ಸುಲಭವಾಗಿ ಮತ್ತು ತ್ವರಿತವಾಗಿ ಮನೆಯಲ್ಲೇ ತಯಾರಿಸಿ ರುಚಿಕರ “ದೂಧ್ ಪೇಡಾ”

ನಿಮ್ಮ ಮಕ್ಕಳು ಸಿಹಿಯನ್ನು ಇಷ್ಟಪಡುವುದು ಸಹಜ, ಸಿಹಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಹೊರಗಿನ ಅನಾರೋಗ್ಯಕರ ತಿನಿಸುಗಳಿಗಿಂತ ಆರೋಗ್ಯಕರ ರುಚಿಕರ ಸಿಹಿ ತಿನಿಸುಗಳನ್ನು ನೀವೇ ನಿಮ್ಮ ಕೈಯಾರೆ ಮಾಡಿಕೊಡಿ. ನನಗೆ ತಿನಿಸು ಮಾಡಲು ಬರುವುದಿಲ್ಲ ಎಂದು ತಲೆಕೆಡಿಸಿಕೊಳ್ಳಬೇಡಿ, ಇದನ್ನು ಮಾಡಲು ಬೇಕಾಗುವ ಪದಾರ್ಥಗಳೆಲ್ಲಾ ನನಗೆ ಸುಲಭವಾಗಿ ಸಿಗುತ್ತದೆಯೇ ಎಂಬುದರ ಬಗ್ಗೆಯೂ ನಿಮಗೆ ಚಿಂತೆ ಬೇಡ, ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಕೈಗೆ ಸುಲಭವಾಗಿ ಸಿಗುವ ಪದಾರ್ಥಗಳಿಂದಲೇ ಇದನ್ನು ನೀವು ತಯಾರಿಸಬಹುದು. ಈ ಹಬ್ಬಕ್ಕೆ ನಿಮ್ಮ ಕೈ ರುಚಿಯ ಪೇಡಾವನ್ನು ನಿಮ್ಮ ಮನೆಯವರಿಗೆ ನೀಡಿ ಅವರ ನಿಮ್ಮ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಿ.

ಬೇಕಾಗಿರುವ ಪದಾರ್ಥಗಳು
೧. ೨೦೦ಗ್ರಾಂ. (condensed milk)ಮಂದವಾದ ಹಾಲು(ಹಸುವಿನ ಮಂದಹಾಲು ಉಪಯೋಗಿಸುವುದು ಒಳ್ಳೆಯದು)

೨. ಅರ್ಧ ಚಮಚ ತುಪ್ಪ ಅಥವಾ ಬೆಣ್ಣೆ

೩. ೩/೪ ಬಟ್ಟಲು ಹಾಲಿನ ಪುಡಿ
೪. ಚಿಟಕಿ ಕೇಸರಿ

೫. ಚಿಟಕಿ ಜಾಯಿಕಾಯಿ ಪುಡಿ(nutmeg/jaiphal powder)

೬. ೩ರಿಂದ ೪ ಏಲಕ್ಕಿ
ವಿಧಾನ

೧.ಒಂದು ಬಟ್ಟಲಿನಲ್ಲಿ, ಮಂದವಾದ ಹಾಲು, ಹಾಲಿನ ಪುಡಿ ಮತ್ತು ತುಪ್ಪ/ಬೆಣ್ಣೆಯನ್ನು ಹಾಕಿ ಮಿಶ್ರಿಸಿ.

೨.ಮಿಶ್ರಣದಲ್ಲಿ ಯಾವುದೇ ಗುಳ್ಳೆ ಅಥವಾ ಗಂಟು ಬರದಂತೆ ಗಮನಿಸಿಕೊಳ್ಳಿ.

೩.ಏಲಕ್ಕಿಯನ್ನು ಪುಡಿಮಾಡಿಕೊಳ್ಳಿ.

೪.ಮೈಕ್ರೋಓವೆನ್ ಅನ್ನು ಆನ್ ಮಾಡಿ

೫.ಮಿಶ್ರಣಕ್ಕೆ ಕೇಸರಿ, ಜಾಯಿಕಾಯಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.

೬.ಇದನ್ನು ಚೆನ್ನಾಗಿ ಕಲಸಿ ಮೈಕ್ರೋವೇವ್ ಅಲ್ಲಿ ಹೆಚ್ಚಿನ ಉಷ್ಣಾಂಶದಲ್ಲಿ ಇರಿಸಿ.

೭.೩೦ ಸೆಕೆಂಡ್ ಇದನ್ನು ಅದರಲ್ಲಿ ಇರಿಸಿ, ನಂತರ ತೆಗೆಯಿರಿ ಇನ್ನು ದ್ರವದ ರೂಪದಲ್ಲಿ ಇದ್ದರೆ ಪುನಃ ೩೦ ಸೆಕೆಂಡ್ ಅದನ್ನು ಮೈಕ್ರೋವೇವ್ ನಲ್ಲಿ ಇರಿಸಿ.

೮.ಮಿಶ್ರಣ ಸ್ವಲ್ಪ ಗಟ್ಟಿಯಾದ ನಂತರ ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಅಥವಾ ಉಂಡೆಗಳನ್ನಾಗಿ ಮಾಡಿ.

೯.ಸಣ್ಣ ಉಂಡೆಮಾಡುವಾಗ ಸ್ವಲ್ಪ ತುಪ್ಪವನ್ನು ಸವರಿಕೊಳ್ಳಿ.

೧೦.ನಂತರ ನಿಮ್ಮ ಮಕ್ಕಳಿಗೆ ಸವಿಯಾದ ದೂಧ್ ಪೇಡಾವನ್ನು ಸವಿಯಲು ನೀಡಿ.

ಮೈಕ್ರೋವೇವ್ ಇಲ್ಲದಿದ್ದರೆ,

ಮಿಶ್ರಣಕ್ಕೆ ಏಲಕ್ಕಿ ಪುಡಿ, ಕೇಸರಿ ಮತ್ತು ಜಾಯಿಕಾಯಿ ಪುಡಿಯನ್ನು ಹಾಕಿ ಕಲಸಿ.

ಚೆನ್ನಾಗಿ ಕಲಸಿ ಒಂದು ಪಾತ್ರೆ ಅಥವಾ ಪಾನ್ ಅನ್ನು ತಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಸವರಿ ಮಿಶ್ರಣವನ್ನು ಹಾಕಿ ೧೦ ರಿಂದ ೧೫ ನಿಮಿಷಗಳ ಕಾಲ ಬೇಯಿಸಿ.

ನೆನಪಿರಲಿ ಪಾತ್ರೆಯಲ್ಲಿ ಬೇಯಿಸುವಾಗ ಮಿಶ್ರಣ ತುಂಬಾ ಗಟ್ಟಿಯಾಗದಂತೆ ನೋಡಿಕೊಳ್ಳಿ.

ಪಾತ್ರೆಯಲ್ಲಿ ಮಾಡುವಾಗ ಮುಚ್ಚಳ ಮುಚ್ಚಿ ಬೇಯಿಸುವುದು ಸೂಕ್ತ.

ನಂತರ ಸಣ್ಣ ಉಂಡೆಗಳನ್ನಾಗಿ ಮಾಡಿ ಸವಿಯಿರಿ.

ಸಲಹೆ: ಉಂಡೆಯ ಮೇಲೆ ಚೆರ್ರಿ ಅಥವಾ ಗೊಡಂಭಿಯನ್ನು ಇಟ್ಟು ಅಲಂಕರಿಸಬಹುದು.

Leave a Reply

%d bloggers like this: