ಎದೆಹಾಲು ಹೆಚ್ಚಿಸಿಕೊಳ್ಳಲು ಸರಳ ನೈಸರ್ಗಿಕ ಸೂತ್ರಗಳು

ನಿಮ್ಮ ಮಗುವಿಗೆ ಸ್ತನ್ಯಪಾನ ಮಾಡಿಸಲು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದು ನೀವು ಮಾಡುತ್ತಿರುವ ಒಂದು ಅತ್ಯುತ್ತಮ ಕೆಲಸವಾಗಿದೆ. ಏಕೆಂದರೆ ಮಗುವಿನ ಮೊದಲ ಒಂದು ವರ್ಷದವರೆಗೆ ನೀವು ನೀಡಬಹುದಾದ ಉತ್ತ್ತಮ ಆಹಾರವೆಂದರೆ ಅದು ಮೊಲೆಹಾಲು ಮಾತ್ರ, ಅದು ಮಾತ್ರ ಮಗುವಿಗೆ ಅವಶ್ಯವಿರುವ ಎಲ್ಲಾ ಆರೋಗ್ಯಕರ ಪೌಷ್ಟಿಕಾಂಶಗಳನ್ನು ಒದಗಿಸಲು ಸಾಧ್ಯ. ಜೊತೆಗೆ ಇದು ಮಗುವಿಗೆ ಪ್ರತಿರೋಧಕಗಳನ್ನು ನೀಡಿ ಸೋಂಕಿನಿಂದ ಮಗುವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ, ಅಲರ್ಜಿಯಿಂದ ರಕ್ಷಿಸುತ್ತದೆ, ಮತ್ತು ಮಗುವಿನ ರಕ್ಷಣೆಯನ್ನು ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ತಾಯಿಯು ತನ್ನ ಗರ್ಭಾವಸ್ಥೆಯ ತೂಕವನ್ನು ಬೇಗನೆ ಕಳೆದುಕೊಳ್ಳಲು ಎದೆಹಾಲುಣಿಸುವುದು ಸಹಾಯ ಮಾಡುತ್ತದೆ ಮತ್ತು ಮುಂದಿನ ಭವಿಷ್ಯದಲ್ಲಿ ಸ್ತನ ಕ್ಯಾನ್ಸರ್ ಬರದಂತೆ ರಕ್ಷಣೆ ಮಾಡಲು ಇದು ಸಹಾಯವಾಗುತ್ತದೆ.

ಆದರೆ ಕೆಲವು ಮಹಿಳೆಯರು ಮಗುವಿಗೆ ಅವಶ್ಯವಿರುವ ಹಾಲನ್ನು ಪೂರೈಸಲು ತೊಂದರೆ ಅನುಭವಿಸುತ್ತಾರೆ. ಇದಕ್ಕೆ ತುಂಬಾ ಸಾಮಾನ್ಯ ಕಾರಣವೆಂದರೆ, ಅಸಮರ್ಪಕ ಆಹಾರ ಮತ್ತು ದ್ರವ(ನೀರು ಅಥವಾ ನೀರಿನಾಂಶ ಇರುವ ಪದಾರ್ಥಗಳ ಕಡಿಮೆ ಸೇವನೆ) ಸೇವನೆ, ಆಯಾಸ, ಹೆಚ್ಚಿದ ಒತ್ತಡ, ಮತ್ತು ಮಗುವಿಗೆ ಸರಿಯಾಗಿ ಮೊಲೆಹಾಲು ನೀಡದಿರುವುದು, ಅಥವಾ ಕಡಿಮೆ ಮೊಲೆಹಾಲುಣಿಸುವುದು.

ನಿಮ್ಮ ಮೊಲೆಹಾಲನ್ನು ಹೆಚ್ಚಿಸಲು ಕೆಲವು ಸರಳ ಉಪಾಯಗಳು

೧.ಆರೋಗ್ಯಕರ ಆಹಾರವನ್ನು ಸೇವಿಸಿ. ದಿನಕ್ಕೆ ೨೫೦೦ಕ್ಯಾಲೋರಿ ಅಷ್ಟು ಆಹಾರ ಸೇವಿಸಲು ಪ್ರಯತ್ನಿಸಿ.

೨.ಹೆಚ್ಚು ನೀರು ಕುಡಿಯಿರಿ. ನಿಮ್ಮ ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಮೊಲೆಯಲ್ಲಿ ಹಾಲು ಸರಿಯಾಗಿ ಉತ್ಪತ್ತಿಯಾಗುವುದಿಲ್ಲ.

೩.ರಾತ್ರಿ ಸರಿಯಾಗಿ ನಿದ್ರೆ ಮಾಡಿ ಮತ್ತು ಬೆಳಗಿನ ಸಮಯ ನಿಮ್ಮ ಮಗುವು ನಿದ್ರೆ ಮಾಡುವಾಗ ನೀವು ನಿದ್ರೆ ಮಾಡಿ.

೪.ಒತ್ತಡದಿಂದ ಆದಷ್ಟು ದೂರವಿರಿ, ಇದನ್ನು ಕಡಿಮೆ ಮಾಡಿಕೊಳ್ಳಲು ದಿನದಲ್ಲಿ ಕೆಲ ಸಮಯ ಧ್ಯಾನ ಮಾಡುವುದು ಒಳ್ಳೆಯದು. ದೀರ್ಘ ಉಸಿರಾಟವನ್ನು ಆರಾಮವಾಗಿ ಮಾಡುವುದು ಉಪಯೋಗವಾಗುತ್ತದೆ.

೫.ಮಗೆಲಸಕ್ಕೆ ನಿಮ್ಮ ಕುಟುಂಬ ಅಥವಾ ಸ್ನೇಹಿತರಿಂದ ಸಹಾಯ ಪಡೆದುಕೊಳ್ಳಿ.

೬.ಆಗಾಗ್ಗೆ ಮಗುವಿಗೆ ಮೊಲೆಹಾಲು ನೀಡಿ, ಹೆಚ್ಚು ಬಾರಿ ನೀಡಿದಷ್ಟು ಮಗುವು ಹಾಲು ಹೀರುವುದರಿಂದ ಹಾಲು ಉತ್ಪತ್ತಿಯಾಗಲು ಪ್ರಾರಂಭಿಸುತ್ತದೆ.

ಸ್ತನದಲ್ಲಿ ಹಾಲು ಉತ್ಪತ್ತಿ ಹೆಚ್ಚು ಮಾಡುವಂತಹ ಕೆಲವು ಆಹಾರಗಳೆಂದರೆ, ಪಾಲಕ್ ಸೊಪ್ಪು, ಬೆಳ್ಳುಳ್ಳಿ, ಎಳ್ಳು, ಕ್ಯಾರೆಟ್, ಕೆಂಪು ಅಕ್ಕಿ, ಸಾಲ್ಮನ್ ಮೀನು, ಜೀರಿಗೆ, ಸಪ್ಸಿಗೆ ಸೊಪ್ಪು, ಸೋರೆಕಾಯಿ, ಗೆಣಸು, ಬಾದಾಮಿ ಮತ್ತು ಮುಂತಾದ ಆರೋಗ್ಯಕರ ಪದಾರ್ಥಗಳು, ಈ ಆಹಾರಗಳು ನಿಮಗೆ ಸ್ತನದಲ್ಲಿ ಹಾಲು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತವೆ.

Leave a Reply

%d bloggers like this: