ಮಗುವಿಗೆ ಅವಶ್ಯಕವಿರುವಷ್ಟು ಹಾಲನ್ನು ನೀಡುತ್ತಿರುವೆ ಎಂದು ನಾನು ತಿಳಿದುಕೊಳ್ಳುವುದು ಹೇಗೆ ?

ಇದು ಸಾಮಾನ್ಯವಾಗಿ ಎಲ್ಲಾ ತಾಯಿಯಂದಿರಲ್ಲು ಕಾಡುವ ಪ್ರಶ್ನೆ, ಅದರಲ್ಲೂ ಮೊದಲ ಬಾರಿಗೆ ತಾಯಿ ಆಗಿರುವವರಿಗೆ ಇದು ಗೊಂದಲವನ್ನು ಕೂಡ ಉಂಟುಮಾಡಬಹುದು. ನನ್ನ ಮಗುವಿಗೆ ಹಾಲು ನೀಡಿರುವುದು ಸಾಕೆ? ಇನ್ನು ಹಾಲುಣಿಸಬೇಕೇ? ದಿನಕ್ಕೆ ಎಷ್ಟು ಬಾರಿ ಹಾಲುಣಿಸಬೇಕು? ಮಗುವಿಗೆ ಹೊಟ್ಟೆ ತುಂಬಿದೆ ಅಥವಾ ಮಗುವಿನ ಅವಶ್ಯಕತೆಗೆ ಹಾಲು ನೀಡಿದ್ದೇನೆ ಎಂದು ತಿಳಿದುಕೊಳ್ಳುವುದು ಹೇಗೆ? ಇವೆಲ್ಲಾ ಪ್ರಶ್ನೆಗಳು ಕಾಡುವುದು ಸಹಜ, ನಿಮ್ಮ ಈ ಗೊಂದಲವನ್ನು ನಿವಾರಿಸಲು ಈ ಲೇಖನ ಸಹಾಯ ಮಾಡುತ್ತದೆ.

ನೀವು ಈ ಕೆಳಗಿನ ಚಿಹ್ನೆಗಳನ್ನು ಗುರುತಿಸಿದರೆ, ನಿಮ್ಮ ಮಗು ತನಗೆ ಅವಶ್ಯವಿರುವ ಹಾಲನ್ನು ಸೇವಿಸುತ್ತಿದೆ ಎಂದು ಹೇಳಬಹುದು

೧.ನಿಮ್ಮ ಮಗು ದಿನಕ್ಕೆ ಕನಿಷ್ಠ ೬ ರಿಂದ ೮ ಬಾರಿ ಹಾಲನ್ನು ಸೇವಿಸುತ್ತದೆ.

೨.ನಿಮಗೆ ಎದೆಹಾಲುಣಿಸುವ ಅನುಭವ ಆರಾಮದಾಯಕ ಎನಿಸುವುದು, ಮತ್ತು ನಿಮ್ಮ ಮೊಲೆ ಮತ್ತು ತೊಟ್ಟಿನ ನೋವು ಮಗುವು ಮೊಲೆಹಾಲನ್ನು ಚೀಪಿದ ಸ್ವಲ್ಪ ಸಮಯದ ನಂತರ ಕಡಿಮೆಯಾಗುವುದು.

೩.ಹಾಲುಣಿಸಿದ ನಂತರ ನಿಮ್ಮ ಮೊಲೆ ಮೃದುವಾದ ಹಾಗೆ ಮತ್ತು ಮೊಲೆಯಲ್ಲಿ ಹಾಲು ಕಡಿಮೆಯಾದ ಹಾಗೆ ಅನಿಸುವುದು.

೪.ನಿಮ್ಮ ತೊಟ್ಟು ಮಗುವು ಮೊಲೆಯನ್ನು ಚೀಪಲು ಪ್ರಾರಂಭಿಸಿದಾಗ ಇದ್ದ ಸ್ಥಿತಿಯನ್ನೇ ಹೊಂದಿರುವುದು ಅಥವಾ ಸ್ವಲ್ಪ ದೊಡ್ಡ/ದಪ್ಪದಾಗಿರುವುದು.

೫.ನಿಮ್ಮ ಮಗುವು ಅರೋಗ್ಯ ಚರ್ಮ ಬಣ್ಣವನ್ನು ಹೊಂದಿದ್ದು, ಮಗುವನ್ನು ಚಿವುಟಿದಾಗ ಮತ್ತೆ ಹಿಂದಕ್ಕೆ ತಿರುಗಿಸುವ ದೃಢ ಚರ್ಮವನ್ನು ಹೊಂದಿದೆ.

೬.ನಿಮ್ಮ ಮಗು ಎದ್ದಿರುವಾಗ ಎಚ್ಚರವಾಗಿರುತ್ತದೆ, ಮತ್ತು ಹಾಲುಣಿಸಲು ಕೇಳುತ್ತದೆ.

೭.ನಿಮ್ಮ ಮಗುವು ಮೊದಲ ೪೮ ಗಂಟೆಯೊಳಗೆ ಎರಡರಿಂದ ಮೂರು ನ್ಯಾಪಿಗಳನ್ನು(/ಉಚ್ಚೆಪಾಡಗಳನ್ನು) ಒದ್ದೆ ಮಾಡಿಕೊಳ್ಳುವುದು, ಇದು ಆಗಾಗ್ಗೆ ಆಗುತ್ತಿರುತ್ತದೆ. ಸ್ವಲ್ಪ ದಿನದ ನಂತರ ಮಗುವು ದಿನಕ್ಕೆ ಕನಿಷ್ಠ ೬ ನ್ಯಾಪಿಗಳನ್ನು ಒದ್ದೆ ಮಾಡಿಕೊಳ್ಳಬೇಕು. ನಿಮ್ಮ ಮಗುವಿನ ಉಚ್ಚೆ ತಿಳಿ ಹಳದಿ ಬಣ್ಣ ಮತ್ತು ವಾಸನೆ ರಹಿತವಾಗಿರಬೇಕು.

೮.ಎದೆಹಾಲುಣಿಸುವಾಗ ನಿಮ್ಮ ಮಗು ಹಾಲು ನುಂಗುವುದನ್ನು ನೀವು ಗಮನಿಸಬಹುದು, ಮತ್ತು ಮಗುವು ನಿಮ್ಮ ತೊಟ್ಟನ್ನು ಸರಿಯಾಗಿ ಕಚ್ಚಿ ಚೀಪುತ್ತಿದೆ ಎಂಬುದನ್ನು ನೀವು ಗಮನಿಸಬೇಕು.

೯.ನಿಮ್ಮ ಮಗು ಹಾಲು ಕುಡಿಯುವಾಗ ಮದ್ಯೆ ನಿಲ್ಲಿಸಿ ನಂತರ ಪುನಃ ಹಾಲನ್ನು ಚೀಪಲು ಪ್ರಾರಂಭಿಸುತ್ತಾನೆ. ಮತ್ತು ಮಗುವಿಗೆ ಸಾಕೆನ್ನಿಸಿದಾಗ ಮಗುವೇ ಹಾಲನ್ನು ಸೇವಿಸುವುದನ್ನು ನಿಲ್ಲಿಸಿ ಅಲ್ಲಿಂದ ಹೊರಬರಲು ಪ್ರಯತ್ನಿಸುವನು.

೧೦.ಮಗುವು ಹುಟ್ಟಿ ೫ ಅಥವಾ ೬ ದಿನ ಕಳೆದ ನಂತರ ಅವನ/ಳ ಮಲ ತಿಳಿ ಹಳದಿ ಬಣ್ಣ ಇರಬೇಕು.

Leave a Reply

%d bloggers like this: