ಮದುವೆ ಆದಮೇಲೆ ಹೆಂಗಸರು ದಪ್ಪವಾಗುವುದು ಏಕೆ?

ಮದುವೆ ಅನ್ನುವುದು ನಮ್ಮ ಜೀವನದ ಪುಸ್ತಕದ ಹೊಸ ಪುಟ ಆಗಿರುತ್ತದೆ. ನೀವು ಅಲ್ಲಿ ನಿಮ್ಮದೇ ಹೊಸ ಕಥೆಗಳನ್ನ ಮತ್ತು ಅನುಭವಗಳನ್ನ ಬರೆಯಬಹುದು. ಇದು ನಿಮ್ಮ ಸಂಗಾತಿ ಜೊತೆಗಿನ ಜೀವನ ಪರ್ಯಂತದ ದೊಡ್ಡ ಪ್ರಯಾಣದ ಆರಂಭ. ಮದುವೆ ಅನ್ನುವುದು ಹೆಣ್ಣಿನ ಜೀವನದ ಅತ್ಯಂತ ಮುಖ್ಯ ಘಟ್ಟ ಆಗಿರುತ್ತದೆ. ಅವಳ ಮೇಲೆ ಇರುವ ಅಷ್ಟೊಂದು ಒತ್ತಡಗಳ ಕಾರಣ ಆಕೆ ತೂಕವನ್ನ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳು ಮತ್ತಷ್ಟು ಹೆಚ್ಚುತ್ತವೆ.

ಹೆಂಗಸರು ಹಲವಾರು ಕಾರಣಗಳಿಗೆ ಮದುವೆಯ ನಂತರ ತೂಕ ಹೆಚ್ಚಿಸಿಕೊಳ್ಳುತ್ತಾರೆ. ತಜ್ಞರು ಈ ರೀತಿಯ ದೈಹಿಕ ಬದಲಾವಣೆಗಳ ಹಿಂದೆ ಕೆಲವೊಂದು ದೈಹಿಕವಲ್ಲದ ಅಂಶಗಳು ಕೂಡ ಬಹಳಷ್ಟು ಕೆಲಸ ಮಾಡುತ್ತವೆ ಎಂದು ತಿಳಿಸುತ್ತಾರೆ.

ಮದುವೆಯ ನಂತರ ಹೆಂಗಸರು ತೂಕ ಹೆಚ್ಚಿಸಿಕೊಳ್ಳುವುದಕ್ಕೆ ಕಾರಣಗಳು ಇಲ್ಲಿವೆ : 

ಮದುವೆಗಿಂತ ಮುಂಚೆ ಹೆಂಗಸರು ತಮ್ಮ ದೇಹದ ಬಗ್ಗೆ ಹೆಚ್ಚಿನ ಜಾಗೃತೆ ಹೊಂದಿರುತ್ತಾರೆ. ನೀವು ವ್ಯಾಯಾಮ ಮಾಡುವುದರಿಂದ ಆಗಲಿ ಅಥವಾ ಆರೋಗ್ಯಕರ ಆಹಾರ ಸೇವಿಸುವುದು, ಒಳ್ಳೆಯ ಡಯಟ್ ಪಾಲಿಸುವ ಮೂಲಕ ನಿಮ್ಮ ಆಕಾರವನ್ನ ಕಾಯ್ದುಕೊಂಡಿರುತ್ತೀರಾ. ನೀವು ಡಾನ್ಸ್ , ಸೈಕ್ಲಿಂಗ್ ಅಥವಾ ಸೈಕ್ಲಿಂಗ್ ಮಾಡುತ್ತಿದಿರಿ. ಆದರೆ ಮದುವೆ ಆದಮೇಲೆ ಅವೆಲ್ಲವೂ ಒಂದೇ ಸಮನೆ ನಿಂತು ಬಿಟ್ಟವು.

ಮದುವೆಯ ಮುಂಚೆ ನೀವು ತಿಳಿ ಆಹಾರ ಸೇವಿಸುತ್ತಿದ್ದಿರಿ. ಆದರೆ ಮದುವೆ ಆದಮೇಲೆ ನೀವು ನಿಮ್ಮ ಮನೆಯವರಿಗಾಗಿ ವಿಧ ವಿಧ ಅಡುಗೆಗಳು ಮಾಡುತ್ತೀರಾ ಹಾಗು ಅವೆಲ್ಲವನ್ನು ಒಟ್ಟಿಗೆ ಸೇವಿಸುತ್ತೀರ. ಏಕೆಂದರೆ, ಬಹುಷಃ ನೀವು ನಿಮ್ಮ ಪತಿಯೊಂದಿಗೆ ಒಟ್ಟಿಗೆ ಕೂತು ನೆಮ್ಮದಿ ಇಂದ ಕಾಲ ಕಳೆಯುವ ಸಮಯ ಎಂದರೆ ಅದು ಊಟದ ಸಮಯವೇ ಆಗಿರುತ್ತದೆ.

ಮದುವೆಯ ನಂತರ ಹೆಂಗಸರು ಹೊಸ ಮನೆಯಲ್ಲಿ ಅವರ ಸ್ಥಾನ, ಅವರ ಜವಾಬ್ದಾರಿ ಮತ್ತು ಭದ್ರತೆ ಬಗ್ಗೆ ಆತಂಕ ಇರಿಸಿಕೊಂಡಿರುತ್ತಾರೆ. ಈ ಮದುವೆ ಅನ್ನುವುದೇ ಅವರಿಗೆ ಹೊಸತಾಗಿರುವುದರಿಂದ, ಮೊದಮೊದಲು ಅವರು ಬಹಳಷ್ಟು ಒತ್ತಡದಲ್ಲಿ ಇರುತ್ತಾರೆ. ಈ ಒತ್ತಡವು ಅವರಲ್ಲಿ ಬಹಳಷ್ಟು ದೈಹಿಕ ಬದಲಾವಣೆಗಳನ್ನೂ ತರುತ್ತದೆ.

ಮದುವೆ ಆದಮೇಲೆ ನಿಮ್ಮ ಆಕಾರ ನೀವು ಕಾಯ್ದುಕೊಳ್ಳುವುದು ಇನ್ನಷ್ಟೂ ಕಷ್ಟ ಆಗುತ್ತದೆ. ಏಕೆಂದರೆ, ಈಗ ನೀವು ನಿಮ್ಮ ದೇಹದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ನೀವು ಹೇಗೆ ಇದ್ದರು ನಿಮ್ಮ ಪತಿ ಪ್ರೀತಿಸುವರು ಎಂದು. ಹೀಗಾಗಿ ತಿನಿಸುಗಳು ನಿಮ್ಮ ಹೊಸ ಗೆಳೆಯರಾಗುತ್ತಾರೆ. ಅದು ಮಸಾಲೆ ಪೂರಿ ಆಗಿರಬಹುದು ಅಥವಾ ಪ್ಲೇಟ್ ತುಂಬಾ ದೂಧ್ ಪೇಢಾ ಆಗಿರಬಹುದು, ಯೋಚನೆ ಇಲ್ಲ!

ಇಷ್ಟೇ ಅಲ್ಲದೆ, ನೀವು ತೂಕ ಹೆಚ್ಚಿಸಿಕೊಳ್ಳಲು ಇನ್ನೊಂದು ವಿಷಯ ಎಂದರೆ ಅದು ನೀವು ಮಾಡದೇ ಇರುವ ಲೈಂಗಿಕ ಕ್ರಿಯೆಗಳು. ಹೌದು ನಿಮಗೆ ಸರಿಯಾಗಿ ಆಗುತ್ತಿರುವ ಒಂದೇ ಒಂದು ವ್ಯಾಯಾಮ ಎಂದರೆ ಅದು ಸೆಕ್ಸ್. ಮದುವೆಯ ಸ್ವಲ್ಪ ದಿನಗಳ ನಂತರ ಅದೂ ಕೂಡ ಕಡಿಮೆ ಆಗುವುದರಿಂದ ಅದು ಕೂಡ ನಿಮಗೆ ಲಭ್ಯವಾಗುವುದಿಲ್ಲ. ಆದರೆ ಇದು ಸ್ವಲ್ಪ ಗೊಂದಲಕಾರಿಯಾಗಿದೆ. ಏಕೆಂದರೆ, ಸೆಕ್ಸ್ ನಂತರ ನಿಮ್ಮಲ್ಲಿ ಬಿಡುಗಡೆಗೊಳ್ಳುವ ಹಾರ್ಮೋನ್ ಗಳು ನಿಮ್ಮನ್ನು ಆರಾಮ ಹೊಂದುವಂತೆ ಮಾಡಿ ನಿದ್ರೆಗೆ ಜಾರಿಸುತ್ತವೆ. ಹೀಗಾಗಿ, ಸರಿಯಾದ ಬ್ಯಾಲೆನ್ಸ್ ನೀವು ಆಯ್ದುಕೊಳ್ಳಿ !

Leave a Reply

%d bloggers like this: