ಮುಖದ ಮೇಲೆ ಕೂದಲು ಬೆಳೆಯುವುದು ಸಾಮಾನ್ಯ, ಅದು ಹುಡುಗಿಯರಲ್ಲೂ ಕೂಡ ಬೆಳೆಯುವುದು ಸಾಮಾನ್ಯವಾಗಿದೆ, ಇದಕ್ಕೆ ಹಾರ್ಮೋನು ಅಥವಾ ಅನುವಂಶೀಯತೆ ಕಾರಣವಾಗಿದೆ. ಅವರ ಸೂಕ್ಷ್ಮ ಸುಂದರ ತ್ವಚೆಗೆ ಮುಖದ ಮೇಲೆ ಕೂದಲು ಅಷ್ಟು ಸುಂದರವಾಗಿ ಕಾಣಿಸುವುದಿಲ್ಲ, ಹಾಗೆಂದು ನೀವು ಅದನ್ನು ಶೇವ್ ಅಥವಾ ಬೇರೆ ರೀತಿಯಲ್ಲಿ ತೆಗೆಯುವುದರಿಂದ ನಿಮ್ಮ ಮುಖದ ಮೇಲೆ ಕೂದಲು ಮತ್ತೆ ಬೆಳೆಯುತ್ತದೆ ಮತ್ತು ಅದನ್ನು ನೀವು ಆಗಾಗ್ಗೆ ಮಾಡಬೇಕಾಗುವುದು.
ಇಲ್ಲಿ ನೀಡಿರುವ ನೈಸರ್ಗಿಕ ವಿಧಾನವನ್ನು ನೀವು ಅನ್ವಯಿಸಿದರೆ ನಿಮ್ಮ ಮುಖದ ಮೇಲಿನ ಕೂದಲನ್ನು ಶಾಶ್ವತವಾಗಿ ತೆಗೆಯಬಹುದು. ಇದಕ್ಕೆ ನೀವು ಮಾಡಬೇಕಾಗಿರುವುದು ನಿಮ್ಮ ಮುಖದ ಮೇಲೆ ಕೂದಲು ಬೆಳೆಯುತ್ತಿರುವುದು ಕಂಡ ಕೂಡಲೇ ಇಲ್ಲಿ ಹೇಳಿರುವ ವಿಧಾನವನ್ನು ಮಾಡುವುದರಿಂದ ನಿಮ್ಮ ಮುಖದ ಮೇಲೆ ಮೀಸೆ ಅಥವಾ ಗಡ್ಡ ಬರುವುದನ್ನು ನಿಲ್ಲಿಸಬಹುದು.
ಒಂದು ವೇಳೆ ನೀವು ಕೂದಲನ್ನು ತೆಗೆಯಲು ಬೇರೆ ವಿಧಾನ ಬಳಸಿ ಅದರಲ್ಲೂ ಶೇವ್ ವಿಧಾನವನ್ನು ಮಾಡಿದ್ದರೆ, ಶಾಶ್ವತವಾಗಿ ನಿಲ್ಲಿಸುವುದು ಸ್ವಲ್ಪ ಕಷ್ಟವಾಗಬಹುದು ಆದರೆ ಕೂದಲು ಬೆಳೆಯುವ ವೇಗವನ್ನು ತುಂಬಾ ನಿಧಾನವಾಗಿ ಬೆಳೆಯುವಂತೆ ಮಾಡಬಹುದು.
೧.ಅರಿಶಿಣ ಮತ್ತು ಹಾಲು
ಅರಿಶಿಣ ನಮ್ಮ ಪೂರ್ವಜರ ಕಾಲದಿಂದಲೂ ತ್ವಚೆಯ ಹೊಳಪು ಮತ್ತು ಆರೋಗ್ಯವನ್ನು ಹೆಚ್ಚಿಸಲು ಬಳಸಿಕೊಂಡು ಬಂದಿರುವ ವಸ್ತು. ಇದು ನಿಮ್ಮ ತ್ವಚೆಯನ್ನು ಶುಚಿಗೊಳಿಸಿ ಹೊಳಪನ್ನು ಹೆಚ್ಚಿಸುತ್ತದೆ. ಹಾಲು ನಿಮ್ಮ ಚರ್ಮವನ್ನು ನೀರಿನಾಂಶದಿಂದ ಇರುವಂತೆ ಮಾಡಿ ತ್ವಚೆಯ ಕಲ್ಮಶಗಳನ್ನು ತೆಗೆಯಲು ಸಹಾಯ ಮಾಡುತ್ತದೆ.
೧.ಒಂದು ಬಟ್ಟಲಿನಲ್ಲಿ ಒಂದು ಚಮಚ ಅರಿಶಿಣ ಮತ್ತು ಹಾಲನ್ನು ಹಾಕಿ ಮಿಶ್ರಣ ಮಾಡಿ.
೨.ನಿಮ್ಮ ಮುಖದ ಮೇಲಿರುವ ಕೂದಲಿಗೆ(ಮೀಸೆಗೆ/ಗಡ್ಡಕ್ಕೆ) ನಿಮ್ಮ ಸ್ವಚ್ಛ ಬೆರಳಿನಿಂದ ಹಚ್ಚಿರಿ.
೩.ಅದು ಒಣಗುವವರೆಗೆ ಹಾಗೆ ಇರಿ, ನಿಧಾನವಾಗಿ ಅದನ್ನು ಉಜ್ಜಿರಿ, ನಿಮ್ಮ ಕೂದಲು ಬೆಳೆಯುತ್ತಿರುವ ವಿರುದ್ಧ ದಿಕ್ಕಿನಲ್ಲಿ ಉಜ್ಜಿರಿ.
೪.ಉಗುರು ಬೆಚ್ಚನೆಯ ಅಥವಾ ತಣ್ಣೀರಿನಿಂದ ತೊಳೆಯಿರಿ.
೨.ಅರಿಶಿಣ ಮತ್ತು ನೀರು
ಇದು ಸ್ವಲ್ಪ ಮೇಲಿನ ಮಿಶ್ರಣದಂತೆ ಉಪಯೋಗಿಸಬಹುದು
೧.ಒಂದು ಬಟ್ಟಲಿಗೆ ಸಮಪ್ರಮಾಣದ ಅರಿಶಿಣ ಮತ್ತು ನೀರನ್ನು ಹಾಕಿ.
೨.ಇದನ್ನು ಚೆನ್ನಾಗಿ ಮಿಶ್ರಿಸಿ ನಿಮ್ಮ ಕೂದಲಿರುವ ಜಾಗಕ್ಕೆ ಹಚ್ಚಿರಿ.
೩.ಅರ್ಧ ಗಂಟೆ ಇದನ್ನು ಹಾಗೆಯೆ ಬಿಡಿ.
೪.ನಿಮ್ಮ ಮಿಸೆ ಬೆಳೆಯುತ್ತಿರುವ ವಿರುದ್ಧ ದಿಕ್ಕಿನಲ್ಲಿ ಬೆರಳಿನಿಂದ ನಿಧಾನವಾಗಿ ತಿಕ್ಕಿರಿ. ನಂತರ ನೀರಿನಲ್ಲಿ ತೊಳೆಯಿರಿ.
೫.ಇದನ್ನು ನಿರಂತರವಾಗಿ ೪ ವಾರಗಳು ಮಾಡಿರಿ.
೩.ಸಕ್ಕರೆ
ನೋವು ರಹಿತ ವಾಕ್ಸಿಂಗ್ ಗೆ ಸಕ್ಕರೆ ತುಂಬಾ ಹೆಸರುವಾಸಿ. ಇದು ಕೂದಲನ್ನು ತೆಗೆದುಹಾಕುವುದರ ಜೊತೆಗೆ ಕೂದಲ ಮರು ಬೆಳವಣಿಗೆಯನ್ನು ನಿಲ್ಲಿಸುತ್ತದೆ.
೧.ಒಂದು ಪಾತ್ರೆಯಲ್ಲಿ ಸಕ್ಕರೆಯನ್ನು ಒಂದು ನಿಮಿಷದವರೆಗೆ ಬಿಸಿ ಮಾಡಿ
೨.ಆ ಬಿಸಿ ಸಕ್ಕರೆಗೆ ತಾಜಾ ನಿಂಬೆ ರಸವನ್ನು ಸೇರಿಸಿ.
೩.ಅದು ಸ್ವಲ್ಪ ಗಟ್ಟಿ ಪೇಸ್ಟ್ ತರ ಆಗುವವರೆಗೆ ಚೆನ್ನಾಗಿ ತಿರುಗಿಸುತ್ತಿರಿ.
೪.ಇದು ಆರಿದ ನಂತರ ಅದನ್ನು ಕೂದಲಿರುವ ಜಾಗದಲ್ಲಿ ಹಚ್ಚಿರಿ.
೫.ಈಗ ಒಂದು ಬಟ್ಟೆಯನ್ನು ತೆಗೆದುಕೊಂಡು ಆ ಜಾಗದ ಮೇಲೆ ಇರಿಸಿ.
೬.ಬಟ್ಟೆ ಮೇಲೆ ಅದುಮಿ ದಿಡೀರ್ ಆಗಿ ಬಟ್ಟೆಯನ್ನು ಎಳೆದುಕೊಳ್ಳಿರಿ. ಅದು ಕೂದಲು ಬೆಳೆಯುತ್ತಿರುವ ವಿರುದ್ಧ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು.
೪.ನಿಂಬೆಹಣ್ಣು, ಸಕ್ಕರೆ ಮತ್ತು ನೀರು
೧.ಎರಡು ನಿಂಬೆಹಣ್ಣಿನ ರಸವನ್ನು ಒಂದು ಬಟ್ಟಲಿಗೆ ಹಾಕಿ
೨.ಸ್ವಲ್ಪ ನೀರು ಮತ್ತು ಸಕ್ಕರೆಯನ್ನು ಇದಕ್ಕೆ ಸೇರಿಸಿ ತೆಳ್ಳನೆಯ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ
೩.ಪೇಸ್ಟ್ ತಯಾರಾದ ಮೇಲೆ, ಅದನ್ನು ಮುಖದ ಮೇಲಿರುವ ಕೂದಲಿಗೆ ಹಚ್ಚಿರಿ
೪.ಇದು ೧೦ ರಿಂದ ೧೫ ನಿಮಿಷಗಳ ಕಾಲ ಹಾಗೆಯೆ ಬಿಟ್ಟು ನಂತರ ನೀರಿನಿಂದ ತೊಳೆಯಿರಿ.