ಪಿರಿಯಡ್ಸ್ ವೇಳೆ ಕಾಣಿಸಿಕೊಳ್ಳುವ ನೋವಿಗೆ ಈ ಸರಳ ಉಪಾಯದಿಂದ ಮುಕ್ತಿ ಪಡೆಯಿರಿ

ನೀವು ಮಹಿಳೆಯಾಗಿರುವುದಕ್ಕೆ ಹೆಮ್ಮೆ ಪಡಿ. ಅದು ನಿಮ್ಮ ಮುಟ್ಟಿನ ದಿನಗಳಲ್ಲಿಯೂ, ಈ ದಿನಗಳಲ್ಲಿ ನಾವು ನೋವನ್ನು ಅನುಭವಿಸಬೇಕು, ಬೇರೆ ಸಮಯದಲ್ಲಿ ನಮ್ಮಿಂದ ಆಗದ ಕೆಲಸವಿಲ್ಲ ಎನ್ನಬೇಡಿ, ಮುಟ್ಟಿನ ನೋವಿಗೆ, ಅದರಲ್ಲೂ ವಿಶೇಷವಾಗಿ ಋತುಚಕ್ರದ ಬೆನ್ನು ನೋವಿಗೆ ಪರಿಹಾರವಿದೆ.

ಋತುಚಕ್ರದ ಬೆನ್ನು ನೋವಿಗೆ ಪರಿಹಾರಗಳು

೧.ನೀರು

ನೀರು ಕುಡಿಯುವುದು ನಮ್ಮ ದೇಹಕ್ಕೆ ಒಳ್ಳೆಯದು. ಆದರೆ ಕೆಲವರು ಹೆಚ್ಚು ನೀರನ್ನು ಕುಡಿಯುವುದಿಲ್ಲ, ನಿಮ್ಮ ಮುಟ್ಟಿನ ದಿನಗಳಲ್ಲಿ ನೀವು ಹೆಚ್ಚು ನೀರು ಕುಡಿಯುವುದು ತುಂಬಾ ಒಳ್ಳೆಯದು. ನೀವು ಈ ಸಮಯದಲ್ಲಿ ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ಯೋನಿಯ ಉರಿ, ನೋವು ಎಲ್ಲವು ಕಡಿಮೆಯಾಗುತ್ತದೆ.

೨.ಕಷಾಯ

ನಿಮಗೆ ಬರಿ ನೀರು ಕುಡಿಯಲು ಬೇಜಾರು ಎನಿಸಿದರೆ, ಗಿಡಮೂಲಿಕೆಗಳಿಂದ ಟೀ ಅಥವಾ ಕಷಾಯವನ್ನು ತಯಾರಿಸಿಕೊಂಡು ಕುಡಿಯುವುದು ಆರೋಗ್ಯಕ್ಕೂ ಒಳ್ಳೆಯದು(ನೆನಪಿರಲಿ ಇದು ಗಿಡಮೂಲಿಕೆಗಳಿಂದ ತಯಾರಾದ ಕಷಾಯವಾಗಿರಲಿ, ನಿಮ್ಮ ಸಾಮಾನ್ಯ ದಿನ ನಿತ್ಯ ಸೇವಿಸುವ ಕಾಫಿ ಅಲ್ಲ).

ಇದು ನಿಮಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಶಕ್ತಿಯನ್ನು ನೀಡುತ್ತದೆ, ಮತ್ತು ನಿಮ್ಮನ್ನು ಮೃದುವಾಗಿರುವಂತೆ ಕಾಪಾಡುತ್ತದೆ.

ಗಿಡಮೂಲಿಕೆಗಳಾದ ಶುಂಠಿ, ಪುದೀನಾ, ನಿಂಬೆರಸ ಅಥವಾ ನಿಂಬೆ ಎಲೆ ಮುಂತಾದವುಗಳು ನಿಮಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತವೆ.

ಇವು ನಿಮ್ಮ ಆಯಾಸವನ್ನು ಕಡಿಮೆ ಮಾಡುವುದರ ಜೊತೆಗೆ ಮುಟ್ಟಿನ ನೋವನ್ನು ಕಡಿಮೆ ಮಾಡುತ್ತವೆ.

೩.ಆರೋಗ್ಯಕರ ಆಹಾರ ಸೇವಿಸಿ

ಬಾಳೆಹಣ್ಣು ತನ್ನಲ್ಲಿ ಹೆಚ್ಚು ಪೊಟ್ಯಾಸಿಯಮ್ ಅನ್ನು ಇರಿಸಿಕೊಂಡಿರುವುದರಿಂದ ನಿಮಗೆ ಒಂದು ಅದ್ಬುತ ರುಚಿಕರ ಆಹಾರ ಪದಾರ್ಥವಾಗಿದೆ.

ಜೊತೆಗೆ ಹೆಚ್ಚು ಹಸಿರು ತರಕಾರಿ, ಸೊಪ್ಪುಗಳನ್ನು ಸೇವಿಸಿ.

೪.ಶುಂಠಿ

ಇದು ಸದಾ ನಿಮ್ಮ ಮನೆಯಲ್ಲಿ ಇದ್ದೆ ಇರುತ್ತದೆ, ನಿಮ್ಮ ಮುಟ್ಟಿನ ದಿನದ ಮುಂಚೆ ಇಂದ ಇದನ್ನು ಬಳಸಲು ಶುರು ಮಾಡಿ, ನಿಮ್ಮ ಮುಟ್ಟಿನ ದಿನಗಳಲ್ಲಿ ಯಾವುದೇ ನೋವಿಲ್ಲದೆ ಆರಾಮವಾಗಿರಿ.

ನಿಮ್ಮ ದೇಹದಲ್ಲಿ ಪ್ರೋಸ್ಟಾಗ್ಲ್ಯಾಂಡಿನ್ ಎಂಬುದನ್ನು ಹಾರ್ಮೋನು ಸ್ರವಿಸುತ್ತದೆ, ಇದು ನಿಮಗೆ ನೋವು ಉಂಟು ಮಾಡುವ ಹಾರ್ಮೋನು ಆಗಿದ್ದು, ಶುಂಠಿ ಇದರ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಮುಟ್ಟಿನ ದಿನದಲ್ಲಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಜೊತೆಗೆ ಇದು ಆಯಾಸವನ್ನು ಕಡಿಮೆ ಮಾಡುತ್ತದೆ.

ಶುಂಠಿಯನ್ನು ಹೇಗೆ ಉಪಯೋಗಿಸುವುದು?

ಒಂದು ಲೋಟ ನೀರಿಗೆ ತೊಳೆದಿರುವ ಶುಂಠಿಯನ್ನು ಸಣ್ಣಗೆ ಕತ್ತರಿಸಿ ಕುದಿಸಿ ಸೇವಿಸಬಹುದು.

ಇದಕ್ಕೆ ಜೇನುತುಪ್ಪ ಸೇರಿಸಿ ಸಹ ಕುಡಿಯಬಹುದು. ಅಥವಾ ಶುಂಠಿ ಟಿ ಮಾಡಿಕೊಂಡು ಕುಡಿಯುವುದು.

ನೀವು ಶುಂಠಿಯ ಒಂದು ಸಣ್ಣ ಚೂರನ್ನು ಬಾಯಿಗೆ ಹಾಕಿಕೊಂಡು ಚೀಪಬಹುದು.

Leave a Reply

%d bloggers like this: