ಮುದ್ದಾಡುವುದರಿಂದ ನೀವು ನಂಬಲಾಗದ ಪ್ರಯೋಜನಗಳು ಆಗುತ್ತವೆ!

ಆಧುನಿಕ ಜೀವನ ಶೈಲಿಯಲ್ಲಿ ನಿಮಗೆ ವಿಶ್ರಾಂತಿ ಪಡೆಯಲು ಸಕದಾಷ್ಟು ಸಮಯ ಇಲ್ಲ, ಹಲವರು ತಮ್ಮ ಸಮಯವನ್ನು ಕೆಲಸಮಾಡುವುದಕ್ಕಾಗಿ ತ್ಯಾಗ ಮಾಡುತ್ತಾರೆ. ಆದರೆ ಇತರರೊಂದಿಗೆ ಅನ್ಯೋನ್ಯತೆಯು, ಮಾನವರಿಗೆ ಸಂತೋಷವನ್ನುಂಟುಮಾಡುವ ಅತ್ಯಗತ್ಯ ಅಂಶಗಳಲ್ಲಿ ಒಂದಾಗಿದೆ.

ಮುದ್ದಾಡುವುದು ಎಂದರೆ ಪತಿ ಪತ್ನಿ ಸಂಭೋಗ ಎಂಬ ಅರ್ಥವಲ್ಲ, ನಿಮ್ಮ ಮಕ್ಕಳು, ಚಿಕ್ಕ ಮಕ್ಕಳು, ನಿಮ್ಮ ಪ್ರೀತಿ ಪಾತ್ರರ ಜೊತೆ ಮುದ್ದಾಡುವುದರಿಂದ ಹಲವು ಪ್ರಯೋಜನಗಳನ್ನು ನೀವು ಪಡೆಯಬಹುದು. ಇದರಿಂದ ನಿಮ್ಮ ಅನ್ಯೋನ್ಯತೆ ಹೆಚ್ಚಾಗುವುದರ ಜೊತೆಗೆ ನೀವು ನಂಬಲಾರದ ಲಾಭಗಳನ್ನು ಪಡೆಯಬಹುದು. ಮುದ್ದಾಡುವುದರಿಂದ ನಿಮಗೆ ಆಗುವ ಕೆಲವು ಪ್ರಯೋಜನಗಳು ಇಲ್ಲಿವೆ.

೧.ಉತ್ತಮ ಭಾವನೆ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ

ಆಕ್ಸಿಟೋಸಿನ್ ಎಂಬ ಹಾರ್ಮೋನು ಬಿಡುಗಡೆಯಾಗುತ್ತದೆ, ಇದು ನೀವು ಖುಷಿಯ ಭಾವನೆ ಪಡೆಯಲು ಅಥವಾ ಏನೋ ಸಂತೋಷವಾಗುತ್ತಿದೆ ಎಂಬ ಅನುಭವವನ್ನು  ಪಡೆಯುವಂತೆ ಮಾಡುತ್ತದೆ. ಜೊತೆಗೆ ನಿಮ್ಮ ಪ್ರೀತಿ ಪಾತ್ರರ ಮೇಲೆ ಮತ್ತಷ್ಟು ಬಾಂಧವ್ಯವನ್ನು ಹೆಚ್ಚಿಸುತ್ತದೆ.

೨.ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ

ಮೇಲೆ ಹೇಳಿದಂತೆ ಆಕ್ಸಿಟೋಸಿನ್ ಎಂಬ ಹಾರ್ಮೋನು ಬಿಡುಗಡೆ ಆಗುತ್ತದೆ, ಇದು ನನಗೆ ಯಾವುದು ಹಾನಿ ಮಾಡಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಬರುವಂತೆ ಮಾಡುತ್ತದೆ. ಇದು ತುಂಬಾ ಅದ್ಬುತ ಸಂಗತಿ ಅಲ್ಲವೇ. ಜೊತೆಗೆ ಇದು ಸೋಂಕಿನ ವಿರುದ್ಧ ಹೋರಾಡಲು ಅವಶ್ಯವಿರುವ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಮೂಲಭೂತವಾಗಿ, ನೀವು ಶಾಂತಿ ಮತ್ತು ನೆಮ್ಮದಿಯನ್ನು ಪಡೆಯುವಿರಿ ಇದು ನಿಮ್ಮ ಮಾನಸಿಕ ವಿಶ್ವಾಸವನ್ನು ಹೆಚ್ಚಿಸುತ್ತದೆ.

೩.ನೋವು ನಿವಾರಕ

ಆಕ್ಸಿಟೋಸಿನ್ ಹಾರ್ಮೋನು ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚು ಮಾಡುವುದರ ಜೊತೆಗೆ, ನಿಮ್ಮ ನೋವನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ ನಿಮ್ಮ ಕುತ್ತಿಗೆಯಲ್ಲಿ ನೋವು ಇರುತ್ತದೆ ಎಂದುಕೊಳ್ಳಿ, ನಿಮ್ಮ ಕೈಯಲ್ಲಿ ಕುತ್ತಿಗೆಯನ್ನು ಮುಟ್ಟಿಕೊಂಡರೆ ಸ್ವಲ್ಪ ನೋವು ಕಡಿಮೆಯಾದ ಅನುಭವವನ್ನು ನೀವು ಪಡೆಯಬಹುದು, ಹಾಗೆಯೆ ನಿಮ್ಮ ಪ್ರೀತಿ ಪಾತ್ರರು ಪ್ರೀತಿಯಿಂದ ಸ್ಪರ್ಶ ಮಾಡಿದರು ನೋವು ಕಡಿಮೆಯಾಗುತ್ತದೆ. ಆಕ್ಸಿಟೋಸಿನ್ ಬಿಡುಗಡೆಯಾಗಲು ಮೆತ್ತನೆಯ ಸ್ಪರ್ಶವೇ ಸಾಕು.

೪.ಹೃದಯ ಸಂಬಂದಿ ಕಾಯಿಲೆ ಕಡಿಮೆಯಾಗುತ್ತದೆ

ಒಂದು ಅಧ್ಯಯನ ಹೇಳುವ ಪ್ರಕಾರ, ತಬ್ಬಿಕೊಳ್ಳುವುದರಿಂದ ಆಕ್ಸಿಟೋಸಿನ್ ಮಟ್ಟ ಹೆಚ್ಚಾಗುತ್ತದೆ, ಇದು ಬಾಂಧವ್ಯದ ಹಾರ್ಮೋನು, ಈ ರಾಸಾಯನಿಕ ಪ್ರತಿಕ್ರಿಯೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಇದು ಹೃದಯಕ್ಕೆ ಹಾಗುವ ತೊಂದರೆಯನ್ನು ಕಡಿಮೆ ಮಾಡುತ್ತದೆ.

೫.ಆತಂಕವನ್ನು ಕಡಿಮೆ ಮಾಡುತ್ತದೆ

ಆಕ್ಸಿಟೋಸಿನ್ ಧನಾತ್ಮಕವಾಗಿ ಯೋಚಿಸುವಂತೆ ಮಾಡುತ್ತದೆ. ಇದು ನೀವು ಆಶಾದಾಯಕ ವ್ಯಕ್ತಿಯಾಗಿ ಪ್ರಪಂಚ ನಿಮ್ಮನ್ನು ನೋಡುವಂತೆ ಮಾಡುತ್ತದೆ. ಇದು ನಿಮ್ಮಲ್ಲಿ ವಿಶ್ವಾಸವನ್ನು ಹೆಚ್ಚುಸುವಂತೆ ಮಾಡುತ್ತದೆ.

೬.ತಾಯಿಯ ಜೊತೆ ಬಾಂಧವ್ಯವನ್ನು ಹೆಚ್ಚಿಸುತ್ತದೆ

ಆಕ್ಸಿಟೋಸಿನ್ ಮಗುವಿನ ಜನನ ಮತ್ತು ಎದೆಹಾಲುಣಿಸುವುದರ ಜೊತೆ ಸಂಬಂಧವನ್ನು ಹೊಂದಿದೆ. ಇದು ಬರಿ ಸಂಗಾತಿಗಳಿಗೆ ಅನ್ವಯಿಸುವುದಿಲ್ಲ, ಇದು ತಾಯಿ ಮತ್ತು ಮಗುವುಗು ಅನ್ವಹಿಸುತ್ತದೆ. ತಾಯಿ ತನ್ನ ಮಗುವನ್ನು ಮುದ್ದಾಡಿದಾಗ ಆಕ್ಸಿಟೋಸಿನ್ ಬಿಡುಗಡೆಯಾಗಿ ಅದರ ಲಾಭಗಳನ್ನು ಪಡೆಯುತ್ತಾಳೆ. ಮಗುವನ್ನು ಮುದ್ದಾಡುವುದರಿಂದ ಆಕ್ಸಿಟೋಸಿನ್ ಬಿಡುಗಡೆಯಾಗಿ, ತಾಯಿಯು, ಯಾವುದೇ ನೋವು ಅಥವಾ ಆಯಾಸವಿಲ್ಲದೆ ಎದೆಹಾಲುಣಿಸಬಹುದು.

೭.ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ

ನಿಮಗೆ ನಿದ್ದೆ ಬರದೇ ಒದ್ದಾಡುತ್ತಿದರೆ, ನೀವು ಈ ರಾತ್ರಿ ಮಲಗುವ ಮುನ್ನ ನಿಮ್ಮ ಸಂಗಾತಿ ಜೊತೆ ಸ್ವಲ್ಪ ಸಮಯ ಮುದ್ದಾಡಿ ಮಲಗಿ, ನೀವು ನೆಮ್ಮದಿ ಇಂದ ಆರಾಮವಾಗಿ ಸುಖಕರ ನಿದ್ರೆ ಮಾಡುವಿರಿ. ಇದು ನಿಮ್ಮ ಮನಸ್ಸನ್ನು ಖುಷಿಯಾಗಿಡಲು ಸಹಾಯ ಮಾಡಿ, ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ಆರಾಮವಾಗಿ ನಿದ್ರೆ ಮಾಡುವಂತೆ ಮಾಡುತ್ತದೆ.

೮.ಒತ್ತಡವನ್ನು ಕಡಿಮೆ ಮಾಡುತ್ತದೆ

ಆಕ್ಸಿಟೋಸಿನ್ ಒಂದು ಅದ್ಭುತವಾದ ನೈಸರ್ಗಿಕ ಹಾರ್ಮೋನು, ಇದು ಮಾನವನ ದೇಹಕ್ಕೆ ಅನೇಕ ಪ್ರಯೋಜನಗಳನ್ನು ಮಾಡುತ್ತದೆ. ಮನುಷ್ಯನಿಗೆ ಏನೇ ಇದ್ದರು ನೆಮ್ಮದಿ ಇಲ್ಲದಿದ್ದರೆ ಅವನ ಜೀವನದಲ್ಲಿ ಏನೋ ಕಳೆದುಕೊಂಡಿರುವಂತೆ, ಕೊನೆಯದಾಗಿ ನಾವು ಇಷ್ಟೆಲ್ಲಾ ಕಷ್ಟಪಡುವುದು ಸಹ ನಾವು ಖುಷಿಯಾಗಿ ನೆಮ್ಮದಿಯಾಗಿರಲು,  ಆಕ್ಸಿಟೋಸಿನ್ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿ, ಒತ್ತಡದಿಂದ ದೂರವಿರಿಸಿ, ನೀವು ನೆಮ್ಮದಿ ಇಂದ ಇರುವಂತೆ ಮಾಡುತ್ತದೆ.

ಮುದ್ದಾಡುವುದೆಂದರೆ,

ಮುದ್ದಾಡುವುದೆಂದರೆ ಕೇವಲ ನಿಮ್ಮ ಪ್ರಿಯಕರನ ಜೊತೆ ಅಥವಾ ಪ್ರೇಯಸಿ ಜೊತೆ ಮುದ್ದಾಡುವುದಲ್ಲ, ನೀವೇ ನಿಮ್ಮ ಕೈ ಇಂದ ನಿಮ್ಮ ಭುಜವನ್ನು ಉಜ್ಜಿಕೊಳ್ಳಿ, ಅಪ್ಪಿಕೊಳ್ಳಿ, ಜೊತೆಗೆ ನೀವು ನಿಮ್ಮ ಸ್ನೇಹಿತರನ್ನು ಅಪ್ಪಿಕೊಳ್ಳಿ, ನಿಮ್ಮ ಮುದ್ದು ಕಂದ ಮತ್ತು ಪ್ರೀತಿಯ ಸಾಕು ಪ್ರಾಣಿಗಳನ್ನು ಅಪ್ಪಿಕೊಳ್ಳಿ.

ನೀವು ಹೀಗೂ ಮಾಡಬಹುದು, ಬೆಚ್ಚನೆಯ ಅಥವಾ ಸ್ವಲ್ಪ ಬಿಸಿ ನೀರಿನಿಂದ ಸ್ನಾನ ಮಾಡಿ, ಅಂಗಮರ್ದನ ಮಾಡಿಕೊಳ್ಳುವುದು ಅಥವಾ ಮಸಾಜ್ ಮಾಡಿಸಿಕೊಳ್ಳುವುದು. ನಿಮ್ಮ ದೇಹಕ್ಕೆ ಒಂದು ಚರ್ಮ ಸ್ಪರ್ಶವಾದರೆ ಸಾಕು ನಿಮ್ಮಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾಗಲು ಸಹಾಯ ಆಗುತ್ತದೆ.

Leave a Reply

%d bloggers like this: