ಯಾವುದೇ ಕ್ರೀಮ್ ಬೇಡ, ಈ ಮನೆಮದ್ದುಗಳು ನಿಮ್ಮ ತ್ವಚೆಯ ಕಪ್ಪು ಕಲೆಗಳನ್ನ ಮಾಯಾ ಮಾಡುತ್ತವೆ!

ಸಾಮಾನ್ಯವಾಗಿ ನಿಮ್ಮ ತ್ವಚೆಯು ಆಗಾಗ್ಗೆ ಕಪ್ಪು ಸುತ್ತಿಕೊಳ್ಳಬಹುದು, ಇದಕ್ಕೆ ಸೂರ್ಯನ ಕಿರಣಗಳು, ನಿಮ್ಮ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳು ಕಾರಣ ಇರಬಹುದು. ನಿಮ್ಮ ತ್ವಚೆಯ ಕಪ್ಪು ಕಲೆಯನ್ನು ತೊಲಗಿಸಿ ಹೊಳಪನ್ನು ಹೆಚ್ಚಿಸಲು ಇಲ್ಲಿ ಕೆಲವು ಮನೆ ಔಷದಗಳನ್ನು ನೀಡಲಾಗಿದೆ. ಇವುಗಳಿಂದ ನಿಮ್ಮ ಚರ್ಮಕ್ಕೆ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ.

೧.ನಿಂಬೆ ರಸ ಮತ್ತು ಜೇನುತುಪ್ಪ

ನಿಂಬೆರಸವು ಬಿಳುಪುಕಾರಕ ಪರಿಣಾಮವನ್ನು ಒಳಗೊಂಡಿದೆ, ಇದು ನಿಮ್ಮ ತ್ವಚೆಯ ಮೇಲಿನ ಕಪ್ಪು ಕಲೆಗಳನ್ನು ತೆಗೆದು, ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.

೧.ನಿಂಬೆರಸಕ್ಕೆ ಸ್ವಲ್ಪ ಜೇನುತುಪ್ಪ ಹನಿಯನ್ನು ಸೇರಿಸಿ, ನಿಮ್ಮ ಚರ್ಮಕ್ಕೆ ಹಚ್ಚಿರಿ.

೨.ಅದನ್ನು ತ್ವಚೆಯ ಮೇಲೆ ಆಗೆಯೇ ೩೦ ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚನೆಯ ನೀರಿನಿಂದ ತೊಳೆಯಿರಿ.

೩.ನಿಂಬೆರಸಕ್ಕೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ, ಮುಖಕ್ಕೆ ಉಜ್ಜುವುದರಿಂದ ಮುಖದಲ್ಲಿರುವ ನಿರ್ಜಿವ ಚರ್ಮವನ್ನು ತೆಗೆಯಲು ಸಹಾಯವಾಗುತ್ತದೆ.

೨.ಮೊಸರು ಮತ್ತು ಟಮೋಟ

ಟಮೋಟೋಗಳು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ, ಇವು ತ್ವಚೆಯ ಹೊಳಪನ್ನು ಹೆಚ್ಚಿಸುತ್ತವೆ. ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು, ಇದು ಚರ್ಮವನ್ನು ಮೃದುವಾಗಿಸುತ್ತದೆ.

೧.ಟಮೋಟ ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆಯಿರಿ.

೨.೨ ಚಮಚ ಮೊಸರಿನೊಂದಿಗೆ ಟಮೋಟವನ್ನು ಚೆನ್ನಾಗಿ ಮಿಶ್ರಣ ಮಾಡಿ.

೩.ಈ ಮಿಶ್ರಣವನ್ನು ನಿಮ್ಮ ತ್ವಚೆಯಲ್ಲಿ ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಿರಿ, ಮತ್ತು ೨೦ ನಿಮಿಷಗಳ ಬಳಿಕ ತೊಳೆಯಿರಿ.

೩.ಸೌತೆಕಾಯಿ

ಟ್ಯಾನ್ ಮತ್ತು ಸೂರ್ಯನ ಸುಟ್ಟ ಕಲೆಗಳಿಗೆ ಸೌತೆಕಾಯಿ ಅತ್ಯುತ್ತಮ ಪ್ರಯೋಜನಕಾರಿ ಆಗಿದೆ. ಸೌತೆಕಾಯಿ ತಂಪುಗೊಳಿಸುವ ಪರಿಣಾಮ ಹೊಂದಿದ್ದು, ಸೂರ್ಯನ ಸುಟ್ಟ ಕಲೆಗಳಿಗೆ ಮತ್ತು ಸನ್ ಟ್ಯಾನ್ ಗೆ ಒಳ್ಳೆಯ ಔಷಧಿಯಾಗಿದೆ.

೧.ಸೌತೆಕಾಯಿಯನ್ನು ಕತ್ತರಿಸಿ, ಅದನ್ನು ಹಿಂಡಿ ಸೌತೆಕಾಯಿ ರಸವನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ.

೨.ಶುದ್ಧ ಹತ್ತಿಯಿಂದ ರಸವನ್ನು ನಿಮ್ಮ ತ್ವಚೆಗೆ ಹಚ್ಚಿಕೊಳ್ಳಿ.

೩.ಅದು ಸ್ವಲ್ಪ ಸಮಯ ತ್ವಚೆಯಲ್ಲೇ ಒಣಗಿದ ನಂತರ ತೊಳೆದುಕೊಳ್ಳಿ. ಹೆಚ್ಚು ಲಾಭ ಪಡೆಯಲು ಇದಕ್ಕೆ ನೀವು ನಿಂಬೆ ರಸವನ್ನು ಸೇರಿಸಿಕೊಳ್ಳಬಹುದು.

೪.ಆಲೂಗಡ್ಡೆ ರಸ

ಆಲೂಗೆಡ್ಡೆ ರಸವನ್ನು ಹೆಚ್ಚಾಗಿ ಕಣ್ಣಿನ ಸುತ್ತಲೂ ಇರುವಂತಹ ಕಪ್ಪು ವೃತ್ತಗಳನ್ನು ತೆಗೆಯಲು ಉಪಯೋಗಿಸಲಾಗುತ್ತದೆ. ಇದರ ಜೊತೆಗೆ ಆಲೂಗಡ್ಡೆ ರಸವು ಬಿಳುಪುಕಾರಕವಾಗಿ ಕೂಡ ಕೆಲಸ ಮಾಡುತ್ತದೆ.

೧.ಆಲೂಗಡ್ಡೆ ರಸವನ್ನು ತಯಾರಿಸಿಕೊಂಡು, ಅದನ್ನು ನೇರವಾಗಿ ತ್ವಚೆಗೆ ಅನ್ವಯಿಸಿ(ಹಚ್ಚಿರಿ).

೨.ಇದು ಕಷ್ಟವಾದರೆ ಆಲೂಗಡ್ಡೆಯನ್ನು ಕತ್ತರಿಸಿ, ಅದನ್ನು ತ್ವಚೆಯ ಮೇಲೆ ಸವರಿ ಅದರ ರಸ(ತೇವಾಂಶ ಆಗುವವರೆಗೆ).

೩.೧೦ ರಿಂದ ೧೫ ನಿಮಿಷಗಳ ನಂತರ ಉಗುರು ಬೆಚ್ಚನೆಯ ನೀರಿನಿಂದ ತೊಳೆಯಿರಿ.

೫.ಪರಂಗಿ ಹಣ್ಣು ಮತ್ತು ಜೇನುತುಪ್ಪ

ಪರಂಗಿ ಹಣ್ಣು ನೈಸರ್ಗಿಕ ಕಿಣ್ವಗಳನ್ನು ತನ್ನಲ್ಲಿ ಇರಿಸಿಕೊಂಡಿದೆ, ಇದು ತ್ವಚೆಯ ಬಿಳುಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೇನುತುಪ್ಪ ಉತ್ಕರ್ಷಣ ನಿರೋಧಕವನ್ನು ಒಳಗೊಂಡಿದ್ದು, ತ್ವಚೆಯು ತೇವಾಂಶದಿಂದ ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಹೆಚ್ಚು ವಯಸ್ಸಾದವರಂತೆ ಕಾಣುವವರು ಇದನ್ನು ಉಪಯೋಗಿಸುವುದರಿಂದ ವಯಸ್ಕರಂತೆ ಕಾಣಬಹುದು.

೧.ಹಣ್ಣಾಗಿರುವ ಪರಂಗಿಯನ್ನು ತೆಗೆದುಕೊಂಡು, ಅದರಲ್ಲಿ ಸಣ್ಣ ಸಣ್ಣ ನಾಲ್ಕು ತುಂಡುಗಳನ್ನು ಮಾಡಿಕೊಳ್ಳಿ, ಉಳಿದ ಹಣ್ಣನ್ನು ತಿನ್ನಿ ಅದು ಆರೋಗ್ಯಕ್ಕೂ ಒಳ್ಳೆಯದು.

೨.ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ, ಚೆನ್ನಾಗಿ ಕಲಸಿ, ಪೇಸ್ಟ್ ತರಹ ಮಾಡಿಕೊಳ್ಳಿ.

೩.ಈ ಪೇಸ್ಟ್ ಅನ್ನು ತ್ವಚೆಗೆ ಹಚ್ಚಿ ಸ್ವಲ್ಪ  ಸಮಯ ಒಣಗಲು ಬಿಡಿ.

೪.೨೦ ರಿಂದ ೩೦ ನಿಮಿಷ ಆದ ನಂತರ ನೀರಿನಿಂದ ತೊಳೆದುಕೊಳ್ಳಿ.

Leave a Reply

%d bloggers like this: