ಗರ್ಭಾವಸ್ಥೆಯ ಈ ಲಕ್ಷಣಗಳನ್ನು ನೀವು ನಿರ್ಲಕ್ಷಿಸುವಂತಿಲ್ಲ

ಗರ್ಭಾವಸ್ಥೆಯಲ್ಲಿ ನಿಮ್ಮ ದೇಹವು ಹಲವು ಬದಲಾವಣೆಗಳಿಗೆ ಒಳಗಾಗುತ್ತದೆ ಎಂಬುದು ನಿಮಗೆ ತಿಳಿದಿರುವ ವಿಷಯ. ನಿಮ್ಮ ದೇಹದಲ್ಲಿ ಆಗುವ ಹಾರ್ಮೋನುಗಳ ಬದಲಾವಣೆ ಇದಕ್ಕೆಲ್ಲಾ ಕಾರಣ ಎಂಬುದು ನಿಮಗೆ ತಿಳಿದಿರುವ ವಿಷಯ. ಹಲವು ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ವಾಕರಿಕೆ ಕೆಲವರು ವಾಂತಿಯನ್ನು ಸಾಮಾನ್ಯವಾಗಿ ಅನುಭವಿಸುತ್ತಾರೆ – ಇದನ್ನು ಬೆಳಗ್ಗಿನ ಕಾಯಿಲೆ ಎಂದು ನಾವು ಸಾಮಾನ್ಯವಾಗಿ ಕರೆಯುತ್ತೇವೆ.

ಮನಸ್ಥಿತಿಯಲ್ಲಿ ಏರುಪೇರು, ನಿದ್ರಾ ಸಮಸ್ಯೆ, ಸೊಂಟದಲ್ಲಿ ನೋವು, ಕೈ/ಕಾಲು ಊದಿಕೊಳ್ಳುವುದು ಗರ್ಭಾವಸ್ಥೆಯ ಜೊತೆಗೆ ಅಂಟಿಕೊಂಡಿರುವ ಕೆಲವು ಸಾಮಾನ್ಯ ಅಸ್ವಸ್ಥೆಗಳು.

ಯಾವ ಲಕ್ಷಣಗಳನ್ನು ಗಮನಿಸಿದ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು ಮತ್ತು ಯಾವುದು ಗರ್ಭಾವಸ್ಥೆಯಲ್ಲಿ ಸಾಮಾನ್ಯ ಲಕ್ಷಣಗಳು ಎಂಬುದನ್ನು ನೀವು ತಿಳಿದುಕೊಂಡಿರುವುದು ಬಹಳ ಮುಖ್ಯ ಅದರಲ್ಲೂ ಮುಖ್ಯವಾಗಿ ಮೊದಲ ಬಾರಿ ತಾಯಿಯಾಗುತ್ತಿರುವವರು.

ಇಲ್ಲಿರುವ ಕೆಲವು ಲಕ್ಷಣಗಳನ್ನು ನೀವು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ, ಇದನ್ನು ನೀವು ಕಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

೧.ಕಡಿಮೆಯಾದ ಮಗುವಿನ ಚಲನವಲನ

೧೭ ರಿಂದ ೧೮ ನೇ ವಾರದ ಅಂತರದಲ್ಲಿ ಹಲವು ಮಹಿಳೆಯರು ಉದರದೊಳಗೆ ತಮ್ಮ ಮಗುವಿನ ಚಲನವಲನಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಅದು ೨೪ನೇ ವಾರ ಆಗುತ್ತಿದ್ದಂತೆ ಇನ್ನು ಸ್ಪಷ್ಟವಾಗುತ್ತದೆ.

ಆದರೆ ದಿಡೀರ್ ಆಗಿ ನಿಮ್ಮ ಮಗುವಿನ ಚಲನವಲನವನ್ನು ಅನುಭವಿಸಲು ಸಾಧ್ಯವಾಗದಿದ್ದರೆ, ಒಂದು ಗಂಟೆಯಾದರೂ ನಿಮ್ಮ ಮಗುವಿನ ಚಲನವಲನವನ್ನು ನೀವು ಅನುಭವಿಸದಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

ಇದು ಆಮ್ನಿಯೋಟಿಕ್ ದ್ರವ ಕಡಿಮೆ ಇರುವುದರ ಲಕ್ಷಣ ಇರಬಹುದು, ಅಥವಾ ಇದು ತಾಯಿಯು ನಿರ್ಜಲೀಕರಣಗೊಂಡಿರುವುದರ ಚಿಹ್ನೆ ಇರಬಹುದು, ಹೆಚ್ಚು ನೀರನ್ನು ಸೇವಿಸುವುದು ಇದಕ್ಕೆ ಒಂದು ಪರಿಹಾರವಾಗಿದೆ.

೨.ರಕ್ತಸ್ರಾವ

ಗರ್ಭಾವಸ್ಥೆಯ ಸಮಯದಲ್ಲಿ ಯೋನಿಯಿಂದ ಸ್ವಲ್ಪ ರಕ್ತಗಂಟು ಬರುವುದು ಅಥವಾ ರಕ್ತಸ್ರಾವ ಆಗುವುದು ಮಹಿಳೆಯರನ್ನು ತಲೆಕೆಡಿಸಿಕೊಳ್ಳುವಂತೆ ಮಾಡುತ್ತದೆ. ರಕ್ತದ ಒಂದೆರಡು ಕಲೆ ಆಗುವುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.

ಆದರೆ, ಹೆಚ್ಚು ರಕ್ತಸ್ರಾವ ಆಗುವುದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಇದು ಗರ್ಭಪಾತ, ಜರಾಯು ಮುರಿತ ಅಥವಾ ಜರಾಯುವಿನಲ್ಲಿ ಯಾವುದೇ ತೊಂದರೆಯಂತಹ ಗಂಭೀರ ಸಮಸ್ಯೆಯ ಚಿಹ್ನೆಯಾಗಿರಬಹುದು.

ಒಂದು ಅಧ್ಯಯನದ ಪ್ರಕಾರ ರಕ್ತಸ್ರಾವ ಆಗುವುದು ಅದರಲ್ಲೂ ಮೊದಲನೇ ತ್ರೈಮಾಸಿಕದಲ್ಲಿ ನೋವಿನ ರಕ್ತಸ್ರಾವ ಆಗುವುದು ಗರ್ಭಪಾತದ ಹೆಚ್ಚಿನ ಸಮಸ್ಯೆಯೊಂದಿಗೆ ಸಂಬಂಧಿಸಿದೆ.

ನೀವು ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

೩.ಯೋನಿಯ ವಿಸರ್ಜನೆ

ಗರ್ಭಾವಸ್ಥೆಯಲ್ಲಿ ಸ್ಪಷ್ಟವಾದ ಯೋನಿಯ ವಿಸರ್ಜನೆ ಹೆಚ್ಚಾಗುವುದು ಸಾಮಾನ್ಯವಾಗಿದೆ. ಆದರೆ ಯೋನಿಯ ವಿಸರ್ಜನೆಯಲ್ಲಿ ಗಮನಾರ್ಹ ಹೆಚ್ಚಳ ಅಥವಾ ಯೋನಿಯ ವಿಸರ್ಜನೆಯ ವಿಧದಲ್ಲಿ ಬದಲಾವಣೆ ಇದ್ದರೆ, ಅಂದರೆ, ನೀರಿನಂತಹ ವಿಸರ್ಜನೆ ಅಥವಾ ವಿಸರ್ಜನೆಯಲ್ಲಿ ರಕ್ತ ಇದೆ ಎಂದರೆ ಇದು ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡುವ ಸಮಯ.

ಎರಡನೇ ತ್ರೈಮಾಸಿಕದ ಅವಧಿಯಲ್ಲಿ, ಯೋನಿಯ ವಿಸರ್ಜನೆ ಹೆಚ್ಚಿದೆ ಎಂದರೆ, ಸರ್ವಿಕ್ಸ್ ಬೇಗನೆ ತೆರೆದುಕೊಂಡಿದೆ ಎಂಬುದನ್ನು ಸೂಚಿಸುತ್ತದೆ, ಇದು ಗರ್ಭಪಾತದ ಚಿಹ್ನೆಯಾಗಿದೆ.

ನಿಮ್ಮ ಗರ್ಭಾವಸ್ಥೆಯ ೩೭ನೇ ವಾರದ ಮುನ್ನವೇ ಯೋನಿಯಿಂದ ಹೆಚ್ಚು ವಿಸರ್ಜನೆ ಆಗುತ್ತಿದೆ ಎಂದರೆ, ನಿಮ್ಮ ಒಳಗಿನ ನೀರು ಬೇಗನೆ ಹೊಡೆದಿದೆ ಮತ್ತು ನಿಮ್ಮ ಮಗು ಬೇಗನೆ ಭೂಮಿಗೆ ಬರಲು ಸಿದ್ಧವಿದ್ದಾನೆ ಎಂದು.

೪.ಜ್ವರ

ಗರ್ಭಾವಸ್ಥೆಯಲ್ಲಿ ಯಾವುದೇ ಜ್ವರವನ್ನು ನಿರ್ಲಕ್ಷಿಸುವಂತಿಲ್ಲ. ಜ್ವರ ಬರುವುದಕ್ಕೆ ಯಾವುದೇ ಕಾರಣವಿರಬಹುದು ಅದು ಸಣ್ಣ ನೋವಿನ ಜ್ವರದಿಂದ ಇಡಿದು ಕಿಡ್ನಿ ಸಮಸ್ಯೆಯ ಜ್ವರ ಆಗಿರಬಹುದು. ನೀವು ಅದನ್ನು ನಿರ್ಲಕ್ಷಿಸದೆ ವೈದ್ಯರ ಬಳಿ ತೋರಿಸಿ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

೫.ತೀವ್ರ ಕಿಬ್ಬೊಟ್ಟೆ ನೋವು

ಮೊದಲ ತ್ರೈಮಾಸಿಕದಲ್ಲಿ ಕೆಳ ಹೊಟ್ಟೆಯ ಎರಡೂ ಬದಿಯಲ್ಲಿ ನೋವು ನಿಮ್ಮ ದೇಹದಲ್ಲಿ ಅಸ್ಥಿರಜ್ಜುಗಳು ವಿಸ್ತರಿಸಿದೆ ಎಂಬುದನ್ನು ಅರ್ಥೈಸುತ್ತದೆ. ಇದು ಗರ್ಭಪಾತದ ಮುನ್ಸೂಚನೆಯನ್ನು ನೀಡುತ್ತದೆ.

ಕೆಲವು ಸಮಯ, ಹೊಟ್ಟೆ ನೋವು ನಿಮ್ಮಲ್ಲಿ ಅಪೆಂಡಿಸೈಟಿಸ್ ಇರುವುದನ್ನು ಸೂಚಿಸುತ್ತವೆ, ಇದನ್ನು ನೀವು ನಿರ್ಲಕ್ಷಿಸಿದರೆ ನಿಮ್ಮ ಮಗುವಿನ ಜನನಕ್ಕೂ ಮುನ್ನವೇ ಮರಣ ಹೊಂದುವ ಪರಿಸ್ಥಿತಿಯನ್ನು ನೀವೇ ಮಾಡಿದ ಹಾಗೆ ಆಗುತ್ತದೆ.

Leave a Reply

%d bloggers like this: