ಈಗ ಮನೆಯಲ್ಲೇ ಸುಲಭವಾಗಿ ತಟ್ಟಂತೆ ತಯಾರಿಸಿ ” ಸ್ಪೆಷಲ್ ಮೈಸೂರು ಪಾಕ್”

ಸಿಹಿ ಎಂದರೆ ಯಾರಿಗೆ ಇಷ್ಟ ಇಲ್ಲ, ಅದರಲ್ಲೂ ಮೈಸೂರ್ ಪಾಕ್ ಎಂದರೆ ಎಲ್ಲರ ಬಾಯಿಯಲ್ಲೂ ನೀರು ಬರುವುದು ಸಹಜ, ತನ್ನದೇ ಆದ ವಿಶಿಷ್ಟ ವಿಭಿನ್ನ ರುಚಿಯನ್ನು ಹೊಂದಿರುವ ಮೈಸೂರ್ ಪಾಕ್ ತನ್ನ ರುಚಿ ಇಂದಲೇ ಜಗತ್ ಪ್ರಸಿದ್ದಿ ಆಗಿದೆ.

“ಈ ವಿಧಾನ ಅಧಿಕೃತ ಮೈಸೂರ್ ಪಾಕ್ ಮಾಡುವುದರ ವಿಧಾನ ಅಲ್ಲದಿದ್ದರೂ, ನಿಮಗೆ ಸಾಮಾನ್ಯ ಬೇಕರಿ, ಮತ್ತು ಸಿಹಿ ಅಂಗಡಿಗಳಲ್ಲಿ ಸಿಗುವ ಮೈಸೂರ್ ಪಾಕ್ ನಂತೆ ರುಚಿಯನ್ನು ನೀಡುತ್ತದೆ. ಮತ್ತು ನಿಮ್ಮ ಮನೆಯಲ್ಲೇ ಸಿಗುವ ವಸ್ತುಗಳಿಂದ ಇದನ್ನು ನೀವು ತಯಾರಿಸಬಹುದು.”

ಬೇಕಾಗಿರುವ ಸಾಮಗ್ರಿಗಳು
೧.ಕಡ್ಲೆಬೇಳೆ ಹಿಟ್ಟು(ಪುಡಿ) – ಒಂದು ಬಟ್ಟಲು

೨.ಸಕ್ಕರೆ – ೨ ಬಟ್ಟಲು

೩.ತುಪ್ಪ – ೨ ಬಟ್ಟಲು

ವಿಧಾನ

೧.ಕಡ್ಲೆಬೇಳೆ ಹಿಟ್ಟನ್ನು(ಪುಡಿಯನ್ನು) ಒಂದರಿ ಆಡಿ, ಒಂದು ಪಾತ್ರೆಯಲ್ಲಿ ಅದನ್ನು ಬಿಸಿ ಮಾಡಿಕೊಳ್ಳಿ. ಅದನ್ನು ಒಂದು ಹಾಳೆಯ ಮೇಲೆ ಹಾಕಿ ಸ್ವಲ್ಪ ಸಮಯ ಆರಲು ಬಿಡಿ.

೨.ತುಪ್ಪವನ್ನು ಕರಗಿಸಿಕೊಂಡು, ಬಿಸಿ ಮಾಡಿಕೊಳ್ಳಿ.

೩.ಒಂದು ಪಾತ್ರೆಗೆ ಸಕ್ಕರೆ ಮತ್ತು ಅದಕ್ಕೆ ಬೇಕಾಗುವಷ್ಟು ನೀರನ್ನು ಹಾಕಿ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ.

೪.ಸಕ್ಕರೆ ಪಾಕದ ರೀತಿ ಆದ ನಂತರ, ಇದಕ್ಕೆ ಕಡ್ಲೆಬೇಳೆ ಪುಡಿಯನ್ನು ನಿಧಾನವಾಗಿ ಹಾಕಿ, ಪುಡಿ(ಹಿಟ್ಟನ್ನು)ಯನ್ನು ಹಾಕುವಾಗ ಸಕ್ಕರೆ ಪಾಕವನ್ನು ಚೆನ್ನಾಗಿ ತಿರುಗಿಸುತ್ತಿರಿ. ಅದು ಸ್ವಲ್ಪ ಗಟ್ಟಿಯಾದ ನಂತರ ಇದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ, ನಿರಂತರವಾಗಿ ಅದನ್ನು ತಿರುಗಿಸುತ್ತಾ ಇರಿ(/ಕದಡುತ್ತಿರಿ). ಮಧ್ಯಮ ಉರಿಯಲ್ಲಿ ಮಾಡುವುದು ಸೂಕ್ತ.

೫.ಒಂದು ಟ್ರೇ ಅಥವಾ ಅಗಲವಾದ ತಟ್ಟೆ ಅಥವಾ ಚೌಕಾಕಾರದ ಟ್ರೇ ಗೆ ತುಪ್ಪ ಸವರಿ ಇಟ್ಟುಕೊಂಡಿರಿ.

೬.ಮಿಶ್ರಣದಿಂದ ಗುಳ್ಳೆಗಳ ರೀತಿಯಲ್ಲಿ ಬರುವುದು ಕಂಡಾಗ ಇದನ್ನು ತುಪ್ಪ ಸವರಿಕೊಂಡಿರುವ ಪಾತ್ರೆ ಅಥವಾ ತಟ್ಟೆಗೆ ಹಾಕಿ.

೭.ಇದನ್ನು ಸ್ವಲ್ಪ ಸಮಯ ಆರಲು ಬಿಡಿ, ಆರಿದ ನಂತರ ನಿಮಗೆ ಇಷ್ಟವಾದ ಆಕಾರದಲ್ಲಿ ಇದನ್ನು ಕತ್ತರಿಸಿ. ಪೂರ್ತಿ ಆರಲು ಬಿಡಿ, ನಂತರ ಇದನ್ನು ನಿಮ್ಮ ಪ್ರೀತಿ ಪಾತ್ರರಿಗೆ ರುಚಿ ಸವಿಯಲು ನೀಡಿ.

Leave a Reply

%d bloggers like this: