ಗರ್ಭಾವಸ್ಥೆಯಲ್ಲಿ ವಿಸರ್ಜನೆ : ಯಾವುದು ಸುರಕ್ಷಿತ ಯಾವುದು ಅಸುರಕ್ಷಿತ?

ಮಗುವನ್ನು ನಿರೀಕ್ಷಿಸುತ್ತಿರುವ ತಾಯಿಯಂದಿರು, ಅವರ ದೇಹದಲ್ಲಿ ಹಲವು ಬದಲಾವಣೆಗಳನ್ನು ಕಾಣಲು ಶುರು ಮಾಡುತ್ತಾರೆ, ಹಾಗೆಯೆ ಅವರು ಕೆಲವೊಂದು ಬದಲಾವಣೆಯನ್ನು ನಿರೀಕ್ಷಿಸಿರುತ್ತಾರೆ, ಅದು ಅವರ ಉದರ ಬೆಳೆಯುವುದು ಇರಬಹುದು, ಆದರೆ ಅವರ ದೇಹದಲ್ಲಿ ಆಗುವ ಕೆಲವೊಂದು ಅನಿರೀಕ್ಷಿತ ಬದಲಾವಣೆ ಅವರನ್ನು ಗೊಂದಲಕ್ಕೆ ಗುರಿಯಾಗುವಂತೆ ಮಾಡಬಹುದು. ಅದರಲ್ಲೂ ವಿಶೇಷವಾಗಿ ಅವರ ವಿಸರ್ಜನೆ ಅವರಲ್ಲಿ ಭಯವನ್ನು ತರಿಸಬಹುದು. ನಿಮ್ಮ ಗರ್ಭಾವಸ್ಥೆಯಲ್ಲಿ ಯಾವುದು ಸುರಕ್ಷಿತ ವಿಸರ್ಜನೆ, ಯಾವುದು ಸಾಮಾನ್ಯ ಮತ್ತು ಯಾವ ವಿಸರ್ಜನೆಗೆ ನೀವು ತಲೆಕೆಡಿಸಿಕೊಳ್ಳಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಪ್ರತಿ ಮಹಿಳೆಯು ಇದನ್ನು ತಿಳಿದುಕೊಂಡಿರುವುದು ಒಳ್ಳೆಯದು.

೧.ಯೀಸ್ಟ್ ಸೋಂಕು

ನೀವು ಗರ್ಭಿಣಿ ಆಗಿರಿ ಅಥವಾ ಆಗದಿರಿ, ನೀವು ಒಂದೇ ರೀತಿಯ ಲಕ್ಷಣಗಳು ಅನುಭವಿಸುವಿರಿ, ಇದು ತುರಿಕೆ, ಕೆಂಪಾಗುವಿಕೆ, ನೋವನ್ನು ನಿಮ್ಮ ಯೋನಿಯ ಪ್ರದೇಶದಲ್ಲಿ ಉಂಟುಮಾಡುತ್ತದೆ. ಇದು ವಾಸನೆರಹಿತ ಬಿಳಿ ಬಣ್ಣದ ವಿಸರ್ಜನೆಯಾಗಿರುತ್ತದೆ. ಕೆಲವು ಮಹಿಳೆಯರು ಸಂಭೋಗ ಮಾಡುವಾಗ ನೋವನ್ನು ಮತ್ತು ಮೂತ್ರ ಮಾಡುವಾಗ ಉರಿಯನ್ನು ಅನುಭವಿಸುತ್ತಾರೆ.

ಸಾಮಾನ್ಯವೇ? ಇದು ಸಾಮಾನ್ಯ, ಏಕೆಂದರೆ ಹಾರ್ಮೋನುಗಳ ಬದಲಾವಣೆ, ಗರ್ಭಾವಸ್ಥೆಯಲ್ಲಿ ಯೀಸ್ಟ್ ಸೋಂಕು ತುಂಬಾ ಸಾಮಾನ್ಯ.

ಸಲಹೆ: ವೈದ್ಯರನ್ನು ಭೇಟಿ ಮಾಡಿ.

೨.ಬ್ಯಾಕ್ಟೀರಿಯಾ ಯೋನಿಯತೆ

ಬ್ಯಾಕ್ಟೀರಿಯಲ್ ವ್ಯಾಜಿನಿಸಿಸ್, ಸಾಮಾನ್ಯವಾಗಿ ಯೋನಿಯಲ್ಲಿರುವ ಬ್ಯಾಕ್ಟೀರಿಯಾದ ಅಸಮತೋಲನದಿಂದ ಉಂಟಾಗುವ ಸೋಂಕು. ಇದು ಮೀನಿನಂತಹ ವಾಸನೆಯುಳ್ಳ ವಿಸರ್ಜನೆಯನ್ನು ಮಾಡುತ್ತದೆ. ಇದನ್ನು ಸಂಭೋಗ ಆದ ನಂತರ ತುಂಬಾ ಸ್ಪಷ್ಟವಾಗಿ ಗುರುತಿಸಬಹುದು. ತುರಿಕೆ ಅಥವಾ ಕಡಿತ ಕಾಣಿಸಿಕೊಳ್ಳಬಹುದು.

ಸಾಮಾನ್ಯವೇ? ಇಲ್ಲ. ಇದು ಬೇರೆ ಸೋಂಕನ್ನು ಉಂಟು ಮಾಡುತ್ತದೆ, ಕೆಲವೊಮ್ಮೆ ಇದು ಮೇಲಕ್ಕೆ ಚಲಿಸಿ, ಭ್ರೂಣವು ಅಕಾಲಿಕ ಜನನ ಆಗುವಂತೆ ಮಾಡುತ್ತದೆ.

ಸಲಹೆ: ವೈದ್ಯರನ್ನು ಭೇಟಿ ಮಾಡಿ, ನಿರ್ಲಕ್ಷಿಸ ಬೇಡಿ, ನೀವು ಗರ್ಭಿಣಿ ಅಲ್ಲದಿದ್ದರೂ ಮುಂದೆ ನೀವು ಗರ್ಭಧರಿಸಲು ಇದು ತೊಡಕು ಮಾಡಬಹುದು.

೩.ಲೈಂಗಿಕವಾಗಿ ಹರಡುವ ರೋಗಗಳು (STD – Sexually transmitted diseases)

ಇದು ವಿಸರ್ಜನೆಯನ್ನು ಹೊಂದಿಲ್ಲದಿರಬಹುದು ಅಥವಾ ವಾಸನೆಯುಳ್ಳ ವಿಸರ್ಜನೆ ಬರದೇ ಇರಬಹುದು. ಇದರ ಲಕ್ಷಣ ಕೆಲವೊಮ್ಮೆ ಹಳದಿ ಬಣ್ಣಯುಕ್ತ ವಿಸರ್ಜನೆಯನ್ನು ಮಾಡುವುದು. ಟ್ರೈಕೊಮೋನಿಯಾಸಿಸ್ ಎಂಬುದು ಹಳದಿ-ಹಸಿರು ಮಿಶ್ರಿತ ಬಣ್ಣಯುಳ್ಳ ವಿಸರ್ಜನೆಯ ಜೊತೆಗೆ ಕಿರಿಕಿರಿ ಮತ್ತು ಕಡಿತದ ಅನುಭವವನ್ನು ನೀಡುತ್ತದೆ.

ಸಾಮಾನ್ಯವೇ? ಇಲ್ಲ. ಲೈಂಗಿಕವಾಗಿ ಹರಡುವ ರೋಗ ಅದು ಗರ್ಭಾವಸ್ಥೆಯಲ್ಲಿ ಪೂರ್ವಭಾವಿಯಾಗಿ ಮಗುವಿನ ಜನನ ಮತ್ತು ಹೆರಿಗೆಯ ನಂತರ ಗರ್ಭಕೋಶದ ಸೋಂಕನ್ನು ಉಂಟು ಮಾಡುತ್ತದೆ. ಕೆಲವೊಮ್ಮೆ ಇದು ಪ್ಲಾಸೆಂಟಾ ಇಂದ ಹಾದುಹೋಗುವಾಗ ಭ್ರೂಣಕ್ಕೂ ತೊಂದರೆ ಮಾಡಬಹುದು. ಅಥವಾ ಮಗುವಿಗೂ ಈ ಸೋಂಕನ್ನು ವರ್ಗಾಯಿಸಬಹುದು.

ಸಲಹೆ: ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

೪.ಆಮ್ನಿಯೋಟಿಕ್ ದ್ರವ

ಇದು ಸ್ಪಷ್ಟವಾಗರಿಬೇಕು, ಆದರೆ ಕೆಲವೊಮ್ಮೆ ಕಂದು, ಹಸಿರು, ಪಿಂಕ್, ಅಥವಾ ಹಳದಿ ಬಣ್ಣದಲ್ಲೂ ಇರುತ್ತದೆ. ಮತ್ತು ಇದು ಮೂತ್ರದ ಹಾಗೆ ಇರುವುದಿಲ್ಲ ಮತ್ತು ತುಂಬಾ ವಿರಳವಾಗಿ ಆಗುತ್ತದೆ. ಇದು ಆಮ್ನಿಯೋಟಿಕ್ ದ್ರವ ಅಥವಾ ಮೂತ್ರ ಯಾವುದು ಎಂಬ ಗೊಂದಲ ಇದ್ದರೆ, ಪ್ಯಾಡ್ ಮಡಗಿ ಅದರ ಮೇಲೆ ೩೦ ನಿಮಿಷಗಳ ಕಾಲ ಮಲಗಿಕೊಳ್ಳಿ(ಅದು ನಿಮ್ಮ ಯೋನಿಯ ಬಳಿ ಇರುವಂತೆ) ಮತ್ತು ನೀವು ನಿಂತುಕೊಂಡಾಗ ಸ್ವಲ್ಪ ಹರಿದಂತೆ ಭಾಸವಾದರೆ ಅದು ಆಮ್ನಿಯೋಟಿಕ್ ದ್ರವ ಆಗಿರಬಹುದು ಎಂದು ನೀವು ತಿಳಿದುಕೊಳ್ಳಬಹುದು.

ಸಾಮಾನ್ಯವೇ? ಇಲ್ಲ, ಹೆರಿಗೆ ಆಗುವವರೆಗೆ ಮಹಿಳೆಯು ತನ್ನ ಆಮ್ನಿಯೋಟಿಕ್ ದ್ರವವನ್ನು ವಿಸರ್ಜಿಸುವುದಿಲ್ಲ.

ಸಲಹೆ: ಕೂಡಲೇ ವೈದ್ಯರನ್ನು ಭೇಟಿ ಮಾಡಿ.

Leave a Reply

%d bloggers like this: