಚರ ಇರುವಂತೆ ಮಾಡುತ್ತದೆ. ಹೀಗಾಗಿ ನೀವು ನಿಮ್ಮ ಮಗುವನ್ನು ಮಲಗಿಸುವ ಮುನ್ನ ಅದರ ಕಾಲಿಗೆ ವಿಕ್ಸ್ ವೇಪೋರಬ್ ಹಚ್ಚಿ ಕಾಲುಚೀಲ ಹಾಕಿರಿ. ಇದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದಿಲ್ಲ, ಆದರೆ ಕೆಲಸವಂತೂ ಮಾಡುತ್ತದೆ. ನೀವೇ ನೋಡಿ !

೮. ತಲೆನೋವನ್ನು ಕ್ಷಣದಲ್ಲೇ ಕಡಿಮೆ ಮಾಡಿ

ಇದು ನಮ್ಮದೇ ಪ್ರಾಂತ್ಯದ ಅನ್ವೇಷಣೆ! ಹೌದು ನಿಮ್ಮ ಮಗು ತಲೆನೋವು ಎಂದರೆ ಅದರ ಕೈಯನ್ನು ಹಿಡಿದುಕೊಂಡು ಹೆಬ್ಬೆರಳು ಮತ್ತು ತೋರ್ಬೆರಳು ನಡುವಿನ ಜಾಗವನ್ನು ಒತ್ತುತ್ತಾ ಮಸಾಜ್ ಮಾಡಿರಿ, ತಲೆನೋವು ಕಡಿಮೆ ಆಗುತ್ತಾ ಹೋಗುತ್ತದೆ.

೯. ಬಿಸಿಲಿಗೆ ಒಡೆದ ಚರ್ಮವನ್ನ ಸರಿಪಡಿಸಿ

ಬಿಸಿಲಿನ ಬೇಗೆಯಲ್ಲಿ ಮಕ್ಕಳ ಚರ್ಮ ಒಡೆಯುವುದು ಸಹಜ. ಇಂತಹ ಒಡೆದ ತ್ವಚೆಗೆ ಸ್ವಲ್ಪ ಚೇತರಿಕೆ ನೀಡಲು ನಿಮ ಫ್ರಿಡ್ಜ್ ಅಲ್ಲಿನ ಐಸ್ ಟ್ರೇ ಅಲ್ಲಿ ಅಲೋ ವೆರಾವನ್ನು ಇಡಿ. ಶೀತಲ ತಾಪಮಾನ ಮತ್ತು ಹಿತ ನೀಡುವ ಗಿಡದ ಶಕ್ತಿ ಕೂಡಿ ಒಡೆದ ತ್ವಚೆಯ ಪೋಷಣೆ ಮಾಡುತ್ತವೆ.

Leave a Reply

%d bloggers like this: