ಮಗುವು ತುಂಬಾ ಸಣ್ಣಗಿದೆಯೇ? ತೂಕ ಹೆಚ್ಚುತ್ತಿಲ್ಲವೇ? ಹಾಗಿದ್ದರೆ ಇದನ್ನು ನೀವು ಓದಲೇಬೇಕು!

ಎದೆಹಾಲನ್ನು ಸೇವಿಸುವ ಶಿಶುಗಳು ಕೆಲವೊಮ್ಮೆ ತಮ್ಮ ತೂಕವನ್ನು ಪಡೆಯುವಲ್ಲಿ ಅಥವಾ ತೂಕವನ್ನು ಹೆಚ್ಚಿಸಿಕೊಳ್ಳುವಲ್ಲಿ ತೊಂದರೆಯನ್ನು ಪಡುತ್ತವೆ. ಇದು ಅವರು ತೂಕವನ್ನು ಪಡೆಯುವುದೇ ಇಲ್ಲ ಅಥವಾ ಅವರ ಬೆಳವಣಿಗೆಗೆ ಅನುಗುಣವಾಗಿ ಅವರ ತೂಕವನ್ನು ಹೊಂದುವುದಿಲ್ಲ. ಇದಕ್ಕೆ ಕಾರಣ ಏನಿರಬಹುದು? ಇದನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ತಿಳಿಯಲು ಈ ಲೇಖನ ಓದಿ.

ಮೊಲೆಹಾಲು ಕುಡಿಯುತ್ತಿರುವ ಮಗುವು ತೂಕ ಪಡೆಯದಿರಲು ಕಾರಣ!

೧.ಸಾಕಷ್ಟು ಹಾಲು ಸಿಗುತ್ತಿಲ್ಲ

ಹೆಚ್ಚಿನ ಸಂದರ್ಭಗಳಲ್ಲಿ, ಮಗುವು ತನ್ನ ತೂಕವನ್ನು ಪಡೆಯದಿರಲು ಕಾರಣ, ಮಗುವಿಗೆ ಅವಶ್ಯವಿರುವಷ್ಟು ಎದೆಹಾಲು ಸಿಗದಿರುವುದು. ಇದು ಮಗುವು ಸರಿಯಾಗಿ ತೊಟ್ಟನ್ನು ಕಚ್ಚಿ ಹಾಲನ್ನು ಹೀರದಿರುವುದು, ಒಂದೇ ಮೊಲೆಯಲ್ಲಿ ಹಾಲನ್ನು ನೀಡುವುದು, ಕೆಲವು ಮೀಸಲು ಸಮಯದಲ್ಲಿ ಮಾತ್ರ ಮೊಲೆಹಾಲುಣಿಸುವುದು ಅಥವಾ ತಾಯಿಯ ಮೊಲೆಯಲ್ಲಿ ಮಗುವಿಗೆ ಅಗತ್ಯವಿರುವಷ್ಟು ಹಾಲು ಇಲ್ಲದಿರುವುದು, ಹಾರ್ಮೋನು ತೊಂದರೆ, ಮಗುವಿಗೆ ಅಗತ್ಯವಿರುವಾಗ ಹಾಲನ್ನು ನೀಡದಿರುವುದು ಮುಂತಾದ ಕಾರಣಗಳಿರಬಹುದು. ನಿಮ್ಮ ಸ್ತನದಲ್ಲಿ ಹಾಲು ಕಡಿಮೆ ಇದ್ದರೆ ವೈದ್ಯರನ್ನು ಭೇಟಿ ಸೂಕ್ತ ಪರಿಹಾರ ಪಡೆಯುವುದು ಒಳ್ಳೆಯದು.

೨.ಮಗುವಿನ ಅರೋಗ್ಯ ಸಮಸ್ಯೆಗಳು

ಕೆಲವೊಮ್ಮೆ ಮಗುವಿನ ಆರೋಗ್ಯದ ಸಮಸ್ಯೆ ಕೂಡ ಅವನ/ಳ ತೂಕ ಪಡೆಯದೇ ಇರಲು ಕಾರಣ ಎಂದು ಗುರುತಿಸಬಹುದು. ಉಸಿರಾಟ ಅಥವಾ ಹೃದಯ ಸಂಬಂದಿ ಕಾಯಿಲೆ, ನರಕ್ಕೆ ಸಂಬಂದಿಸಿದ ಸಮಸ್ಯೆಗಳು,  ಹಾಲಿನ ಅಲರ್ಜಿ, ರಕ್ತಹೀನತೆ, ಜೆನೆಟಿಕ್ ಸಿಂಡ್ರೋಮ್, ಸ್ನಾಯುವಿನಲ್ಲಿ ತೊಂದರೆ ಮುಂತಾದವುಗಳು ಇದಕ್ಕೆ ಉದಾಹರಣೆ. ಕೆಲವೊಮ್ಮೆ, ಅತಿಯಾದ ಲ್ಯಾಕ್ಟೊಸ್ ಪ್ರಮಾಣವು ಕಡಿಮೆ ತೂಕವನ್ನು ಪಡೆಯಲು ಕಾರಣವಾಗುತ್ತದೆ.

೩.ಒಂದು ವಿಷಯ ಮತ್ತೊಂದಕ್ಕೆ ಕಾರಣವಾಗುತ್ತದೆ

ಮಗುವಿನ ತೂಕ ಕಡಿಮೆಯಾಗಿದ್ದರೆ, ಅವರು ಹೆಚ್ಚು ನಿದ್ರೆ ಮಾಡುತ್ತಾರೆ ಮತ್ತು ಅವರು ಹಾಲು ಕುಡಿಯಲು ಹೆಚ್ಚು ಆಸಕ್ತಿಯನ್ನು ತೋರಿಸುವುದಿಲ್ಲ. ಅಥವಾ ಅವರಿಗೆ ಹಸಿವಾಗಿದ್ದರು, ಮೊಲೆಹಾಲುಣುವಾಗ ಆಗೆಯೇ ಚಟುವಟಿಕೆಯಿಂದ ಹಾಲು ಕುಡಿಯದೆ ಅಲ್ಲೆಯೇ ಮಲಗಿಬಿಡುತ್ತಾರೆ. ಇದರಿಂದ ತಾಯಿಯ ಮೊಲೆಯಲ್ಲೂ ಹಾಲು ಉತ್ಪತ್ತಿಯಾಗುವುದು ಕಡಿಮೆಯಾಗಿ ಮಗುವು ತನ್ನ ತೂಕವನ್ನು ಕ್ರಮೇಣವಾಗಿ ಕಳೆದುಕೊಳ್ಳುತ್ತದೆ.

ನನ್ನ ಮಗು ಸಾಕಷ್ಟು ತೂಕವನ್ನು ಪಡೆಯುತ್ತದೆಯೇ?

ನಿಮ್ಮ ಮಗುವು ತೂಕವನ್ನು ಪಡೆಯುತ್ತಿದ್ದರೆ, ನಿಮಗೆ ಕೆಲವೊಮ್ಮೆ ಗೊಂದಲವಾಗಬಹುದು, ಮಗುವು ಸರಿಯಾದ ತೂಕವನ್ನು ಪಡೆಯುತ್ತಿದೆಯೇ? ಅಥವಾ ಹೆಚ್ಚು ತೂಕವನ್ನು ಪಡೆಯುತ್ತಿದೆಯೇ? ಎಂದು. ನೀವು ಮಗುವಿನ ಬೆಳವಣಿಗೆ ಚಾರ್ಟ್ ನೋಡಿ ತಿಳಿದುಕೊಳ್ಳುವುದು ಒಳ್ಳೆಯದು.

Leave a Reply

%d bloggers like this: