ಶಿಶುಗಳಲ್ಲಿ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳು ಮತ್ತು ಅದನ್ನು ಬಗೆಹರಿಸುವುದು ಹೇಗೆ?

ಮಗುವನ್ನು ಬೆಳೆಸುವುದು ತುಂಬಾ ಆಶ್ಚರ್ಯಗಳನ್ನು ಒಳಗೊಂಡಿರುವ ಮತ್ತು ಪ್ರಪಂಚದ ಅತಿ ಕಷ್ಟಕರವಾದ ವಿಷಯವಾಗಿದೆ. ಪೋಷಕತ್ವ ಎಂಬುದು ಸುಂದರವಾದ ಆತಂಕದ ವಿಷಯ. ಎಲ್ಲಾ ಪೋಷಕರು ಈ ಸಮಸ್ಯೆಯನ್ನು ಎದುರಿಸಿರುತ್ತಾರೆ, ಹೊಸದಾಗಿ ಪೋಷಕರಾಗುತ್ತಿರುವವರು ಇದಕ್ಕೆ ಈಗಲೇ ತಯಾರಾಗಿ. ಪ್ರತಿ ಮಕ್ಕಳು ವಿಭಿನ್ನವಾಗಿರುವುದರಿಂದ ಆರೋಗ್ಯ ಸಮಸ್ಯೆಯು ಕೂಡ ಭಿನ್ನವಾಗಿರಬಹುದು.

೧.ಉದರಶೂಲೆ

ನಿಮ್ಮ ಮಗುವು ಇದ್ದಕ್ಕಿಂದ್ದಂತೆ ಅಳಲು ಆರಂಭಿಸಿ ಸ್ವಲ್ಪ ತಾಸು ಆದ ನಂತರ ನಿಲ್ಲಿಸುವುದು, ಮತ್ತು ಇದು ವಾರದಲ್ಲಿ ೩-೪ ಬಾರಿ ಆದರೆ, ಬಹುಶಃ ನಿಮ್ಮ ಮಗುವು ಹೊಟ್ಟೆ ನೋವನ್ನು ಅನುಭವಿಸುತ್ತಿದೆ ಎಂದು ಭಾವಿಸಬಹುದು.

ಇದು ನವಜಾತ ಶಿಶುಗಳಲ್ಲಿ ಸಾಮಾನ್ಯವಾಗಿದೆ, ಇದು ಸಾಮಾನ್ಯವಾಗಿ ಮಗು ಜನಿಸಿ ಎರಡು ವಾರದ ನಂತರ ಮೂರನೇ ತಿಂಗಳಿನ ತನಕ ಕಾಣಿಸಿಕೊಳ್ಳುತ್ತದೆ.

ಹೊಟ್ಟೆ ನೋವಿನ ಮಗುವನ್ನು ಸಮಾಧಾನ ಪಡಿಸಲು, ಸ್ವಲ್ಪ ಬಿಸಿ ಇರುವ ನೀರಿನಿಂದ ಸ್ನಾನ ಮಾಡಿಸುವುದು, ಇದು ಮಗುವು ನೋವಿನಿಂದ ತನ್ನ ಗಮನವನ್ನು ಬೇರೆಡೆ ತೆಗೆದುಕೊಳ್ಳಲು ಸಹಾಯವಾಗುತ್ತದೆ, ಮತ್ತು ಬೆಚ್ಚನೆಯ ಅನುಭವವಾಗುವುದರಿಂದ ಮಗುವು ಬೇಗನೆ ನಿದ್ರಿಸಲು ಶುರುಮಾಡುತ್ತದೆ.

ಎದೆಹಾಲುಣಿಸುವ ತಾಯಿಯಂದಿರು ಮಗುವಿನ  ಆಹಾರ ಸೇವನೆ ಮೇಲೆ ಗಮನವಹಿಸುವುದು ಒಳ್ಳೆಯದು(ಬಾಟಲಿ ಹಾಲಿನ ಬಗ್ಗೆ).

೨.ವಾಂತಿ ಅಥವಾ ಹಾಲು ಜಿನುಗಿಸಿಕೊಳ್ಳುವಿಕೆ

ಇದು ಶಿಶುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ಸಮಸ್ಯೆ. ಈ ಸಮಸ್ಯೆ ಎದುರಿಸುತ್ತಿರುವ ಶಿಶುಗಳು, ತಮ್ಮ ಅನ್ನನಾಳದ ಮೂಲಕ ತಾನು ಸೇವಿಸಿರುವ ಆಹಾರವನ್ನು ಪುನಃ ಹಿಂದಕ್ಕೆ ಕಳುಹಿಸುವುದು, ಇದು ಸಾಮಾನ್ಯವಾಗಿ ದ್ರವ ರೂಪದಲ್ಲಿರುತ್ತದೆ. ಇದು ಸಾಮಾನ್ಯವಾಗಿ ಸಲೈವಾ ಮತ್ತು ಜಠರದಲ್ಲಿರುವ ಆಮ್ಲದಿಂದ ಆಗಿರುತ್ತದೆ.

ನಿಮ್ಮ ಮಗುವಿಗೆ ಹಾಲುಣಿಸಬೇಕಾದರೆ ಮಗುವಿನ ತಲೆಯು ಸ್ವಲ್ಪ ಮೇಲೆ ಇರುವಂತೆ ನೋಡಿಕೊಳ್ಳಿ. ಮತ್ತು ಮಲಗುವಾಗ ಬೆನ್ನಿನ ಮೇಲೆ ಅಥವಾ ಮಗ್ಗುಲಾಗಿ ಮಲಗುವಂತೆ ನೋಡಿಕೊಳ್ಳಿ.

ಹಾಲುಣಿಸಿದ ತಕ್ಷಣ ಮಗುವನ್ನು ಕೆಳಗಡೆ ಮುಖ ಕೆಳಗೆ ಮಾಡಿಕೊಳ್ಳುವ ಸ್ಥಿತಿಗೆ ಬಿಡಬೇಡಿ, ಹಾಲುಣಿಸಿದ ನಂತರ ನೇರವಾಗಿ ನಿಮ್ಮ ತೊಡೆಯ ಮೇಲೆ ಕುರಿಸಿಕೊಂಡಿರಿ, ಮಗುವು ಆಗೆಯೇ ಮಲಗಿದ್ದರೆ, ತಲೆಯು ಸ್ವಲ್ಪ ಎತ್ತರವಾಗಿರುವಂತೆ ಮಾಡಿ ಮಲಗಿಸಿ.

೩.ಹಲ್ಲು ನೋವು

ಮಕ್ಕಳಲ್ಲಿ ಹಾಲುಹಲ್ಲು ಬಿದ್ದು, ಶಾಶ್ವತ ಹಲ್ಲು ಬೆಳೆಯಲು ಪ್ರಾರಂಭವಾದ ತಕ್ಷಣ ವಸಡು ಮತ್ತು ಹಲ್ಲುಗಳಲ್ಲಿ ನೋವನ್ನು ಎದುರಿಸಲು ಪ್ರಾರಂಭಿಸುತ್ತಾರೆ.

ಹಲ್ಲಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್  ಮಾಡಿ

ಹಲ್ಲು ನೋವು ಕಡಿಮೆ ಮಾಡಲು, ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜಲು ಹೇಳಿ, ಆಹಾರ ಸೇವಿಸಿದ ನಂತರ ನೀರು ಕುಡಿದು, ಬಾಯಿ ಮುಕ್ಕಳಿಸಲು ಹೇಳಿ, ಆದಷ್ಟು ಚಾಕಲೇಟ್ ಮತ್ತು ಸಿಹಿ ತಿಂಡಿಗಳನ್ನು ಕಡಿಮೆ ಮಾಡಲು ಹೇಳಿ.

೪.ಡೈಪರ್ ನಿಂದ ದದ್ದುಗಳು

ಪೋಷಕರು ಎದುರಿಸುವ ಮತ್ತೊಂದು ಸಾಮಾನ್ಯ ತೊಂದರೆ ಎಂದರೆ ಡೈಪರ್ ನಿಂದ ಆಗುವ ದದ್ದುಗಳು ಅಥವಾ ಅಲರ್ಜಿ. ಮಗುವು ತನ್ನ ಡೈಪರ್ ಅನ್ನು ಒದ್ದೆಮಾಡಿಕೊಂಡಾಗ ಸರಿಯಾದ ಸಮಯಕ್ಕೆ ಅದನ್ನು ಬದಲಿಸಲು ಸಾಧ್ಯವಾಗದಿದ್ದರೆ ಶಿಶುಗಳು ತಮ್ಮ ತೊಡೆ, ಹಿಂಭಾಗ ಮತ್ತು ಜನನಾಂಗದಲ್ಲಿ ಅಲರ್ಜಿ ಅಥವಾ ದದ್ದುಗಳನ್ನು ಎದುರಿಸಬೇಕಾಗುತ್ತದೆ.

ಇದನ್ನು ನಿವಾರಿಸಲು ಕೊಬ್ಬರಿ ಎಣ್ಣೆ ತುಂಬಾ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ದಿನಕ್ಕೆ ಮೃದುವಾಗಿ ಕೊಬ್ಬರಿ ಎಣ್ಣೆಯನ್ನು ಹಚ್ಚಿರಿ, ಇದು ಸೋಂಕಿಂಗೆ ಒಳಗಾಗುವುದನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.

ನೀವು ಬಟ್ಟೆಯಿಂದ ನೀವೇ ತಯಾರಿಸಿದ ಡೈಪರ್ ಅಥವಾ ಕಚ್ಚಪಾಡವನ್ನು ಬಳಸುತ್ತಿದ್ದರೆ, ಅದನ್ನು ಚೆನ್ನಾಗಿ ತೊಳೆದಿರುವೆ ಎಂದು ಖಚಿತ ಪಡಿಸಿಕೊಳ್ಳಿ.

Leave a Reply

%d bloggers like this: