ಮಗುವಿನ ಹುಟ್ಟಿದ ತಿಂಗಳು ಅವರ ಭವಿಷ್ಯದ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ?

ನಾವು ಯಾವಾಗಲು ನಮ್ಮ ಮಕ್ಕಳು ಬೆಳೆದ ಹಾಗೆ ಯಾವ ರೀತಿಯ ವ್ಯಕ್ತಿ ಆಗುತ್ತಾರೋ ಎಂದು ಯೋಚಿಸುತಿರುತ್ತೀವಿ. ಇದು ಬಹುತೇಕ ನೀವು ಅವರನ್ನು ಯಾವ ರೀತಿಯಲ್ಲಿ ಬೆಳೆಸುತ್ತೀರಾ ಎನ್ನುವುದರ ಮೇಲೆ ಅವಲಂಬಿತ ಆಗಿದ್ದರೂ, ಎಲ್ಲೋ ಒಂದು ದೈವಿಕ ಮಧ್ಯಸ್ಥಿಕೆ ಇರುತ್ತದೆ ಎಂದು ನಾವು ಅಂದುಕೊಳ್ಳುವುದರಲ್ಲಿ ತಪ್ಪಿಲ್ಲ. ಅದರಲ್ಲು ನಮ್ಮ ದೇಶದಲ್ಲಿ ನಾವು ಜ್ಯೋತ್ಯಿಷ್ಯವನ್ನ ಸ್ವಲ್ಪ ಜಾಸ್ತಿಯೇ ನಂಬುತ್ತೇವೆ. ಹೀಗಾಗಿ ನಾವು ನಿಖರವಾಗಿ ಅಲ್ಲದಿದ್ದರೂ ಹಾಗೆ ಸುಮ್ಮನೆ ನಿಮ್ಮ ಮಗುವು ಜನಿಸಿದ ತಿಂಗಳು ನಿಮ್ಮ ಮಗುವಿನ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂಬುದನ್ನ ನೋಡೋಣ ಬನ್ನಿ :

೧. ಜನವರಿ

ಈ ತಿಂಗಳಲ್ಲಿ ಜನಿಸಿದ ಮಕ್ಕಳಿಗೆ ತರಾವರಿ ಉಡುಪುಗಳನ್ನ ಧರಿಸಲು ಇಷ್ಟ, ಸ್ವಲ್ಪ ಹಠ ಜಾಸ್ತಿ, ಒಂದು ಕೆಲ್ಸದಲ್ಲಿ ಬಹಳ ಹೊತ್ತು ತೊಡಗಿಸಿಕೊಳ್ಳುವುದಿಲ್ಲ ಮತ್ತು ಭಾವನೆಗಳನ್ನ ಬಹಿರಂಗವಾಗಿ ಹೆಚ್ಚಾಗಿ ವ್ಯಕ್ತಪಡಿಸುವುದಿಲ್ಲ. ಅಕಸ್ಮಾತ್ ಅವರು ತಮ್ಮ ಭಾವನೆಗಳನ್ನ ವ್ಯಕ್ತಪಡಿಸಿದರೂ, ಅದು ಯಾರಾದರೂ ಅವರ ಮನಸಿಗೆ ನೋವು ಮಾಡಿದಾಗ ಮಾತ್ರ. ಆಗಲೂ ಅವರು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಇವರು ಸೂಕ್ಷ್ಮ ಜೀವಿಗಳು, ಗರ್ವ ಇಲ್ಲದವರು ಮತ್ತು ಛಲ ಉಳ್ಳವರು ಆಗಿರುತ್ತಾರೆ.

೨. ಫೆಬ್ರವರಿ

ಈ ತಿಂಗಳಲ್ಲಿ ಹುಟ್ಟಿದ ಮಕ್ಕಳು ಸಹಜವಾಗಿ ಬುದ್ದಿವಂತರು ಮತ್ತು ಚತುರರು ಆಗಿರುತ್ತಾರೆ. ಇವರು ಆಕರ್ಷಣೀಯವಾಗಿರುತ್ತಾರೆ ಮತ್ತು ಮಾತು ಕಮ್ಮಿ ಆಡುತ್ತಾರೆ. ಇವರಿಗೆ ನಾಚಿಕೆ ಹೆಚ್ಚು, ಆದರೆ ಬದ್ಧತೆ ಕೂಡ ಜಾಸ್ತಿ. ಇವರನ್ನು ಕಟ್ಟಿ ಹಾಕಲು ಯಾರಾದರೂ ಪ್ರಯತ್ನಿಸಿದರೆ, ಇವರು ಆಕ್ರಮಣಶಾಲಿಗಳಾಗುತ್ತಾರೆ. ಅಲ್ಲದೆ, ಇವರಿಗೆ ಆಕ್ರಮಣಶೀಲತೆ ಎಂದರೆ ಇಷ್ಟ. ಇವರ ಕಣ್ಣು ಸದಾ ಅವರ ಗುರಿಯ ಮೇಲಿರುತ್ತದೆ. ಇತರರಿಗಿಂತ ಇವರು ಕನಸುಗಳು ಬಹಳ ದೊಡ್ಡದಿರುತ್ತವೆ.

೩. ಮಾರ್ಚ್

ಈ ಮಕ್ಕಳ ಮುಖ್ಯ ಗುಣಗಳು ಎಂದರೆ – ಅಕ್ಕರೆ, ನಾಚಿಕೆ ಮತ್ತು ತಮ್ಮ ಪಾಡಿಗೆ ತಾವು ಇರುವುದು. ಇವರು ಶಾಂತಿ, ನೆಮ್ಮದಿ ಮತ್ತು ಪ್ರಶಾಂತತೆಯನ್ನ ಹೆಚ್ಚು ಇಷ್ಟ ಪಡುತ್ತಾರೆ ಹಾಗು ಇವರು ಬಹಳಾನೇ ವಿಶ್ವಾಸಾರ್ಹ ವ್ಯಕ್ತಿಗಳು ಆಗಿರುತ್ತಾರೆ. ಇವರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಜನರನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಾರೆ. ಇವರು ತಮ್ಮ ಭಾವನೆಗಳನ್ನೆಲ್ಲಾ ತಮ್ಮ ಒಳಗೇನೇ ಮುಚ್ಚಿಟ್ಟುಕೊಳ್ಳುವುದಕ್ಕೆ ಮತ್ತು ಬಹಳ ವಿರಳವಾಗಿ ಅವುಗಳನ್ನ ವ್ಯಕ್ತಪಡಿಸುವುದಕ್ಕೆ ಹೆಸರುವಾಸಿ.

೪. ಏಪ್ರಿಲ್

ನೀವು ಇವರ ಜೊತೆ ಇರುವಷ್ಟು ಕಾಲ ನಗುತ್ತಲೇ ಕಾಲ ಕಳೆಯುತ್ತೀರ. ಇವರಿಗೆ ಒಳ್ಳೆಯ ಹಾಸ್ಯಪ್ರಜ್ಞೆ ಇರುತ್ತದೆ. ಇವರ ಮುಖ್ಯ ಗುಣಗಳು ಎಂದರೆ – ಮಾತುಗಾರಿಕೆ, ಆತ್ಮವಿಶ್ವಾಸ, ಸೂಕ್ಷ್ಮತೆ. ಇವರು ಜೀವನದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಹೊಂದಿರುತ್ತಾರೆ ಮತ್ತು ಹೈಪರ್ ಆಕ್ಟಿವ್ ಆಗಿರುತ್ತಾರೆ. ಇವರು ಸ್ವಲ್ಪ ಗುಟ್ಟುಗಳನ್ನ ಕಾಪಾಡಿಕೊಳ್ಳುವುದು ಹೆಚ್ಚು. ಇಷ್ಟೆಲ್ಲಾ ಗುಣಗಳಿರುವ ವ್ಯಕ್ತಿಯು ಯಾವಾಗಲು ಜನರಲ್ಲಿ ಆಸಕ್ತಿ ಮೂಡಿಸುವಂತಹ ವ್ಯಕ್ತಿ ಆಗಿರುತ್ತಾನೆ.

೫. ಮೇ

ಇವರು ಸ್ವಲ್ಪ ಭಂಡರು ಮತ್ತು ಗಟ್ಟಿ ಹೃದಯದವರು. ಯಾವಾಗಲೂ ಪ್ರೇರಿಪಿತರಾಗಿರುತ್ತಾರೆ ಮತ್ತು ದೃಢ ಸಂಕಲ್ಪ ಹೊಂದಿರುತ್ತಾರೆ. ಇವರು ತೀಕ್ಷ್ಣವಾದ ಯೋಚನೆಗಳು ಹೊಂದಿರುತ್ತಾರೆ, ಬೇಗನೆ ಸಿಟ್ಟಾಗುತ್ತಾರೆ, ಇತರರನ್ನು ಒಲಿಸಿಕೊಳ್ಳಲು ಇಷ್ಟ ಪಡುತ್ತಾರೆ ಮತ್ತು ಗಮನವನ್ನ ಬಯಸುತ್ತಾರೆ. ಇವರಿಗೆ ಯಾವಾಗಲು ಆಳವಾದ ಯೋಚನೆಗಳು ಇದ್ದು, ಇವರು ಕೇವಲ ಬಾಹ್ಯವಾಗಿ ಅಲ್ಲದೆ ಮಾನಸಿಕವಾಗಿಯೂ ಸುಂದರವಾಗಿರುತ್ತಾರೆ. ಇವರು ತಮ್ಮ ನಡೆಗಳಿಗೆ ಬದ್ಧರಾಗಿರುತ್ತಾರೆ ಮತ್ತು ಇವರಿಗೆ ಬೇರೆಯೊಬ್ಬರು ಪ್ರೇರೇಪಿಸುವುದು ಬೇಡ.

೬. ಜೂನ್

ಇವರು ಅತ್ಯುತ್ತಮ ವ್ಯಕ್ತಿತ್ವದವರಾಗಿರುತ್ತಾರೆ ಹಾಗು ಇವರ ಜೊತೆ ಸಮಯ ಕಳೆಯುವುದೇ ಹಿತ. ಇವರು ಹೊಸ ಹೊಸ ಸ್ನೇಹಿತರನ್ನ ಮಾಡಿಕೊಳ್ಳಲು ಇಚ್ಛಿಸುವರು ಮತ್ತು ಎಲ್ಲರೊಡನೆ ಬೆರೆಯುವರು. ಇಷ್ಟೇ ಅಲ್ಲದೆ, ಇವರು ಶ್ರಮಜೀವಿಗಳು ಆಗಿರುತ್ತಾರೆ ಮತ್ತು ಇವರಲ್ಲಿ ಎಂದಿಗೂ ಬತ್ತದ ಉತ್ಸಾಹ ಇರುತ್ತದೆ.

೭. ಜುಲೈ

ಇವರ ಸನಿಹ ಕಾಲ ಕಳೆಯುವುದೇ ಮಜಾ. ಆದರೆ ಇವರು ಸ್ವಲ್ಪ ಗುಟ್ಟುಗಳನ್ನ ಕಾಯ್ದುಕೊಳ್ಳಲು ಇಚ್ಛಿಸುವರು ಮತ್ತು ಇವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಕರ. ಇವರು ಯಾವುದಾದರು ವಿಷಯದ ಬಗ್ಗೆ ಉತ್ಸಾಹದಿಂದ ಇದ್ದರೆ ಅಥವಾ ಆತಂಕಕ್ಕೆ ಒಳಗಾದಾಗ ಮಾತ್ರ ಹೆಚ್ಚು ಮಾತಾಡುವರು. ಇಲ್ಲವಾದಲ್ಲಿ ಹೆಚ್ಚು ಮಾತಾಡುವುದಿಲ್ಲ. ಇವರು ತಮ್ಮನ್ನ ತಾವು ಹೊಗಳಿಕೊಳ್ಳುವುದು ಹೆಚ್ಚು ಮತ್ತು ಕಡ್ಡಿ ಮುರಿದಂತೆ ಮಾತಾಡುವಷ್ಟು ಪ್ರಾಮಾಣಿಕರು. ಆದರೆ, ಇವರನ್ನು ಸಮಾಧಾನ ಪಡಿಸುವುದು ಬಹಳ ಸುಲಭ.

೮. ಆಗಸ್ಟ್

ಈ ತಿಂಗಳಲ್ಲಿ ಜನಿಸಿದವರು ರಿಸ್ಕ್ ಅನ್ನು ತೆಗೆದುಕೊಳ್ಳುವುದಕ್ಕೆ ಮತ್ತು ಎಲ್ಲರ ಗಮನವನ್ನ ಸೆಳೆಯಲು ಇಷ್ಟ ಪಡುತ್ತಾರೆ. ಇವರಿಗೆ ತಮ್ಮ ಮೇಲೆ ತಮಗೆ ಬಹಳ ನಿಯಂತ್ರಣ ಇರುವುದಿಲ್ಲ. ಆದರೆ ಬಹಳಷ್ಟು ಆತ್ಮವಿಶ್ವಾಸ ಹೊಂದಿರುತ್ತಾರೆ, ಜೋರಾಗಿ ಮಾತಾಡುತ್ತಾರೆ. ಇವರ ಮನಸ್ಸು ಬಹಳ ದಯಾಳು ಆಗಿದ್ದರೂ, ಕೆಲವೊಮ್ಮೆ ಸೇಡಿನ ಕಿಚ್ಚು ಆರುವವರೆಗೂ ಬಿಡುವುದಿಲ್ಲ. ಅದು ಬಿಟ್ಟರೆ, ಇವರ ಜೊತೆ ಬೆರೆಯುವುದಾಗಲಿ ಅಥವಾ ಮಾತನಾಡುವುದಾಗಲಿ ಕಷ್ಟವೇ ಅಲ್ಲ.

೯. ಸೆಪ್ಟೆಂಬರ್

ಈ ತಿಂಗಳ ಮಕ್ಕಳು ಹೆಚ್ಚು ಸಕ್ರಿಯರಾಗಿರುತ್ತಾರೆ ಮತ್ತು ಕ್ರಿಯಾತ್ಮಕವಾಗಿರುತ್ತಾರೆ. ಇವರು ಎಲ್ಲ್ಲಾ ವಿಷಯಗಳಲ್ಲೂ ನಿಖರತೆ ಮತ್ತು ಸ್ಪಷ್ಟತೆ ಹೊಂದಲು ಇಚ್ಛಿಸುತ್ತಾರೆ. ಆದರೆ ಬಹಳಷ್ಟು ಬಾರಿ ಇವರು ಆತುರದಲ್ಲಿ ನಿರ್ಧಾರಗಳನ್ನ ತೆಗೆದುಕೊಂಡು ನಂತರ ಪಶ್ಚಾತಾಪ ಪಡುತ್ತಾರೆ. ಇವರು ಆಕರ್ಷಣೀಯವಾಗಿರುತ್ತಾರೆ. ಇವರು ತಮ್ಮನ್ನು ತಾವು ಬಹಳ ಇಷ್ಟ ಪಡುತ್ತಾರೆ ಮತ್ತು ದೃಢವಾದ ಮನೋಭಾವ ಹೊಂದಿರುತ್ತಾರೆ. ಇವರು ಇತರರ ಗಮನ ಸೆಳೆಯಲು ಇಷ್ಟ ಪಡುತ್ತಾರೆ.

೧೦. ಅಕ್ಟೋಬರ್

ನೀವು ಭೇಟಿ ಮಾಡುವ ಅತ್ಯಂತ ಧೈರ್ಯಶಾಲಿ ಮತ್ತು ಸಾಹಸ ವ್ಯಕ್ತಿತ್ವವುಳ್ಳ ವ್ಯಕ್ತಿಗಳು ಇವರಾಗಿರುತ್ತಾರೆ. ಇವರು ಮಾತಾಡಲು ಇಷ್ಟ ಪಡುತ್ತಾರೆ ಮತ್ತು ತಮ್ಮನ್ನು ಇಷ್ಟಪಡುವವರನ್ನು ತುಂಬಾ ಪ್ರೀತಿಸುತ್ತಾರೆ. ಇವರು ಬಾಹ್ಯದಿಂದ ಅಷ್ಟೇ ಅಲ್ಲದೆ ಒಳಗಿನಿಂದಲೂ ಬಹಳ ಸುಂದರ ವ್ಯಕ್ತಿಗಳು. ಇವರು ಕೆಲವೊಮ್ಮೆ ಸುಳ್ಳು ಹೇಳಬಹುದು ಆದರೆ ನಾಟಕ ಮಾಡುವುದಿಲ್ಲ. ಇವರು ಬೇಗ ಸಿಟ್ಟಾಗುವ ಗುಣ ಹೊಂದಿದ್ದರು, ತಮ್ಮ ಸ್ನೇಹಿತರಿಗೆ ತುಂಬಾ ಬೆಲೆ ಕೊಡುತ್ತಾರೆ.

೧೧. ನವೆಂಬರ್

ಇವರು ವಿಶ್ವಾಸಾರ್ಹ ಮತ್ತು ನಂಬಿಕೆ ಇಡಬಹುದಾದಂತ ವ್ಯಕ್ತಿಗಳು ಆಗಿರುತ್ತಾರೆ. ಇವರು ಸಂವೇದನಾಶೀಲರು ಆಗಿರುತ್ತ್ತಾರೆ ಮತ್ತು ಕೆಲವೊಮ್ಮೆ ಬಹಳ ಮುಂಗೋಪಿಯೂ ಆಗಿರುತ್ತಾರೆ. ಆದರೆ ಇವರಿಗೆ ಜೀವನದಲ್ಲಿ ಮಜಾ ಮಾಡುವುದು ಹೇಗೆ ಎಂಬುದು ತಿಳಿದಿರುವುದರಿಂದ ಜನರು ಇವರ ಕಡೆ ಆಕರ್ಷಿತರಾಗುತ್ತಾರೆ. ಇವರು ಕೆಲವೊಮ್ಮೆ ತುಂಬಾ ಭಾವನಾಜೀವಿಗಳು ಆಗಿ ಹಾಗು ದೃಢ ಸಂಕಲ್ಪ ಹೊಂದಿ, ತಮ್ಮನ್ನ ತಾವು ಬಹಳ ಧೈರ್ಯಶಾಲಿಗಳು ಮತ್ತು ಸ್ವಾವಲಂಬಿಗಳು ಎಂದು ಬಿಂಬಿಸಿಕೊಳ್ಳುತ್ತಾರೆ. ಇವರು ಹೊಸ ಜನರೊಂದಿಗೆ ಬಹಳ ಸುಲಭವಾಗಿ ಬೆರೆಯುತ್ತಾರೆ.

೧೨. ಡಿಸೆಂಬರ್

ಈ ತಿಂಗಳಲ್ಲಿ ಹುಟ್ಟಿದವರು ತುಂಬಾ ಪ್ರಾಮಾಣಿಕರು ಮತ್ತು ದಯಾಳು ಸ್ವಭಾವದವರು ಆಗಿರುತ್ತಾರೆ. ಅಲ್ಲದೆ ಇವರದ್ದು ಸ್ಪರ್ಧಾತ್ಮಕ ಮನೋಭಾವ. ಇವರು ನಾಡು, ನಾಡಿನ ಜನರ ಬಗ್ಗೆ ಕಾಳಜಿ ಹೊಂದಿರುತ್ತಾರೆ. ಇವರು ಆಟಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ಬಹಳ ಸಕ್ರಿಯರಾಗಿರುತ್ತಾರೆ, ಆದರೆ ಕೆಲವೊಮ್ಮೆ ಬಹಳ ಅಸಹನೆ ಮತ್ತು ಆತುರ ವ್ಯಕ್ತ ಪಡಿಸುತ್ತಾರೆ. ಇವರ ಸಾಂಗತ್ಯ ಬಹಳ ಮಜವಾಗಿರುತ್ತದೆ ಮತ್ತು ಇವರ ಆಳವಾದ ದೂರದೃಷ್ಟಿಯು ಕೆಲವೊಂದು ಬಾರಿ ಜನರಿಗೆ ಇವರನ್ನ ಅರ್ಥ ಮಾಡಿಕೊಳ್ಳಲು ಕಷ್ಟ ಆಗುವಂತೆ ಮಾಡುತ್ತದೆ.

Leave a Reply

%d bloggers like this: