ಈ ಚಿಹ್ನೆಗಳನ್ನು ನೀವು ನಿಮ್ಮ ಮಗುವಿನಲ್ಲಿ ಕಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ!

ನಿಮ್ಮ ಮುದ್ದು ಕಂದಮ್ಮನ ಅರೋಗ್ಯ ನಿಮಗೆ ತುಂಬಾನೇ ಮುಖ್ಯ, ಅದಕ್ಕಾಗಿ ನೀವು ಅವನಿಗೆ/ಅವಳಿಗೆ ಸರಿಯಾದ ಆಹಾರವನ್ನು ನೀಡಬೇಕು. ನಿಮ್ಮ ಮಗುವಿಗೆ ಮೊದಲ ವರ್ಷ ತುಂಬುವವರೆಗು ಎದೆಹಾಲು ನೀಡುವುದು ಉತ್ತಮ. ಪ್ರಾರಂಭದಲ್ಲಿ ನಿಮ್ಮ ಮಗುವಿಗೆ ನಿಮ್ಮ ಎದೆಹಾಲು ಬಿಟ್ಟು ಬೇರೆ ಏನನ್ನು ನೀಡುವಂತಿಲ್ಲ ಅದು ನಿಮಗೆ ತಿಳಿದುರುವ ವಿಷಯ. ಆದರೆ ನೀವು ನಿಮ್ಮ ಮಗುವಿಗೆ ಸರಿಯಾದ ಅವನಿಗೆ ಅವಶ್ಯವಿರುವ(ಸಾಕಾಗುವಷ್ಟು) ಹಾಲನ್ನು ನೀಡುತ್ತಿರುವಿರಾ? ಇದನ್ನು ನಾನು ಹೇಗೆ ತಿಳಿಯಲಿ ಎಂಬುದು ನಿಮ್ಮ ಗೊಂದಲವಾದರೆ ಈ ಲೇಖನವನ್ನು ಓದಿ.

ಈ ಕೆಳಗಿನವುಗಳಲ್ಲಿ ಯಾವುದಾದರು ಚಿಹ್ನೆಯನ್ನು ನೀವು ಗಮನಿಸಿದರೆ, ನಿಮ್ಮ ಮಗು ತನಗೆ ಅವಶ್ಯವಿರುವಷ್ಟು ಹಾಲನ್ನು ಸೇವಿಸುತ್ತಿಲ್ಲ ಎಂದು ತಿಳಿಯಬಹದು

೧.ಮಗುವು ಎರಡು ವಾರದ(೧೪ ದಿನದ) ನಂತರವೂ ತನ್ನ ಜನ್ಮದ ತೂಕವನ್ನು ಮರಳಿ ಪಡೆಯುವುದಿಲ್ಲ.

೨.ಮಗುವಿಗೆ ಎದೆಹಾಲುಣಿಸಿದ ನಂತರ ನಿಮ್ಮ ಮೊಲೆ ಮೃದುವಾಗಿರುವ ಹಾಗೆ ಅನಿಸುವುದಿಲ್ಲ.

೩.ಎದೆಹಾಲುಣಿಸಿದ ನಂತರ ನಿಮ್ಮ ಮೊಲೆಯ ತೊಟ್ಟು ವಿರೂಪಗೊಂಡಹಾಗೆ ಅಥವಾ ಚುಚ್ಚುರಿವ ಹಾಗೆ ಕಾಣಿಸುತ್ತದೆ, ಅಥವಾ ಜೋತುಬಿದ್ದ ಹಾಗೆ ಅಥವಾ ಹಾನಿಯಾಗಿರುವಂತೆ ಅನುಭವವಾಗುತ್ತದೆ.

೪.ಎದೆಹಾಲುಣಿಸಿದ ನಂತರ ನಿಮ್ಮ ಮಗುವು ಆರಾಮದಾಯಕವಾಗಿರುವುದಿಲ್ಲ.

೫.ಐದು ದಿನದ ನಂತರ ೫ ರಿಂದ ೬ ನ್ಯಾಪಿಗಳಿಗಿಂತಲೂ ಕಡಿಮೆ ಉಚ್ಚೆಪಾಡವನ್ನು ಒದ್ದೆ ಮಾಡಿಕೊಳ್ಳುತ್ತದೆ.

೬.ದಿನಕ್ಕೆ ೬ಕ್ಕಿಂತಲೂ ಕಡಿಮೆ ಬಾರಿ ಮೂತ್ರ ಹೋಗುವುದು.

೭.ಎರಡು ದಿನವಾದರೂ ಮಗುವು ಮಲ ಮಾಡದಿರುವುದು ಮತ್ತು ಮಲವು ಹಳದಿ ಬಣ್ಣದಲ್ಲಿ ಇಲ್ಲದಿರುವುದು. ಕಡಿಮೆ ಮೂತ್ರ ಮಾಡುತ್ತಿರುವುದು ಮತ್ತು ಕೆಲವು ದಿನಗಳಿಗೊಮ್ಮೆ ಮಲ ಮಾಡುತ್ತಿರುವುದು ನಿಮ್ಮ ಮಗುವಿನ ಅವಶ್ಯಕತೆಗೆ ತಕ್ಕಷ್ಟು ಹಾಲನ್ನು ಸೇವಿಸುತ್ತಿಲ್ಲ ಅಥವಾ ಹಾಲು ಸಿಗುತ್ತಿಲ್ಲ ಎಂದು ಇದರಿಂದ ಸ್ಪಷ್ಟವಾಗಿ ತಿಳಿಯಬಹುದು.

೮.ಒಂದು ವಾರದ ನಂತರ ನಿಮ್ಮ ಮಗುವಿನ ಚರ್ಮದ ಬಣ್ಣವು ಹಳದಿಯಾಗುವುದು.

೯.ನಿಮ್ಮ ಮಗುವು ಹೆಚ್ಚು ಕಾಲ ಹಾಲು ಸೇವಿಸಲು ಏಳದೆ ಮಲಗಿರುವುದು ಮತ್ತು ಮಗುವಿಗೆ ಹಾಲುಣಿಸಲು ನೀವು ಮಗುವನ್ನು ಏಳಿಸುವುದು.

೧೦.ಎದೆಹಾಲುಣಿಸುವಾಗ, ನಿಮ್ಮ ಮಗುವಿನ ಕೆನ್ನೆಯಲ್ಲಿ ಕುಳಿ(ಡಿಂಪಲ್) ಬರುವುದು, ಅಥವಾ ಕ್ಲಿಕ್ ತರಹ ಶಬ್ದ ಬರುವುದು, ನಿಮ್ಮ ಮಗುವು ಸರಿಯಾಗಿ ಮೊಲೆಯನ್ನು ಕಚ್ಚಿ ಹಾಲು ಕುಡಿಯುತ್ತಿಲ್ಲದಿರುವುದರ ಚಿಹ್ನೆಯಾಗಿದೆ.

ನಿಮ್ಮ ಯಾವುದೇ ಸಹಾಯಕ್ಕಾಗಿ ನಿಮ್ಮ ಸಂಗತಿಯನ್ನು ಕೇಳಿ ಮತ್ತು ಯಾವುದೇ ಮುಜುಗರ ಇಲ್ಲದೆ ನಿಮ್ಮ ವೈದ್ಯರ ಬಳಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅಥವಾ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಿ.

Leave a Reply

%d bloggers like this: