ಮೊದಲ ತ್ರೈಮಾಸಿಕದಲ್ಲಿ ನಿಮ್ಮ ಉದರದೊಳಗಿನ ಮಗುವಿನ ಬೆಳವಣಿಗೆ ನಿಮ್ಮ ಕಣ್ಣಾರೆ ನೋಡಿ !

ತಮ್ಮ ಮಗುವು ಉದರದೊಳಗೆ ಹೇಗೆ ಇರುತ್ತದೆ, ಅದರ ಪುಟ್ಟ ಕೈ ಕಾಲುಗಳು, ಕಣ್ಣು ಮುದ್ದು ಮುಖ ಹೇಗೆ ಕಾಣಿಸಿರುತ್ತದೆ ಎಂಬುದನ್ನು ನೋಡಲು ಕುತೂಹಲವಾಗಿದ್ದರು ನಿಮಗೆ ಅದನ್ನು ತೋರಿಸುವುದು ಕಷ್ಟಸಾಧ್ಯ. ಚಿಂತಿಸಬೇಡಿ ನಿಮ್ಮ ಉದರದೊಳಗೆ ಮಗುವು ಹೇಗೆ ಬೆಳೆಯುತ್ತದೆ, ಹೇಗೆ ಕಾಣಿಸುತ್ತದೆ ಎಂಬುದನ್ನು ಈ ವಿಡಿಯೋ ನಿಮಗೆ ತೋರಿಸುತ್ತದೆ. ಇದು ನಿಮ್ಮ ಉದರದೊಳಗಿನ ಮಗು ಅಲ್ಲದಿರಬಹುದು, ಆದರೆ ನಿಮ್ಮ ಮಗುವು ನಿಮ್ಮ ಉದರದೊಳಗೆ ಹೀಗೆ ಬೆಳೆಯುತ್ತಿರುವುದು.

ನೀವು ಗರ್ಭಧರಿಸಿದ ನಂತರ, ನಿಮ್ಮ ಮೊಟ್ಟೆಯು ಭ್ರೂಣವಾಗಿ ಗಣನೀಯ ರೀತಿಯಲ್ಲಿ ಬದಲಾಗುತ್ತದೆ. ಇದು ಒಂದು ಅದ್ಭುತವೇ ಸರಿ. ಆ ಒಂದು ಸಣ್ಣ ಮೊಟ್ಟೆ ತನ್ನ ಸಂಪೂರ್ಣ ಸ್ಥಿತಿ ಗಾತ್ರ ಎಲ್ಲವನ್ನು ಬದಲಿಸಿಕೊಂಡು ಭ್ರೂಣಕ್ಕೆ ಬದಲಾಗುವುದು ನಿಮ್ಮ ಮೊದಲ ತ್ರೈಮಾಸಿಕದ ಆರಂಭದಲ್ಲಿ.

ನಿಮ್ಮ ಗರ್ಭಾವಸ್ಥೆಯ ೫ನೇ ವಾರದಲ್ಲಿ ಮೊಟ್ಟೆಯು ಭ್ರೂಣವಾಗಿ ಬದಲಾಗುತ್ತ, ಉದರದೊಳಗೆ ತನ್ನ ಜೀವಸೆಲೆಯಾದ ಕರುಳಬಳ್ಳಿಯನ್ನು ಬೆಳೆಸಿಕೊಳ್ಳಲು ಪ್ರಾರಂಭಿಸುತ್ತದೆ. ಇಲ್ಲಿಂದ ನಿಮ್ಮ ಆಹಾರ ಮೊದಲು ಮಗುವಿಗೆ ನೇರವಾಗಿ ಕರುಳಬಳ್ಳಿಯ ಮೂಲಕ ಹೋಗುತ್ತದೆ.

೬ನೇ ವಾರದಲ್ಲಿ ನಿಮ್ಮ ಮಗುವು ಕೇವಲ ಒಂದು ಇಂಚಿಗೂ ಕಡಿಮೆ (೦.೩ ಸೆಂಟಿ ಮೀಟರ್)ನಷ್ಟು ಉದ್ದವಿರುತ್ತದೆ ಅಷ್ಟೇ. ಈ ಸಮಯದಲ್ಲಿ ಮಗುವಿನ ಹೃದಯ ಮತ್ತು ಶ್ವಾಸಕೋಶವು ಬೆಳೆಯಲು ಪ್ರಾರಂಭವಾಗುತ್ತದೆ.

೭ನೇ ವಾರದಲ್ಲಿ ನಿಮ್ಮ ಮಗುವು ದಾಳಿಂಬೆ ಹಣ್ಣಿನಷ್ಟು ಗಾತ್ರವನ್ನು ಪಡೆಯುತ್ತದೆ ಮತ್ತು ನಿಧಾನವಾಗಿ ತನ್ನ ಕೈ ಕಾಲುಗಳನ್ನು ಬೆಳಿಸಿಕೊಳ್ಳಲು ಶುರು ಮಾಡುತ್ತದೆ. ಕಣ್ಣು, ಬಾಯಿ, ಹೊಟ್ಟೆ ತಮ್ಮ ಸ್ಥಿತಿಯನ್ನು ಪಡೆದುಕೊಳ್ಳಲು ಶುರುಮಾಡಿರುತ್ತವೆ.

೮ನೇ ವಾರದಲ್ಲಿ ಸ್ವಲ್ಪ ಉದ್ದ ಬೆಳೆದಿದ್ದು, ನಿಮ್ಮ ಗರ್ಭದೊಳಗೆ ಆಕಡೆ ಈಕಡೆ ಚಲಿಸಲು ತನ್ನ ಕೈ ಕಾಲು ಆಡಿಸಲು ಪ್ರಾರಂಭಿಸುತ್ತವೆ. ಮಗುವಿನ ಬೆರಳುಗಳು ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಪ್ರಮುಖ ಅಂಗಗಳು ಸಂಪೂರ್ಣವಾಗಿ ಬೆಳೆದಿರುತ್ತವೆ.

೧೧ನೇ ವಾರದಲ್ಲಿ ನಿಮ್ಮ ಮಗುವು ಎರಡರಷ್ಟು ಬೆಳೆದಿದ್ದು, ಈಗ ೨ಇಂಚು ಗಾತ್ರವನ್ನು ಪಡೆದಿರುತ್ತದೆ. ವಸಡುಗಳು, ಕರಳುಗಳು ಮತ್ತು ಜನನಾಂಗಗಳು ರಚನೆಯಾಗಿರುತ್ತವೆ.

Leave a Reply

%d bloggers like this: