ಗರ್ಭಿಣಿಯರ ಬಗೆಗಿನ ಕೆಲವು ವಿಚಿತ್ರ ಮಾತುಗಳು

ನೀವು ಗರ್ಭಿಣಿ ಎಂದು ತಿಳಿದ ತಕ್ಷಣವೇ ನಿಮ್ಮ ಖುಷಿಯನ್ನು ಪದಗಳಲ್ಲಿ ವಿವರಿಸಲಾಗುವುದಿಲ್ಲ, ಅಂತೆಯೇ ನಿಮ್ಮ ಮನೆಯವರು ನೆರೆಹೊರೆಯವರು ನಿಮ್ಮ ಬಳಿ ಹಲವು ವಿಷಯಗಳನ್ನು ಹಂಚಿಕೊಳ್ಳುವರು, ನಿಮಗೆ ಮತ್ತು ನಿಮ್ಮ ಮನೆಯವರಿಗೆ ನಿಮ್ಮ ಹೊಟ್ಟೆ ಒಳಗಿರುವುದು ಗಂಡೋ ಅಥವಾ ಹೆಣ್ಣು ಮಗುವೋ ಎಂದು ತಿಳಿದುಕೊಳ್ಳುವ ಕುತೂಹಲ ಇರುವುದು ಸಾಮಾನ್ಯ. ಅದರಂತೆ ಕೆಲವರು ಇವುಗಳನ್ನು ಹೇಳುತ್ತಾರೆ. ನಿಮ್ಮ ದೇಹದ ಆಕಾರ, ನಿಮ್ಮ ಬಯಕೆ ಮುಂತಾದವುಗಳನ್ನು ಗಮನಿಸಿ ನಿಮ್ಮ ಹೊಟ್ಟೆಯೊಳಗಿರುವ ಮಗುವಿನ ಲಿಂಗವನ್ನು ಅವರು ಹೇಳುತ್ತಾರೆ.

೧.ನಿಮ್ಮ ಹೊಟ್ಟೆಯ ಆಕಾರ

ನಿಮ್ಮ ಹೊಟ್ಟೆಯು ಹೆಚ್ಚು ದಪ್ಪವಾಗಿದ್ದು,ದೊಡ್ಡ ಆಕಾರ ಇದ್ದರೆ ನೀವು ಹೆಣ್ಣು ಮಗುವನ್ನು ಹೊಂದಿದ್ದೀರಾ ಎಂದು ಹೇಳುತ್ತಾರೆ.

ಇದನ್ನು ೧೦ ರಲ್ಲಿ ೮ ಮಹಿಳೆಯರು ಒಪ್ಪುತ್ತಾರೆ.

ಆದರೆ, ವಿಜ್ಞಾನದ ಪ್ರಕಾರ ಇದು ಹೊಟ್ಟೆಯಲ್ಲಿ ಇರುವ ಮಗುವಿನ ಸ್ಥಿತಿ, ಮಹಿಳೆಯ ಸ್ನಾಯುವಿನ ಗಾತ್ರ, ಮುಂತಾದವುಗಳ ಮೇಲೆ ಅವಲಂಬಿತವಾಗಿದ್ದು ಇದರಿಂದ ಸ್ಪಷ್ಟವಾಗಿ ಮಗುವಿನ ಲಿಂಗ ಪತ್ತೆ ಮಾಡುವುದು ಸಾಧ್ಯವಿಲ್ಲ ಎನ್ನುತ್ತದೆ.

೨.ಬಯಕೆ

ನಿಮ್ಮ ಬಯಕೆಯ ಆಹಾರವು ಸಿಹಿ ತಿನಿಸುಗಳಾಗಿದ್ದರೆ ನೀವು ಹೆಣ್ಣು ಮಗುವಿಗೆ ಜನ್ಮ ನೀಡುವಿರಿ, ಒಂದು ವೇಳೆ ನೀವು ಉಪ್ಪಿನಾಂಶ ಇರುವ ತಿನಿಸುಗಳನ್ನು ಬಯಸಿದರೆ ನಿಮ್ಮ ಮಗು ಗಂಡು.

ಅಧ್ಯಯನದ ಪ್ರಕಾರ ಬಯಕೆಗೂ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವು ಇಲ್ಲ. ಇದನ್ನು ಹಲವು ಮಹಿಳೆಯರು ಒಪ್ಪುತ್ತಾರೆ.

೩.ಉಂಗುರ

ಉಂಗುರವನ್ನು ನೂಲಿಗೆ ಅಥವಾ ದಾರಕ್ಕೆ ಕಟ್ಟಿ ಗರ್ಭಿಣಿ ಉದರದ ಮೇಲೆ ಇರಿಸಿದಾಗ ಅದು ಹಿಂದಕ್ಕೆ ಅಥವಾ ಮುಂದಕ್ಕೆ ಚಲಿಸಿದರೆ ಗಂಡು ಮಗುವನ್ನು ಪಡೆಯುವಿರಿ, ಅಥವಾ ಉಂಗುರ ಸುತ್ತಿದರೆ ಹೆಣ್ಣು ಮಗುವಿಗೆ ಜನ್ಮ ನೀಡುವಿರಿ ಎಂದು ಕೆಲವರು ನಂಬಿದ್ದಾರೆ.

ಇದನ್ನು ನಿಮ್ಮ ಸಂತೋಷಕ್ಕಾಗಿ ಮತ್ತು ಬರಿ ತಮಾಷೆಯಾಗಿ ಖುಷಿಯ ಸಮಯ ಕಳೆಯಲು ಮಾಡಬಹುದು ಅಷ್ಟೇ.

೪.ಎದೆಯುರಿ

ನಿಮ್ಮ ಗರ್ಭಾವಸ್ಥೆಯಲ್ಲಿ ನಿಮಗೆ ಎದೆಯುರಿ ಕಾಣಿಸಿಕೊಂಡರೆ ನಿಮ್ಮ ಮಗು ಉದರದೊಳಗೆಯೇ ಕೂದಲನ್ನು ಬೆಳೆಸಿಕೊಂಡಿರುತ್ತದೆ.

ಗರ್ಭಾವಸ್ಥೆಯಲ್ಲಿ ಎದೆಯುರಿ ಸಾಮಾನ್ಯ, ನಿಜ ಹೇಳಬೇಕೆಂದರೆ, ಗರ್ಭವಾಸ್ಥೆಯಲ್ಲಿ ಹೆಚ್ಚು ಎದೆಯುರಿ ಅನುಭವಿಸಿದ ಅನೇಕ ಮಹಿಳೆಯರ ಶಿಶುಗಳು ಕೂಡಲನ್ನೇ ಹೊಂದಿರಲಿಲ್ಲ.

೫.ನಿಮ್ಮ ತಾಯಿಗೆ ಸುಲಭ ಸಾಮಾನ್ಯ ಹೆರಿಗೆ ಆಗಿದ್ದರೆ, ನೀವು ಸಹ ಸಾಮಾನ್ಯ ಹೆರಿಗೆಯಲ್ಲೇ ಸುಲಭವಾಗಿ ಜನ್ಮ ನೀಡಬಹುದು.

ಅನುವಂಶಿಕತೆ ನಿಮ್ಮ ಹೆರಿಗೆಯನ್ನು ಸುಲಭವಾಗಿ ಮಾಡುವುದರಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಸ್ಪಷ್ಟ ನಿರ್ಧಾರ ಇಲ್ಲ.

Leave a Reply

%d bloggers like this: