ಎದೆಹಾಲು ನೀಡುವುದು ನಿಮ್ಮ ಪಿರಿಯಡ್ಸ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ

ಹೆರಿಗೆಯ ನಂತರ ತಮ್ಮ ಮೊದಲ ಮುಟ್ಟಿನ ಬಗ್ಗೆ ಸಾಮಾನ್ಯವಾಗಿ ಚಿಂತಿಸುತ್ತ ಅನೇಕ ಅಮ್ಮಂದಿರು ಗೊಂದಲಕ್ಕೆ ಒಳಗಾಗುತ್ತಾರೆ.ಋತು ಚಕ್ರಗಳ ಅನುಭವವಿಲ್ಲದೆಯೇ  ಗರ್ಭಧಾರಣೆಯ ಒಂಬತ್ತು ತಿಂಗಳ ಕಾಲ ಬದುಕಿದ ನಂತರ, ಹೊಸ ಅಮ್ಮಂದಿರು ಸ್ವಾಭಾವಿಕವಾಗಿ ತಮ್ಮ ಶರೀರಗಳ ಪುನರ್ನಿರ್ಮಾಣದಿಂದ ಆಶ್ಚರ್ಯ ಚಕಿತರಾಗುತ್ತಾರೆ . ದೈಹಿಕ ಬದಲಾವಣೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಈ ಬರವಣಿಗೆ ನಿಮಗೆ ಸಹಾಯ ಮಾಡಲಿದೆ.

ಪ್ರಸವದ ನಂತರ ಋತುಚಕ್ರ ಯಾವಾಗ ಪ್ರಾರಂಭವಾಗುತ್ತದೆ?


ಗರ್ಭಧಾರಣೆಯ ಬಗ್ಗೆ ಉತ್ತಮವಾದ ವಿಷಯವೆಂದರೆ, ಮಹಿಳೆಯು ತನ್ನ ಪ್ಯಾಡ್ ಅನ್ನು ಒಂಬತ್ತು ತಿಂಗಳ ಕಾಲ ಬದಲಿಸಬೇಕಾಗಿಲ್ಲ. ಈ ಕೆಲಸವನ್ನು ತಪ್ಪಿಸುವಾಗ  ಹೆಂಗಸರಿಗೆ ಆಗುವ ನೆಮ್ಮದಿಯನ್ನು ಅವರು ಎಂದಿಗೂ ಮರೆಯುವುದಿಲ್ಲ.ಆದರೆ ಮಗುವಿಗೆ ಜನ್ಮ ನೀಡಿದ ನಂತರ ಯಾವುದೇ ಸಮಯದಲ್ಲಿಯೂ ಮಹಿಳೆಯ ಋತುಚಕ್ರವು ಮತ್ತೆ  ಪ್ರಾರಂಭವಾಗಬಹುದು ಎಂಬುವುದನ್ನು ಗಮನಿಸುವುದು ಮುಖ್ಯ.ಹಾಗಿದ್ದರೂ ಸಹ, ಇದಕ್ಕೆ ಯಾವುದೇ ನಿರ್ದಿಷ್ಟ ದಿನಾಂಕವಿಲ್ಲ,ಪ್ರತಿ ಮಹಿಳ್ಳೆಯ ದೇಹವು ಸ್ವಂತ ವೇಳಾಪಟ್ಟಿಯನ್ನು ಹೊಂದಿರುತ್ತದೆ .


ಹಾಲುಣಿಸುವ ಸಮಯದಲ್ಲಿ ಗರಿಷ್ಟ ೭ ರಿಂದ ೮ ತಿಂಗಳಲ್ಲಿ ಋತು ಚಕ್ರವು ಮತ್ತೆ ಪ್ರಾರಂಭವಾಗುತ್ತದೆ .ಕೆಲವು ಮಹಿಳೆಯರಲ್ಲಿ, ಮಗುವಿನ ಜನನದ ನಂತರ ಎರಡು ತಿಂಗಳಲ್ಲಿ ಋತು ಚಕ್ರವು ಪ್ರಾರಂಭವಾಗಬಹುದು .ಆದರೆ ಈ ಬಗ್ಗೆ ಚಿಂತಿಸದಿರಿ ,ನಿಮಗೆ ಮತ್ತು ನಿಮ್ಮ ದೇಹಕ್ಕೆ ಸಮಯವನ್ನು ನೀಡಿ ,ಇದರಿಂದ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಬಹುದು.


೧.ನಿಮ್ಮ ಮಗು ನಿಮ್ಮ ಸ್ತನ್ಯಪಾನವನ್ನು ಸೇವಿಸಿದ ನಂತರ ದೀರ್ಘಕಾಲದವರೆಗೆ ನಿದ್ರಿಸಿದರೆ, ನಿಮ್ಮ ಋತು ಚಕ್ರವು ಸಮೀಪದಲ್ಲಿದೆ ಎಂದರ್ಥ.

೨.ನಿಮ್ಮ ಶಿಶುವು ಘನ ಆಹಾರವನ್ನು ತಿನ್ನಲು ಪ್ರಾರಂಭಿಸಿದಾಗ, ಅದು ನಿಮ್ಮ ಋತು ಚಕ್ರವು ಪ್ರಾರಂಭವಾಗುವ ಸಮಯದ ಸಂಕೇತವಾಗಿದೆ ಎಂದು ಪರಿಗಣಿಸಬೇಕು .ಕೆಲವೊಮ್ಮೆ ನೀವು ಹಾಲುಣಿಸುವ ಸಮಯದಲ್ಲಿ ರಕ್ತದ ಕಲೆಗಳನ್ನು ಗಮನಿಸಬಹುದು. ಇದು ಸಂಪೂರ್ಣವಾಗಿ ಸಾಮಾನ್ಯವಾಗಿದೆ. ಕಲೆಗಳು ಯಾವುದೇ ಸಮಯದಲ್ಲಿ ಕಾಣಿಸಬಹುದು ಮತ್ತು ಇವು ಸ್ಥಿರವಾಗಿರುವುದಿಲ್ಲ .

ಸ್ತನ್ಯಪಾನದ ನಂತರದ ಮೊದಲ ಋತು ಚಕ್ರವು ಯಾವ ರೀತಿಯ ಭಾವನೆಯನ್ನು ನೀಡುತ್ತದೆ?


ಈ ಋತು ಚಕ್ರದ ಅನುಭವವು ಪ್ರತಿ ಮಹಿಳೆಗೆ ವಿಭಿನ್ನವಾಗಿದೆ, ಆದರೆ ಅದರ ತೀವ್ರತೆಯು ಸಮನಾಗಿರುತ್ತದೆ.
ಹೆರಿಗೆಯ ನಂತರ ಸಂಭವಿಸುವ ರಕ್ತಸ್ರಾವವನ್ನು ಪ್ರಸವಾನಂತರದ ರಕ್ತಸ್ರಾವ ಎಂದು ಕರೆಯಲಾಗುತ್ತದೆ. ಇದು ಮಹಿಳೆಯ ದೇಹದಲ್ಲಿ ಅನಗತ್ಯ ರಕ್ತ. ನಿಮ್ಮ ಮಾಸಿಕ ವಿಸರ್ಜನೆಗಿಂತ ಇದು ದಪ್ಪ ಕೆಂಪು ಮತ್ತು ಪ್ರಮಾಣದಲ್ಲಿ ಹೆಚ್ಚಾಗಿರುತ್ತದೆ .ಸಾಮಾನ್ಯವಾಗಿ, ಒಂದು ಸ್ಯಾನಿಟರಿ ಪ್ಯಾಡ್ ನಿಮಗೆ ೪ ಗಂಟೆಗಳ ಪರಿಹಾರವನ್ನು ನೀಡುತ್ತದೆ ಆದರೆ ನೀವು ಆಗಾಗ್ಗೆ ಮತ್ತೆ ಪ್ಯಾಡ್ ಅನ್ನು ಬದಲಾಯಿಸಬೇಕಾಗಬಹುದು.


ಋತು ಸ್ರಾವದಲ್ಲಿನ  ಬದಲಾವಣೆಗಳು


ಮಗುವಿನ ಜನನದ ನಂತರ ನಿಮ್ಮ ಯೋನಿಯಿಂದ ಹರಿಯುವ ರಕ್ತದ ಬಣ್ಣ ಕೂಡ ಬದಲಾಗುತ್ತದೆ. ಮೊದಲಿಗೆ, ಅದರ ಬಣ್ಣವು ಕೆಂಪು ಬಣ್ಣದ್ದಾಗಿರುತ್ತದೆ, ಮತ್ತು ನಂತರ ಹಗುರವಾಗಿರುತ್ತದೆ, ಮತ್ತು ಕೊನೆಯಲ್ಲಿ, ಸಹ ತಿಳಿ ಕಂದು ಆಗಿರಬಹುದು. ಇದರ ನಂತರ, ವಿಸರ್ಜನೆಯ ಬಣ್ಣವು ತಿಳಿ ಹಳದಿಯಿಂದ ಹಳದಿಗೆ ಬದಲಾಗುತ್ತದೆ. ಅಂತಿಮ ಹಂತದಲ್ಲಿ, ವಿಸರ್ಜನೆಯು ರಕ್ತಮಯವಾಗಿರುವುದಿಲ್ಲ, ಆದರೆ  ಲಾಚಿಯಾ ಎಂದು ಕರೆಯಲ್ಪಡುವ ಸ್ರಾವವಾಗಿರುತ್ತದೆ .ಈ ಸ್ರಾವವು ನಿಧಾನವಾಗಿ ಕಡಿಮೆಯಾಗುತ್ತದೆ ಮತ್ತು ಅಂತಿಮವಾಗಿ ನಿಲ್ಲುತ್ತದೆ. ಹೆಚ್ಚಿನ ಮಹಿಳೆಯರು ವಿಸರ್ಜನೆಯಿಂದ ಗಾಢವಾದ ವಾಸನೆಯನ್ನು ಅನುಭವಿಸುತ್ತಾರೆ.
ಆದಾಗ್ಯೂ ,ಪ್ರಸವದ ನಂತರದ ಸ್ರಾವವು  ಒಂದು ವಾರದಲ್ಲಿ ಕೊನೆಗೊಳ್ಳಬೇಕು, ಆದರೆ ಕೆಲವು ಮಹಿಳೆಯರಲ್ಲಿ ಮುಂದುವರಿಯಬಹುದು .ಆದರಿಂದ ಯಾವುದೇ ಕಾರಣಕ್ಕೂ ಆತಂಕ ಪಡಬೇಕಾಗಿಲ್ಲ .ಆದರೂ ಸ್ರಾವದ  ಸಮಯದಲ್ಲಿ ವು ನೋವು ಅಥವಾ ತೊಂದರೆ ಅನುಭವಿಸಿದಾಗ ಅಥವಾ ನೀವು ರಕ್ತ ಹೆಪ್ಪುಗಟ್ಟುವುದನ್ನು ಅಥವಾ ತಲೆಸುತ್ತನ್ನು ಅನುಭವಿಸಿದರೆ ವೈದ್ಯರನ್ನು ಕಾಣಬೇಕಾಗುವುದು .

ಸ್ತನ್ಯಪಾನವು ನಿಮ್ಮ ದೇಹವನ್ನು ಹೇಗೆ ಪ್ರಭಾವಿಸುತ್ತದೆ:

ಸ್ತನ್ಯಪಾನವು ನಿಮ್ಮ ದೇಹ ಗ್ರಂಥಿಗಳನ್ನು ಪ್ರಚೋದಿಸುತ್ತದೆ .ತಾಯಿಯ ಮೊಲೆ ತೊಟ್ಟನ್ನು ಮಗುವು ಹೀರುವಾಗ , ಪ್ರೋಲ್ಯಾಕ್ಟಿನ್ ನಿಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ ಮತ್ತು ರಕ್ತದಲ್ಲಿ ಹರಿಯುತ್ತದೆ. ನೀವು ಮಗುವಿಗೆ ಸ್ತನ್ಯಪಾನ ಮಾಡುವ ತನಕ ಪ್ರೊಲ್ಯಾಕ್ಟಿನ್ ಹರಿಯುತ್ತದೆ. ಪ್ರೋಲಾಕ್ಟಿನ್ ಅಂಡೋತ್ಪತ್ತಿಯಿಂದ ನಿಮ್ಮ ದೇಹವನ್ನು ತಡೆಯುತ್ತದೆ .ಇದರರ್ಥ ಮೊಟ್ಟೆಯು ನಿಮ್ಮ ಅಂಡಾಶಯದಿಂದ ಹೊರಬರುವುದಿಲ್ಲ ಮತ್ತು ಅಂತಿಮವಾಗಿ, ನೀವು ಋತು ಚಕ್ರವನ್ನು ಹೊಂದುವುದಿಲ್ಲ .
ಋತುಚಕ್ರದ ಆಗಮನದ ನಂತರ ತಾಯಂದಿರು ಶಿಶುಗಳಿಗೆ ಸ್ತನ್ಯಪಾನ ಮಾಡಬಹುದಾಗಿದೆ ಮತ್ತು ಹಾಲಿನ ರುಚಿಗೆ ಇದರಿಂದೇನೂ ಹಾನಿಯಾಗುವುದಿಲ್ಲ. ಮುಟ್ಟಿನ ಹೊರತಾಗಿಯೂ ತಾಯಿಯ ಹಾಲು ಸಂಪೂರ್ಣವಾಗಿ ಸುರಕ್ಷಿತವಾಗಿದೆ.

ಋತು ಚಕ್ರದ ಆರಂಭದಿಂದಾಗಿ , ತಾಯಿಯ ಹಾಲು ಕಡಿಮೆಯಾಗುತ್ತದೆ. ಇದು ತಾತ್ಕಾಲಿಕ ಮತ್ತು ಕೆಲವು ದಿನಗಳಲ್ಲಿ ಸಾಮಾನ್ಯ ಆಗುತ್ತದೆ. ಋತು ಚಕ್ರವು ಸ್ಥಿರವಾಗುವುದರ ಜೊತೆಗೆ ಎದೆಹಾಲು ಕೂಡ ಸ್ಥಿರವಾಗುತ್ತದೆ .ಇದೆಲ್ಲವೂ ದೇಹದ ಹಾರ್ಮೋನ್ ಮಟ್ಟದಲ್ಲಿನ ಬದಲಾವಣೆಯ ಫಲಿತಾಂಶವಾಗಿದೆ.
ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಅದನ್ನು ಕೆಳಗಿನ ಟಿಪ್ಪಣಿಗಳಲ್ಲಿ ಬರೆಯಲು ಮರೆಯಬೇಡಿ …ಈ ಬರಹವನ್ನು ಹಂಚಿಕೊಳ್ಳಿ, ಇದು ಅನೇಕ ಮಹಿಳೆಯರಿಗೆ ಪ್ರಯೋಜನವಾಗಬಹುದು!

Leave a Reply

%d bloggers like this: