ನಿಮ್ಮ ಕೈ ರುಚಿಯಲ್ಲೇ ಸುಲಭವಾಗಿ ತಯಾರಿಸಿ ಸವಿಯಾದ “ಜಹಂಗೀರ್”

ಹಬ್ಬ ಇರಲಿ ಅಥವಾ ಮನೆಯಲ್ಲಿ ಯಾವುದೇ ಸಮಾರಂಭಗಳಿರಲಿ, ಅಥವಾ ನಿಮ್ಮ ಮನಸ್ಸು ಖುಷಿಯಾಗಿದ್ದಾಗ, ಸಿಹಿ ಮಾಡಬೇಕೆಂದು ಅಂಗಡಿಗಳಲ್ಲಿ ಸಿಗುವ ಸಿಹಿಯನ್ನು ತಂದು ಆರೋಗ್ಯ ಹಾಳುಮಾಡಿಕೊಳ್ಳುವುದಕ್ಕಿಂತ ನಿಮ್ಮ ಕೈ ರುಚಿಯಲ್ಲೇ ಸಿಹಿಯಾದ ರುಚಿಯಾದ ತಿನಿಸುಗಳನ್ನು ತಯಾರಿಸಿ. ಇವುಗಳನ್ನು ತಯಾರಿಸಲು ನಿಮಗೆ ಹೆಚ್ಚು ಶ್ರಮವು ಆಗುವುದಿಲ್ಲ, ಮತ್ತು ನಿಮ್ಮ ಮನೆಯಲ್ಲೇ ಇರುವ ಪದಾರ್ಥಗಳಿಂದ ಇದನ್ನು ನೀವು ತಯಾರಿಸಬಹುದು.

ಬೇಕಾಗಿರುವ ಪದಾರ್ಥಗಳು
೧.ಅಕ್ಕಿ – ಕಾಲು ಬಟ್ಟಲು

೨.ಉದ್ದಿನ ಬೇಳೆ – ಒಂದು ಬಟ್ಟಲು

೩.ಕೇಸರಿ ಬಣ್ಣ – ಚಿಟಕಿ (ರಾಸಾಯನಿಕ ಮುಕ್ತ ಅಡುಗೆಗೆ ಬಳಸುವ ಕೇಸರಿ ಬಣ್ಣ ಬಳಸಿ)
೪.ಉಪ್ಪು – ಚಿಟಕೆ
೫.ಸಕ್ಕರೆ – ಎರಡು ಬಟ್ಟಲು
೬.ರೋಸ್ ಎಸೆನ್ಸ್ – ಎರಡು ಹನಿ
೭.ಏಲಕ್ಕಿ ಪುಡಿ – ಕಾಲು ಚಮಚ

೮.ಎಣ್ಣೆ – ಕರಿಯಲು ಬೇಕಾದಷ್ಟು

ವಿಧಾನ

೧.ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ತೊಳೆದು ಎರಡನ್ನು ಒಟ್ಟಿಗೆ ಒಂದು ಗಂಟೆಗಳ ಕಾಲ ನೆನಸಿ.

೨.ನೀರನ್ನು ತೆಗೆದು ಎರಡನ್ನು ಮಿಕ್ಸಿಯಲ್ಲಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ ಅಥವಾ ಪೇಸ್ಟ್ ನಂತೆ ಮಾಡಿಕೊಳ್ಳಿ.

೩.ಸ್ವಲ್ಪ ನೀರು ಸೇರಿಸಿ ರುಬ್ಬಿ, ಮಿಶ್ರಣ ಮೃದುವಾಗಿದ್ದರೆ ಒಳ್ಳೆಯದು.

೪.ಈ ಹಿಟ್ಟನ್ನು ಅಥವಾ ಮಿಶ್ರಣವನ್ನು ಒಂದು ಬಟ್ಟಲಿಗೆ ಅಥವಾ ಪಾತ್ರೆಗೆ ಹಾಕಿ ಇದಕ್ಕೆ ಕೇಸರಿ ಬಣ್ಣ ಮತ್ತು ಚಿಟಕಿ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಿಸಿ.

೫.ಒಂದು ಶುದ್ಧ ಬಟ್ಟೆಯನ್ನು ತೆಗೆದುಕೊಂಡು ಅದರ ಮದ್ಯೆಕ್ಕೆ ಒಂದು ಸಣ್ಣ ರಂಧ್ರ ಅಥವಾ ತೂತು ಮಾಡಿ.

೬.ಎಣ್ಣೆಯನ್ನು ಬಾಣಲೆಯಲ್ಲಿ ಕಾಯಲು ಬಿಡಿ.

೭.ಮಿಶ್ರಣವನ್ನು ಬಟ್ಟೆಯಲ್ಲಿ ಹಾಕಿ, ಎಣ್ಣೆ ಕಾದ ನಂತರ, ಬಟ್ಟೆಯ ತೂತಿನಿಂದ ಮಿಶ್ರಣವನ್ನು ಜಹಂಗೀರ್ ಆಕಾರದಲ್ಲಿ ಎಣ್ಣೆಯೊಳಕ್ಕೆ ಹಾಕಿ.

೮.ಇದನ್ನು ಮಾಧ್ಯಮ ಉರಿಯಲ್ಲಿ ಬೇಯಲು ಬಿಡಿ.

೯.ಮತ್ತೊಂದು ಕಡೆ ನೀರು ಮತ್ತು ಸಕ್ಕರೆಯನ್ನು ಹಾಕಿ, ಸಕ್ಕರೆ ಪಾಕ ತಯಾರಿಸಿಕೊಳ್ಳಿ.

೧೦.ಸಕ್ಕರೆ ಪಾಕಕ್ಕೆ ರೋಸ್ ಎಸ್ಸೆನ್ಸ್ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಕಲಸಿ.

೧೧.ಜಹಂಗೀರ್ ಅನ್ನು ಎರಡು ಬದಿಯಲ್ಲಿ ಬೇಯಿಸಿ, ಎರಡು ಕಡೆ ಬೇಯಿಸಿದ ನಂತರ ಅದನ್ನು ತೆಗೆದು ನೇರವಾಗಿ ಸಕ್ಕರೆ ಪಾಕದೊಳಕ್ಕೆ ಹಾಕಿ.

೧೨.ಅದನ್ನು ಸ್ವಲ್ಪ ಸಮಯ ಅಲ್ಲೇ ನೆನೆಯಲು ಬಿಡಿ, ಈಗ ಅದು ಸ್ವಲ್ಪ ದಪ್ಪವಾಗಿ ಊದಿಕೊಳ್ಳುತ್ತದೆ.

೧೩.ಸ್ವಲ್ಪ ಸಮಯದ ನಂತರ ಪಾಕದಿಂದ ಹೊರ ತೆಗದು ಒಂದು ತಟ್ಟೆಯಲ್ಲಿ ಅಥವಾ ಡಬ್ಬಿಯಲ್ಲಿ ಹಾಕಿ.

೧೪.ಬಿಸಿಯಲ್ಲೇ ತಿನ್ನಿ, ಅಥವಾ ನಿಮ್ಮ ಪತಿ ಮಕ್ಕಳು ಮನೆಗೆ ಬಂದಾಗ ಅವರಿಗೆ ಅನಿರೀಕ್ಷಿತ ಅಚ್ಚರಿ ನೀಡಿ, ನಿಮ್ಮ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಿ.

Leave a Reply

%d bloggers like this: