ತಲೆಹೊಟ್ಟು(ಡ್ಯಾಂಡ್ರಫ್) ನಿವಾರಣೆಗೆ ಸರಳ ಉಪಾಯಗಳು

ಡ್ಯಾಂಡ್ರಫ್ ನಿಮ್ಮನ್ನು ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರ ಬರುವಂತೆ ಮಾಡಬಹುದು, ಇದು ನಿಮ್ಮ ವಿಶ್ವಾಸವನ್ನು ಕುಗ್ಗಿಸಬಹುದು. ಇದಕ್ಕಾಗಿ ನೀವು ಹಣ ಖರ್ಚು ಮಾಡಿ, ಹಲವು ರಾಸಾಯನಿಕಯುಕ್ತ ಲೋಷನ್ ಮುಂತಾದವುಗಳನ್ನು ಬಳಸಿ, ನಿಮ್ಮ ಕೂದಲಿಗೂ ಹಾನಿ ಮಾಡಿಕೊಳ್ಳುವಿರಿ. ಚಿಂತಿಸದಿರಿ ಇಲ್ಲಿ ನೀಡಿರುವ ಉಪಾಯಗಳಿಂದ ನಿಮ್ಮ ಡ್ಯಾಂಡ್ರಫ್ ನಿವಾರಣೆ ಆಗುವುದರ ಜೊತೆಗೆ ಕೂದಲು ಬೆಳೆಯಲು ಸಹ ಸಹಾಯ ಮಾಡುತ್ತದೆ, ಮತ್ತು ಇವು ಸಂಪೂರ್ಣ ನೈಸರ್ಗಿಕವಾಗಿದ್ದು, ಇವುಗಳಿಂದ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ. ಡ್ಯಾಂಡ್ರಫ್ ಇಲ್ಲದಿದ್ದರೂ ಕೂದಲ ಪೋಷಣೆಗೆ ಇವುಗಳನ್ನು ಉಪಯೋಗಿಸಬಹುದು.

೧.ಕೊಬ್ಬರಿ ಎಣ್ಣೆ ಮತ್ತು ನಿಂಬೆಹಣ್ಣು

ಕೊಬ್ಬರಿ ಎಣ್ಣೆ ಕೂದಲ ಪೋಷಣೆಯನ್ನು ಮಾಡುತ್ತದೆ, ನಿಂಬೆರಸ ಡ್ಯಾಂಡ್ರಫ್ ಅನ್ನು ನಿವಾರಿಸಲು ಯಾವುದೇ ರಾಸಾಯನಿಕಗಳಿಲ್ಲದೆ ಅದ್ಭುತವಾಗಿ ಕೆಲಸ ಮಾಡುತ್ತದೆ. ನೀವು ಮಾಡಬೇಕಾಗಿರುವುದು,

೧.ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಸಮ ಪ್ರಮಾಣದ ನಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

೨.ಇದರಿಂದ ನಿಮ್ಮ ತಲೆಬುರುಡೆಯನ್ನು ಚೆನ್ನಾಗಿ ಮಸಾಜ್ ಮಾಡಿ.

೩.೨೦ ನಿಮಿಷಗಳ ನಂತರ ಶಂಪೋ ಅಥವಾ ನೀರಿನಿಂದ ತೊಳೆಯಿರಿ. ಅಥವಾ ಸ್ನಾನಕ್ಕೆ ಮುಂಚೆ ಇದನ್ನು ಮಾಡಿ ೨೦ ನಿಮಿಷದ ನಂತರ ಸ್ನಾನ ಮಾಡಿ.

೨.ಮೆಂತ್ಯೆ

೧.ಮೆಂತ್ಯೆಯನ್ನು ಒಂದು ರಾತ್ರಿ ನೀರಿನಲ್ಲಿ ನೆನೆಸಿ.

೨.ನೆನೆದಿರುವ ಮೃದುವಾದ ಮೆಂತ್ಯೆಯನ್ನು ಪೇಸ್ಟ್ ನಂತೆ ಮಾಡಿಕೊಳ್ಳಿ.

೩.ಪೇಸ್ಟ್ ಅನ್ನು ನಿಮ್ಮ ತಲೆಬುರುಡೆಗೆ ಹಚ್ಚಿ ಒಂದು ಗಂಟೆಗಳ ನಂತರ ಸ್ನಾನ ಮಾಡಿ ಅಥವಾ ತೊಳೆದುಕೊಳ್ಳಿ.

೩.ಮೊಸರು

ಮೊಸರನ್ನು ನಿಮ್ಮ ತಲೆಗೆ ಬಳಸುವುದು ಸ್ವಲ್ಪ ಮುಜುಗರ ಅಥವಾ ಗೊಂದಲಮಯ ಆಗಬಹುದು, ಆದರೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನೀವು ಮಾಡಬೇಕಾಗಿರುವುದು

೧.ಮೊಸರನ್ನು ನಿಮ್ಮ ಕೂದಲು ಮತ್ತು ತಲೆಬುಡಕ್ಕೆ ಹಚ್ಚಿ.

೨.ಅದನ್ನು ಒಂದು ಗಂಟೆ ತನಕ ತಲೆಯಲ್ಲಿ ಒಣಗಲು ಬಿಡಿ.

೩.ನಂತರ ಚೆನ್ನಾಗಿ ಶಾಂಪೂವಿನಿಂದ ತೊಳೆದುಕೊಳ್ಳಿ.

೪.ಅಡುಗೆ ಸೋಡಾ

ನೀವು ಮಾಡಬೇಕಾಗಿರುವುದು

೧.ನಿಮ್ಮ ಕೂದಲನ್ನು ಸ್ವಲ್ಪ ತೇವ(ಒದ್ದೆ) ಮಾಡಿರಿ

೨.ನಿಮ್ಮ ಕೂದಲು ಒದ್ದೆ ಇರುವಾಗ, ಅಡುಗೆ ಸೋಡಾವನ್ನು ನಿಮ್ಮ ತಲೆಬುಡಕ್ಕೆ ಉಜ್ಜಿರಿ.

೩.ಒಂದರಿಂದ ಎರಡು ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.

೫.ಮೆಹಂದಿ

ಮೆಹಂದಿ ಇದು ಒಂದು ನಿಮ್ಮ ತಲೆಗೆ, ಕೂದಲಿಗೆ ಹಲವು ಪ್ರಯೋಜನಗಳನ್ನು ಮಾಡುತ್ತದೆ. ಇದನ್ನು ಉಪಯೋಗಿಸುವುದರಿಂದ ದೇಹಕ್ಕೆ ತಂಪು ನೀಡುವುದರ ಜೊತೆಗೆ, ಬಿಳಿ ಕೂದಲನ್ನು ನಿವಾರಿಸುತ್ತದೆ, ಕೂದಲನ್ನು ಮೃದು ಮಾಡುತ್ತದೆ ಮತ್ತು ಕೂದಲ ಹೊಳಪನ್ನು ಹೆಚ್ಚಿಸುತ್ತದೆ. ಜೊತೆಗೆ ಡ್ಯಾಂಡ್ರಫ್ ಅನ್ನು ಶಾಶ್ವತವಾಗಿ ನಿವಾರಿಸಲು ಸಹಾಯ ಮಾಡುತ್ತದೆ.

ನೀವು ಮಾಡಬೇಕಾಗಿರುವುದು

೧.ಮೆಹಂದಿ ಸೊಪ್ಪನ್ನು(ಎಲೆಗಳು) ತೆಗೆದುಕೊಂಡು ಅದನ್ನು ಸ್ವಲ್ಪ ನೀರಿನೊಂದಿಗೆ ಬೆರಸಿ ಪೇಸ್ಟ್ ತಯಾರಿಸಿಕೊಳ್ಳಿ.

೨.ಇದನ್ನು ತಲೆಬುಡ ಮತ್ತು ಕೂದಲಿಗೆ ಹಚ್ಚಿ.

೩.ಒಂದೆರಡು ತಾಸಿನ ನಂತರ ಸ್ನಾನ ಮಾಡಿ ಅಥವಾ ನೀರಿನಿಂದ ತೊಳೆಯಿರಿ.

ಸಲಹೆ: ಈ ಮಿಶ್ರಣಕ್ಕೆ ನೀವು ನಿಂಬೆರಸ, ದಾಸವಾಳ ಹೂವನ್ನು ಸೇರಿಸಿ ಉಪಯೋಗಿಸಬಹುದು.

Leave a Reply

%d bloggers like this: