ನಿಮಗೆ ಗೊತ್ತಾಗದೆಯೇ ಅತ್ತೆಯರು ನಿಮ್ಮನ್ನು ಹೀಯಾಳಿಸುವ 7 ಪರಿಗಳು

ಕೆಲವೊಂದು ಬಾರಿ ಅತ್ತೆಯಂದಿರು ನಮ್ಮ ಒಳ್ಳೆಯದಕ್ಕೆ ಹೇಳುವವರು ಎಂದೆನಿಸುತ್ತದೆ. ಏಕೆಂದರೆ, ಅವರಿಗೂ ಅವರ ಮಕ್ಕಳ ಮತ್ತು ಮೊಮ್ಮಕ್ಕಳ ಒಳಿತೇ ಬೇಕಲ್ಲವೇ. ಆದರೆ ಕೆಲವು ಸಮಯ ಅವರು ಒಳ್ಳೆಯದು ಎಂದು ಯೋಚಿಸುವ ವಿಷಯವು ಮತ್ತು ನೀವು ಒಳ್ಳೆಯದು ಎಂದುಕೊಳ್ಳುವ ವಿಷಯವು ಬೇರೆ ಬೇರೆ ಆಗಿರುತ್ತವೆ. ಕೆಲವೊಮ್ಮೆ ಅವರು ಹೊಗಳಿಕೆಯ ಮಾತಿನ ಹಿಂದೆಯೂ ಹೀಯಾಳಿಸುವ ಯೋಚನೆ ಇರುತ್ತವೆ. ಅಂಥವುಗಳಲ್ಲಿ ನಮಗೆ ಕೆಲವು ಅರ್ಥವಾಗುವುದೇ ಇಲ್ಲ. ಇಂತಹ ಕೆಲವು ಸಂದರ್ಭಗಳು ಯಾವ್ಯಾವು ಎಂದು ಇಲ್ಲಿ ನಾವು ಪಟ್ಟಿ ಮಾಡಿದ್ದೇವೆ ಓದಿರಿ

೧. ಪರೋಕ್ಷ ಆಕ್ರಮಣಶೀಲತೆ

ಪರೋಕ್ಷವಾಗಿ ಮನಸ್ಸಿಗೆ ನಾಟುವಂತೆ ವ್ಯಂಗ್ಯವಾಡುವುದರಲ್ಲಿ ಇವರು ಎತ್ತಿದ ಕೈ. ನಾನು ಹೇಳುತ್ತಿರುವುದು ಏನು ಎಂಬುದು ನಿಮಗೆ ಇವಾಗ ಆಗಲೇ ತಿಳಿದಿರಬಹುದು. ಅವರು ಬಾಯಿ ಬಿಟ್ಟು ಬೇಡ ಎಂದು ಹೇಳುವುದಿಲ್ಲ, ಬದಲಿಗೆ ಬೇಡ ಎಂದು ಸೂಚಿಸುವಂತ ಮಾತುಗಳನ್ನ ಆಡುವರು. ಉದಾಹರಣೆಗೆ “ನೀನು ಈ ಬಟ್ಟೆ ಹಾಕೊಂಡ್ ಹೋಗ್ತಿದೀಯಾ?”, “ಒಹ್ ಮಗುಗೆ ಈ ಥರ ಬಟ್ಟೆ ಬೇಕು ಅಂತಾನಾ ಹೇಳಿದ್ದು ನೀನು?” “ಒಂಥರಾ ಚೆನ್ನಾಗಿದೆ ಬಿಡು” ಎಂಬ ಮಾತುಗಳು.

೨. ನಿಮ್ಮ ಪತಿ ಮಗು ಆಗಿದ್ದಾಗಿನ ಸಮಯದ ವಿಷಯ ಹೇಳುವಾಗ

ಅವರು ಪ್ರತಿ ಬಾರಿಯೂ ಅವರ ಮಕ್ಕಳನ್ನ ಅವರು ಹೇಗೆ ಹೆತ್ತರು, ಹಾಲುಣಿಸಿದರು, ಬೆಳೆಸಿದರು ಎಂದು ಹೇಳಲು ಮುಂದಾದಾಗ, ಅದರ ಹಿಂದೆ ಒಂದು ಬಲೆ ಎಣೆದಿರುತ್ತಾರೆ. ಅದರ ಅರ್ಥ ಅವರು ಪಾಲಿಸಿದ ನಿಯಮಗಳು, ಅವರು ಬೆಳೆಸಿದ ರೀತಿಯಲ್ಲೇ ನೀವೂ ಕೂಡ ಮಕ್ಕಳನ್ನು ಬೆಳೆಸಬೇಕೆಂಬುದು. ಏಕೆಂದರೆ ಅವರು ನಿಮ್ಮ ತಾಯ್ತನದ ಸಾಮರ್ಥ್ಯದಲ್ಲಿ ಕಿಂಚಿತ್ತು ನಂಬಿಕೆ ಇಟ್ಟಿಲ್ಲ.

೩. ನಿಮಗೆ ಅಡುಗೆ ಮಾಡಲು ಬಿಡದೆ ಇದ್ದಾಗ

ನನ್ನ ಕೈ ರುಚಿ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಆದರೆ ಒಬ್ಬರಿಗೆ ಮಾತ್ರ ಬಿಟ್ಟು. ನೀವು ಊಹಿಸಿರುತ್ತೀರಾ ಯಾರು ಎಂದು. ಯಾರಾದರೂ ಅತಿಥಿಗಳು ಮನೆಗೆ ಬಂದರೆ, ಅಡುಗೆ ಮನೆಯ ಉಸ್ತುವಾರಿ ಎಲ್ಲಾ ಆಕೆಯದ್ದೇ. ಏಕೆಂದರೆ ನನ್ನ ಕೈ ರುಚಿಯನ್ನು ಅತಿಥಿಗಳು ಇಷ್ಟಪಡುವುದಿಲ್ಲ ಎಂಬ ದೃಢ ನಂಬಿಕೆ ನನ್ನ ಅತ್ತೆಯದ್ದು. ಪ್ರತಿದಿನದ ಅಡುಗೆ ಮನೆಯ ಕೆಲಸಗಳಲ್ಲಿ ತಮ್ಮ ಕೈ ಇರದೇ ಇದ್ದರೆ, ಅವರಿಗೆ ಸಮಾಧಾನವಿಲ್ಲ.

೪. ನಿಮ್ಮ ಮನೆಯ/ರೂಮಿನ ಬಗ್ಗೆ ಆಕೆ ಹೇಳುವಾಗ

ಹೌದು ನಮ್ಮ ಮನೆಯನ್ನು ನಾವು ನಮ್ಮ ಆದ್ಯತೆಗಳ, ನಮ್ಮ ರುಚಿಗೆ ತಕ್ಕ ಹಾಗೆ ಇಟ್ಟುಕೊಳ್ಳುತ್ತೀವಿ. ಈ ಮನೆಯಲ್ಲಿ ಮಕ್ಕಳು ಇದ್ದಾರೆ, ಹಾಗಾಗಿ ಗಲೀಜು ಆಗುತ್ತಿರುತ್ತದೆ. ಪ್ರತಿಯೊಬ್ಬರೂ ಅವರದ್ದೇ ಶೈಲಿಯಲ್ಲಿ ಮನೆಯನ್ನ ಇಟ್ಟುಕೊಂಡಿರುತ್ತಾರೆ. ಆದರೆ, ಮಗ, ಸೊಸೆ ಮತ್ತು ಮೊಮ್ಮಕ್ಕಳನ್ನು ನೋಡಲು ಮನೆಗೆ ಬರುವ ಅತ್ತೆಯರು ಮನೆಯ ಬಗ್ಗೆ ಮಾಡುವ ಕಾಮೆಂಟ್ಸ್ ಗಳು ಹೀಯಾಳಿಸುವಂತೆಯೇ ಇರುತ್ತವೆ. ಈ ಮನೆ ನನ್ನದು, ಇದನ್ನು ಕಾಪಾಡಿಕೊಳ್ಳಲು ಶ್ರಮವಹಿಸುತ್ತಿರುವವಳು ನಾನು. ಹೀಗಾಗಿ ನನ್ನ ಮನೆಯ ಬಗ್ಗೆ ಲಘುವಾಗಿ ಮಾತಾಡುವ ಅವಶ್ಯಕತೆ ಇಲ್ಲ.

೫. “ನಿಮ್ಮಗೆಲ್ಲಾ ಏಕೆ ತೊಂದರೆ” ಎಂದು ಸಮಾರಂಭಗಳಿಂದ ಜಾರಿಕೊಂಡಾಗ

ಇತ್ತೀಚಿಗಷ್ಟೇ ನಮ್ಮ ಮನೆಯಲ್ಲಿ ನಾವು ಸಣ್ಣದೊಂದು ಔತಣಕೂಟ ಇಟ್ಟುಕೊಂಡಿದ್ದೆವು ಹಾಗು ಇದಕ್ಕೆ ನಮ್ಮ ಮನೆಯ ಕಡೆಯವರನ್ನ ಮತ್ತು ನನ್ನ ಪತಿಯ ಮನೆಯ ಕಡೆಯವರನ್ನೆಲ್ಲಾ ಆಹ್ವಾನಿಸಿದ್ದೆವು. ಆದರೆ ಅಲ್ಲಿಗೆ ನನ್ನ ಅತ್ತೆ ಬರಲಿಲ್ಲ. ಅದಕ್ಕೆ ಆಕೆ ಕೊಟ್ಟ ಕಾರಣ – “ನಾನು ನಿಮಗೆ ಭಾರ ಆಗುತ್ತೀನೇನೋ ಅಂತ ಬರಲಿಲ್ಲ”. ಆಕೆಯೇನೂ ನಮಗೆ ಭಾರವಾಗುತ್ತಿರಲಿಲ್ಲ  ಆದರೆ ಆ ದಿನ ಆಕೆ ಅಲ್ಲಿಗೆ ಬರದೇ ಇದ್ದ ಕಾರಣ, ಎಲ್ಲರ ಕಣ್ಣಿಗೂ ಆಕೆ ಅಯ್ಯೋ ಪಾಪ ಎನಿಸುವಂತೆ ಕಂಡಳು.

೬. ವ್ಯಂಗ್ಯವಾಗಿ ಹೊಗಳಿದಾಗ

ಎಲ್ಲರೂ ಒಂದು ರೀತಿಯಲ್ಲಿ ಹೊಗಳಿದರೆ, ಅತ್ತೆಯರು ಹೊಗಳುವ ರೀತಿಯೇ ಬೇರೆ ಆಗಿರುತ್ತದೆ. ಅದು ಯಾವುದೇ ವಿಷಯವಿರಲಿ. ನಿಮ್ಮ ಉಡುಪು, ಮನೆ, ಅಡುಗೆ ಅಥವಾ ಇನ್ನ್ಯಾವುದೇ ಇರಲಿ. ನಿಮ್ಮ ಅತ್ತೆ ನಿಮಗೆ “ಮನೆಯನ್ನ ಒಬ್ಬಳೇ ನೋಡಿಕೊಳ್ಳುವುದಕ್ಕೆ ತುಂಬಾ ಕಷ್ಟ ಆಗುತ್ತೇನೋ ನಿನಗೆ ಅಲ್ವಾ” ಎಂದಾಗ ಆಕೆ ನಿಜವಾಗಲೂ ಅನ್ನುತ್ತಿರುವುದು ನೀವು ಮನೆಯನ್ನು ಸರಿಯಾಗಿ ಇಟ್ಟುಕೊಂಡಿಲ್ಲ ಎಂದು. “ಒಹ್ ಜೋರ್ ಇದೆ ನಿನ್ನ ಬಟ್ಟೆ” ಎಂದು ಆಕೆ ಹೇಳಿದಾಗ ಆಕೆ ಹೇಳುತ್ತಿರುವುದು ನೀವು ಎಲ್ಲರೂ ನೋಡಲೆಂದೇ ಆ ಬಟ್ಟೆ ಧರಿಸಿದ್ದೀರೆಂದು.

೭. ಮಕ್ಕಳನ್ನು ಬೆಳೆಸುವ ಬಗ್ಗೆ ಬೇಡದ ಸಲಹೆಗಳನ್ನು ನೀಡುವುದು

ಬೇಡದ ಸಲಹೆಗಳು ನನಗೆ ಯಾರು ಕೊಟ್ಟರೂ ಇಷ್ಟ ಆಗುವುದಿಲ್ಲ. ಅದರಲ್ಲೂ ನನ್ನ ಅತ್ತೆ ಕೊಟ್ಟರೆ. ಇದು ಯಾವಾಗಲೂ ಹಿಂದ್ವಾರದಿಂದ ಹೀಯಾಳಿಸುವ ಉದ್ದೇಶದಿಂದಲೇ ನೀಡುವಂತವು ಆಗಿರುತ್ತವೆ. ಹೌದು ಆಕೆ ಮಕ್ಕಳನ್ನ ತುಂಬಾ ಚೆನ್ನಾಗಿ ಬೆಳೆಸಿದ್ದಾಳೆ, ಅವಳ ಮಕ್ಕಳು ಅದ್ಭುತ. ಅದಕ್ಕೆ ತಾನೇ ನಾನು ಅವರ ಮಗನನ್ನು ಮದುವೆ ಆಗಿದ್ದು. ಆದರೆ ಈಗ ನಾನು ತಾಯಿ ಆಗಿದ್ದೇನೆ. ಹೇಗೆ ಮಕ್ಕಳನ್ನ ಬೆಳೆಸಬೇಕು ಎಂಬುದು ನನಗೆ ತಿಳಿದಿದೆ. ನಿಮ್ಮ ನಂಬಿಕೆಗಳನ್ನ ಮತ್ತು ನಿಮ್ಮ ವಿಚಾರಗಳನ್ನ ನನ್ನ ಮೇಲೆ ದಯವಿಟ್ಟು ಹೇರಬೇಡಿ.

Leave a Reply

%d bloggers like this: